ಬಿಡುಗಡೆಗೊಂಡ ಯಮಹಾ ಬಿ‍ಎಸ್ 6 ಬೈಕುಗಳು

ಯಮಹಾ ಮೋಟರ್‍‍ಸೈಕಲ್ ಇಂಡಿಯಾ ತನ್ನ ಬಹುನಿರೀಕ್ಷಿತ ಎ‍‍ಫ್‍ಝಡ್ ಮತ್ತು ಎಫ್‍‍ಝಡ್ಎಸ್-ಎಫ್ಐ ಬಿಎಸ್-6 ಬೈಕ್‍‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಕಂಪನಿಯು ಈ ಹಿಂದೆ ಬಿಎಸ್-6 ಮಾದರಿಗಳನ್ನು ನವೆಂಬರ್ ತಿಂಗಳಲ್ಲಿ ಪರಿಚಯಿಸುವುದಾಗಿ ಹೇಳಿದ್ದರು.

ಬಿಡುಗಡೆಗೊಂಡ ಯಮಹಾ ಬಿ‍ಎಸ್ 6 ಬೈಕುಗಳು

ಯಮಹಾ ಎಫ್‍‍ಜೆಡ್ ಮತ್ತು ಎಫ್‍‍ಜೆಡ್‍ಎಸ್-ಎಫ್‍ಐ ಬಿಎಸ್-6 ಬೈಕುಗಳಿಗೆ ಕ್ರಮವಾಗಿ ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.99,200 ಮತ್ತು ರೂ.1.01 ಲಕ್ಷ ಬೆಲೆಗಳನ್ನು ಹೊಂದಿದೆ. ಬ್ರ್ಯಾಂಡ್‍‍ನ 'ಕಾಲ್ ಆಫ್ ದಿ ಬ್ಲೂ' ಅಭಿಯಾನದ ಭಾಗವಾಗಿ ಯಮಹಾ ಇತ್ತೀಚೆಗೆ 2019ರ ಮೊದಲ ತಿಂಗಳಲ್ಲಿ ಎರಡು ಬೈಕ್‍‍ಗಳ ಎಬಿಎಸ್ ಆವೃತ್ತಿಗಳನ್ನು ಪರಿಚಯಿಸಿತ್ತು.

ಬಿಡುಗಡೆಗೊಂಡ ಯಮಹಾ ಬಿ‍ಎಸ್ 6 ಬೈಕುಗಳು

ಎರಡು ಬೈಕ್‍‍ಗಳು ಬಿಎಸ್-6 ಆವೃತ್ತಿಯನ್ನು ಪರಿಚಯಿಸುವುದರ ಜೊತೆಗೆ ಯಮಹಾ ಎಫ್‍‍ಜೆಡ್ಎಸ್-ಎಫ್ಐ ಬೈಕನ್ನು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಗಳನ್ನು ಹೊಂದಿದೆ. ಇದು ಡಾರ್ಕ್‍‍ನೈಟ್ ಮತ್ತು ಮೆಟಾಲಿಕ್ ರೆಡ್ ಬಣ್ಣವನ್ನು ಹೊಂದಿದೆ. ಇವುಗಳಲ್ಲಿ ಡಾರ್ಕ್ ನೈಟ್ ಸ್ಟ್ಯಾಂಡರ್ಡ್ ಬೈಕಿಗೆ ದೆಹಲಿಯ ಎಕ್ಸ್ ಶೋರೂಂ ಪ್ರಕಾರ ಬೆಲೆ ರೂ.1.02 ಲಕ್ಷಗಳಾಗಿವೆ.

ಬಿಡುಗಡೆಗೊಂಡ ಯಮಹಾ ಬಿ‍ಎಸ್ 6 ಬೈಕುಗಳು

ಯಮಹಾ ಎಫ್‍ಝಡ್‍ಎಸ್‍-ಎಫ್ಐ ಬಿಎಸ್-6 ಬೈಕಿನಲ್ಲಿ ಇತರ ಬಣ್ಣಗಳ ಆಯ್ಕೆಗಳಲ್ಲಿ ಡಾರ್ಕ್ ಮ್ಯಾಟ್ ಬ್ಲೂ, ಮ್ಯಾಟ್ ಬ್ಲಾಕ್, ಗ್ರೇ ಮತ್ತು ಸಯಾನ್ ಬ್ಲೂ ಸೇರಿವೆ. ಇನ್ನೂ ಯಮಹಾ ಎಫ್‍‍ಜೆಡ್ ಬಿಎಸ್-6 ಬೈಕು ಮೆಟಾಲಿಕ್ ಬ್ಲ್ಯಾಕ್ ಮತ್ತು ರೇಸಿಂಗ್ ಬ್ಲೂ ಸೇರಿದಂತೆ ಎರಡು ಸ್ಟ್ಯಾಂಡರ್ಡ್ ಬಣ್ಣಗಳ ಆಯ್ಕೆಗಳನ್ನು ಹೊಂದಿದೆ.

