ಬಿಎಸ್-6 ಎಂಜಿನ್ ಪ್ರೇರಿತ ಯಮಹಾ ಆರ್15 ವಿ3.0 ವರ್ಷನ್ ಬಿಡುಗಡೆ

2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ದ್ವಿಚಕ್ರ ವಾಹನಗಳ ಮಾರಾಟಕ್ಕೆ ಈಗಾಗಲೇ ಚಾಲನೆ ದೊರೆತಿದ್ದು, ಯಮಹಾ ಸಹ ತನ್ನ ಜನಪ್ರಿಯ ಆರ್15 ವಿ3.0 ಬೈಕ್ ಮಾದರಿಯನ್ನು ಹೊಸ ನಿಯಮಕ್ಕೆ ಅನುಗುಣವಾಗಿ ಉನ್ನತೀಕರಿಸಿ ಬಿಡುಗಡೆ ಮಾಡಿದೆ.

ಬಿಎಸ್-6 ಎಂಜಿನ್ ಪ್ರೇರಿತ ಯಮಹಾ ಆರ್15 ವಿ3.0 ವರ್ಷನ್ ಬಿಡುಗಡೆ

ಹೊಸ ಎಂಜಿನ್ ಪ್ರೇರಿತ ಆರ್15 ವಿ3.0 ಬೈಕ್ ಮಾದರಿಯು ಹಳೆಯ ಮಾದರಿಗಿಂತಲೂ ಕೆಲವು ಮಹತ್ವದ ಬದಲಾವಣೆಗಳನ್ನು ಪಡೆದುಕೊಂಡಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.1.45 ಲಕ್ಷ ಬೆಲೆ ನಿಗದಿಪಡಿಸಲಾಗಿದೆ. ಹೊಸ ಬೈಕ್ ಬೆಲೆಯು ಬಿಎಸ್-4 ಮಾದರಿಗಿಂತ ರೂ.3 ಸಾವಿರದಷ್ಟು ದುಬಾರಿಯಾಗಿದ್ದು, ಬಿಎಸ್-6 ವೈಶಿಷ್ಟ್ಯತೆಯಿಂದಾಗಿ ಬೈಕಿನ ಎಂಜಿನ್ ಪರ್ಫಾಮೆನ್ಸ್‌ನಲ್ಲಿ ಅಚ್ಚರಿ ಎನ್ನುವಂತೆ ಕಡಿತಗೊಳಿಸಲಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಯಮಹಾ ಆರ್15 ವಿ3.0 ವರ್ಷನ್ ಬಿಡುಗಡೆ

150ಸಿಸಿ ಎಂಜಿನ್ ಬೈಕ್‌ಗಳಲ್ಲಿ ಬಲಿಷ್ಠ ಬೈಕ್ ಮಾದರಿಯಾಗಿರುವ ಆರ್15 ಮಾದರಿಯು 2008ರಲ್ಲಿನ ಮೊದಲ ಬಿಡುಗಡೆ ನಂತರ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಇದೀಗ ಮತ್ತೊಂದು ಬದಲಾವಣೆಯೊಂದಿಗೆ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಯಮಹಾ ಆರ್15 ವಿ3.0 ವರ್ಷನ್ ಬಿಡುಗಡೆ

2011ರಲ್ಲಿ ಆರ್15 ವಿ2.0 ಆವೃತ್ತಿಯನ್ನು ಬಿಡುಗಡೆ ಮಾಡಿದ್ದ ಯಮಹಾ ಸಂಸ್ಥೆಯು 2018ರಲ್ಲಿ ಆರ್15 ವಿ3.0 ಮಾದರಿಯನ್ನು ಬಿಡುಗಡೆ ಮಾಡಿತ್ತು. ಇದೀಗ ಬಿಎಸ್-6 ಕಡ್ಡಾಯದಿಂದಾಗಿ ಹೊಸ ಎಂಜಿನ್ ಪರ್ಫಾಮೆನ್ಸ್ ಬದಲಾವಣೆ ತಂದಿದ್ದು, ಎಂಜಿನ್ ಹೊರತುಪಡಿಸಿ ಇನ್ನುಳಿದಂತೆ ಬಹುತೇಕ ತಾಂತ್ರಿಕ ಸೌಲಭ್ಯವು ಈ ಹಿಂದಿನಂತೆಯೇ ಮುಂದುವರಿಸಲಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಯಮಹಾ ಆರ್15 ವಿ3.0 ವರ್ಷನ್ ಬಿಡುಗಡೆ

ಬಿಎಸ್-6 ಎಂಜಿನ್ ಆರ್15 ವಿ3.0 ಮಾದರಿಯು 155ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 18.3-ಬಿಎಚ್‌ಪಿ ಮತ್ತು 14.1-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಈ ಮೂಲಕ ಹೊಸ ಬೈಕ್ ಮಾದರಿಯು ಬಿಎಸ್-4 ಆವೃತ್ತಿಗಿಂತಲೂ ಕಡಿಮೆ ಪರ್ಫಾಮೆನ್ಸ್ ಹೊಂದಿದ್ದು, 0.7 ನಷ್ಟು ಬಿಎಚ್‌ಪಿ ಮತ್ತು 0.6 ನಷ್ಟು ಎನ್ಎಂ ಟಾರ್ಕ್ ಅನ್ನು ಕಡಿತಗೊಳಿಸಲಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಯಮಹಾ ಆರ್15 ವಿ3.0 ವರ್ಷನ್ ಬಿಡುಗಡೆ

