Just In
- 23 min ago ಅಪ್ಪ-ಮಗಳ ಭಾಂದವ್ಯ.. ಪ್ರೀತಿಯ ಪುತ್ರಿಗೆ ತಂದೆಯಿಂದ 2 ಕೋಟಿಯ ಪೋರ್ಷೆ ಕಾರು ಗಿಫ್ಟ್
- 1 hr ago ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- 2 hrs ago Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- 3 hrs ago ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
Don't Miss!
- Sports ರೋಹಿತ್ ಶರ್ಮಾ ಬಳಿಕ ಭಾರತ ತಂಡದ ನಾಯಕನಾರು?; ಅಚ್ಚರಿ ಹೆಸರು ತಿಳಿಸಿದ ಹರ್ಭಜನ್ ಸಿಂಗ್!
- News ಮೋದಿ, ಅಮಿತ್ ಶಾ ಯಾವ ಮುಖ ಇಟ್ಟುಕೊಂಡು ಕರ್ನಾಟಕಕ್ಕೆ ಬರುತ್ತಾರೆ: ಸಿದ್ದರಾಮಯ್ಯ ಗರಂ
- Lifestyle ಚಪಾತಿ, ಅನ್ನಕ್ಕೆ ಟೊಮೆಟೋ ಬೇಳೆ ಸಾರು ಸಖತ್ ರುಚಿ..! ಮಾಡೋದು ಸುಲಭ..!
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Movies Sathya : ತಾಜ್ ಮಹಲ್ ಎದುರು ನಿಂತ ಸತ್ಯಾ, ಪತಿ ಜೊತೆ ಗೌತಮಿ ಪ್ರವಾಸ...!
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಡುಗಡೆಯಾಯ್ತು ಜನಪ್ರಿಯ ಬಿಎಸ್-6 ಹೀರೋ ಎಕ್ಸ್ಪಲ್ಸ್ 200 ಬೈಕ್
ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಬಿಎಸ್-6 ಎಕ್ಸ್ಪಲ್ಸ್ 200 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೀರೋ ಎಕ್ಸ್ಪಲ್ಸ್ 200 ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1,11,790 ಗಳಾಗಿದೆ.
ಈ ಎಂಟ್ರಿ ಲೆವೆಲ್ ಬಿಎಸ್-6 ಎಕ್ಸ್ಪಲ್ಸ್ 200 ಬೈಕ್ ಅದೇ 199.6 ಸಿಸಿ ಎಂಜಿನ್ ಅನ್ನು ಹೊಂದಿದೆ. ಹಿಂದಿನ ಬಿಎಸ್-4 ಎಕ್ಸ್ಪಲ್ಸ್ 200 ಮಾದರಿಯಲ್ಲಿಯು ಇದೇ ಎಂಜಿನ್ ಅನ್ನು ಹೊಂದಿತ್ತು. ಕಂಪನಿಯು ಇದೇ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಹೊಸ ಮಾದರಿಯಲ್ಲಿ ಏರ್/ಆಯಿಲ್-ಕೂಲಿಂಗ್ ಮತ್ತು ಫ್ಯೂಯಲ್ ಇಂಜೆಕ್ಷನ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಇನ್ನು ಬಿಎಸ್-6 ಹೀರೋ ಎಕ್ಸ್ಪಲ್ಸ್ 200 ಬೈಕ್ ಡೀಲರ್ಗಳ ಬಳಿ ತಲುಪಲು ಪ್ರಾರಂಭವಾಗಿದೆ.
