ದುಬಾರಿಯಾಗಿವೆ ವೆಸ್ಪಾ ಹಾಗೂ ಏಪ್ರಿಲಿಯಾ ಸ್ಕೂಟರ್‍‍ಗಳ ಬೆಲೆ

ಪಿಯಾಜಿಯೊ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ವೆಸ್ಪಾ ಮತ್ತು ಏಪ್ರಿಲಿಯಾ ಬ್ರ್ಯಾಂಡ್‍‍ನ ಎಲ್ಲಾ ಶ್ರೇಣಿಯ ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದೆ. ಆದರೆ ವೆಸ್ಪಾ ಮತ್ತು ಏಪ್ರಿಲಿಯಾ ಶ್ರೇಣಿಯ ಪ್ರತಿ ಮಾದರಿಯ ನಡುವೆ ಬೆಲೆಗಳ ಏರಿಕೆಯಲ್ಲಿ ಬದಲಾಗುತ್ತದೆ. ಕಂಪನಿಯು ರೂ.1,033 ಗಳಿಂದ 2,724 ಸಾವಿರದವರೆಗೆ  ಬ್ರ್ಯಾಂಡ್‍‍ಗಳ ಸ್ಕೂಟರ್ ಬೆಲೆಗಳನ್ನು ಸೆಪ್ಟಂಬರ್ 1 ರಿಂದಲೇ ಹೆಚ್ಚಿಸಿದೆ.

ದುಬಾರಿಯಾಗಿವೆ ವೆಸ್ಪಾ ಹಾಗೂ ಏಪ್ರಿಲಿಯಾ ಸ್ಕೂಟರ್‍‍ಗಳ ಬೆಲೆ

ಏಪ್ರಿಲಿಯಾ ಬ್ರ್ಯಾಂಡ್ ಸ್ಕೂಟರ್‍‍ಗಳು ಕೇವಲ ಸಣ್ಣ ಪ್ರಮಾಣದ ಬೆಲೆ ಏರಿಕೆ ಕಂಡಿದೆ. ಏಪ್ರಿಲಿಯಾ ಎಸ್‍ಆರ್ 125 ಸ್ಕೂಟರ್‍‍‍ಗೆ ರೂ. 1,033 ಸಾವಿರ, ಏಪ್ರಿಲಿಯಾ ಸ್ಟಾರ್ಮ್ 125ಗೆ ರೂ. 1,674 ಸಾವಿರ ತುಸು ಹೆಚ್ಚಾಗಿ ಏರಕೆಯಾಗಿದೆ. ವೆಸ್ಪಾ ಶ್ರೇಣೆಯ ಕನಿಷ್ಠ ಬೆಲೆ ಏರಿಕೆ ಅರ್ಬನ್ ಕ್ಲಬ್ 125 ನಲ್ಲಿ ಮತ್ತು ಎಸ್‌ಎಕ್ಸ್‌ಎಲ್ 150 ಸ್ಕೂಟರ್‍‍ಗೆ ರೂ.2,424 ಸಾವಿರ ಹೆಚ್ಚಿದೆ.

ದುಬಾರಿಯಾಗಿವೆ ವೆಸ್ಪಾ ಹಾಗೂ ಏಪ್ರಿಲಿಯಾ ಸ್ಕೂಟರ್‍‍ಗಳ ಬೆಲೆ

ಬೆಂಗಳೂರು ಎಕ್ಸ್ ಶೋ ರೂಂ ಪ್ರಕಾರ ವೆಸ್ಪಾ ಮತ್ತು ಏಪ್ರಿಲಿಯಾ ಸ್ಕೂಟರ್‍‍ಗಳ ಹೊಸ ಬೆಲೆ ಮತ್ತು ಹಳೆ ಬೆಲೆಯ ಪಟ್ಟಿ ಇಲ್ಲಿದೆ.

