ಹೊಸ ಎಂಜಿನ್‍ನೊಂದಿಗೆ ಬರಲಿವೆ ವೆಸ್ಪಾ ಸ್ಕೂಟರ್‍‍ಗಳು

ಕೆಲವು ತಿಂಗಳ ಹಿಂದೆ ಪಿಯಾಜಿಯೊ ಕಂಪನಿಯು, ಎಪ್ರಿಲಿಯಾದ ಹೊಸ ಸ್ಕೂಟರ್‍‍‍ಗಾಗಿ 200 ಸಿಸಿಯ ಎಂಜಿನ್ ಅಭಿವೃದ್ಧಿಪಡಿಸುತ್ತಿರುವುದನ್ನು ವರದಿ ಮಾಡಲಾಗಿತ್ತು. ಆ ಸಮಯದಲ್ಲಿ ಪಿಯಾಜಿಯೊ ಇಂಡಿಯಾ ಲಿಮಿಟೆಡ್‍‍ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿ‍ಇ‍ಒ ಡಿಗೋ ಗ್ರಾಫಿರವರು ಕಂಪನಿಯ ಯೋಜನೆಗಳ ಬಗ್ಗೆ ಮಾತನಾಡಿದ್ದರು.

ಹೊಸ ಎಂಜಿನ್‍ನೊಂದಿಗೆ ಬರಲಿವೆ ವೆಸ್ಪಾ ಸ್ಕೂಟರ್‍‍ಗಳು

ಮುಂಬರುವ ದಿನಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ನಾವು ಈಗ ಕಾಣುತ್ತಿರುವುದಕ್ಕಿಂತ ಹೆಚ್ಚಿನ ಮಟ್ಟದ ಬದಲಾವಣೆಯನ್ನು ಕಾಣಲಿದ್ದೇವೆ. ಅದಾದ ನಂತರ, ಮಾರುಕಟ್ಟೆಯಲ್ಲಿ ಏನಾಗಲಿದೆ ಎಂಬುದನ್ನು ಅಧ್ಯಯನ ನಡೆಸಲಿದ್ದೇವೆ. ನಾವು ಈಗ ಹೊಸ ಸ್ಕೂಟರ್‍ ಅನ್ನು ಅಭಿವೃದ್ಧಿಪಡಿಸುತ್ತಿದ್ದು, ಭಾರತಕ್ಕಾಗಿ ವಿಶೇಷವಾಗಿ ತಯಾರಿಸಲಿದ್ದೇವೆ. ಇಟಲಿಯಲ್ಲಿರುವ ಆರ್ ಅಂಡ್ ಡಿ ಕೇಂದ್ರದ ಸಹಕಾರದೊಂದಿಗೆ ದೇಶಿಯ ಮಾರುಕಟ್ಟೆಗಾಗಿ ವಾಹನಗಳನ್ನು ಅಭಿವೃದ್ಧಿಪಡಿಸಲಿದ್ದೇವೆ ಎಂದು ತಿಳಿಸಿದ್ದರು.

ಹೊಸ ಎಂಜಿನ್‍ನೊಂದಿಗೆ ಬರಲಿವೆ ವೆಸ್ಪಾ ಸ್ಕೂಟರ್‍‍ಗಳು

ಅವರು ಆಗ ಹೇಳಿದ್ದ ಮಾತುಗಳು ಈಗ ನಿಜವಾಗುತ್ತಿವೆ. ಪಿಯಾಜಿಯೊ ಕಂಪನಿಯು ಎಪ್ರಿಲಿಯಾ ಸ್ಕೂಟರ್‍‍ಗಳ ಜೊತೆಗೆ ವೆಸ್ಪಾ ಸ್ಕೂಟರ್‍‍ಗಳನ್ನು ಸಹ ಅಭಿವೃದ್ಧಿಪಡಿಸುತ್ತಿದೆ. ಎಪ್ರಿಲಿಯಾ ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿದ ನಂತರ ಇದರ ಬಗ್ಗೆ ಘೋಷಿಸಲಾಗುವುದು.

