ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಮಹೀಂದ್ರಾ ಕಂಪನಿಯ ಒಡೆತನದ ಕ್ಲಾಸಿಕ್ ಲೆಜೆಂಡ್ಸ್ ಜಾವಾ ಬೈಕುಗಳನ್ನು ಯಶಸ್ವಿಯಾಗಿ ಮರು ಬಿಡುಗಡೆಗೊಳಿಸಿದೆ. ಕಂಪನಿಯು ಇತರ ಜನಪ್ರಿಯ ಯಜ್ಡಿ ಬೈಕುಗಳನ್ನು ಸಹ ಮರು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ವಿಷಯವು ಯಜ್ಡಿ ಕಂಪನಿಯ ಹೊಸ ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್ ಹ್ಯಾಂಡಲ್‌ನಲ್ಲಿ ತಿಳಿದು ಬಂದಿದೆ.

ಭಾರತದಲ್ಲಿ ಯಜ್ದಿ ಬೈಕುಗಳ ಮರು ಬಿಡುಗಡೆ ಪಕ್ಕಾ

ಕಂಪನಿಯ ಇನ್ಸ್ಟಾಗ್ರಾಮ್ ಹಾಗೂ ಟ್ವಿಟರ್ ಖಾತೆಗಳು ಈಗ ಸಕ್ರಿಯವಾಗಿವೆ. ಕಂಪನಿಯ ಅಧಿಕೃತ ವೆಬ್‌ಸೈಟ್ ಸಹ ಕೆಲವು ಸಮಯದಿಂದ ಸಕ್ರಿಯವಾಗಿದೆ. ಈಗ ಯಜ್ಡಿ ಬೈಕುಗಳಿಗೆ ಸಂಬಂಧಪಟ್ಟ ಮಾಹಿತಿ ಹಾಗೂ ಟೆಕ್ನಿಕಲ್ ಅಂಕಿ ಅಂಶಗಳ ಮಾಹಿತಿಯನ್ನು ನೀಡಲಾಗುತ್ತಿದೆ. ಇದರ ಜೊತೆಗೆ ವೆಬ್‍‍ಸೈಟಿನಲ್ಲಿ ಕಥೆಗಳು ಎಂಬ ವಿಭಾಗವನ್ನು ತೆರೆಯಲಾಗಿದ್ದು, ಈ ವಿಭಾಗದಲ್ಲಿ ಯಜ್ಡಿ ಬೈಕುಗಳನ್ನು ಹೊಂದಿರುವ ಮಾಲೀಕರು ತಮ್ಮ ಕಥೆಗಳನ್ನು ಹಂಚಿಕೊಳ್ಳಬಹುದಾಗಿದೆ.

ಭಾರತದಲ್ಲಿ ಯಜ್ದಿ ಬೈಕುಗಳ ಮರು ಬಿಡುಗಡೆ ಪಕ್ಕಾ

ಈ ಜನಪ್ರಿಯ ಬೈಕ್ ಅನ್ನು ಯಾವಾಗ ಮರು ಬಿಡುಗಡೆಗೊಳಿಸಲಾಗುವುದು ಎಂಬುವುದರ ಬಗ್ಗೆ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ ಕೆಲವು ಮಾಹಿತಿಗಳ ಪ್ರಕಾರ ಈ ಬೈಕ್ ಅನ್ನು 2020ರಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ತಿಳಿದುಬಂದಿದೆ.

