ಯಮಹಾ ಎಫ್‌ಜೆಡ್ ಮತ್ತು ಎಫ್‌ಜೆಡ್-ಎಸ್ ವಿ3.0 ವರ್ಷನ್ ಬಿಡುಗಡೆ

ಯಮಹಾ ಇಂಡಿಯಾ ಸಂಸ್ಥೆಯು ತನ್ನ ಜನಪ್ರಿಯ ಎಫ್‌ಜೆಡ್ ಮತ್ತು ಎಫ್‌ಜೆಡ್-ಎಸ್ ವಿ3.0 ಆವೃತ್ತಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಸುರಕ್ಷಾ ಸೌಲಭ್ಯಗಳು ಮತ್ತು ವಿನ್ಯಾಸದಲ್ಲಿ ಭಾರೀ ಬದಲಾವಣೆ ಹೊಂದಿರುವ ಹೊಸ ಬೈಕ್‌ಗಳು ಎಫ್‌ಜೆಡ್-25 ಬೈಕ್ ಪ್ರೇರಣೆಯೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ.

ಯಮಹಾ ಎಫ್‌ಜೆಡ್ ಮತ್ತು ಎಫ್‌ಜೆಡ್-ಎಸ್ ವಿ3.0 ವರ್ಷನ್ ಬಿಡುಗಡೆ

ಸದ್ಯ ವಾಹನ ಸವಾರರ ಸುರಕ್ಷತೆಗಾಗಿ ಭಾರತದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗುತ್ತಿದೆ. ಇದರಿಂದ ಯಮಹಾ ಸಹ ಹೊಸ ಸುರಕ್ಷಾ ನಿಯಮಗಳಿಗೆ ಅನುಗುಣವಾಗಿ ಎಫ್‌ಜೆಡ್ ಮತ್ತು ಎಫ್‌ಜೆಡ್-ಎಸ್ ವಿ3.0 ಬೈಕ್‌ಗಳನ್ನು ಅಭಿವೃದ್ಧಿ ಮಾಡಿದ್ದು, ಹೊಸ ಸೌಲಭ್ಯಗಳ ಹಿನ್ನೆಲೆಯಲ್ಲಿ ಬೈಕ್ ಬೆಲೆಗಳಲ್ಲಿ ತುಸು ದುಬಾರಿ ಎನ್ನಸಲಿವೆ.

ಯಮಹಾ ಎಫ್‌ಜೆಡ್ ಮತ್ತು ಎಫ್‌ಜೆಡ್-ಎಸ್ ವಿ3.0 ವರ್ಷನ್ ಬಿಡುಗಡೆ

ಎಫ್‌ಜೆಡ್ ವಿ3.0 ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.95 ಸಾವಿರಕ್ಕೆ ಬಿಡುಗಡೆಗೊಂಡಲ್ಲಿ ಎಫ್‌ಜೆಡ್-ಎಸ್ ವಿ3.0 ಬೈಕ್‌ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ 97 ಸಾವಿರ ಬೆಲೆ ಪಡೆದುಕೊಂಡಿವೆ.

ಯಮಹಾ ಎಫ್‌ಜೆಡ್ ಮತ್ತು ಎಫ್‌ಜೆಡ್-ಎಸ್ ವಿ3.0 ವರ್ಷನ್ ಬಿಡುಗಡೆ

ಈ ಹಿಂದಿನ ಮಾದರಿಯ ಬೈಕ್‌ಗಳಿಗೂ ಮತ್ತು ಹೊಸ ಬೈಕ್‌ಗಳ ಬೆಲೆ ಬೆಲೆಗಳನ್ನು ಲೆಕ್ಕಹಾಕಿದಾಗ ಎಫ್‌ಜೆಡ್ ವಿ3.0 ಬೈಕ್ ಬೆಲೆಯು ರೂ.13 ಸಾವಿರ ದುಬಾರಿಯಾಗಿದ್ದು, ಎಫ್‌ಜೆಡ್-ಎಸ್ ವಿ3.0 ಬೈಕ್ ಬೆಲೆಯಲ್ಲೂ ಕೂಡಾ ಹೆಚ್ಚುವರಿ ರೂ. 9 ಸಾವಿರ ದುಬಾರಿಯಾಗಲಿವೆ.

