ಆರ್ 15 ಬೈಕ್ ಸಾಮರ್ಥ್ಯ ಹೊಂದಲಿದೆ ಯಮಹಾ ಎನ್‍‍ಮ್ಯಾಕ್ಸ್ 155 ಸ್ಕೂಟರ್

ಯಮಹಾ ಕಂಪನಿಯ ವಾಹನಗಳು ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಹೆಚ್ಚು ಜನಪ್ರಿಯವಾಗಿವೆ. ಈ ಕಾರಣಕ್ಕಾಗಿ ಯಮಹಾ ಕಂಪನಿಯು ಹಲವು ಹೊಸ ವಾಹನಗಳನ್ನು ಬಿಡುಗಡೆಗೊಳಿಸುತ್ತಲೇ ಇರುತ್ತದೆ.

ಆರ್ 15 ಬೈಕ್ ಸಾಮರ್ಥ್ಯ ಹೊಂದಲಿದೆ ಯಮಹಾ ಎನ್‍‍ಮ್ಯಾಕ್ಸ್ 155 ಸ್ಕೂಟರ್

ಯಮಹಾ ಕಂಪನಿಯು ತನ್ನ ಹೊಸ ಸ್ಕೂಟರಿನ ಬಗ್ಗೆ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಇಂಡೋನೇಷ್ಯಾ ಮಾರುಕಟ್ಟೆಯಲ್ಲಿರುವ ತನ್ನ ಎನ್‍‍ಮ್ಯಾಕ್ಸ್ ಸ್ಕೂಟರ್ ಅನ್ನು ಅಪ್‍‍ಡೇಟ್‍‍ಗೊಳಿಸಿ ಬಿಡುಗಡೆಗೊಳಿಸುತ್ತಿದೆ. ಈ ಸ್ಕೂಟರಿನ ಕಾಸ್ಮೆಟಿಕ್‍‍ನಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ.

ಆರ್ 15 ಬೈಕ್ ಸಾಮರ್ಥ್ಯ ಹೊಂದಲಿದೆ ಯಮಹಾ ಎನ್‍‍ಮ್ಯಾಕ್ಸ್ 155 ಸ್ಕೂಟರ್

ಆದರೆ ಮಾರುಕಟ್ಟೆಯಲ್ಲಿರುವ ಸ್ಕೂಟರ್‍‍ಗೆ ಹೋಲಿಸಿದರೆ ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ. ಯಮಹಾ ಕಂಪನಿಯ ಜನಪ್ರಿಯ ಬೈಕ್ ಆದ ಆರ್ 15 ಬೈಕಿನಲ್ಲಿರುವಂತಹ ಅಂಶಗಳನ್ನು ಈ ಸ್ಕೂಟರಿನಲ್ಲಿ ಅಳವಡಿಸಲಾಗುವುದು.

ಆರ್ 15 ಬೈಕ್ ಸಾಮರ್ಥ್ಯ ಹೊಂದಲಿದೆ ಯಮಹಾ ಎನ್‍‍ಮ್ಯಾಕ್ಸ್ 155 ಸ್ಕೂಟರ್

ಎನ್‍‍ಮ್ಯಾಕ್ಸ್ ಸ್ಕೂಟರಿನಲ್ಲಿರುವ 155 ಸಿಸಿಯ ಎಂಜಿನ್ ಸಾಮರ್ಥ್ಯವನ್ನು ಆರ್ 15 ಬೈಕಿನಲ್ಲಿರುವಂತಹ ಎಂಜಿನ್ ಸಾಮರ್ಥ್ಯಕ್ಕೆ ತಕ್ಕಂತೆ ಮಾಡಿಫೈಗೊಳಿಸಲಾಗಿದೆ. ಹೀಗಾಗಿ ಅಪ್‍‍ಡೇಟ್ ಮಾಡಲಾಗಿರುವ ಎನ್‍‍ಮ್ಯಾಕ್ಸ್ ಸ್ಕೂಟರ್ ಹಳೆಯ ಸ್ಕೂಟರಿಗಿಂತ ಹೆಚ್ಚಿನ ಪವರ್ ಉತ್ಪಾದಿಸಲಿದೆ.

ಆರ್ 15 ಬೈಕ್ ಸಾಮರ್ಥ್ಯ ಹೊಂದಲಿದೆ ಯಮಹಾ ಎನ್‍‍ಮ್ಯಾಕ್ಸ್ 155 ಸ್ಕೂಟರ್

ಇದರ ಜೊತೆಗೆ ಎಲೆಕ್ಟ್ರಾನಿಕ್ ರೈಡರ್ ಅಸಿಸ್ಟ್ ಗಳನ್ನು ನೀಡಲಾಗುವುದು. ಈ ಸ್ಕೂಟರಿನಲ್ಲಿ ಅಳವಡಿಸಲಾಗಿರುವ 155 ಸಿಸಿ ಸಾಮರ್ಥ್ಯದ ಎಂಜಿನ್ 12.14 ಬಿ‍‍ಹೆಚ್‍‍ಪಿ ಪವರ್ ಹಾಗೂ 13.9 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಆರ್ 15 ಬೈಕ್ ಸಾಮರ್ಥ್ಯ ಹೊಂದಲಿದೆ ಯಮಹಾ ಎನ್‍‍ಮ್ಯಾಕ್ಸ್ 155 ಸ್ಕೂಟರ್