ಭಾರತದಲ್ಲಿ ಯಜ್ದಿ ಬೈಕುಗಳ ಮರು ಬಿಡುಗಡೆ ಪಕ್ಕಾ

ಇದು ನಿಜವಾದರೆ, ಈ ಬೈಕ್ ಅನ್ನು ಆರಾಧಿಸುವವರು ಹುಚ್ಚೆದ್ದು ಕುಣಿಯಲಿದ್ದಾರೆ. ಯಜ್ಡಿ ಬೈಕುಗಳನ್ನು ಆರಾಧಿಸುವ ಅಪಾರ ಸಂಖ್ಯೆಯ ಅಭಿಮಾನಿಗಳು ಭಾರತದಲ್ಲಿದ್ದಾರೆ. ಈ ಬೈಕಿನ ಮರು ಬಿಡುಗಡೆಯಾದಲ್ಲಿ ಕ್ಲಾಸಿಕ್ ಲೆಜೆಂಡ್ಸ್ ನ ಮಾರಾಟವು ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಭಾರತದಲ್ಲಿ ಯಜ್ದಿ ಬೈಕುಗಳ ಮರು ಬಿಡುಗಡೆ ಪಕ್ಕಾ

ಯಜ್ಡಿ ಸರಣಿಯ ಬೈಕುಗಳು, ಬಹುತೇಕ ಜಾವಾ ಬೈಕುಗಳಲ್ಲಿರುವ ಬಿಡಿಭಾಗಗಳನ್ನು ಹೊಂದಿರಲಿವೆ. ಯಜ್ಡಿ ಬೈಕುಗಳಲ್ಲಿಯೂ ಸಹ ಜಾವಾ ಬೈಕುಗಳಲ್ಲಿರುವಂತಹ ಎಂಜಿನ್ ಅನ್ನು ಅಳವಡಿಸುವ ಸಾಧ್ಯತೆಗಳಿವೆ. ಜಾವಾ ಬೈಕಿನಲ್ಲಿರುವಂತಹ ಬಿಡಿಭಾಗಗಳನ್ನು ಅಳವಡಿಸುವುದರಿಂದ ಉತ್ಪಾದನಾ ವೆಚ್ಚವು ಕಡಿಮೆಯಾಗಿ, ಬೈಕುಗಳ ಬೆಲೆಯು ಕಡಿಮೆಯಾಗಿ ಕೈಗೆಟಕುವ ದರದಲ್ಲಿ ದೊರೆಯಲಿವೆ.

ಭಾರತದಲ್ಲಿ ಯಜ್ದಿ ಬೈಕುಗಳ ಮರು ಬಿಡುಗಡೆ ಪಕ್ಕಾ

ಯಜ್ದಿ ಬೈಕುಗಳು ಭಾರತದಲ್ಲಿ 1970,1980 ಹಾಗೂ 1990ರ ದಶಕದಲ್ಲಿ ಬಹು ಜನಪ್ರಿಯ ಬೈಕುಗಳಾಗಿದ್ದವು. ಈ ಬೈಕುಗಳು ಯಾವ ರೀತಿಯ ಜನಪ್ರಿಯತೆಯನ್ನು ಹೊಂದಿವೆಯೆಂದರೆ ಈಗಲೂ ಸಹ ಮಹಾರಾಷ್ಟ್ರದಲ್ಲಿ ರೂ.55,000ಗಳಿಗೆ ಹಳೆಯ ಯಜ್ದಿ ಬೈಕುಗಳನ್ನು ಮಾರಾಟ ಮಾಡಲಾಗುತ್ತಿದೆ.

ಭಾರತದಲ್ಲಿ ಯಜ್ದಿ ಬೈಕುಗಳ ಮರು ಬಿಡುಗಡೆ ಪಕ್ಕಾ

ಯಜ್ಡಿ ಬೈಕುಗಳನ್ನು ಕ್ಲಾಸಿಕ್, ರೋಡ್ ಕಿಂಗ್, ಆಯಿಲ್ ಕಿಂಗ್, ಡೀಲಕ್ಸ್, ಮೊನಾರ್ಕ್, 350 ಹಾಗೂ 175 ಎಂಬ ಹಲವಾರು ಮಾದರಿಗಳಲ್ಲಿ ಮಾರಾಟ ಮಾಡಲಾಗಿತ್ತು. ಅಪ್ರತಿಮ ಬೈಕುಗಳಾದ ರೋಡ್‍ ಕಿಂಗ್, ಕ್ಲಾಸಿಕ್ ಹಾಗೂ ಡೀಲಕ್ಸ್ ಮಾದರಿಯ ಬೈಕುಗಳು ಮುಂದಿನ ವರ್ಷ ನಡೆಯಲಿರುವ ಆಟೋ ಎಕ್ಸ್‌ಪೋದಲ್ಲಿ ಮರು ಬಿಡುಗಡೆಯಾಗಲಿ ಎಂಬುದು ಬಹುತೇಕ ಬೈಕ್ ಪ್ರಿಯರ ಆಶಯ.