ಆದರೆ ಬಿಎಸ್-4 ಬೈಕ್ ಮಾದರಿಗಿಂತಲೂ ಹೊಸ ಬೈಕ್ ಮಾದರಿಯಲ್ಲಿ ಕೆಲವು ತಾಂತ್ರಿಕ ಅಂಶಗಳನ್ನು ಸ್ಟ್ಯಾಂಡರ್ಡ ಆಗಿ ನೀಡಲಾಗಿದ್ದು, ಆರಂಭಿಕ ಆವೃತ್ತಿಯಲ್ಲೇ ಇದೀಗ ಸ್ಲಿಪ್ಪರ್ ಕ್ಲಚ್, ಫುಲ್-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೌಲಭ್ಯವನ್ನು ನೀಡಲಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಯಮಹಾ ಆರ್15 ವಿ3.0 ವರ್ಷನ್ ಬಿಡುಗಡೆ

ಹಾಗೆಯೇ ಹೊಸ ಎಂಜಿನ್ ಜೋಡಣೆಗಾಗಿ ಚಾರ್ಸಿಸ್ ಮತ್ತು ಫ್ಯೂಲ್ ಟ್ಯಾಂಕ್ ವಿನ್ಯಾಸದಲ್ಲಿ ತುಸು ಬದಲಾವಣೆಗೊಳಿಸಲಾಗಿದ್ದು, ಆರಾಮದಾಯಕ ಬೈಕ್ ಸವಾರಿಗೆ ಇದು ಮತ್ತಷ್ಟು ಅನುಕೂಲಕರವಾಗಿದೆ ಎನ್ನಲಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಯಮಹಾ ಆರ್15 ವಿ3.0 ವರ್ಷನ್ ಬಿಡುಗಡೆ

ಇದರೊಂದಿಗೆ ಹೊಸ ಬೈಕಿನಲ್ಲಿ ಈ ಹಿಂದಿನಂತೆಯೇ ಟ್ವಿನ್ ಎಲ್ಇಡಿ ಹೆಡ್‌ಲ್ಯಾಂಪ್ಸ್, ಫ್ಲಕ್ಸ್ ರ‍್ಯಾಮ್ ಏರ್ ಇನ್‌ಟೆಕ್, ಎಲ್ಇಡಿ ಟೈಲ್‌ಲ್ಯಾಂಪ್ ಸೌಲಭ್ಯದೊಂದಿಗೆ ಶಾರ್ಫ್ ಡಿಸೈನ್ ಹೊಂದಿದ್ದು, ಹೊಸ ಮಾದರಿಯ ಟೈರ್, ಡ್ಯುಯಲ್ ಹಾರ್ನ್ ಸೌಲಭ್ಯವು ಗಮನಸೆಳೆಯಲಿದೆ.

ಬಿಎಸ್-6 ಎಂಜಿನ್ ಪ್ರೇರಿತ ಯಮಹಾ ಆರ್15 ವಿ3.0 ವರ್ಷನ್ ಬಿಡುಗಡೆ

ಇನ್ನು ಹೊಸ ಆರ್15 ವಿ3.0 ಬೈಕ್ ಖರೀದಿಗಾಗಿ ಆಸಕ್ತ ಗ್ರಾಹಕರು ಇಂದಿನಿಂದಲೇ ಬುಕ್ಕಿಂಗ್ ಮಾಡಬಹುದಾಗಿದ್ದು, ಇದೇ ತಿಂಗಳ ಕೊನೆಯಲ್ಲಿ ಹೊಸ ಬೈಕ್ ವಿತರಣೆಗೆ ಅಧಿಕೃತ ಚಾಲನೆ ನೀಡುವುದಾಗಿ ಯಮಹಾ ಸಂಸ್ಥೆಯೇ ಮಾಹಿತಿ ನೀಡಿದೆ.

ಬಿಎಸ್-6 ಎಂಜಿನ್ ಪ್ರೇರಿತ ಯಮಹಾ ಆರ್15 ವಿ3.0 ವರ್ಷನ್ ಬಿಡುಗಡೆ

ಆರ್15 ವಿ3.0 ಬೈಕ್ ಮಾದರಿಯಲ್ಲದೇ ಇದೇ ತಿಂಗಳಾಂತ್ಯಕ್ಕೆ ಇನ್ನುಳಿದ ಬೈಕ್ ಮತ್ತು ಸ್ಕೂಟರ್ ಮಾದರಿಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೆಲೆಗಿಂತಲೂ ರೂ.3 ಸಾವಿರದಿಂದ ರೂ.6 ಸಾವಿರದಷ್ಟು ದುಬಾರಿಯಾಗಲಿವೆ.

Most Read Articles

Kannada
Read more on ಯಮಹಾ yamaha
English summary
Yamaha R15 V3.0 BS-VI Launched In India At Rs 1.45 Lakh. Read in Kannada.
Story first published: Monday, December 9, 2019, 17:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X