ಮಾದರಿಗಳು ಹಳೇ ಬೆಲೆ ಹೊಸ ಬೆಲೆ
ಏಪ್ರಿಲಿಯಾ ಸ್ಟ್ರೋಮ್ 125 Rs 66,268 Rs 67,942
ಏಪ್ರಿಲಿಯಾ ಎಸ್‍ಆರ್ 125 Rs 72,658 Rs 73,691
ಏಪ್ರಿಲಿಯಾ ಎಸ್‍ಆರ್ 150 ಸ್ಟ್ಯಾಂಡರ್ಡ್ Rs 83,766 Rs 85,058
ಏಪ್ರಿಲಿಯಾ ಎಸ್‍ಆರ್ ಕಾರ್ಬನ್ Rs 86,837 Rs 88,129
ಏಪ್ರಿಲಿಯಾ ಎಸ್‍ಆರ್ 150 ರೇಸ್ Rs 92,742 Rs 94,305
ವೆಸ್ಪಾ ಅರ್ಬನ್ ಕ್ಲಬ್ 125 Rs 73,462 Rs 74,496
ವೆಸ್ಪಾ ಝಡ್ಎಕ್ಸ್ 125 Rs 81,564 Rs 82,856
ವೆಸ್ಪಾ ವಿಎಕ್ಸ್‌ಎಲ್ 125 Rs 91,350 Rs 92,642
ವೆಸ್ಪಾ ಎಸ್‌ಎಕ್ಸ್‌ಎಲ್ 125 (ಮ್ಯಾಟ್ ಬ್ಲ್ಯಾಕ್, ವ್ಯಾಟ್,ಅರೆಂಜ್, ಬ್ಲೂ Rs 94,651 Rs 95,943
ವೆಸ್ಪಾ ಎಸ್‌ಎಕ್ಸ್‌ಎಲ್ 125 (ಮ್ಯಾಟ್ ರೆಡ್ ಡ್ರ್ಯಾಗನ್, ಮ್ಯಾಟ್ ಎಲ್ಲೋ) Rs 95,724 Rs 98,141
ವೆಸ್ಪಾ ವಿಎಕ್ಸ್ 150 Rs 101,740 Rs 103,394
ವೆಸ್ಪಾ ಎಸ್‌ಎಕ್ಸ್‌ಎಲ್ 150 (ಮ್ಯಾಟ್ ಬ್ಲ್ಯಾಕ್, ವ್ಯಾಟ್,ಅರೆಂಜ್, ಬ್ಲೂ) Rs 105,792 Rs 108,516
ವೆಸ್ಪಾ ಎಸ್‌ಎಕ್ಸ್‌ಎಲ್ 150 (ಮ್ಯಾಟ್ ರೆಡ್ ಡ್ರ್ಯಾಗನ್, ಮ್ಯಾಟ್ ಎಲ್ಲೋ) Rs 106,862 Rs 108,516
ವೆಸ್ಪಾ ವಿಎಕ್ಸ್‌ಎಲ್ 150 (ಎಲಿಗೆಂಟ್) Rs 112,263 Rs 113,917
ದುಬಾರಿಯಾಗಿವೆ ವೆಸ್ಪಾ ಹಾಗೂ ಏಪ್ರಿಲಿಯಾ ಸ್ಕೂಟರ್‍‍ಗಳ ಬೆಲೆ