MOST READ: ರೋಲ್ಸ್ ರಾಯ್ಸ್ ಕಾರು ಖರೀದಿಗಾಗಿ ಹತ್ತಾರು ಕಠಿಣ ಪರೀಕ್ಷೆಗಳನ್ನು ಎದುರಿಸಿದ್ರು ಎಂಟಿಬಿ..!

ಭಾರತದಲ್ಲಿ ಯಜ್ದಿ ಬೈಕುಗಳ ಮರು ಬಿಡುಗಡೆ ಪಕ್ಕಾ

ಮರು ಬಿಡುಗಡೆಯಾಗಲಿರುವ ಯಜ್ದಿ ಬೈಕುಗಳು, ಹಿಂದಿನ ಮಾದರಿಗಳಂತೆ ರೆಟ್ರೊ ಸ್ಟೈಲಿಂಗ್ ಹಾಗೂ ವಿನ್ಯಾಸವನ್ನು ಒಳಗೊಂಡಿರಲಿವೆ. ಆದರೆ, ಹೊಸ ಸುರಕ್ಷತಾ ನಿಯಮ ಹಾಗೂ ಬಿಎಸ್6 ಮಾಲಿನ್ಯ ನಿಯಮಗಳಿಗೆ ತಕ್ಕಂತೆ ಎಂಜಿನ್ ಅನ್ನು ನವೀಕರಿಸಲಾಗುತ್ತದೆ.

MOST READ: ರಾಯಲ್ ಎನ್‍‍ಫೀಲ್ಡ್ ಸೈಲೆನ್ಸರ್‍‍ಗಳನ್ನು ಕಿತ್ತುಹಾಕಿದ ಪೊಲೀಸರು

ಭಾರತದಲ್ಲಿ ಯಜ್ದಿ ಬೈಕುಗಳ ಮರು ಬಿಡುಗಡೆ ಪಕ್ಕಾ

ರೋಡ್ ಕಿಂಗ್, ಯಜ್ದಿಯ ಬಹು ಜನಪ್ರಿಯ ಬೈಕ್ ಆಗಿತ್ತು. ಈ ಬೈಕ್ ಅನ್ನು 1978ರಿಂದ 1996ರ ಅವಧಿಯಲ್ಲಿ ಮೈಸೂರು ಮೂಲದ ಮೋಟಾರ್ ಸೈಕಲ್ ತಯಾರಕ ಕಂಪನಿಯಾದ ಐಡಿಯಲ್ ಜಾವಾ ಲಿಮಿಟೆಡ್ ತಯಾರಿಸುತ್ತಿತ್ತು.

MOST READ: ಆಂಬ್ಯುಲೆನ್ಸ್ ಗೆ ದಾರಿ ತೋರಿಸಿ ಶೌರ್ಯ ಪ್ರಶಸ್ತಿ ಪಡೆದ 12 ವರ್ಷದ ಬಾಲಕ

ಭಾರತದಲ್ಲಿ ಯಜ್ದಿ ಬೈಕುಗಳ ಮರು ಬಿಡುಗಡೆ ಪಕ್ಕಾ

ರೋಡ್ ಕಿಂಗ್ ಬೈಕ್ ಅನ್ನು ಜರೋಸ್ಲಾವ್ ಫಾಲ್ಟಾ ಸವಾರಿ ಮಾಡಿದ ಸಿಜೆಡ್ 250 (ಟೈಪ್ 908.5) ಮೋಟೋಕ್ರಾಸ್ ಅನ್ನು ಆಧರಿಸಿ ತಯಾರಿಸಲಾಗಿತ್ತು. ರೋಡ್ ಕಿಂಗ್ 1974ರ ವಿಶ್ವ ಮೊಟೊಕ್ರಾಸ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಸ್ಥಾನ ಗಳಿಸಿತ್ತು.