ಬಿಡುಗಡೆಗೊಂಡ ಯಮಹಾ ಬಿ‍ಎಸ್ 6 ಬೈಕುಗಳು

ಈ ಬೈಕುಗಳು 149 ಸಿಸಿ ಸಿಂಗಲ್ ಸಿಲಿಂಡರ್ ಬಿಎಸ್-6 ಎಂಜಿನ್‍ ಅನ್ನು ಹೊಂದಿದೆ. ಈ ಎಂಜಿನ್ 7,250 ಆರ್‍‍ಪಿಎಂನಲ್ಲಿ 12 ಬಿ‍ಎಚ್‍ಪಿ ಪವರ್ ಮತ್ತು 5,500 ಆರ್‍‍ಪಿಎಂನಲ್ಲಿ 13.6 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ಗಳೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡ ಯಮಹಾ ಬಿ‍ಎಸ್ 6 ಬೈಕುಗಳು

ಈ ಬೈಕು‍ಗಳು ಎಲ್‍ಇಡಿ ಟೇಲ್ ಲೈಟ್‍, ಎಲ್‍ಇಡಿ ಹೆಡ್‍ಲ್ಯಾಂಪ್, ಎಲ್‍‍ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಸಿಂಗಲ್ ಪೀಸ್ ಸ್ಪ್ಲಿಟ್ ಸೀಟ್ ಅನ್ನು ಹೊಂದಿದೆ. ಯಮಹಾ ಎಫ್‍‍ಜೆಡ್-ಎಸ್ ಮತ್ತಷ್ಟು ಕ್ರೋಮ್‍ ಹೈಲೈಟ್ಸ್ ಮತ್ತು ಹೆಚ್ಚುವರಿ ಬಾಡಿ ಪ್ಯಾನೆಲ್ ಅನ್ನು ಹೊಂದಿದೆ. ಬೈಕ್ ಮುಂಭಾಗದಲ್ಲಿ ಟಿ‍‍ಲಿ‍ಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡ ಯಮಹಾ ಬಿ‍ಎಸ್ 6 ಬೈಕುಗಳು

ಸುರಕ್ಷತೆಗಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದ್ದಾರೆ. ಸ್ಟ್ಯಾಂಡರ್ಡ್ ಸಿಂಗಲ್ ಚಾನೆಲ್ ಎ‍ಬಿಎಸ್ ಅನ್ನು ಅನ್ನು ಅಳವಡಿಸಿದ್ದಾರೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬಿಡುಗಡೆಗೊಂಡ ಯಮಹಾ ಬಿ‍ಎಸ್ 6 ಬೈಕುಗಳು

ಯಮಹಾ ಮೋಟಾರ್ ಇಂಡಿಯಾ ಗ್ರೂಪ್ ಆಫ್ ಕಂಪೆನಿಯ ಅಧ್ಯಕ್ಷ, ಮೊಟೊಫುಮಿ ಶಿತಾರಾ ಅವರು ಮಾತನಾಡಿ, ಎಫ್‍‍ಝಡ್ ಒಂದು ಜನಪ್ರಿಯ ಮಾದರಿಯಾಗಿದೆ. ಈ ಬ್ರ್ಯಾಂಡ್‍‍ನ ಅಡಿಯಲ್ಲಿ ಹಲವಾರು ಬೈಕುಗಳನ್ನು ಬಿಡುಗಡೆಗೊಳಿಸಲಾಗಿದೆ. ಈ ಜನಪ್ರಿಯ ಬ್ರ್ಯಾಂಡ್ ಹಾಗಿರುವುದರಿಂದ ಬಿಎಸ್-6 ಎಂಜಿನ್ ಆಗಿ ನವೀಕರಿಸಲು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದೇವೆ. 150 ಸಿಸಿ ವಿಭಾಗದಲ್ಲಿ ಇತರ ಬ್ರ್ಯಾಂಡ್‍ಗಳಿಗೆ ಪ್ರಬಲ ಪೈಪೋಟಿಯನ್ನು ನೀಡಲಿದೆ ಎಂದು ಹೇಳಿದರು.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬಿಡುಗಡೆಗೊಂಡ ಯಮಹಾ ಬಿ‍ಎಸ್ 6 ಬೈಕುಗಳು

ಯಮಹಾ ಕಂಪನಿಯು ಈ ಹಿಂದೆ ಬಿಎಸ್-6 ಮಾದರಿಗಳನ್ನು ನವೆಂಬರ್ ತಿಂಗಳಲ್ಲಿ ಪರಚಯಿಸುವುದಾಗಿ ಹೇಳಿದ್ದರು. ಈ ಪ್ರಕಾರ ದೇಶಿಯ ಮಾರುಕಟ್ಟೆಯಲ್ಲಿ ಬಿಎಸ್-6 ಬೈಕುಗಳನ್ನು ಪರಿಚಯಿಸಲು ಪ್ರಾರಂಭಿಸಿದೆ. ಯಮಹಾ ಎಎ‍‍ಫ್‍ಝಡ್ ಮತ್ತು ಎಫ್‍‍ಝಡ್ಎಸ್-ಎಫ್ ಬೈಕ್‍‍ಗಳು ದೇಶಿಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ 160 ಎನ್ಎಸ್, ಕೆಟಿಎಂ ಡ್ಯೂಕ್ 125, ಸುಜುಕಿ ಗಿಕ್ಸ್‌ಸರ್ 155 ಮತ್ತು ಟಿವಿಎಸ್ ಅಪಾಚೆ ಆರ್‌ಟಿಆರ್ 160 4 ವಿ ಬೈಕ್‍‍ಗಳಿಗೆ ಪೈಪೋಟಿ ನೀಡಲಿವೆ.

Most Read Articles

Kannada
Read more on ಯಮಹಾ yamaha
English summary
Yamaha FZ & FZS-Fi BS6 Motorcycles Launched In India: Prices Start At Rs 99,200 -Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X