ಭಾರತದಲ್ಲಿ ಬಿಡುಗಡೆಯಾಗಲಿದೆ ಯಮಹಾ ಎನ್‌ ಮ್ಯಾಕ್ಸ್ 155 ಸ್ಕೂಟರ್

ಯಮಹಾ ಮೋಟಾರ್ ಇಂಡಿಯಾ ಸಂಸ್ಥೆಯು ಈಗಾಗಲೇ ಭಾರತದಲ್ಲಿ ಹಲವು ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತೊಂದು ವಿನೂತನ ಪ್ರೀಮಿಯಂ ಮ್ಯಾಕ್ಸಿ ಸ್ಕೂಟರ್ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಯಮಹಾ ಎನ್‌ ಮ್ಯಾಕ್ಸ್ 155 ಸ್ಕೂಟರ್

ಮಾರುಕಟ್ಟೆಯಲ್ಲಿ ಸದ್ಯ ಯುವ ಗ್ರಾಹಕರು ಪ್ರೀಮಿಯಂ ಸ್ಕೂಟರ್‌ಗಳಿಗೆ ಹೆಚ್ಚಿನ ಬೇಡಿಕೆ ಸಲ್ಲಿಸುತ್ತಿದ್ದು, ಎಪ್ರಿಲಿಯಾ ಮತ್ತು ವೆಸ್ಪಾ ಸ್ಕೂಟರ್‌ಗಳು ಹೆಚ್ಚಿನ ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆ ಅನ್ವಯ ಎನ್ ಮ್ಯಾಕ್ಸ್ 155 ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡಲು ಯಮಹಾ ಯೋಜನೆ ರೂಪಿಸಿದೆ. ಇದು ಈಗಾಗಲೇ ಯುರೋಪಿನ್ ಮಾರುಕಟ್ಟೆಗಳಲ್ಲಿ ಅತ್ಯುತ್ತಮ ಸ್ಕೂಟರ್ ಮಾದರಿಯಾಗಿ ಮಾರಾಟವಾಗುತ್ತಿದ್ದು, ಭಾರತದಲ್ಲೂ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಯಮಹಾ ಎನ್‌ ಮ್ಯಾಕ್ಸ್ 155 ಸ್ಕೂಟರ್

ಯಮಹಾ ಸಂಸ್ಥೆಯು ಸದ್ಯ 113 ಸಿಸಿ ಎಂಜಿನ್ ಹೊಂದಿರುವ ಸ್ಕೂಟರ್ ಮಾದರಿಗಳನ್ನು ಹೊರತುಪಡಿಸಿ ಯಾವುದೊಂದು ಸ್ಕೂಟರ್ ಕೂಡಾ 125 ಸಿಸಿ ಮೇಲ್ಪಟ್ಟ ಎಂಜಿನ್‌ ಅನ್ನು ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಪ್ರೀಮಿಯಂ ಸ್ಕೂಟರ್ ಮಾರಾಟಕ್ಕೆ ಮುಂದಾಗಿರುವ ಯಮಹಾ ಸಂಸ್ಥೆಯು ಎನ್‌ಮ್ಯಾಕ್ಸ್ 155 ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಗಾಗಿ ಆಯ್ದುಕೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಯಮಹಾ ಎನ್‌ ಮ್ಯಾಕ್ಸ್ 155 ಸ್ಕೂಟರ್

ಪ್ರೀಮಿಯಂ ಸ್ಕೂಟರ್‌ಗಳಲ್ಲಿ ಸದ್ಯ ಹೆಚ್ಚು ಬೇಡಿಕೆ ಹೊಂದಿರುವ ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್‌ಗಿಂತಲೂ ಅತ್ಯುತ್ತಮ ಫೀಚರ್ಸ್ ಹೊಂದಿರುವ ಯಮಹಾ ಎನ್ ಮ್ಯಾಕ್ಸ್ 155 ಸ್ಕೂಟರ್ ಆವೃತ್ತಿಯು 155.1-ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊತ್ತು ಮಾರುಕಟ್ಟೆ ಪ್ರವೇಶಿಸಲಿದೆಯೆಂತೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಯಮಹಾ ಎನ್‌ ಮ್ಯಾಕ್ಸ್ 155 ಸ್ಕೂಟರ್

