ಗ್ರಾಹಕರ ವಿರೋಧದ ನಡುವೆಯೂ ಉತ್ತಮ ಬೇಡಿಕೆ ಗಿಟ್ಟಿಸಿಕೊಂಡ ಯಮಹಾ ಎಂಟಿ-15

ಕಳೆದ ತಿಂಗಳು ಮಾರ್ಚ್ 15ರಂದು ಭಾರತದಲ್ಲಿ ಬಿಡುಗಡೆಯಾಗಿದ್ದ ಯಮಹಾ ವಿನೂತನ ಎಂಟಿ-15 ಬೈಕ್ ಮಾದರಿಯು ಬೇಡಿಕೆಯಲ್ಲಿ ಉತ್ತಮ ಆರಂಭ ಕಂಡುಕೊಂಡಿದ್ದು, ಗ್ರಾಹಕರ ಆಕ್ರೋಶದ ಮಧ್ಯದಲ್ಲೂ ದಾಖಲೆಯ ಬೇಡಿಕೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಗ್ರಾಹಕರ ವಿರೋಧದ ನಡುವೆಯೂ ಉತ್ತಮ ಬೇಡಿಕೆ ಗಿಟ್ಟಿಸಿಕೊಂಡ ಯಮಹಾ ಎಂಟಿ-15

ಹೌದು, ಎಂಟಿ-15 ಬೈಕ್ ಬಿಡುಗಡೆಯ ವಿಚಾರದಲ್ಲಿ ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದ್ದ ಯಮಹಾ ಸಂಸ್ಥೆಯು, ಹೊಸ ಬೈಕಿನಲ್ಲಿ ಬೆಲೆಗೆ ತಕ್ಕಂತೆ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳ ಒದಗಿಸಿಲ್ಲ ಎನ್ನುವ ವಿಚಾರಕ್ಕೆ ಸಾವಿರಾರು ಯಮಹಾ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಬೆಲೆಗೆ ತಕ್ಕಂತೆ ತಾಂತ್ರಿಕ ಸೌಲಭ್ಯ ನೀಡಿಲ್ಲವೆಂದು ಸಾವಿರಾರು ಗ್ರಾಹಕರು ಬುಕ್ಕಿಂಗ್ ವಾಪಸ್ ಪಡೆದಿದ್ದಲ್ಲದೇ ಸಾಮಾಜಿಕ ಜಾಣತಾಣಗಳಲ್ಲಿ ಎಂಟಿ-15 ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.

ಗ್ರಾಹಕರ ವಿರೋಧದ ನಡುವೆಯೂ ಉತ್ತಮ ಬೇಡಿಕೆ ಗಿಟ್ಟಿಸಿಕೊಂಡ ಯಮಹಾ ಎಂಟಿ-15

ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಯಮಹಾ ಸಂಸ್ಥೆಯು ಎಂಟಿ-15 ಬೈಕ್ ಮಾರಾಟವನ್ನು ಮುಂದುವರಿಸಿದ್ದಲ್ಲದೇ ನೀರಿಕ್ಷೆಗಿಂತ ಹೆಚ್ಚಿನ ಮಟ್ಟದ ಗ್ರಾಹಕರನ್ನು ಸೆಳೆದಿದ್ದು, ಮಾರ್ಚ್ ತಿಂಗಳಿನಲ್ಲಿ ಬರೋಬ್ಬರಿ 3,680 ಬೈಕ್‌ಗಳನ್ನು ಮಾರಾಟ ಮಾಡಿದೆ.

ಗ್ರಾಹಕರ ವಿರೋಧದ ನಡುವೆಯೂ ಉತ್ತಮ ಬೇಡಿಕೆ ಗಿಟ್ಟಿಸಿಕೊಂಡ ಯಮಹಾ ಎಂಟಿ-15

ಬಿಡುಗಡೆಯಾದ ಒಂದು ವಾರದ ನಂತರ ಬೈಕ್ ವಿತರಣೆ ಆರಂಭಿಸಿದ್ದ ಯಮಹಾ ಸಂಸ್ಥೆಯು ಕೇವಲ 10 ದಿನಗಳ ಅವಧಿಯಲ್ಲಿ 3,680 ಬೈಕ್‌ಗಳನ್ನು ಮಾರಾಟ ಮಾಡಿದ್ದು, ಏಪ್ರಿಲ್ ಅವಧಿಯಲ್ಲಿ ಎಂಟಿ-15 ಮಾರಾಟ ಮತ್ತಷ್ಟು ಹೆಚ್ಚಳವಾಗುವ ನೀರಿಕ್ಷೆಯಿದೆ.