ಬೆಲೆಗಳ ಹೆಚ್ಚಳವನ್ನು ಹೊರತು ಪಡಿಸಿದರೆ, ವೆಸ್ಪಾ ಗ್ರಾಹಕರಿಗೆ ಹಬ್ಬದ ರಿಯಾಯಿತಿ ಮತ್ತು ಇತರ ಕೊಡುಗೆಗಳನ್ನು ನೀಡುತ್ತಿದೆ. ಆಯ್ದ ವೆಸ್ಪಾ ಸ್ಕೂಟರ್‍‍ಗಳಗೆ ರೂ. 10,000 ಸಾವಿರ ಕೊಡುಗೆ. ಇತರೆ ಕೊಡುಗೆಗಳು ರೂ. 4,000 ಗಳವರೆಗೆ ಉಚಿತ ವಿಮೆ, ಮೊದಲ ವರ್ಷ ಲೇಬರ್ ಸರ್ವಿಸ್, 5-ವರ್ಷ ವ್ಯಾರೆಂಟಿ, ಉಚಿತ ಆನ್-ರೋಡ್ ನೆರವು ಮತ್ತು ರೂ. 6,000 ಸಾವಿರದವರೆಗೆ ಪೇಟಿಎಂ ಹಣವು ಲಭಿಸುತ್ತದೆ.

ದುಬಾರಿಯಾಗಿವೆ ವೆಸ್ಪಾ ಹಾಗೂ ಏಪ್ರಿಲಿಯಾ ಸ್ಕೂಟರ್‍‍ಗಳ ಬೆಲೆ

ವೆಸ್ಪಾ ಮತ್ತು ಏಪ್ರಿಲಿಯಾ ಎರಡು 125 ಸಿಸಿ ಮತ್ತು 150 ಸಿಸಿ ವಿಭಾಗದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಸ್ಕೂಟರ್‍‍ಗಳನ್ನು ನೀಡಿದೆ. ವೆಸ್ಪಾ ಸ್ಕೂಟರ್‍‍ಗಳು ದೇಶಿಯ ಮಾರುಕಟ್ಟೆಯಲ್ಲಿ ರೆಟ್ರೊ-ಡಿಸೈನ್ ಪ್ರೀಮಿಯಂ ಮಾದರಿಯ ಸ್ಕೂಟರ್‍‍ಗಳನ್ನು ನೀಡಿದೆ. ಆದರೆ ಏಪ್ರಿಲಿಯಾ ಕಾಂಪ್ಯಾಕ್ಟ್, ಫನ್ ಮತ್ತು ಸ್ಪೋರ್ಟಿ ವಿನ್ಯಾಸದ ಮೇಲೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದ್ದಾರೆ.

ದುಬಾರಿಯಾಗಿವೆ ವೆಸ್ಪಾ ಹಾಗೂ ಏಪ್ರಿಲಿಯಾ ಸ್ಕೂಟರ್‍‍ಗಳ ಬೆಲೆ

ವೆಸ್ಪಾ ಸ್ಕೂಟರ್ ಈಗಿರುವ ವಿನ್ಯಾಸದ ವಿನ್ಯಾಸದಲ್ಲಿಯೇ ಹೆಚ್ಚು ಜನಪ್ರಿಯವಾಗಿದೆ. ಕಂಪನಿಯು ಮುಂದಿನ ಮೂರರಿಂದ ಐದು ವರ್ಷಗಳವರೆಗೆ ವೆಸ್ಪಾ ಸ್ಕೂಟರಿನ ಮೂಲ ವಿನ್ಯಾಸದಲ್ಲಿ ಯಾವುದೇ ಬದಲಾವಣೆಯನ್ನು ಮಾಡದೇ ಇರಲು ನಿರ್ಧರಿಸಿದೆ. ಆದರೆ ಆಗಾಗ ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಲಿದೆ. ಇದರ ಆಕರ್ಷಕವಾದ ವಿನ್ಯಾಸದ ಮೂಲಕ ಗ್ರಾಹಕರ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ.

