ಬೈಕ್ ಮಾಲೀಕರೇ ಇತ್ತ ಗಮನಿಸಿ- ಯಮಹಾ ಪ್ರಿ ಮಾನ್ಸೂನ್ ಯೋಜನೆಗೆ ಚಾಲನೆ

ದೇಶದ ಬಹುತೇಕ ಭಾಗಗಳಲ್ಲಿ ಮಳೆಗಾಲವು ಶುರುವಾಗಿದೆ. ಇದರ ನಡುವೆ ಯಮಹಾ ಕಂಪನಿಯು ದೇಶಾದ್ಯಂತವಿರುವ ತನ್ನ ಆಯ್ದ ಡೀಲರ್‍‍ಗಳಲ್ಲಿ ಪ್ರಿ ಮಾನ್ಸೂನ್ ಚೆಕ್ ಅಪ್ ಕ್ಯಾಂಪ್‍‍ಗಳನ್ನು ಹಮ್ಮಿಕೊಂಡಿದೆ.

ಬೈಕ್ ಮಾಲೀಕರೇ ಇತ್ತ ಗಮನಿಸಿ- ಯಮಹಾ ಪ್ರಿ ಮಾನ್ಸೂನ್ ಯೋಜನೆಗೆ ಚಾಲನೆ

ಯಮಹಾದ ಚೆಕ್ ಅಪ್ ಕ್ಯಾಂಪ್‍‍ಗಳನ್ನು ಜೂನ್ ತಿಂಗಳಿನಲ್ಲಿ ನಡೆಸಲಾಗುವುದು. ಇದರಲ್ಲಿ 14 ಅವಶ್ಯಕ ಅಂಶಗಳ ಆಧಾರದ ಮೇಲೆ ಉಚಿತ ಚೆಕ್ ಅಪ್ ಮಾಡಲಾಗುವುದು. ಈ ಕ್ಯಾಂಪ್‍‍ಗಳನ್ನು ಯಮಹಾ ಕಂಪನಿಯ ಇಂಪ್ರೂವ್ಡ್ ವೆಹಿಕಲ್ ಕೇರ್‍ ಯೋಜನೆಯ ಭಾಗವಾಗಿ ಮಾನ್ಸೂನ್ ಸಮಯದಲ್ಲಿ ನಡೆಸಲಾಗುವುದು. ಯಮಹಾದ ಗ್ರಾಹಕರು ಈ ಅವಧಿಯಲ್ಲಿ 14 ಅಂಶಗಳ ಆಧಾರದ ಚೆಕ್ ಅಪ್‍‍ನ ಜೊತೆಯಲ್ಲಿ ಹೆಲ್ಮೆಟ್, ಆಕ್ಸೆಸರೀಸ್, ಲೇಬರ್ ಚಾರ್ಜ್ ಹಾಗೂ ಬಿಡಿ ಭಾಗಗಳ ಮೇಲೆ ಹೆಚ್ಚುವರಿ ರಿಯಾಯಿತಿಗಳನ್ನು ಪಡೆಯಲಿದ್ದಾರೆ.

ಬೈಕ್ ಮಾಲೀಕರೇ ಇತ್ತ ಗಮನಿಸಿ- ಯಮಹಾ ಪ್ರಿ ಮಾನ್ಸೂನ್ ಯೋಜನೆಗೆ ಚಾಲನೆ

ಯಮಹಾ, ಗ್ರಾಹಕರಿಗೆ ಹೆಚ್ಚು ಆದ್ಯತೆ ನೀಡುವ ಭಾರತದಲ್ಲಿರುವ ಕಂಪನಿಗಳಲ್ಲಿ ಒಂದಾಗಿದೆ. ದೇಶದ ವಿವಿಧೆಡೆ 500ಕ್ಕೂ ಹೆಚ್ಚು ಡೀಲರ್‍‍ಗಳನ್ನು ಹಾಗೂ 2,200 ಕ್ಕೂ ಹೆಚ್ಚು ಗ್ರಾಹಕ ಟಚ್ ಪಾಯಿಂಟ್ ಕೇಂದ್ರಗಳನ್ನು ಹೊಂದಿದೆ.

ಬೈಕ್ ಮಾಲೀಕರೇ ಇತ್ತ ಗಮನಿಸಿ- ಯಮಹಾ ಪ್ರಿ ಮಾನ್ಸೂನ್ ಯೋಜನೆಗೆ ಚಾಲನೆ

ಯಮಹಾ ಕಂಪನಿಯು ಭಾರತದಲ್ಲಿ ಉತ್ತರ ಪ್ರದೇಶದ ಸೂರಜ್‍‍ಪುರ್, ಹರಿಯಾಣದ ಫರೀದಾಬಾದ್ ಹಾಗೂ ತಮಿಳುನಾಡಿನ ಕಾಂಚೀಪುರಂನಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ. ಈ ಘಟಕಗಳಲ್ಲಿರುವ ಮೂಲಸೌಕರ್ಯವು ಹೈ ಟೆಕ್ ಆಗಿದ್ದು, ದ್ವಿ ಚಕ್ರವಾಹನಗಳನ್ನು ಉತ್ಪಾದಿಸುವುದರ ಜೊತೆಗೆ ದೇಶ ವಿದೇಶದಲ್ಲಿನ ಮಾರುಕಟ್ಟೆಗಳಿಗೆ ಬಿಡಿ ಭಾಗಗಳನ್ನು ತಯಾರಿಸುತ್ತದೆ.

