ಪವರ್‌ಫುಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಬಿಎಸ್-6 ಬಜಾಜ್ ಪಲ್ಸರ್ ಎನ್‍ಎಸ್160

ಬಜಾಜ್ ಆಟೋ ಕಂಪನಿಯು ತನ್ನ ಬಿಎಸ್-6 ಪಲ್ಸರ್ ಎನ್‍ಎಸ್160 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದೀಗ ಬಿಎಸ್-6 ಪಲ್ಸರ್ ಎನ್‍ಎಸ್160 ಬೈಕಿನ ಮಾಹಿತಿಗಳು ಬಹಿರಂಗವಾಗಿದೆ.

ಪವರ್‌ಫುಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಬಿಎಸ್-6 ಬಜಾಜ್ ಪಲ್ಸರ್ ಎನ್‍ಎಸ್160

ಹೊಸ ಪಲ್ಸರ್ ಎನ್‍ಎಸ್160 ಬೈಕಿನ ಮಾಹಿತಿಯನ್ನು ಐಎಬಿಯು ಬಹಿರಂಗಪಡಿಸಿದ್ದಾರೆ. ಈ ಮಾಹಿತಿಗಳ ಪ್ರಕಾರ, ಈ ಬೈಕಿನ ಹೊಸ ಎಂಜಿನ್ 9,000 ಆರ್‍‍ಪಿಎಂನಲ್ಲಿ 16 ಬಿ‍‍ಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಹಿಂದಿನ ಪಲ್ಸರ್ ಎನ್‍ಎಸ್ 160 ಬೈಕಿನ ಬಿಎಸ್-4 ಎಂಜಿನ್ 15.2 ಬಿ‍‍ಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಹಿಂದಿನ ಮಾದರಿಗೆ ಹೋಲಿಸಿದರೆ 0.8 ಬಿ‍ಹೆಚ್‍‍ಪಿ ಪವರ್ ಅನ್ನು ಹೆಚ್ಚು ಉತ್ಪಾದಿಸುತ್ತದೆ.

ಪವರ್‌ಫುಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಬಿಎಸ್-6 ಬಜಾಜ್ ಪಲ್ಸರ್ ಎನ್‍ಎಸ್160

ಹೊಸ ಬಿಎಸ್-6 ಎಂಜಿನ್ 6500 ಆರ್‍‍ಪಿಎಂನಲ್ಲಿ 14.6 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸಬಹುದು. ಟಾರ್ಕ್ ಉತ್ಪಾದನೆಯಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

ಪವರ್‌ಫುಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಬಿಎಸ್-6 ಬಜಾಜ್ ಪಲ್ಸರ್ ಎನ್‍ಎಸ್160

ಹೊಸ ಪಲ್ಸರ್ ಎನ್‍ಎಸ್160 ಬೈಕಿನಲ್ಲಿ ಬಿಎಸ್-6 ಎಂಜಿನ್ ಫ್ಯೂಯಲ್ ಇಂಜೆಕ್ಟಡ್ ಆಗಿರುವುದರಿಂದ ಪವರ್ ಅನ್ನು ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಬಜಾಜ್ ಪಲ್ಸರ್ 160 ಬಿಎಸ್-6, 160.3 ಸಿಸಿ ಸಿಂಗಲ್ ಸಿಲಿಂಡರ್, ಆಯಿಲ್ ಕೂಲ್ಡ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿರುತ್ತದೆ. ಈ ಎಂಜಿನ್ ಹೆಚ್ಚಿನ ನಿಖರವಾದ ಥ್ರೊಟಲ್ ಪ್ರತಿಕ್ರಿಯೆ ಮತ್ತು ಇಂಧನ ದಕ್ಷತೆಯನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸುತ್ತೇವೆ.