ಭಾರತದಲ್ಲಿ ಯಜ್ದಿ ಬೈಕುಗಳ ಮರು ಬಿಡುಗಡೆ ಪಕ್ಕಾ

ಆಯಿಲ್ ಕಿಂಗ್ ಮಾದರಿಯನ್ನು1970ರ ದಶಕದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಬೈಕ್ 2ಟಿ ಆಯಿಲ್ ಅನ್ನು ಪೆಟ್ರೋಲ್‌ನೊಂದಿಗೆ ಬೆರೆಸುವ ಆಯಿಲ್ ಪಂಪ್ ಅನ್ನು ಒಳಗೊಂಡಿತ್ತು. ಫ್ಯೂಯಲ್ ಪಂಪ್‌ನಲ್ಲಿ ಉಂಟಾದ ನಿರಂತರ ಸಮಸ್ಯೆಗಳಿಂದಾಗಿ ಈ ಬೈಕ್ ಅನ್ನು ಸ್ಥಗಿತಗೊಳಿಸಲಾಯಿತು.

ಭಾರತದಲ್ಲಿ ಯಜ್ದಿ ಬೈಕುಗಳ ಮರು ಬಿಡುಗಡೆ ಪಕ್ಕಾ

ಆಯಿಲ್ ಕಿಂಗ್ ಮಾದರಿಗಳಲ್ಲಿದ್ದ ಎಂಜಿನ್ ಕೇಸಿಂಗ್‍‍ಗಳನ್ನು ರೋಡ್‍‍ಕಿಂಗ್ ಮಾದರಿಗಳಲ್ಲಿ ಅಳವಡಿಸಲಾಯಿತು. ಇದರಿಂದಾಗಿ ರೋಡ್ ಕಿಂಗ್ ಬೈಕುಗಳು ಆಯಿಲ್ ಪಂಪ್ ಹೊಂದಿರದಿದ್ದರೂ ಪ್ರೊಟ್ರೂಷನ್ ಹೊಂದಿವೆ.

ಭಾರತದಲ್ಲಿ ಯಜ್ದಿ ಬೈಕುಗಳ ಮರು ಬಿಡುಗಡೆ ಪಕ್ಕಾ

1993ರಲ್ಲಿ ಕಂಪನಿಯು ಕಾಂಟ್ಯಾಕ್ಟ್ ಬ್ರೇಕರ್ ಇಗ್ನಿಷನ್ (ಸಿಬಿಐ) ಯುನಿಟ್‍‍ಗಳನ್ನು ಸಿಡಿಐ ಎಲೆಕ್ಟ್ರಾನಿಕ್ ಇಗ್ನಿಷನ್ ಯುನಿಟ್‍‍ಗಳೊಂದಿಗೆ ಬದಲಿಸಿತು. ಈ ಬೈಕ್ ಹೊಸ ಲಿವರಿಯನ್ನು ಸಹ ಹೊಂದಿತು. ಈ ಬದಲಾವಣೆಗಳಿಂದಾಗಿ ಫ್ಯೂಯಲ್ ಎಫಿಶಿಯನ್ಸಿ 30%ವರೆಗೂ ಸುಧಾರಿಸಿತು. ಆದರೆ ಕಳಪೆ ಮಾರಾಟದಿಂದಾಗಿ 1996ರ ವೇಳೆಗೆ ಈ ಬೈಕುಗಳನ್ನು ಸ್ಥಗಿತಗೊಳಿಸಲಾಯಿತು.