ಹೊಸ ಎಂಜಿನ್‍ನೊಂದಿಗೆ ಬರಲಿವೆ ವೆಸ್ಪಾ ಸ್ಕೂಟರ್‍‍ಗಳು

ದೇಶಿಯ ಮಾರುಕಟ್ಟೆಯಲ್ಲಿರುವ ಎಪ್ರಿಲಿಯಾ ಸ್ಕೂಟರ್‍ ಹಾಗೂ ವೆಸ್ಪಾ ಸ್ಕೂಟರ್‍‍‍ಗಳು ಬೇರೆ ಬೇರೆ ರೀತಿಯ ಚಾಸೀಸ್‍‍ಗಳನ್ನು ಹೊಂದಿವೆ. ಆದರೆ ಎರಡೂ ಸ್ಕೂಟರ್‍‍ಗಳಲ್ಲಿ ಒಂದೇ ರೀತಿಯ ಪವರ್‍‍ಟ್ರೇನ್ ಅಳವಡಿಸಲಾಗಿದೆ. ಗ್ರಾಫಿರವರ ಪ್ರಕಾರ ಬಿಡುಗಡೆಯಾಗಲಿರುವ ವೆಸ್ಪಾ ಸ್ಕೂಟರ್‍‍ಗಳಲ್ಲಿ ಕೆಲವು ಬದಲಾವಣೆಗಳಾಗಲಿದ್ದು, ಮೂಲ ವಿನ್ಯಾಸವು ಮುಂದುವರೆಯಲಿದೆ.

ಹೊಸ ಎಂಜಿನ್‍ನೊಂದಿಗೆ ಬರಲಿವೆ ವೆಸ್ಪಾ ಸ್ಕೂಟರ್‍‍ಗಳು

ದೊಡ್ಡ ಗಾತ್ರವನ್ನು ಹೊಂದಲಿರುವ ವೆಸ್ಪಾ ಸ್ಕೂಟರ್‍‍ನಲ್ಲಿ, ಈಗಿರುವ 125ಸಿಸಿ ಹಾಗೂ 150ಸಿಸಿಯ ವೆಸ್ಪಾ ಸ್ಕೂಟರ್‍‍ಗಳಲ್ಲಿರುವ ಸ್ಟೀಲ್ ಮೊನೊಕಾಕ್ ಮಾದರಿಯನ್ನೇ ಅಳವಡಿಸಲಾಗುವುದು. ಹೊಸದಾಗಿ ಅಭಿವೃದ್ಧಿಪಡಿಸಲಿರುವ ಎಂಜಿನ್, 150 ಸಿಸಿ ಹಾಗೂ 200 ಸಿಸಿಯ ನಡುವೆ ಇರಲಿದೆ ಎಂಬುದನ್ನು ಬಿಟ್ಟು ಬೇರೆ ಯಾವುದೇ ಮಾಹಿತಿಯು ಲಭ್ಯವಾಗಿಲ್ಲ. ಒಂದು ವೇಳೆ ಪಿಯಾಜಿಯೊ ಕಂಪನಿಯು 200 ಸಿಸಿಯ ಎಂಜಿನ್ ಅಭಿವೃದ್ಧಿಪಡಿಸದಿದ್ದರೆ, 180ಸಿಸಿ ಎಂಜಿನ್ ಅನ್ನು ಅಭಿವೃದ್ಧಿಪಡಿಸಲಿದೆ.

ಹೊಸ ಎಂಜಿನ್‍ನೊಂದಿಗೆ ಬರಲಿವೆ ವೆಸ್ಪಾ ಸ್ಕೂಟರ್‍‍ಗಳು

180ಸಿಸಿಯ ಸ್ಕೂಟರ್‍‍ಗಳು, 1960ರ ದಶಕದಲ್ಲಿದ್ದ ವೆಸ್ಪಾ 180 ಸೂಪರ್ ಸ್ಪೋರ್ಟ್ ಹಾಗೂ ವೆಸ್ಪಾ 180 ರ್‍ಯಾಲಿ ಸ್ಕೂಟರ್‍‍ಗಳ ನೆನಪನ್ನು ಮರುಕಳಿಸಲಿವೆ. ಈ ಎಂಜಿನ್‍‍ನಲ್ಲಿ ಹಲವು ಸುರಕ್ಷಾ ಕ್ರಮಗಳನ್ನು ಅಳವಡಿಸಲಾಗುವುದು.

