ಭಾರೀ ಪ್ರಮಾಣದಲ್ಲಿ ಕಡಿತಗೊಂಡ ಡಬ್ಲ್ಯೂ 800 ಸ್ಟ್ರೀಟ್ ಕ್ರೂಸರ್ ಬೈಕಿನ ಬೆಲೆ

ಕವಾಸಕಿ ಇಂಡಿಯಾ ತನ್ನ 2020ರ ಡಬ್ಲ್ಯೂ 800 ಸ್ಟ್ರೀಟ್ ಕ್ರೂಸರ್ ಬೈಕಿನ ಮಾಹಿತಿಯನ್ನು ಭಾರತದ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಮಾಡಿದೆ. ಕವಾಸಕಿ ಕಂಪನಿಯು ಹೊಸ ಮಾದರಿಯ ಈ ಬೈಕಿನ ಬೆಲೆಯನ್ನು ಭಾರತದ ಎಕ್ಸ್‌ಶೋರೂಂ ದರದಂತೆ ರೂ.6.99 ಲಕ್ಷಗಳೆಂದು ನಿಗದಿಪಡಿಸಿದೆ.

ಭಾರೀ ಪ್ರಮಾಣದಲ್ಲಿ ಕಡಿತಗೊಂಡ ಡಬ್ಲ್ಯೂ 800 ಸ್ಟ್ರೀಟ್ ಕ್ರೂಸರ್ ಬೈಕಿನ ಬೆಲೆ

ಈ ಬೆಲೆಯು ಹಳೆ ಮಾದರಿಯ ಬೈಕಿಗಿಂತ ರೂ.1 ಲಕ್ಷ ಕಡಿಮೆಯಾಗಿದೆ. ಕವಾಸಕಿ ದೇಶಿಯ ಮಾರುಕಟ್ಟೆಯಲ್ಲಿ ಕವಾಸಕಿ ಡಬ್ಲ್ಯೂ 800 ಸ್ಟ್ರೀಟ್ ಬೈಕ್ ಅನ್ನು ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಆಗ ಈ ಬೈಕಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.7.99 ಲಕ್ಷಗಳಾಗಿತ್ತು. ಈ ಬೈಕ್‌ ಈ ಸೆಗ್‌ಮೆಂಟಿನಲ್ಲಿಯೇ ಹೆಚ್ಚಿನ ಬೆಲೆಯನ್ನು ಹೊಂದಿತ್ತು.

ಭಾರೀ ಪ್ರಮಾಣದಲ್ಲಿ ಕಡಿತಗೊಂಡ ಡಬ್ಲ್ಯೂ 800 ಸ್ಟ್ರೀಟ್ ಕ್ರೂಸರ್ ಬೈಕಿನ ಬೆಲೆ

ಈ ಬೈಕ್‌ಗೆ ಹೋಲಿಸಿದರೆ ಈ ಸೆಗ್‌ಮೆಂಟಿನಲ್ಲಿರುವ ಟ್ರಯಂಫ್ ಸ್ಟ್ರೀಟ್ ಟ್ವಿನ್ ಬೈಕಿನ ಬೆಲೆ ರೂ.7.45 ಲಕ್ಷಗಳಾಗಿದೆ. ಈಗ ಈ ಬೈಕ್‌ನ ಬೆಲೆಯನ್ನು ಕಡಿಮೆ ಮಾಡಿರುವ ಕಾರಣ ಈ ಸೆಗ್‌ಮೆಂಟಿನ ಜನರು ಡಬ್ಲ್ಯೂ 800 ಸ್ಟ್ರೀಟ್ ಕ್ರೂಸರ್ ಬೈಕ್‌ನತ್ತ ಆಕರ್ಷಿತರಾಗುತ್ತಾರೆ ಎಂಬ ಆಶಾ ಭಾವನೆಯನ್ನು ಕಂಪನಿಯು ಹೊಂದಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಭಾರೀ ಪ್ರಮಾಣದಲ್ಲಿ ಕಡಿತಗೊಂಡ ಡಬ್ಲ್ಯೂ 800 ಸ್ಟ್ರೀಟ್ ಕ್ರೂಸರ್ ಬೈಕಿನ ಬೆಲೆ

ಇನ್ನು ಈ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಎಂಜಿನ್ ಹೊರತುಪಡಿಸಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಈ ಬೈಕ್‌ನ ವಿನ್ಯಾಸವನ್ನು ಕವಾಸಕಿ ಡಬ್ಲ್ಯು1 650 ಸಿಸಿ ಬೈಕ್‌‌ನಿಂದ ಪಡೆಯಲಾಗಿದೆ. ಈ ಬೈಕ್ ರೌಂಡ್ ಎಲ್ಇಡಿ ಹೆಡ್‌ಲೈಟ್ ಗಳನ್ನು ಹೊಂದಿದೆ.