ದುಬಾರಿಯಾಗಿವೆ ವೆಸ್ಪಾ ಹಾಗೂ ಏಪ್ರಿಲಿಯಾ ಸ್ಕೂಟರ್‍‍ಗಳ ಬೆಲೆ

ದೇಶಿಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿ ಇತರ ಬ್ರ್ಯಾಂಡ್‍‍ಗಳಿಗೆ ಹೋಲಿಸಿದರೆ ವೆಸ್ಪಾ ಮತ್ತು ಏಪ್ರಿಲಿಯಾ ಸ್ಕೂಟರ್‍‍ಗಳ ಮಾರಾಟವು ಸ್ಥಿರವಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಬಿಡುಗಡೆಯಾದ ಏಪ್ರಿಲಿಯಾ ಸ್ಟ್ರೋಮ್ 125 ಸ್ಕೂಟರ್ ಕಳೆದ ಎರಡು ತಿಂಗಳುಗಳಿಂದ ಉತ್ತಮವಾಗಿ ಮಾರಾಟವಾಗುತ್ತಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ದುಬಾರಿಯಾಗಿವೆ ವೆಸ್ಪಾ ಹಾಗೂ ಏಪ್ರಿಲಿಯಾ ಸ್ಕೂಟರ್‍‍ಗಳ ಬೆಲೆ

ಏಪ್ರಿಲಿಯಾ ಸ್ಟ್ರೋಮ್ 125 ಹಲವಾರು ವೈಶಿಷ್ಟೈಗಳೊಂದಿಗೆ ಪವರ್‍‍‍ಫುಲ್ ಎಂಜಿನ್ ಮತ್ತು ಸ್ಪೋರ್ಟಿ ನೋಟವನ್ನು ಹೊಂದಿದೆ. ಇದು ಭಾರತದ ಆಕರ್ಷಕ ಬ್ರ್ಯಾಂಡ್‍‍ಗಳಲ್ಲಿ ಒಂದಾಗಿದೆ. ಎರಡು ಬ್ರ್ಯಾಂಡ್‍‍ಗಳು ತಮ್ಮ 125 ಸಿಸಿ ಮತ್ತು 150 ಸಿಸಿ ಮಾದರಿಗಳಲ್ಲಿ ಒಂದೇ ಎಂಜಿನ್‍ಅನ್ನು ಬಳಸುತ್ತಾರೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ದುಬಾರಿಯಾಗಿವೆ ವೆಸ್ಪಾ ಹಾಗೂ ಏಪ್ರಿಲಿಯಾ ಸ್ಕೂಟರ್‍‍ಗಳ ಬೆಲೆ

ಪಿಯಾಜಿಯೊ ದೇಶಿಯ ಮಾರುಕಟ್ಟೆಯಲ್ಲಿ ವೆಸ್ಪಾ ಮತ್ತು ಏಪ್ರಿಲಿಯಾ ಶ್ರೇಣಿಯ ಎರಡು ಸ್ಕೂಟರ್‍‍ಗಳಿಗೂ ಬೆಲೆಯನ್ನು ಹೆಚ್ಚಿಸಿದೆ. ಸೆಪ್ಟಂಬರ್ ತಿಂಗಳಿನಿಂದ ಬೆಲೆ ಏರಿಕೆಯನ್ನು ಮಾಡಿದ್ದರು, ಆದರೆ ಬೆಲೆ ಏರಿಕೆಗೆ ನಿಖರವಾದ ಕಾರಣವನ್ನು ಘೋಷಿಸಿಲ್ಲ. ಭಾರತದ ವೆಸ್ಪಾ ಮತ್ತು ಏಪ್ರಿಲಿಯಾ ಸ್ಕೂಟರ್‍‍ಗಳು ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ 125, ಸುಜುಕಿ ಆಕ್ಸೆಸ್ 125, ಹೀರೋ ಮೆಸ್ಟ್ರೋ ಎಡ್ಜ್ 125, ಹೋಂಡಾ ಆಕ್ಟಿವಾ 125 ಮತ್ತು ಟಿವಿಎಸ್ ಎನ್‌ಟೋರ್ಕ್ 125 ಬೈಕ್‍‍ಗಳಿಗೆ ಪೈಪೋಟಿ ನೀಡುತ್ತಿವೆ.

Most Read Articles

Kannada
English summary
Piaggo Hikes Prices Of Vespa & Aprilia Scooters In India: Also Offers Other Festive Benefits - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more