ಗ್ರಾಹಕರ ವಿರೋಧದ ನಡುವೆಯೂ ಉತ್ತಮ ಬೇಡಿಕೆ ಗಿಟ್ಟಿಸಿಕೊಂಡ ಯಮಹಾ ಎಂಟಿ-15

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿರುವ ವೈಜೆಡ್ಎಫ್-ಆರ್15 ಬೈಕಿಗಿಂತಲೂ ಅತ್ಯುತ್ತಮ ಪರ್ಫಾಮೆನ್ಸ್ ಮಾದರಿ ಇದಾಗಿದ್ದು, ಹೊಸ ಬೈಕಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.1.36ಲಕ್ಷಕ್ಕೆ ನಿಗದಿಗೊಳಿಸಲಾಗಿದೆ. ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಗಳನ್ನು ಸಿದ್ದಪಡಿಸುತ್ತಿರುವ ಯಮಹಾ ಸಂಸ್ಥೆಯು ಎಂಟಿ-15 ಬೈಕಿನಲ್ಲಿ ಹಲವು ಹೊಸ ಸೌಲಭ್ಯಗಳನ್ನು ಪರಿಚಯಿಸಿದ್ದು, 'ದ ಡಾರ್ಕ್ ಸೈಡ್ ಆಫ್ ಜಪಾನ್' ಮಾದರಿಯ ಹೆಡ್‌ಲ್ಯಾಂಪ್ ಸೌಲಭ್ಯವು ಹೊಸ ಬೈಕಿನ ಪ್ರಮುಖ ಆಕರ್ಷಣೆಯಾಗಿದೆ.

ಗ್ರಾಹಕರ ವಿರೋಧದ ನಡುವೆಯೂ ಉತ್ತಮ ಬೇಡಿಕೆ ಗಿಟ್ಟಿಸಿಕೊಂಡ ಯಮಹಾ ಎಂಟಿ-15

ಹಾಗೆಯೇ ಹೊಸ ಬೈಕಿನಲ್ಲಿ ಅಳವಡಿಸಲಾಗಿರುವ ಆಕರ್ಷಕ ಫ್ಯೂಲ್ ಟ್ಯಾಂಕ್ ಕೂಡಾ ಬೈಕಿನ ಬಲಿಷ್ಠತೆಗೆ ಮತ್ತಷ್ಟು ಮೆರಗು ತಂದಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಎಂಟಿ-10 ಬೈಕಿನಿಂದಲೂ ಕೆಲವು ವಿನ್ಯಾಸಗಳನ್ನು ಎಂಟಿ-15 ಮಾದರಿಯಲ್ಲಿ ಎರವಲು ಪಡೆಯಲಾಗಿದೆ.

ಗ್ರಾಹಕರ ವಿರೋಧದ ನಡುವೆಯೂ ಉತ್ತಮ ಬೇಡಿಕೆ ಗಿಟ್ಟಿಸಿಕೊಂಡ ಯಮಹಾ ಎಂಟಿ-15

ಇದರ ಹೊರತಾಗಿ ಆರ್15 ಬೈಕಿನಲ್ಲಿ ಅಳವಡಿಸಲಾಗಿರುವ ಬಹುತೇಕ ಸೌಲಭ್ಯಗಳನ್ನು ಹೊಸ ಎಂಟಿ-15 ಬೈಕಿನಲ್ಲಿ ನೋಡಬಹುದಾಗಿದ್ದು, ಬೆಲೆ ಇಳಿಕೆ ಮಾಡುವ ಸಂಬಂಧ ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಎಂಟಿ-15 ಬೈಕಿಗಿಂತಲೂ ಭಾರತದಲ್ಲಿ ಬಿಡುಗಡೆಯಾಗಿರುವ ಹೊಸ ಬೈಕಿನಲ್ಲಿ ಕೆಲವು ಪ್ರೀಮಿಯಂ ಸೌಲಭ್ಯಗಳನ್ನು ಕಡಿತ ಮಾಡಲಾಗಿದೆ.

