ಮಾರಾಟದಲ್ಲಿ ಹೊಸ ದಾಖಲೆ ಬರೆದ ಯಮಹಾ ಎಂಟಿ-15

ಯಮಹಾ ಎಂಟಿ-15 ಬೈಕಿನ ಮಾರಾಟವು ಕಳೆದ 6 ತಿಂಗಳುಗಳಿಂದ 15,000 ಯುನಿಟ್‍‍ಗಳಿಗೆ ತಲುಪಿ ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ತಲುಪಿದೆ. ಯಮಹಾ ಎಂಟಿ-15 ಬೈಕ್ ಅನ್ನು ಈ ವರ್ಷದ ಮಾರ್ಚ್‍‍ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಬಿಡುಗಡೆಯಾದಾಗಿನಿಂದ ಇದುವರೆಗೂ 15,298 ಯುನಿಟ್‍‍ಗಳನ್ನು ಮಾರಾಟ ಮಾಡಲಾಗಿದೆ.

ಮಾರಾಟದಲ್ಲಿ ಹೊಸ ದಾಖಲೆ ಬರೆದ ಯಮಹಾ ಎಂಟಿ-15

ಯಮಹಾ ಎಂಟಿ-15 ಬೈಕ್, ಜಪಾನ್ ಮೂಲದ ಯಮಹಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಹೊಸ ಬೈಕ್ ಆಗಿದೆ. ಈ ನೇಕೆಡ್ ಸ್ಟ್ರೀಟ್ ಫೈಟರ್ ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.1.36 ಲಕ್ಷಗಳಾಗಿದೆ. ಬಿಡುಗಡೆಯಾದ ಮೊದಲ ತಿಂಗಳಿನಲ್ಲಿಯೇ ಈ ಬೈಕಿನ 5,000ಕ್ಕೂ ಹೆಚ್ಚು ಯುನಿಟ್‍‍ಗಳು ಮಾರಾಟವಾಗಿದ್ದವು.

ಮಾರಾಟದಲ್ಲಿ ಹೊಸ ದಾಖಲೆ ಬರೆದ ಯಮಹಾ ಎಂಟಿ-15

ಕಳೆದ ಕೆಲವು ತಿಂಗಳುಗಳಿಂದ ಭಾರತದ ಆಟೋ ಮೊಬೈಲ್ ಉದ್ಯಮವು ಎದುರಿಸುತ್ತಿರುವ ನಿಧಾನಗತಿಯ ಪ್ರಗತಿಯು ಯಮಹಾ ಕಂಪನಿಯ ಬೈಕುಗಳ ಮೇಲೂ ಉಂಟಾದ ಕಾರಣ ಈ ಬೈಕಿನ ಮಾರಾಟವು ಕುಸಿದಿದೆ.

ಮಾರಾಟದಲ್ಲಿ ಹೊಸ ದಾಖಲೆ ಬರೆದ ಯಮಹಾ ಎಂಟಿ-15

ಎಂಟಿ-15 ಬೈಕಿನ ವಿನ್ಯಾಸವನ್ನು ಯಮಹಾ ಕಂಪನಿಯ ಮತ್ತೊಂದು ಬೈಕ್ ಆದ ಎಂಟಿ 09 ಬೈಕಿನಿಂದ ಪಡೆಯಲಾಗಿದೆ. ಈ ಬೈಕಿನ ಬಿಡುಗಡೆಯೊಂದಿಗೆ ಯಮಹಾ ಕಂಪನಿಯ ಎಂಟಿ ಸರಣಿಯ ಬೈಕುಗಳು ದೇಶಿಯ ಮಾರುಕಟ್ಟೆಗೆ ಕಾಲಿಟ್ಟಿವೆ.

ಮಾರಾಟದಲ್ಲಿ ಹೊಸ ದಾಖಲೆ ಬರೆದ ಯಮಹಾ ಎಂಟಿ-15

ಎಂಟಿ-15 ಬೈಕಿನಲ್ಲಿ ಆರ್15 ವಿ3.0 ಬೈಕಿನಲ್ಲಿರುವಂತಹ 155 ಸಿಸಿಯ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 10,000 ಆರ್‍‍ಪಿ‍ಎಂನಲ್ಲಿ 19.1 ಬಿ‍‍ಹೆಚ್‍‍ಪಿ ಪವರ್ ಹಾಗೂ 8,500 ಆರ್‍‍ಪಿ‍ಎಂನಲ್ಲಿ 14.7 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಮಾರಾಟದಲ್ಲಿ ಹೊಸ ದಾಖಲೆ ಬರೆದ ಯಮಹಾ ಎಂಟಿ-15

ಈ ಎಂಜಿನ್‍‍ನಲ್ಲಿ ವೆರಿಯೆಬಲ್ ವಾಲ್ವ್ ಆಕ್ಚುಯೇಷನ್ ಜೊತೆಗೆ ಆರು ಸ್ಪೀಡಿನ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಈ ಬೈಕಿನಲ್ಲಿ ಅಸಿಸ್ಟ್ ಹಾಗೂ ಸ್ಲಿಪರ್ ಕ್ಲಚ್‍‍ಗಳನ್ನು ಸಹ ಅಳವಡಿಸಲಾಗಿದೆ. 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಹೊಸ ಮಾಲಿನ್ಯ ನಿಯಮಗಳಿಗೆ ತಕ್ಕಂತೆ ಇರುವ ಎಂಜಿನ್ ಅನ್ನು ತನ್ನ ಸರಣಿಯ ಎಲ್ಲಾ ಬೈಕುಗಳಲ್ಲಿ ಅಳವಡಿಸುವುದಾಗಿ ಯಮಹಾ ಕಂಪನಿಯು ತಿಳಿಸಿದೆ.

