ದುಬಾರಿಯಾಗಲಿದೆ ಯಮಹಾ ಆರ್15 ವಿ 3.0 ಬೈಕ್

ಯಮಹಾ ಮೋಟಾರ್ಸ್ ತನ್ನ ಆರ್15 ವಿ 3.0 ಮಾದರಿಯ ಬೆಲೆಯನ್ನು ಹೆಚ್ಚಿಸಿದೆ. ಯಮಹಾ ಆರ್15 ವಿ 3.0 ತನ್ನ ಸ್ಟ್ಯಾಂಡರ್ಡ್ ಮತ್ತು ಡಾರ್ಕ್‍‍ನೈಟ್ ಆವೃತ್ತಿಯ ಮಾದರಿಗಳ ಬೆಲೆಯನ್ನು ರೂ.600 ಹೆಚ್ಚಿಸಿದೆ. ಪ್ರಸ್ತುತ ಭಾರತದ ಎಕ್ಸ್ ಶೋರೂಂ ಪ್ರಕಾರ ಈ ಬೈಕಿನ ಆರಂಭಿಕ ಬೆಲೆ ರೂ.1,40,880 ಲಕ್ಷಗಳಾಗಿದೆ.

ದುಬಾರಿಯಾಗಲಿದೆ ಯಮಹಾ ಆರ್15 ವಿ 3.0 ಬೈಕ್

ಯಮಹಾ ಮೋಟಾರ್ಸ್ ಕೇವಲ ಆರ್15 ಸ್ಟ್ಯಾಂಡರ್ಡ್ ಮತ್ತು ಉನ್ನತ ಸ್ಪೆಕ್ ಡಾರ್ಕ್‍‍ನೈಟ್ ಆವೃತ್ತಿಯ ಮಾದರಿಗಳಿಗೆ ಮಾತ್ರ ಬೆಲೆ ಏರಿಕೆ ಮಾಡಲಾಗಿದೆ. ಯಮಹಾ ಆರ್15 ಡಾರ್ಕ್‍‍ನೈಟ್ ಆವೃತ್ತಿಯ ಪ್ರಸ್ತುತ ಬೆಲೆ ರೂ.1,42,880 ಲಕ್ಷಗಳಾಗಿದೆ. ಮೋಟೋ ಜಿಪಿ ಆವೃತ್ತಿಯ ಬೆಲೆಗಳಲ್ಲಿ ಯಾವುದೇ ಬದಲಾವಣೆಗಳು ಮಾಡಲಾಗಿಲ್ಲ. ಯಮಹಾ ಮೊಟೋ ಜಿಪಿ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1,42,780 ಬೆಲೆಯನ್ನು ಹೊಂದಿದೆ.

ದುಬಾರಿಯಾಗಲಿದೆ ಯಮಹಾ ಆರ್15 ವಿ 3.0 ಬೈಕ್

ಬೆಲೆ ಏರಿಕೆಗೆ ನಿಖರವಾದ ಕಾರಣವನ್ನು ಕಂಪನಿ ಇನ್ನೂ ಕೂಡ ಬಹಿರಂಗಪಡಿಸಿಲ್ಲ. ಇತರ ಬೈಕ್ ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿ ಭಾರೀ ರಿಯಾಯಿತಿ ಮತ್ತು ಬಂಪರ್ ಆಫರ್‍‍ಗಳನ್ನು ಘೋಷಿಸಿರುವ ವೇಳೆಯ ಯಮಹಾ ಮೋಟಾರ್ಸ್ ಬೆಲೆಯನ್ನು ಹೆಚ್ಚಿಸಿದೆ.

ದುಬಾರಿಯಾಗಲಿದೆ ಯಮಹಾ ಆರ್15 ವಿ 3.0 ಬೈಕ್

ಯಮಹಾ ಆರ್‍15 ಬೈಕ್ ಯಮಹಾ ಬ್ರ್ಯಾಂಡ್‍‍ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿರುವ ಅತ್ಯಂತ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. ಪ್ರಸ್ತುತ ಆರ್‍15 ತನ್ನ ಮೂರನೇ ತಲೆಮಾರಿನ ಪುನರಾವರ್ತನೆಯಾಗಿದೆ. ಈ ಬೈಕ್ ಅನ್ನು ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿದ ಬಳಿಕ ಕೆಲವು ವರ್ಷಗಳ ನಂತರ ನವೀಕರಿಸಲಾಗಿದೆ.