ಹಳೆಯ ಸ್ಕೂಟರಿಗಿಂತ 0.5 ಬಿ‍‍ಹೆಚ್‍‍ಪಿ ಪವರ್ ಹಾಗೂ 0.5 ಎನ್‍ಎಂ ಟಾರ್ಕ್ ಹೆಚ್ಚು ಉತ್ಪಾದಿಸುತ್ತದೆ. ಎನ್‍‍ಮ್ಯಾಕ್ಸ್ 155 ಸ್ಕೂಟರಿನಲ್ಲಿ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಅಳವಡಿಸಲಾಗುವುದು. ಈ ಫೀಚರ್ ಅನ್ನು ಯಮಹಾ ಸ್ಕೂಟರ್‍‍ಗಳಲ್ಲಿ ಮೊದಲ ಬಾರಿಗೆ ನೀಡಲಾಗುತ್ತಿದೆ.

ಆರ್ 15 ಬೈಕ್ ಸಾಮರ್ಥ್ಯ ಹೊಂದಲಿದೆ ಯಮಹಾ ಎನ್‍‍ಮ್ಯಾಕ್ಸ್ 155 ಸ್ಕೂಟರ್

ಈ ಕಾರಣಕ್ಕೆ ಈ ಸ್ಕೂಟರ್ ಯುವ ಜನರ ನೆಚ್ಚಿನ ಸ್ಕೂಟರ್ ಆಗುವ ಸಾಧ್ಯತೆಗಳಿವೆ. ಈ ಫೀಚರ್ ಅನ್ನು ಹೋಂಡಾ ಕಂಪನಿಯು ಇತ್ತೀಚಿಗೆ ಬಿಡುಗಡೆಗೊಳಿಸಿದ ಬಿ‍ಎಸ್ 6 ಎಂಜಿನ್ ಹೊಂದಿರುವ ಆಕ್ಟಿವಾ 125 ಸ್ಕೂಟರಿನಲ್ಲಿ ಅಳವಡಿಸಲಾಗಿದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಆರ್ 15 ಬೈಕ್ ಸಾಮರ್ಥ್ಯ ಹೊಂದಲಿದೆ ಯಮಹಾ ಎನ್‍‍ಮ್ಯಾಕ್ಸ್ 155 ಸ್ಕೂಟರ್

ಇತ್ತೀಚಿಗೆ ವಾಹನ ತಯಾರಕ ಕಂಪನಿಗಳು ಕನೆಕ್ಟ್ ಟೆಕ್ನಾಲಜಿಯನ್ನು ತಮ್ಮ ವಾಹನಗಳಲ್ಲಿ ಅಳವಡಿಸುತ್ತಿವೆ. ಯಮಹಾ ಕಂಪನಿಯೂ ಸಹ, ಕನೆಕ್ಟ್ ಟೆಕ್ನಾಲಜಿಯನ್ನು ಈ ಸ್ಕೂಟರಿನಲ್ಲಿ ಅಳವಡಿಸಲಿದೆ. ಇದರಿಂದಾಗಿ ಸ್ಮಾರ್ಟ್ ಫೋನ್‍‍ಗಳನ್ನು ಸ್ಕೂಟರ್‍‍ನಲ್ಲಿರುವ ಬ್ಲೂಟೂತ್ ಫೀಚರ್‍‍ನಿಂದ ಸ್ಕೂಟರಿಗೆ ಕನೆಕ್ಟ್ ಮಾಡಿಕೊಂಡು ಸ್ಕೂಟರಿನಲ್ಲಿರುವ ವಿವಿಧ ಫೀಚರ್‍‍ಗಳನ್ನು ಪಡೆಯಬಹುದು.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಆರ್ 15 ಬೈಕ್ ಸಾಮರ್ಥ್ಯ ಹೊಂದಲಿದೆ ಯಮಹಾ ಎನ್‍‍ಮ್ಯಾಕ್ಸ್ 155 ಸ್ಕೂಟರ್

ಯಮಹಾ ಕಂಪನಿಯು ಎನ್‍‍ಮ್ಯಾಕ್ಸ್ 155 ಸ್ಕೂಟರ್ ಅನ್ನು ಭಾರತದಲ್ಲಿಯೂ ಬಿಡುಗಡೆಗೊಳಿಸಲಿದೆ. ಆಟೋ ಮೊಬೈಲ್ ಉದ್ಯಮದಲ್ಲಿನ ಕುಸಿತ, ಆರ್ಥಿಕ ಹಿಂಜರಿತ ಹಾಗೂ ಹೊಸ ಮಾಲಿನ್ಯ ನಿಯಮಗಳ ಜಾರಿ ಮೊದಲಾದ ಕಾರಣಗಳಿಗಾಗಿ ಸ್ಕೂಟರಿನ ಬಿಡುಗಡೆಯನ್ನು ಮುಂದೂಡಲಾಗಿದೆ. 2020ರಲ್ಲಿ ಈ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದು.

Most Read Articles

Kannada
Read more on ಯಮಹಾ yamaha
English summary
Yamaha updated the nmax 155 scooter with traction control - Read in Kannada
Story first published: Thursday, December 5, 2019, 14:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X