ಪವರ್‌ಫುಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಬಿಎಸ್-6 ಬಜಾಜ್ ಪಲ್ಸರ್ ಎನ್‍ಎಸ್160

ಬಿಎಸ್-6 ಪಲ್ಸರ್ ಎನ್‍ಎಸ್160 ಬೈಕಿನಲ್ಲಿ ಹೆಚ್ಚಿನ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲ. ಹೊಸ ಬೈಕ್ 2017 ಎಂಎಂ ಉದ್ದ, 804 ಎಂಎಂ ಅಗಲ, 1060 ಎಂಎಂ ಎತ್ತರ ಮತ್ತು 1372 ಎಂಎಂ ವ್ಹೀಲ್‍‍ಬೇಸ್ ಅನ್ನು ಹೊಂದಿದೆ. ಎಂಜಿನ್‍‍ನಲ್ಲಿ ಮಾತ್ರ ಬದಲಾವಣೆಯನ್ನು ಹೊರತುಪಡಿಸಿ ಇನ್ನು ಯಾವುದೇ ಬದಲಾವಣೆಗಳಿಲ್ಲ.

ಪವರ್‌ಫುಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಬಿಎಸ್-6 ಬಜಾಜ್ ಪಲ್ಸರ್ ಎನ್‍ಎಸ್160

ಪಲ್ಸರ್ ಎನ್‍ಎಸ್160 ಬೈಕಿನ ವಿನ್ಯಾಸವು ಪಲ್ಸರ್ ಎನ್‍ಎಸ್200 ಬೈಕಿನ ಮಾದರಿಯಂತಿದೆ. ಹೊಸ ಪಲ್ಸರ್ ಎನ್‍ಎಸ್160 ಬೈಕ್ ಅಗ್ರೆಸಿವ್ ಲುಕ್ ನೊಂದಿಗೆ ಈ ಬೈಕಿನ ವಿನ್ಯಾಸವು ಆಕರ್ಷಕವಾಗಿದೆ.

ಪವರ್‌ಫುಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಬಿಎಸ್-6 ಬಜಾಜ್ ಪಲ್ಸರ್ ಎನ್‍ಎಸ್160

ಹೊಸ ಪಲ್ಸರ್ ಎನ್‍ಎಸ್160 ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆಂಷನ್ ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಸಸ್ಪೆಂಷನ್ ಹೊಂದಿದೆ. ಈ ಬೈಕಿನಲ್ಲಿ ಬ್ರೇಕಿಂಗ್ ಸಿಸ್ಟಂನಲ್ಲಿ 260 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಅನ್ನು ಅಳವಡಿಸಲಾಗಿದೆ. ಈ ಬೈಕಿನಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಡಂರ್ಡ್ ಆಗಿ ಅಳವಡಿಸಲಾಗಿದೆ.

ಪವರ್‌ಫುಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಬಿಎಸ್-6 ಬಜಾಜ್ ಪಲ್ಸರ್ ಎನ್‍ಎಸ್160

ಇತ್ತೀಚೆಗೆ ಬಜಾಜ್ ಆಟೋ ಕಂಪನಿಯು ಬಿಡುಗಡೆಗೊಳಿಸಿದ ಡೊಮಿನಾರ್ 250 ಬೈಕಿನಲ್ಲಿ 248.8 ಸಿಸಿಯ ಲಿಕ್ವಿಡ್ ಕೂಲ್ಡ್ ಬಿ‍ಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 27 ಬಿ‍‍ಹೆಚ್‍ಪಿ ಪವರ್ ಹಾಗೂ 23.5 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ಪವರ್‌ಫುಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಬಿಎಸ್-6 ಬಜಾಜ್ ಪಲ್ಸರ್ ಎನ್‍ಎಸ್160

ಹೊಸ ಪಲ್ಸರ್ ಎನ್‍ಎಸ್ 160 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಸುಜುಕಿ 160 ಜಿಕ್ಸರ್, ಯಮಹಾ ಎಫ್‍‍ಝಡ್ 160 4ವಿ ಮತ್ತು ಹೀರೋ ಎಕ್ಸ್‌ಟ್ರೀಮ್‌ 160ಆರ್‍ ಬೈಕ್‍‍ಗಳಿಗೆ ಪೈಪೋಟಿಯನ್ನು ನೀಡುತ್ತದೆ. ಪಲ್ಸರ್ ಬೈಕ್‍‍ಗಳ ಸರಣಿಯ ಜನಪ್ರಿಯತೆಯನ್ನು ಮರಳಿ ಪಡೆಯಲು ಬಜಾಜ್ ಆಟೋ ಪ್ರಯತ್ನಿಸುತ್ತಿದೆ.

Most Read Articles

Kannada
English summary
Bajaj Pulsar NS160 BS6 Specification Leaked Ahead Of Launch. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X