ದುಬಾರಿಯಾಗಲಿದೆ ಯಮಹಾ ಆರ್15 ವಿ 3.0 ಬೈಕ್

ಸ್ಟ್ಯಾಂಡರ್ಡ್ ಮತ್ತು ಡಾರ್ಕ್‍‍ನೈಟ್ ಆವೃತ್ತಿಯಲ್ಲಿನ ಹೆಚ್ಚುವರಿ ಬೆಲೆಗಳ ಹೊರತಾಗಿ, ಯಮಹಾ ಆರ್15 ಯಾವುದೇ ಇತರ ಬದಲಾವಣೆಗಳನ್ನು ಹೊಂದಿಲ್ಲ. ಈ ಬೈಕ್ 155 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 10,000 ಆರ್‍‍ಪಿಎಂನಲ್ಲಿ 19 ಬಿ‍ಎಚ್‍ಪಿ ಪವರ್ ಮತ್ತು 8,500 ಆರ್‍‍ಪಿಎಂ ನಲ್ಲಿ 14.7 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ದುಬಾರಿಯಾಗಲಿದೆ ಯಮಹಾ ಆರ್15 ವಿ 3.0 ಬೈಕ್

ಯಮಹಾ ಆರ್15 ವಿ3.0 ಬೈಕ್‍ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‍‍ಗಳನ್ನು ಹೊಂದಿರುವ ಡೆಲ್ಟಾಬಾಕ್ಸ್ ಫ್ರೇಮ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸಸ್ಪೆಂಷನ್ ಅನ್ನು ಹೊಂದಿದೆ. ಈ ಬೈಕ್ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಸುರಕ್ಷತೆಗಾಗಿ ಮುಂಭಾಗದಲ್ಲಿ 282 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಅನ್ನು ಅಳವಡಿಸಲಾಗಿದೆ. ಸ್ಟ್ಯಾಂಡರ್ಡ್ ಡ್ಯುಯಲ್ ಚಾನೆಲ್ ಎ‍ಬಿಎಸ್ ಅನ್ನು ಅಳವಡಿಸಲಾಗಿದೆ.

ದುಬಾರಿಯಾಗಲಿದೆ ಯಮಹಾ ಆರ್15 ವಿ 3.0 ಬೈಕ್

ಯಮಹಾ ಆರ್15 ಬೈಕ್‍‍ಗಳಲ್ಲಿ ಎಲ್ಇಡಿ ಹೆಡ್‍‍ಲ್ಯಾಂಪ್, ಎಲ್ಇಡಿ ಟೇಲ್ ಲ್ಯಾಂಪ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಸ್ಲಿಪ್ಪರ್ ಕ್ಲಚ್ ಅನ್ನು ಒದಗಿಸಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ದುಬಾರಿಯಾಗಲಿದೆ ಯಮಹಾ ಆರ್15 ವಿ 3.0 ಬೈಕ್

ಯಮಹಾ ಆರ್ 15 ವಿ 3.0 ಬೈಕ್ 17 ಇಂಚಿನ ಅಲಾಯ್ ವ್ಹೀಲ್ ಅನ್ನು ಹೊಂದಿದೆ. ಭಾರತದಲ್ಲಿ ಯಮಹಾ ಆರ್15 ವಿ 3.0 ಅನ್ನು ನಾಲ್ಕು ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಅದರಲ್ಲಿ ಥಂಡರ್ ಗ್ರೇ, ರೇಸಿಂಗ್ ಬ್ಲೂ, ಡಾರ್ಕ್‍‍ನೈಟ್ ಮತ್ತು ಮೋಟೋ ಜಿಪಿ ಲಿವರಿ ಬಣ್ಣಗಳು ಒಳಗೊಂಡಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ದುಬಾರಿಯಾಗಲಿದೆ ಯಮಹಾ ಆರ್15 ವಿ 3.0 ಬೈಕ್

ಯಮಹಾ ಮೋಟಾರ್ಸ್ ಬೆಲೆ ಏರಿಕೆ ಮಾಡಿರುವುದರ ಬಗ್ಗೆ ಯಾವುದೇ ನಿರ್ದಿಷ್ಟ ಕಾರಣವನ್ನು ಬಹಿರಂಗಪಡಿಸಲಿಲ್ಲ. ಹಲವು ದ್ವಿಚಕ್ರ ಕಂಪನಿಗಳು ಜನರನ್ನು ಆಕರ್ಷಿಸಲು ಭರ್ಜರಿ ಆಪರ್ ಅನ್ನು ಘೋಷಿಸಿದೆ. ಇದೇ ವೇಳೆಯಲ್ಲಿ ಯಮಹಾ ಆರ್‍15 ಬೈಕಿನ ಬೆಲೆಯನ್ನು ಏರಿಸಿದೆ. ಯಮಹಾ ಆರ್15 ಬೈಕಿಗೆ ಕೆಟಿಎಂ ಆರ್‍‍ಸಿ 125, ಸುಜುಕಿ ಗಿಕ್ಸರ್ 155 ಎಸ್ಎಫ್ ಮತ್ತು ಬಜಾಜ್ ಪಲ್ಸರ್ ಆರ್‍ಎಸ್ 200 ಬೈಕ್‍‍ಗಳು ಪೈಪೋಟಿ ನೀಡುತ್ತೀವೆ.

Most Read Articles

Kannada
Read more on ಯಮಹಾ yamaha
English summary
Yamaha R15 V3.0 Prices Increased In India: Price Hike Only For Standard & Darknight Edition Models - Read in Kannada
Story first published: Monday, October 14, 2019, 16:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X