ಭಾರೀ ಪ್ರಮಾಣದಲ್ಲಿ ಕಡಿತಗೊಂಡ ಡಬ್ಲ್ಯೂ 800 ಸ್ಟ್ರೀಟ್ ಕ್ರೂಸರ್ ಬೈಕಿನ ಬೆಲೆ

ಇದರ ಜೊತೆಗೆ ಈ ಬೈಕಿನಲ್ಲಿ ಟಯರ್ ಡ್ರಾಪ್ ಫ್ಯೂಯಲ್ ಟ್ಯಾಂಕ್, ಸ್ಪೋಕ್ ವ್ಹೀಲ್ಸ್, ವೈಡ್ ಹ್ಯಾಂಡಲ್ ಬಾರ್ ಹಾಗೂ ಸೆಂಟರ್-ಸೆಟ್ ಫೂಟ್ ಪೆಗ್‌ಗಳನ್ನು ಅಳವಡಿಸಲಾಗಿದೆ. ಈ ಬೈಕ್‌ಗೆ ರೆಟ್ರೊ ಲುಕ್ ನೀಡಲು ಕ್ರೋಮ್, ಡಿಜಿಟಲ್ ರೀಡ್‌ ಔಟ್‌ನೊಂದಿಗೆ ಟ್ವಿನ್-ಪಾಡ್ ಇನ್ಸ್‌ಟ್ರೂಮೆಂಟ್ ಕನ್ಸೋಲ್ ಅನ್ನು ಅಳವಡಿಸಲಾಗಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಭಾರೀ ಪ್ರಮಾಣದಲ್ಲಿ ಕಡಿತಗೊಂಡ ಡಬ್ಲ್ಯೂ 800 ಸ್ಟ್ರೀಟ್ ಕ್ರೂಸರ್ ಬೈಕಿನ ಬೆಲೆ

ಕವಾಸಕಿ ಕಂಪನಿಯು ಈ ಬೈಕ್ ಅನ್ನು ಡ್ಯುಯಲ್ ಟೋನ್ ಕಲರ್ ಮೆಟಾಲಿಕ್ ಫ್ಲಾಟ್ ಸ್ಪಾರ್ಕ್ ಬ್ಲ್ಯಾಕ್ / ಮೆಟಾಲಿಕ್ ಮೇಟ್ ಗ್ರಾಫಿಕ್ ಗ್ರೇ ಬಣ್ಣದೊಂದಿಗೆ ಬಿಡುಗಡೆಗೊಳಿಸಿದೆ. ಈ ಬೈಕಿನಲ್ಲಿ 773 ಸಿಸಿಯ ವರ್ಟಿಕಲ್ ಟ್ವಿನ್ ಸಿಲಿಂಡರ್, ಬೆವೆಲ್ ಡ್ರೈವನ್, ಏರ್ ಕೂಲ್ಡ್, ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಹೊಂದಿರುವ ಎಂಜಿನ್ ಅನ್ನು ಅಳವಡಿಸಲಾಗಿದೆ.

ಭಾರೀ ಪ್ರಮಾಣದಲ್ಲಿ ಕಡಿತಗೊಂಡ ಡಬ್ಲ್ಯೂ 800 ಸ್ಟ್ರೀಟ್ ಕ್ರೂಸರ್ ಬೈಕಿನ ಬೆಲೆ

ಈ ಎಂಜಿನ್ 4,800 ಆರ್‌ಪಿಎಂನಲ್ಲಿ 62.9 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನಲ್ಲಿ ಅಸಿಸ್ಟ್, ಸ್ಲೀಪರ್ ಕ್ಲಚ್ ಹಾಗೂ ಅಡ್ಜಸ್ಟಬಲ್ ಲಿವರ್ ಅಳವಡಿಸಲಾಗಿದೆ. ಕವಾಸಕಿ ಕಂಪನಿಯು ಈ ಬೈಕಿನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸಹ ಅಳವಡಿಸಿದೆ.

Most Read Articles

Kannada
English summary
2020 Kawasaki W800 Street price cut details. Read in Kannada.
Story first published: Saturday, May 16, 2020, 18:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X