ಯಮಹಾ ಎಫ್‌ಜೆಡ್ ಮತ್ತು ಎಫ್‌ಜೆಡ್-ಎಸ್ ವಿ3.0 ವರ್ಷನ್ ಬಿಡುಗಡೆ

ಆದ್ರೆ ಹೊಸ ಬೈಕ್‌ಗಳಲ್ಲಿ ಬೆಲೆ ಏರಿಕೆಗೆ ತಕ್ಕಂತೆ ಮಹತ್ವದ ಬದಲಾವಣೆ ತಂದಿರುವುದು ಕೂಡಾ ಪ್ರಮುಖವಾಗಿದ್ದು, ಎರಡು ಬೈಕಿನಲ್ಲೂ ಸಿಂಗಲ್ ಚಾನೆಲ್ ಎಬಿಎಸ್, ಡ್ಯುಯಲ್ ಡಿಸ್ಕ್ ಬ್ರೇಕ್, ಸಂಪೂರ್ಣ ಹೊಸ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಡಿಆರ್‌ಎಲ್ ಸೇರಿಸಲಾಗಿದೆ.

ಯಮಹಾ ಎಫ್‌ಜೆಡ್ ಮತ್ತು ಎಫ್‌ಜೆಡ್-ಎಸ್ ವಿ3.0 ವರ್ಷನ್ ಬಿಡುಗಡೆ

ಇದರೊಂದಿಗೆ ಹೊಸ ಬೈಕ್‌ಗಳ ಗ್ರಾಫಿಕ್ಸ್ ವಿನ್ಯಾಸ ಬದಲಾವಣೆ, ಸೆಂಟ್ರಲ್ ಪ್ಯಾನೆಲ್, ಹೊಸದಾದ ಪೂರ್ಣಪ್ರಮಾಣದ ಡಿಜಿಟಲ್ ಇನ್‌ಸ್ಟ್ರುಮೆಂಟಲ್ ಕನ್ಸೊಲ್, ಕಟ್ ಶಾರ್ಟ್ ವಿನ್ಯಾಸದ ಟೈಲ್ ವಿಭಾಗ ಮತ್ತು ಬೈಕಿನ ಎಕ್ಸಾಸ್ಟ್‌ ವಿನ್ಯಾಸವು ಹೊಸ ಬೈಕ್ ನೋಟವನ್ನು ಹೆಚ್ಚಿಸಿವೆ.

ಯಮಹಾ ಎಫ್‌ಜೆಡ್ ಮತ್ತು ಎಫ್‌ಜೆಡ್-ಎಸ್ ವಿ3.0 ವರ್ಷನ್ ಬಿಡುಗಡೆ

ಇನ್ನೊಂದು ಪ್ರಮುಖ ಬದಲಾವಣೆ ಅಂದ್ರೆ, ಈ ಹಿಂದಿನ ಬೈಕ್‌ಗಳಲ್ಲಿ ನೀಡಲಾಗುತ್ತಿದ್ದ ವಿಭಜಿತ ಆಸದ ಸೌಲಭ್ಯದ ಬದಲಾಗಿ ಹೊಸ ಬೈಕ್‌ಗಳಲ್ಲಿ ಒಂದೇ ಸೀಟಿನಲ್ಲೇ ಎರಡು ಹಂತದ ಆಸನ ಸೌಲಭ್ಯ ಹೊಂದಿದ್ದು, ಇದು ಹಿಂಬದಿಯ ಸವಾರರಿಗೆ ಸಾಕಷ್ಟು ಅನುಕೂಲಕರವಾಗಿದೆ.