ಹೊಸ ಎಕ್ಸ್ಪಲ್ಸ್ 200 ಬೈಕಿನ 199.6 ಸಿಸಿ ಎಂಜಿನ್ 8,500 ಆರ್ಪಿಎಂನಲ್ಲಿ 17.8 ಬಿಹೆಚ್ಪಿ ಪವರ್ ಮತ್ತು 6,400 ಆರ್ಪಿಎಂನಲ್ಲಿ 16.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಗೇರ್ಬಾಕ್ಸ್ ಅನ್ನು ಜೋಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್
ಹೀರೋ ಎಕ್ಸ್ಪಲ್ಸ್ 200 ಬೈಕನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದ ಬಳಿಕ ಹಿಂದಿನ ಮಾದರಿಗಿಂತ ತೂಕ ಹೆಚ್ಚಾಗಿದೆ. ಹೊಸ ಹೀರೋ ಎಕ್ಸ್ಪಲ್ಸ್ 200 ಬೈಕ್ 157 ಕೆಜೆ ತೂಕವನ್ನು ಹೊಂದಿದೆ.
ಬಿಎಸ್-6 ಎಕ್ಸ್ಪಲ್ಸ್ ಬೈಕಿನಲ್ಲಿ ಎಕ್ಸಾಸ್ಟ್ ಪೈಪಿನ ಸ್ಥಾನವನ್ನು ಬದಲಾಯಿಸಲಾಗಿದೆ. ಈ ಬೈಕಿನ ಎಂಜಿನ್ ಬೆಲ್ಲಿ-ಪ್ಯಾನ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ. ಇದು ಈ ಬೈಕಿನ ಗ್ರೌಂಡ್ ಕ್ಲಿಯರೆನ್ಸ್ ಮೇಲೆ ಪರಿಣಾಮ ಬೀರಬಹುದೇ ಎಂದು ನೋಡಬೇಕಾಗಿದೆ. ಬಿಎಸ್-6 ಎಕ್ಸ್ಪಲ್ಸ್ ಮೊದಲಿನಂತೆಯೇ 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್
ಹೊಸ ಎಕ್ಸ್ಪಲ್ಸ್ 200 ಬೈಕಿನ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ 37 ಎಂಎಂ ಲಾಂಗ್-ಟ್ರಾವೆಲ್ ಟೆಲಿಸ್ಕೋಪಿಕ್ ಫೋರ್ಕ್ಗಳನ್ನು ಮತ್ತು ಹಿಂಭಾಗದಲ್ಲಿ 10-ಹಂತದ ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ಅನ್ನು ಹೊಂದಿರುತ್ತದೆ.
ಬ್ರೇಕಿಂಗ್ ಸಿಸ್ಟಂಗಾಗಿ ಮುಂಭಾಗದಲ್ಲಿ 276 ಎಂಎಂ ಪೆಟಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಕೂಡ ಅಳವಡಿಸಲಾಗಿದೆ.
MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ
ಬಿಎಸ್-6 ಹೀರೋ ಎಕ್ಸ್ಪಲ್ಸ್ 200 ಬೈಕಿನಲ್ಲಿ ಎಲ್ಇಡಿ ಹೆಡ್ಲೈಟ್, ಎಲ್ಇಡಿ ಟೈಲ್ಲೈಟ್, ಬ್ಲೂಟೂತ್ ಕನೆಕ್ಟ್ ಆಗಿರುವ ಇನ್ಸ್ಟ್ರುಮೆಂಟ್ ಕನ್ಸೋಲ್ ಮತ್ತು ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ಹೊಂದಿದೆ.
ಬಿಎಸ್-6 ಹೀರೋ ಎಕ್ಸ್ಪಲ್ಸ್ 200 ಬೈಕ್ ವೈಟ್, ಮ್ಯಾಟ್ ಗ್ರೀನ್, ಮ್ಯಾಟ್ ಗ್ರೇ, ಸ್ಪೋರ್ಟ್ಸ್ ರೆಡ್ ಮತ್ತು ಪ್ಯಾಂಥರ್ ಬ್ಲ್ಯಾಕ್ ಎಂಬ ಐದು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಬಿಎಸ್-6 ಹೀರೋ ಎಕ್ಸ್ಪಲ್ಸ್ 200 ಬೈಕ್ ಹೆಚ್ಚಾಗಿ ಯುವ ಗ್ರಾಹಕರನ್ನು ಸೆಳೆಯುತ್ತದೆ.