MOST READ: ಪ್ರೀತಿಯ ಮಡದಿಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ಪತಿರಾಯ

ಹೊಸ ಎಂಜಿನ್‍ನೊಂದಿಗೆ ಬರಲಿವೆ ವೆಸ್ಪಾ ಸ್ಕೂಟರ್‍‍ಗಳು

ಹೊಸದಾಗಿ ಸ್ಕೂಟರ್‍‍ಗಳನ್ನು ಚಲಾಯಿಸುವವರಿಗೆ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಹೊಸ ಅನುಭವವನ್ನು ನೀಡಲಿದೆ. ಪಿಯಾಜಿಯೊ ಕಂಪನಿಯು ತನ್ನ ಎಲ್ಲಾ ಮಾದರಿಯ ಸ್ಕೂಟರ್‍‍ಗಳಲ್ಲಿ ಬಿ‍ಎಸ್6 ನಿಯಮಗಳಿಗೆ ಹೊಂದುವ ಈ ಟೆಕ್ನಾಲಜಿಯನ್ನು ಅಳವಡಿಸಲಿದೆ. ವೆಚ್ಚವನ್ನು ಕಡಿಮೆ ಮಾಡಲು, ಏರ್ ಕೂಲ್ಡ್ ಇರಲಿದೆ.

MOST READ: ಅನಾವರಣಗೊಂಡ ದೇಶದ ಮೊದಲ ಎಲೆಕ್ಟ್ರಿಕ್ ಬೈಕ್

ಹೊಸ ಎಂಜಿನ್‍ನೊಂದಿಗೆ ಬರಲಿವೆ ವೆಸ್ಪಾ ಸ್ಕೂಟರ್‍‍ಗಳು

ಕಂಪನಿಯ ಎಲ್ಲ ದ್ವಿಚಕ್ರ ವಾಹನಗಳ ಎಂಜಿನ್‍‍ಗಳಲ್ಲಿ ಸಾಮಾನ್ಯವಾಗಿ ಅಳವಡಿಸಲಾಗುವ, ಪಿಯಾಜಿಯೊ 3 ವಾಲ್ವ್ ಸೆಟ್‍ಅಪ್‍‍ಗಳನ್ನು ಹೊಸ ಸ್ಕೂಟರ್‍‍ಗಳಲ್ಲೂ ಮುಂದುವರೆಸಲಾಗುವುದು. ಹೊಸ ಸಬ್ 200 ಸಿಸಿ ಎಪ್ರಿಲಿಯಾ ಸ್ಕೂಟರ್ ಮುಂದಿನ ವರ್ಷದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

MOST READ: ಕಾರುಗಳಲ್ಲಿರುವ ಟಚ್‍‍ಸ್ಕ್ರೀನ್‍‍ಗಳು ಸುರಕ್ಷಿತವಲ್ಲವೇ ?

ಹೊಸ ಎಂಜಿನ್‍ನೊಂದಿಗೆ ಬರಲಿವೆ ವೆಸ್ಪಾ ಸ್ಕೂಟರ್‍‍ಗಳು

ಈ ಸ್ಕೂಟರ್ ಅನ್ನು ವೆಸ್ಪಾ ಸ್ಕೂಟರ್ ಬಿಡುಗಡೆಗೆ ಮುಂಚಿತವಾಗಿ ಮಾರುಕಟ್ಟೆಗೆ ತರಲಾಗುವುದು. ನಾವು ದೊಡ್ಡ ಗಾತ್ರದ ವೆಸ್ಪಾ ಸ್ಕೂಟರ್ ಅನ್ನು ಮುಂದಿನ ವರ್ಷದ ಮಧ್ಯದ ವೇಳೆಗೆ ಮಾರುಕಟ್ಟೆಯಲ್ಲಿ ಕಾಣಲಿದ್ದೇವೆ. ಸಾಧ್ಯವಾಗದೇ ಹೋದಲ್ಲಿ, 2021ರ ಆರಂಭದಲ್ಲಿ ಕಾಣಲಿದ್ದೇವೆ.

Most Read Articles

Kannada
English summary
Vespa with bigger engine under development for India - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X