ಗೊಗೊರೊ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ದಿಪಡಿಸಲಿದೆ ಯಮಹಾ

ಬಹುತೇಕ ವಾಹನ ತಯಾರಕರು ವಾಹನಗಳ ಎಲೆಕ್ಟ್ರಿಕರಣವನ್ನು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಶೀಘ್ರದಲ್ಲೇ ಬಹು ಸಂಖ್ಯೆಯ ಎಲೆಕ್ಟ್ರಿಕ್ ವಾಹನಗಳನ್ನು ಕಾಣಬಹುದು. ಯಮಹಾ ಕಂಪನಿಯು ಜಾಗತಿಕ ಮಟ್ಟದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಕಂಪನಿಯಾಗಿದೆ.

ಗೊಗೊರೊ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ದಿಪಡಿಸಲಿದೆ ಯಮಹಾ

ಈಗ ಯಮಹಾ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬ್ಯಾಟರಿ ವಿನಿಮಯ ಮೂಲಸೌಕರ್ಯಗಳನ್ನು ಅಭಿವೃದ್ದಿಪಡಿಸುವ ತೈವಾನ್ ಮೂಲದ ಗೊಗೊರೊ ಕಂಪನಿಯ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್ ಬೈಕ್‌ಗಳನ್ನು ಅಭಿವೃದ್ದಿಪಡಿಸಲಿದೆ. ಗೊಗೊರೊ ಕಂಪನಿಯು 2011ರಲ್ಲಿ ಶುರುವಾಯಿತು. ಅಂದಿನಿಂದ ಇದುವರೆಗೂ 1,50,000ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟ ಮಾಡಿದೆ. ಬೈಕುಗಳಲ್ಲಿ ದೂರ ಪ್ರಯಾಣಿಸುವ ಸವಾರರು, ಹೆಚ್ಚಿನ ದೂರ ಪ್ರಯಾಣಿಸಲು ಬೈಕುಗಳಲ್ಲಿ ಹೆಚ್ಚಿನ ಪ್ರಮಾಣದ ಇಂಧನ ಹೊಂದಿರಬೇಕಾಗುತ್ತದೆ.

ಗೊಗೊರೊ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ದಿಪಡಿಸಲಿದೆ ಯಮಹಾ

ಗೊಗೊರೊ ಈ ನಿಟ್ಟಿನಲ್ಲಿ ಸರಿಯಾದ ಹಾದಿಯಲ್ಲಿ ನಡೆಯುತ್ತಿದೆ. ಕಂಪನಿಯು ತನ್ನ ಬ್ಯಾಟರಿ ಸ್ವಾಪ್ ಕೇಂದ್ರಗಳನ್ನು ದೇಶಿಯ ಮಾರುಕಟ್ಟೆಯಾದ್ಯಂತ ತೆರೆಯಲಿದೆ. ಇದರಿಂದಾಗಿ ಎಲೆಕ್ಟ್ರಿಕ್ ಬೈಕುಗಳನ್ನು ಖರೀದಿಸುವ ಜನರಿಗೆ ಅನುಕೂಲವಾಗಲಿದೆ.

ಗೊಗೊರೊ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ದಿಪಡಿಸಲಿದೆ ಯಮಹಾ

ಔಪಚಾರಿಕ ಒಪ್ಪಂದದಿಂದ ಆರಂಭವಾಗುವ ಈ ಯೋಜನೆಯಲ್ಲಿ, ಎರಡೂ ಕಂಪನಿಗಳೂ ಜೊತೆಯಾಗಿ ಕಾರ್ಯನಿರ್ವಹಿಸಲಿವೆ. ಈ ಯೋಜನೆಯಲ್ಲಿ ಯಮಹಾ ಸಂಪೂರ್ಣವಾದ ಕ್ರಿಯಾತ್ಮಕ ಮಾದರಿಯನ್ನು ವಿನ್ಯಾಸಗೊಳಿಸಿದರೆ, ಗೊಗೊರೊ ಬ್ಯಾಟರಿಯನ್ನು ಅಭಿವೃದ್ಧಿಪಡಿಸಲಿದೆ.

ಗೊಗೊರೊ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ದಿಪಡಿಸಲಿದೆ ಯಮಹಾ

ಎರಡೂ ಕಂಪನಿಗಳೂ ಸೇರಿ ಅಭಿವೃದ್ದಿಪಡಿಸಿದ ಇಸಿ -05 ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2019ರ ಜೂನ್‍‍ನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಯಮಹಾದ ಮಾರಾಟವು ಕಳೆದ ದಶಕದಿಂದ ಹಲವು ಏರಿಳಿತಗಳನ್ನು ಕಂಡಿದೆ.

ಗೊಗೊರೊ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ದಿಪಡಿಸಲಿದೆ ಯಮಹಾ

ಎಲೆಕ್ಟ್ರಿಕ್ ಬೈಕುಗಳ ಮಾರಾಟದೊಂದಿಗೆ ಕಂಪನಿಯು ಸ್ಥಿರ ಬೆಳವಣಿಗೆಯನ್ನು ಎದುರು ನೋಡುತ್ತಿದೆ. ಇಂಧನ ಬೆಲೆಗಳಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವುದು ಸಹ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳತ್ತ ಹೋಗುವುದಕ್ಕೆ ಮತ್ತೊಂದು ಕಾರಣವಾಗಿದೆ.