MOST READ: ಮಗುವಿನ ಪ್ರಾಣವನ್ನು ಉಳಿಸಲು 600 ಕಿ.ಮೀ ದೂರವನ್ನು ಕೇವಲ 720 ನಿಮಿಷಗಳಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್

ಗ್ರಾಹಕರ ವಿರೋಧದ ನಡುವೆಯೂ ಉತ್ತಮ ಬೇಡಿಕೆ ಗಿಟ್ಟಿಸಿಕೊಂಡ ಯಮಹಾ ಎಂಟಿ-15

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಹೊಸ ಎಂಟಿ-15 ಬೈಕ್ ಮಾದರಿಯ ಎಂಜಿನ್ ಅನ್ನು ಆರ್15 ಬೈಕಿನಲ್ಲೂ ನೋಡಬಹುದಾಗಿದ್ದು, ಲಿಕ್ಟಿಡ್ ಕೂಲ್ಡ್ 155 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ ವೆರಿವೆಬಲ್ ವೆವ್ ಟಿಮಿಂಗ್(ವಿವಿಟಿ) ತಂತ್ರಜ್ಞಾನ ಪ್ರೇರಣೆ ಹೊಂದಿದೆ. ಈ ಮೂಲಕ 19.3-ಬಿಎಚ್‌ಪಿ ಮತ್ತು 14.7-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ರಿಯರ್ ವೀಲ್ಹ್ ಸ್ಲಿಪ್ಲರ್ ಕ್ಲಚ್ ಸೌಲಭ್ಯ ಪಡೆದಿದೆ.

ಗ್ರಾಹಕರ ವಿರೋಧದ ನಡುವೆಯೂ ಉತ್ತಮ ಬೇಡಿಕೆ ಗಿಟ್ಟಿಸಿಕೊಂಡ ಯಮಹಾ ಎಂಟಿ-15

ಇನ್ನು ಬೈಕ್ ಸವಾರರ ಸುರಕ್ಷತೆಗೂ ಹೆಚ್ಚಿನ ಗಮನಹರಿಸಲಾಗಿದ್ದು, ಎಂಟಿ-15 ಬೈಕಿನಲ್ಲಿ 245-ಎಂಎ ಫ್ರಂಟ್ ಡಿಸ್ಕ್ ಬ್ರೇಕ್, 220-ಎಂಎಂ ರಿಯರ್ ಡಿಸ್ಕ್ ಬ್ರೇಕ್ ಮತ್ತು ಸಿಂಗಲ್ ಚಾನೆಲ್ ಎಬಿಎಸ್ ಜೋಡಣೆ ಮಾಡಲಾಗಿದೆ. ಜೊತೆಗೆ ಆರ್15 ಬೈಕಿನಿಂದ ಎರವಲು ಪಡೆಯಾದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಅಲ್ಯುಮಿನಿಯಂ ಸ್ವಿಗಂ ಆರ್ಮ್ ಸೌಲಭ್ಯವು ಹೊಸ ಬೈಕಿನ ಬಲಿಷ್ಠತೆಯನ್ನು ಹೆಚ್ಚಿಸಿದ್ದು, ಸ್ಟ್ರಿಟ್ ಫೈಟರ್ ಬೈಕ್ ಆವೃತ್ತಿಗಾಗಿ ಇದು ಜನಪ್ರಿಯತೆ ಸಾಧಿಸಲಿದೆ.

Most Read Articles

Kannada
Read more on ಯಮಹಾ yamaha
English summary
Yamaha MT-15 Sales Report For March 2019. Read in Kannada.
Story first published: Friday, April 19, 2019, 17:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X