155.1-ಸಿಸಿ ಎಂಜಿನ್ ಮೂಲಕ 14.8-ಬಿಎಚ್‌ಪಿ ಮತ್ತು 14.4-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿರುವ ಎನ್ ಮ್ಯಾಕ್ 155 ಸ್ಕೂಟರ್ ಮಾದರಿಯು ಸುಜುಕಿ ಬರ್ಗಮನ್ ಸ್ಟ್ರೀಟ್ ಮಾದರಿಯಲ್ಲೇ ಹೊರ ವಿನ್ಯಾಸ ಹೊಂದಿರುವುದನ್ನು ಚಿತ್ರಗಳಲ್ಲಿ ಸ್ಪಷ್ಟವಾಗಿ ನೋಡಬಹುದಾಗಿದೆ. ಮುಚ್ಚಿದ ಫುಟ್ ಬೋರ್ಡ್ ಸೇರಿದಂತೆ ಸ್ಪೋರ್ಟಿ ಬೈಕ್ ಮಾದರಿಯಲ್ಲಿ ಮುಂಭಾಗದ ನೋಟ, ಡಿಜಿಟಲ್ ಇನ್ಟ್ರುಮೆಂಟ್ ಕ್ಲಸ್ಟರ್ ಮತ್ತು ವಿವಿಎ(ವೆರಿಬೆಲ್ ವೆವ್ ಆಕ್ಷನ್) ಟೆಕ್ನಾಲಜಿ ಪಡೆದುಕೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಯಮಹಾ ಎನ್‌ ಮ್ಯಾಕ್ಸ್ 155 ಸ್ಕೂಟರ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ವಿವಿಎ ಟೆಕ್ನಾಲಜಿ ಬಳಕೆಯಿಂದಾಗಿ ಹೊಸ ಸ್ಕೂಟರ್ ಮಾದರಿಯು ಪರ್ಫಾಮೆನ್ಸ್ ಜೊತೆಗೆ ಇಂಧನ ದಕ್ಷತೆಯನ್ನು ಕಾಯ್ದುಕೊಳ್ಳಲು ನೆರವಾಗಲಿದ್ದು, ದೊಡ್ಡದಾದ ವೀಂಡ್ ಸ್ಕ್ರೀನ್, ಅಂಡರ್ ಸೀಟ್ ಸ್ಟೋರೆಜ್, ಲೈಟ್‌ವೆಟ್ ಟುಬ್ಯುಲರ್ ಫ್ರೇಮ್ ವಿನ್ಯಾಸವನ್ನು ಪೆಡೆದುಕೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಯಮಹಾ ಎನ್‌ ಮ್ಯಾಕ್ಸ್ 155 ಸ್ಕೂಟರ್

ಟುಬ್ಯುಲರ್ ಫ್ರೇಮ್ ವಿನ್ಯಾಸವು ಎನ್ ಮ್ಯಾಕ್ಸ್ 155 ಸ್ಕೂಟರ್‌ಗೆ ಸ್ಪೋರ್ಟಿ ಲುಕ್ ನೀಡಿದ್ದು, ವಿಸ್ತಾರವಾದ ಆಸನ ಸೌಲಭ್ಯ, ಸ್ಟೆಬಲ್ ರೈಡಿಂಗ್‌ಗಾಗಿ ಫ್ರೀ ಹ್ಯಾಂಡಲ್ ಬಾರ್ ನೀಡಲಾಗಿದೆ. ಹಾಗೆಯೇ ಮುಂಭಾಗದ ಚಕ್ರದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಚಕ್ರದಲ್ಲಿ ಟ್ವಿನ್ ಶಾರ್ಕ್ ಸಸ್ಷೆನ್ ಜೋಡಣೆ ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಯಮಹಾ ಎನ್‌ ಮ್ಯಾಕ್ಸ್ 155 ಸ್ಕೂಟರ್

ಇನ್ನು ಸವಾರರ ಸುರಕ್ಷತೆಗಾಗಿ ಹೊಸ ಸ್ಕೂಟರ್‌ನಲ್ಲಿ ಎರಡು ಬದಿಯಲ್ಲೂ 230-ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದ್ದು, ಇದು ಸ್ಪೋರ್ಟಿ ಬೈಕ್‌ಗಳಿಂತಲೂ ಅತ್ಯುತ್ತಮವಾಗಿದೆ. ಇದರೊಂದಿಗೆ ಇಂಧನ ದಕ್ಷತೆಯಲ್ಲೂ ಮುನ್ನಡೆ ಕಾಯ್ದುಕೊಂಡಿರುವ ಎನ್ ಮ್ಯಾಕ್ಸ್ 155 ಸ್ಕೂಟರ್ ಮಾದರಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ 45 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲದು.

ಭಾರತದಲ್ಲಿ ಬಿಡುಗಡೆಯಾಗಲಿದೆ ಯಮಹಾ ಎನ್‌ ಮ್ಯಾಕ್ಸ್ 155 ಸ್ಕೂಟರ್

ಬಿಡುಗಡೆಯ ಅವಧಿ ಮತ್ತು ಬೆಲೆ(ಅಂದಾಜು)

2020ರ ಮಾರ್ಚ್‌ನಲ್ಲಿ ನಡೆಸಲು ಉದ್ದೇಶಿಸಲಾಗಿರುವ ದೆಹಲಿ ಆಟೋ ಮೇಳದಲ್ಲಿ ಯಮಹಾ ಬಹನೀರಿಕ್ಷಿತ ಎನ್ ಮ್ಯಾಕ್ಸ್ 155 ಸ್ಕೂಟರ್ ಪ್ರದರ್ಶನವಾಗುವ ಸಾಧ್ಯತೆಗಳಿದ್ದು, ತದನಂತರವಷ್ಟೇ ಬಿಡುಗಡೆಯಾಗಲಿರುವ ಹೊಸ ಸ್ಕೂಟರ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ.95 ಸಾವಿರದಿಂದ ರೂ.1.05 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
Read more on ಯಮಹಾ yamaha
English summary
Yamaha NMAX 155 Scooter Launch In India 2020. Read in Kannada.
Story first published: Monday, July 22, 2019, 18:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X