ಭಾರತದಲ್ಲಿ ಯಜ್ದಿ ಬೈಕುಗಳ ಮರು ಬಿಡುಗಡೆ ಪಕ್ಕಾ

ಯಜ್ದಿ ಕಂಪನಿಯು, ಮೊನಾರ್ಕ್ ಮಾದರಿಯನ್ನು 1996ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿತು. ಈ ಮಾದರಿಯ ಬೈಕ್‍‍ಗಳು 350 ಮಾದರಿಯ ಬೈಕುಗಳಲ್ಲಿದ್ದ ಟ್ವಿನ್ ಫ್ರೇಂ ಹಾಗೂ ಫ್ಯೂಯಲ್ ಟ್ಯಾಂಕ್‌ ಹಾಗೂ ರೋಡ್ ಕಿಂಗ್ ಮಾದರಿಯ ಬೈಕುಗಳಲ್ಲಿದ್ದ ಎಂಜಿನ್‌ಗಳನ್ನು ಹೊಂದಿದ್ದವು.

ಭಾರತದಲ್ಲಿ ಯಜ್ದಿ ಬೈಕುಗಳ ಮರು ಬಿಡುಗಡೆ ಪಕ್ಕಾ

ಈ ಬೈಕುಗಳು ಸ್ಟ್ಯಾಂಡರ್ಡ್ 16 ಇಂಚಿನ ರಿಮ್‌ಗಳ ಬದಲಿಗೆ 18 ಇಂಚಿನ ರಿಮ್‌ಗಳನ್ನು ಒಳಗೊಂಡಿದ್ದ ಮೊದಲ ಬೈಕುಗಳಾಗಿದ್ದವು. ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗದ ಕಾರಣ ಈ ಬೈಕುಗಳನ್ನು ಸ್ಥಗಿತಗೊಳಿಸಲಾಯಿತು.

ಭಾರತದಲ್ಲಿ ಯಜ್ದಿ ಬೈಕುಗಳ ಮರು ಬಿಡುಗಡೆ ಪಕ್ಕಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಇದು ನಿಜಕ್ಕೂ ರೋಮಾಂಚನಕಾರಿ ಸುದ್ದಿ. ನಮ್ಮ ದೇಶದಲ್ಲಿ ಹಲವರು ವರ್ಷಗಳ ಕಾಲ ಯಜ್ದಿ ಬೈಕುಗಳನ್ನು ಹೊಂದಿದ್ದರು. ಯಜ್ದಿ ಬೈಕುಗಳು ದೇಶದಲ್ಲಿ ಮರು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೈಕ್ ಪ್ರಿಯರು ಈ ಬೈಕುಗಳನ್ನು ಕಾಣಲು ಉತ್ಸುಕರಾಗಿದ್ದಾರೆ.

ಭಾರತದಲ್ಲಿ ಯಜ್ದಿ ಬೈಕುಗಳ ಮರು ಬಿಡುಗಡೆ ಪಕ್ಕಾ

ಈ ಬೈಕುಗಳನ್ನು ಮರು ಬಿಡುಗಡೆಗೊಳಿಸುತ್ತಿರುವ ಮಹೀಂದ್ರಾ ಕಂಪನಿಯ ಕಾರ್ಯವನ್ನು ಶ್ಲಾಘಿಸಲೇ ಬೇಕು. ಮರು ಬಿಡುಗಡೆಯಾಗಲಿರುವ ಮೊದಲ ಬೈಕ್ ರೋಡ್ ಕಿಂಗ್ ಆಗಿರುವ ಸಾಧ್ಯತೆಗಳಿವೆ. ಇದರ ಜೊತೆಗೆ ಮೂಲ ಮಾದರಿಯಲ್ಲಿದ್ದ 16 ಲೀಟರ್ ಟ್ಯಾಂಕ್ ಹಾಗೂ 16 ಇಂಚಿನ ರಿಮ್‍‍ಗಳು ಹೊಸದಾಗಿ ಬಿಡುಗಡೆಯಾಗಲಿರುವ ಬೈಕುಗಳಲ್ಲಿರುವ ಸಾಧ್ಯತೆಗಳಿವೆ.

Most Read Articles

Kannada
English summary
Yezdi India Official Twitter & Instagram Handles Are Live: Motorcycles May Launch In 2020 - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X