ಯಮಹಾ ಎಫ್‌ಜೆಡ್ ಮತ್ತು ಎಫ್‌ಜೆಡ್-ಎಸ್ ವಿ3.0 ವರ್ಷನ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಎಫ್‌ಜೆಡ್ ಮತ್ತು ಎಫ್‌ಜೆಡ್-ಎಸ್ ವಿ3.0 ಬೈಕ್‌ಗಳು 149ಸಿಸಿ ಸಿಂಗಲ್ ಸಿಲಿಂಡರ್ ಮೋಟಾರ್ ಸೌಲಭ್ಯವನ್ನು ಹೊಂದಿದ್ದು, ಫೈವ್-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 13-ಬಿಎಚ್‌ಪಿ ಮತ್ತು 12.8-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಯಮಹಾ ಎಫ್‌ಜೆಡ್ ಮತ್ತು ಎಫ್‌ಜೆಡ್-ಎಸ್ ವಿ3.0 ವರ್ಷನ್ ಬಿಡುಗಡೆ

ಹೊಸ ಬೈಕ್‌ಗಳ ಎಂಜಿನ್‌ ಸಾಮರ್ಥ್ಯಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೂ ಸಹ ಪರ್ಫಾಮೆನ್ಸ್‌ನಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು, ಇದು ಹೊಸ ಬೈಕ್‌ಗಳ ಇಂಧನ ದಕ್ಷತೆ ಹೆಚ್ಚಳದೊಂದಿಗೆ ಕಮ್ಯೂಟರ್ ಬೈಕ್ ಪ್ರಿಯರನ್ನು ಸೆಳೆಯುವ ಸಾಧ್ಯತೆಗಳಿವೆ.

MOST READ: ಮಹೀಂದ್ರಾ ಅಲ್ಟುರಾಸ್ ಜಿ4 ಕಾರಿಗೆ ಹೊಸ ಹೆಸರು ನೀಡಿದ್ರೆ 2 ಕಾರು ಫ್ರೀ ಅಂತೆ..!

ಯಮಹಾ ಎಫ್‌ಜೆಡ್ ಮತ್ತು ಎಫ್‌ಜೆಡ್-ಎಸ್ ವಿ3.0 ವರ್ಷನ್ ಬಿಡುಗಡೆ

ಲಭ್ಯವಿರುವ ಬಣ್ಣಗಳು

ಎಫ್‌ಜೆಡ್ ವಿ3.0- ಮೆಟಾಲಿಕ್ ಬ್ಲ್ಯಾಕ್, ರೇಸಿಂಗ್ ಬ್ಲ್ಯೂ

ಎಫ್‌ಜೆಡ್-ಎಸ್ ವಿ3.0- ಮ್ಯಾಟ್ ಬ್ಲ್ಯಾಕ್, ಡಾರ್ಕ್ ಮ್ಯಾಟ್ ಬ್ಲ್ಯೂ, ಗ್ರೇ ಮತ್ತು ಕಯೆನ್ ಬ್ಲ್ಯೂ

ಯಮಹಾ ಎಫ್‌ಜೆಡ್ ಮತ್ತು ಎಫ್‌ಜೆಡ್-ಎಸ್ ವಿ3.0 ವರ್ಷನ್ ಬಿಡುಗಡೆ

ಒಟ್ಟಿನಲ್ಲಿ 150ಸಿಸಿಯಿಂದ 160ಸಿಸಿ ವಿಭಾಗದಲ್ಲಿರುವ ಜನಪ್ರಿಯ ಮಾದರಿಗಳಿಗೆ ತೀವ್ರ ಪೈಪೋಟಿ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುವ ಹೊಸ ಎಫ್‌ಜೆಡ್ ಮತ್ತು ಎಫ್‌ಜೆಡ್-ಎಸ್ ವಿ3.0 ಬೈಕ್‌ಗಳು ಬಜಾಜ್ ಪಲ್ಸರ್ ಎನ್ಎಸ್160, ಸುಜುಕಿ ಜಿಕ್ಸರ್, ಹೋಂಡಾ ಸಿಬಿ ಹಾರ್ನೆಟ್ 160ಆರ್ ಮತ್ತು ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಮಾರಾಟಕ್ಕೆ ಟಕ್ಕರ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
Read more on ಯಮಹಾ yamaha
English summary
2019 Yamaha FZ & FZ-S V3.0 Models Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X