ಬೈಕ್ ಮಾಲೀಕರೇ ಇತ್ತ ಗಮನಿಸಿ- ಯಮಹಾ ಪ್ರಿ ಮಾನ್ಸೂನ್ ಯೋಜನೆಗೆ ಚಾಲನೆ

ಯಮಹಾ ಮೋಟಾರ್ಸ್ 1985ರಲ್ಲಿ ಜಂಟಿ ಸಹಭಾಗಿತ್ವದಲ್ಲಿ ಭಾರತಕ್ಕೆ ಕಾಲಿಟ್ಟಿತು. 2001ರಲ್ಲಿ ಯಮಹಾ ಮೋಟಾರ್ಸ್, ಜಪಾನಿನ ಯಮಹಾ ಮೋಟಾರ್ ಕಂಪನಿಯ ಅಂಗ ಸಂಸ್ಥೆಯಾಯಿತು. 2008ರಲ್ಲಿ ಮಿಟ್ಸುಯಿ & ಕಂಪನಿ ಲಿಮಿಟೆಡ್ ಯಮಹಾ ಮೋಟಾರ್ಸ್ ಕಂಪನಿಯ ಜೊತೆ ಜಂಟಿ ಹೂಡಿಕೆಯ ಒಪ್ಪಂದಕ್ಕೆ ಸಹಿ ಹಾಕಿತು. ಸದ್ಯಕ್ಕೆ ಯಮಹಾ ಕಂಪನಿಯು ಭಾರತದಲ್ಲಿ ಸ್ಪೋರ್ಟ್ಸ್ ಮಾದರಿಯ ಬೈಕುಗಳನ್ನು ಮಾರಾಟ ಮಾಡುತ್ತಿದೆ.

ಬೈಕ್ ಮಾಲೀಕರೇ ಇತ್ತ ಗಮನಿಸಿ- ಯಮಹಾ ಪ್ರಿ ಮಾನ್ಸೂನ್ ಯೋಜನೆಗೆ ಚಾಲನೆ

321 ಸಿಸಿಯ ವೈ‍‍ಝಡ್‍ಎಫ್ ಆರ್3, 3.0 ವರ್ಷನ್‍‍‍ನ 155 ಸಿಸಿಯ ವೈ‍‍ಝಡ್‍ಎಫ್ - ಆರ್15, 149 ಸಿಸಿಯ ವೈ‍‍ಝಡ್‍ಎಫ್ - ಆರ್15ಎಸ್ ಹಾಗೂ ಎಂಟಿ-15 ಬೈಕುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಉಳಿದಂತೆ 249 ಸಿಸಿ ಎಂಜಿನ್‍ ಹೊಂದಿರುವ ಬ್ಲೂ ಕೋರ್ ಟೆಕ್ನಾಲಜಿ ಹೊಂದಿರುವ ಎಫ್‍‍ಝಡ್ 25 ಹಾಗೂ ಫೇಸರ್ 25 ಎಂಬ ಎರಡು ಬೈಕುಗಳನ್ನು ಮಾರಾಟ ಮಾಡುತ್ತಿದೆ.

MOST READ: ಅತಿ ಮೈಲೇಜ್ ನೀಡಬಲ್ಲ ಸ್ಮಾರ್ಟ್ ಹೈಬ್ರಿಡ್‌ ಎಂಜಿನ್‌ನೊಂದಿಗೆ ಮಾರುತಿ ಬಲೆನೊ ಬಿಡುಗಡೆ