ಮಾರಾಟದಲ್ಲಿ ಹೊಸ ದಾಖಲೆ ಬರೆದ ಯಮಹಾ ಎಂಟಿ-15

ಯಮಹಾ ಕಂಪನಿಯು ಈ ವರ್ಷದ ನವೆಂಬರ್‍‍ನಲ್ಲಿ ಬಿ‍ಎಸ್ 6 ಎಂಜಿನ್ ಹೊಂದಿರುವ ಬೈಕುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ. ಯಮಹಾ ಎಂಟಿ-15 ಬೈಕ್ ಹಲವಾರು ಫೀಚರ್‍‍ಗಳನ್ನು ಹೊಂದಿದೆ.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಮಾರಾಟದಲ್ಲಿ ಹೊಸ ದಾಖಲೆ ಬರೆದ ಯಮಹಾ ಎಂಟಿ-15

ಬೈ ಫಂಕ್ಷನಲ್ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್ಸ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಎಲ್‍‍ಸಿ‍‍ಡಿ ಡಿಸ್‍‍ಪ್ಲೇ, ಶಾರ್ಟ್ ರೈಸಿಂಗ್ ಟೇಲ್, ರೇಡಿಯೇಟರ್ ಸೈಡ್ ಫಿನ್ ಹಾಗೂ ಫ್ರಂಟ್ ವಿಂಗ್‍‍ಲೆಟ್ ಸೇರಿದಂತೆ ಹಲವಾರು ಫೀಚರ್‍‍ಗಳನ್ನು ಹೊಂದಿದೆ.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಮಾರಾಟದಲ್ಲಿ ಹೊಸ ದಾಖಲೆ ಬರೆದ ಯಮಹಾ ಎಂಟಿ-15

ಈ ಬೈಕಿನಲ್ಲಿ ಅಂತರ್‍‍ರಾಷ್ಟ್ರೀಯ ಮಾದರಿಯ ಬೈಕುಗಳಲ್ಲಿರುವಂತಹ ಇನ್ವರ್ಟೆಡ್ ಫ್ರಂಟ್ ಫೋರ್ಕ್‍‍ಗಳನ್ನು ಅಳವಡಿಸಿಲ್ಲ. ಇದರ ಬದಲಿಗೆ ಮುಂಭಾಗದಲ್ಲಿ ಸಾಂಪ್ರಾದಾಯಿಕ ಮಾದರಿಯ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍‍ಗಳನ್ನು ಅಳವಡಿಸಲಾಗಿದೆ. ಬ್ರೇಕಿಂಗ್‍‍ಗಳಿಗಾಗಿ ಎರಡೂ ಕಡೆ ಡಿಸ್ಕ್ ಬ್ರೇಕ್‍‍ಗಳಿವೆ. ಎ‍‍ಬಿ‍ಎಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಮಾರಾಟದಲ್ಲಿ ಹೊಸ ದಾಖಲೆ ಬರೆದ ಯಮಹಾ ಎಂಟಿ-15

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಯಮಹಾ ಎಂಟಿ-15 ಬೈಕ್, 150 ಸಿಸಿ ಸೆಗ್‍‍ಮೆಂಟಿನಲ್ಲಿರುವ ಜನಪ್ರಿಯ ಬೈಕುಗಳಲ್ಲಿ ಒಂದಾಗಿದೆ. ಈ ಬೈಕ್ ಅಗ್ರೆಸಿವ್ ಡಿಸೈನ್, ಸ್ಪೋರ್ಟಿ ಹಾಗೂ ಮಸ್ಕುಲರ್ ಲುಕ್‍‍ಗಳನ್ನು ಹೊಂದಿದೆ. ದೇಶಿಯ ಮಾರುಕಟ್ಟೆಯಲ್ಲಿ ಯಮಹಾ ಎಂ‍ಟಿ-15 ಬೈಕ್ ಬಜಾಜ್ ಪಲ್ಸರ್ ಎನ್‍ಎಸ್ 200, ಟಿವಿ‍ಎಸ್ ಅಪಾಚೆ ಆರ್‍‍‍ಟಿ‍ಆರ್ 200 4ವಿ, ಸುಜುಕಿ ಜಿಕ್ಸರ್ 155 ಹಾಗೂ ಕೆ‍ಟಿ‍ಎಂ 125 ಡ್ಯೂಕ್ ಬೈಕುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on ಯಮಹಾ yamaha
English summary
Yamaha MT-15 Sales Crosses 15,000 Units Within Six Months Of Its Launch In India - Read in kannada
Story first published: Monday, September 23, 2019, 13:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X