ಗೊಗೊರೊ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ದಿಪಡಿಸಲಿದೆ ಯಮಹಾ

ಇಂಧನ ಚಾಲಿತ ವಾಹನಗಳಲ್ಲಿ, ಮಾರಾಟ ನಂತರದ ಸೇವೆ, ನಿರ್ವಹಣೆ ಹಾಗೂ ಬಿಡಿಭಾಗಗಳ ಲಭ್ಯತೆಯಂತಹ ಅಂಶಗಳು ಕಳವಳಕಾರಿಯಾಗಿವೆ. ಆದರೆ ಎಲೆಕ್ಟ್ರಿಕ್ ಬೈಕುಗಳಲ್ಲಿ ಈ ಕೆಲವು ಅಂಶಗಳ ಬಗ್ಗೆ ವಿಶ್ವಾಸವನ್ನಿಡಬಹುದಾಗಿದೆ.

MOST READ: ರೋಲ್ಸ್ ರಾಯ್ಸ್ ಕಾರು ಖರೀದಿಗಾಗಿ ಹತ್ತಾರು ಕಠಿಣ ಪರೀಕ್ಷೆಗಳನ್ನು ಎದುರಿಸಿದ್ರು ಎಂಟಿಬಿ..!

ಗೊಗೊರೊ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ದಿಪಡಿಸಲಿದೆ ಯಮಹಾ

ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳು ಹಾಟ್‌ಕೇಕ್‌ಗಳಂತೆ ಮಾರಾಟವಾಗಲಿವೆ. ಆದ ಕಾರಣ ಬಹುತೇಕ ವಾಹನ ತಯಾರಕರು, ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಪಡಿಸುತ್ತಿದ್ದಾರೆ. ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವು 2024ರ ವೇಳೆಗೆ 4.5 ಬಿಲಿಯನ್ ಡಾಲರ್‍‍ಗಳ ಗಡಿ ದಾಟುವ ಸಾಧ್ಯತೆಗಳಿವೆ.

MOST READ: ರಾಯಲ್ ಎನ್‍‍ಫೀಲ್ಡ್ ಸೈಲೆನ್ಸರ್‍‍ಗಳನ್ನು ಕಿತ್ತುಹಾಕಿದ ಪೊಲೀಸರು

ಗೊಗೊರೊ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ದಿಪಡಿಸಲಿದೆ ಯಮಹಾ

ಇದರಲ್ಲಿ, 50%ಕ್ಕಿಂತ ಹೆಚ್ಚು ವಹಿವಾಟು ಏಷ್ಯನ್ ಮಾರುಕಟ್ಟೆಗಳಲ್ಲಿ ನಡೆಯಲಿದೆ. ಎಲೆಕ್ಟ್ರಿಕ್ ವಾಹನಗಳ ಸೆಗ್‍‍ಮೆಂಟಿನಲ್ಲಿ ಅನೇಕ ಕಂಪನಿಗಳು ಸಹಭಾಗಿತ್ವದಲ್ಲಿ ಕೆಲಸ ಮಾಡಲಿದ್ದು, ತಂತ್ರಜ್ಞಾನವನ್ನು ಹಂಚಿಕೊಳ್ಳಲಿವೆ. ಬ್ಯಾಟರಿ ಸ್ವಾಪ್ ವ್ಯವಸ್ಥೆಯಲ್ಲಿ ಗೊಗೊರೊ ಭಾರೀ ಯಶಸ್ಸನ್ನು ಸಾಧಿಸಿದೆ.

MOST READ: ಆಂಬ್ಯುಲೆನ್ಸ್ ಗೆ ದಾರಿ ತೋರಿಸಿ ಶೌರ್ಯ ಪ್ರಶಸ್ತಿ ಪಡೆದ 12 ವರ್ಷದ ಬಾಲಕ

ಗೊಗೊರೊ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ದಿಪಡಿಸಲಿದೆ ಯಮಹಾ

ಗೊಗೊರೊ ಕಂಪನಿಯು ಭವಿಷ್ಯದಲ್ಲಿ ಸಂಬಂಧಪಟ್ಟ ಕಂಪನಿಗಳೊಂದಿಗೆ ಸೇರಿ ಬ್ಯಾಟರಿಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳಿವೆ. ಎಲೆಕ್ಟ್ರಿಕ್ ವಾಹನಗಳಿಗಾಗಿ ಬ್ಯಾಟರಿ ಹಾಗೂ ಇತರ ಎಲೆಕ್ಟ್ರಾನಿಕ್ಸ್‌ ಬಿಡಿ ಭಾಗಗಳನ್ನು ಪೂರೈಸಲೂ ಬಹುದು.

ಗೊಗೊರೊ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ದಿಪಡಿಸಲಿದೆ ಯಮಹಾ

ಯಮಹಾ ಎಲೆಕ್ಟ್ರಿಕ್ ಬೈಕ್‍‍ಗಳನ್ನು ಯಮಹಾ ಕಂಪನಿಯು ವಿನ್ಯಾಸಗೊಳಿಸಲಿದೆ. ಈ ಎಲೆಕ್ಟ್ರಿಕ್ ಬೈಕುಗಳು ಗೊಗೊರೊ ಬ್ಯಾಟರಿಯನ್ನು ಹೊಂದಿರಲಿದೆ. ಗೊಗೊರೊ ಕಂಪನಿಯು ವಿದೇಶದಲ್ಲಿಯೂ ಸಹ ಬ್ಯಾಟರಿ ವಿನಿಮಯ ವ್ಯವಸ್ಥೆಯನ್ನು ಹೊಂದಿದೆ.

Most Read Articles

Kannada
Read more on ಯಮಹಾ yamaha
English summary
Yamaha to develop electric bike with gogoro - Read in kannada
Story first published: Saturday, August 17, 2019, 15:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X