ಬೈಕ್ ಮಾಲೀಕರೇ ಇತ್ತ ಗಮನಿಸಿ- ಯಮಹಾ ಪ್ರಿ ಮಾನ್ಸೂನ್ ಯೋಜನೆಗೆ ಚಾಲನೆ

ಯಮಹಾದ ಎಫ್‍‍ಝಡ್ - ಎಸ್, ಎಫ್‍‍ಝಡ್ ಎಫ್ಐ ಹಾಗೂ ಫೇಸರ್ ಎಫ್ಐ ಬೈಕುಗಳಲ್ಲಿ 149 ಸಿಸಿ ಎಂಜಿನ್‍‍ಗಳಿವೆ. ಈ ಪಟ್ಟಿಯಲ್ಲಿ ಬಜೆಟ್ 2 ವ್ಹೀಲರ್‍ ಬೈಕ್‍‍ಗಳಾದ ಎಸ್‍‍ಝಡ್ - ಆರ್‍ಆರ್ ವರ್ಷನ್ 2.0, ಸಲ್ಯೂಟೊ, ಸಲ್ಯೂಟೊ ಆರ್‍ಎಕ್ಸ್, ಸಿಗ್ನಸ್ ರೇ - ಝಡ್‍ಆರ್, ಫಸೀನೊ, ಸಿಗ್ನಸ್ ಆಲ್ಫಾ, ಸಿಗ್ನಸ್ ರೇ ಝಡ್ ಬೈಕುಗಳಿವೆ. ಯಮಹಾ ಭಾರತದಲ್ಲಿ 847 ಸಿಸಿ ಎಂಜಿನ್ ಹೊಂದಿರುವ ಎಂ‍‍ಟಿ 09 ಸ್ಟ್ರೀಟ್ ಫೈಟರ್ ಬೈಕ್ ಹಾಗೂ 998ಸಿಸಿ ಎಂಜಿನ್ ಹೊಂದಿರುವ ವೈ‍‍ಝಡ್‍ಎಫ್ - ಆರ್1 ಎಂಬ 2 ಪ್ರಿಮೀಯಂ ಸ್ಪೋರ್ಟ್ ಬೈಕುಗಳನ್ನು ಮಾರಾಟ ಮಾಡುತ್ತಿದೆ.

MOST READ: ಅನಾವರಣಗೊಂಡ ಬಿ‍ಎಂ‍‍ಡಬ್ಲ್ಯು 1 ಸೀರಿಸ್ ಕಾರು

ಬೈಕ್ ಮಾಲೀಕರೇ ಇತ್ತ ಗಮನಿಸಿ- ಯಮಹಾ ಪ್ರಿ ಮಾನ್ಸೂನ್ ಯೋಜನೆಗೆ ಚಾಲನೆ

ಯಮಹಾ ಮೋಟಾರ್ ಇಂಡಿಯಾ ಸೇಲ್ಸ್ ಪ್ರೈವೇಟ್ ಲಿಮಿಟೆಡ್‍‍ನ ಹಿರಿಯ ಉಪಾಧ್ಯಕ್ಷರಾದ ರವೀಂದರ್ ಸಿಂಗ್‍‍ರವರು ಮಾತನಾಡಿ, ಜವಾಬ್ದಾರಿಯುತ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ, ಕಂಪನಿಯು ಹೆಚ್ಚಿನ ರೀತಿಯ ಸುರಕ್ಷೆಯನ್ನು ನೀಡಲು ಬದ್ಧವಾಗಿದೆ.

MOST READ: ಜೀಪ್ ಕಂಪಾಸ್ ಹೊಂದಿರುವ ಭಾರತದ ಖ್ಯಾತ ಸೆಲೆಬ್ರಿಟಿಗಳು

ಬೈಕ್ ಮಾಲೀಕರೇ ಇತ್ತ ಗಮನಿಸಿ- ಯಮಹಾ ಪ್ರಿ ಮಾನ್ಸೂನ್ ಯೋಜನೆಗೆ ಚಾಲನೆ

ಯಮಹಾದ ವಾಹನಗಳಲ್ಲಿ ಕಡಿಮೆ ರಿಸ್ಕ್ ಫೀಚರ್ಗಳಿದ್ದು, ಈ ಚೆಕ್ ಅಪ್ ಕ್ಯಾಂಪ್‍‍ಗಳು ಮಳೆಗಾಲದಲ್ಲಿ ಸುರಕ್ಷತೆಯ ಚಾಲನೆ ಮಾಡುವುದರ ಬಗೆಗೆ ಹೆಚ್ಚಿನ ಅನುಭವವನ್ನು ನೀಡುತ್ತವೆ. ಈ ಕ್ಯಾಂಪ್‍‍ನಿಂದ ಮಳೆಗಾಲದಲ್ಲಿ ಸುರಕ್ಷತೆ ಚಾಲನೆಯ ಅನುಭವದ ಜೊತೆಗೆ ಬಿಡಿಭಾಗಗಳು ಹಾಗೂ ಆಕ್ಸೆಸರೀಸ್‍‍ಗಳ ಮೇಲೆ ರಿಯಾಯಿತಿಗಳು ಸಹ ದೊರೆಯುತ್ತವೆ ಎಂದು ತಿಳಿಸಿದರು.

Most Read Articles

Kannada
Read more on ಯಮಹಾ yamaha
English summary
Yamaha Organizes A Pre-Monsoon Check-Up Camp For All Its Customers - Read in kannada
Story first published: Friday, May 31, 2019, 17:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X