ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಬೆನೆಲ್ಲಿ 302ಎಸ್ ಬೈಕ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬೆನೆಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 300ಸಿಸಿ ವಿಭಾಗದಲ್ಲಿ ಪ್ರಾಬಲ್ಯವನ್ನು ಸಾಧಿಸಲು ಯೋಜಿಸುತ್ತಿದೆ. ಇದರ ಭಾಗವಾಗಿ ಬೆನೆಲ್ಲಿ ಕಂಪನಿಯು ತನ್ನ 2021ರ 302ಎಸ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಚಿಂತನೆ ನಡೆಸಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಬೆನೆಲ್ಲಿ 302ಎಸ್ ಬೈಕ್

ಭಾರತೀಯ ಮಾರುಕಟ್ಟೆಯಲ್ಲಿ ಟಿಎನ್‍ಟಿ ಮಾದರಿಯನ್ನು ಬದಲಾಯಿಸಿ 2021ರ ಬೆನೆಲ್ಲಿ 302ಎಸ್ ಮಾದರಿಯನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ. 2021ರ ಬೆನೆಲ್ಲಿ 302ಎಸ್ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಹೊಸ ಬೆನೆಲ್ಲಿ 302ಎಸ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಬಹುದು ಎಂದು ವರದಿಗಳಾಗಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಬೆನೆಲ್ಲಿ 302ಎಸ್ ಬೈಕ್

2021ರ ಬೆನೆಲ್ಲಿ 302ಎಸ್ ಬೈಕ್ ಹೊಸ ಫುಲ್ ಎಲ್‍ಇಡಿ ಹೆಡ್‍‍ಲ್ಯಾಂಪ್‍‍ನೊಂದಿಗೆ ಸಂಪೂರ್ಣ ಡಿಜಿ‍ಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ. ಬೆನಲ್ಲಿಯ ಟಿಎನ್‍‍ಟಿ 300 ಮಾದರಿಯು ಹ್ಯಾಲೊಜೆನ್ ಹೆಡ್‍‍ಲ್ಯಾಂಪ್‍‍ನೊಂದಿಗೆ ಸೆಮಿ ಡಿಜಿ‍ಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

MOST READ: ಹೊಸ ಡುಕಾಟಿ ಪಾನಿಗಲೆ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಬೆನೆಲ್ಲಿ 302ಎಸ್ ಬೈಕ್

ಟಿ‍ಎನ್‍‍ಟಿ 300 ಮಾದರಿಗೆ ಹೋಲಿಸಿದರೆ 302ಎಸ್ ದೊಡ್ಡ ರೇಡಿಯೇಟರ್ ಅನ್ನು ಹೊಂದಿರಲಿದೆ. ಹೊಸ 302ಎಸ್ ಬೈಕ್ ಫ್ಯೂಯಲ್ ಟ್ಯಾಂಕ್, ಎಂಜಿನ್ ಕೌಲ್, ಸ್ಪ್ಲಿಟ್ ಸೀಟುಗಳು ಮತ್ತು ಹಿಂಭಾಗದಲ್ಲಿ ಪ್ಯಾನೆಲ್‍‍ಗಳನ್ನು ಹೊಂದಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಬೆನೆಲ್ಲಿ 302ಎಸ್ ಬೈಕ್

ಬೆನಲ್ಲಿ 302ಎಸ್ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಹೊಂದಾಣಿಕ ಮಡಲಾದ 41ಎಂಎಂ ಟಿಲಿಸ್ಕೋಪಿಕ್ ಫೋರ್ಕ್‍‍ಗಳನ್ನು ಹೊಂದಿರುತ್ತದೆ. ಇನ್ನೂ ಹಿಂಭಾಗದಲ್ಲಿ ಪ್ರಿ ಲೋಡ್ ಮತ್ತು ರಿಬೌಂಡ್ ಹೊಂದಾಣಿಕಯ ಮೊನೊ ಶಾಕ್‍ ಅನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಬೆನೆಲ್ಲಿ 302ಎಸ್ ಬೈಕ್

ಹೊಸ ಬೆನೆಲ್ಲಿ 302ಎಸ್ ಬೈಕಿನ ಮುಂಭಾಗದಲ್ಲಿ ನಾಲ್ಕು ಪಿಸ್ಟನ್ ಕ್ಯಾಲಿಪರ್‍‍ಗಳನ್ನು ಒಳಗೊಂಡಿರುವ 260 ಎಂಎಂ ಡ್ಯುಯಲ್ ಡಿಸ್ಕ್ ಬ್ರೇಕ್‍‍ಗಳು ಮತ್ತು ಹಿಂಭಾಗದಲ್ಲಿ ಎರಡು ಪಿಸ್ಟನ್ ಕ್ಯಾಲಿಪರ್‍‍ಗಳನ್ನು ಒಳಗೊಂಡಿರುವ ಸಿಂಗಲ್ 240 ಎಂಎಂ ಡಿಸ್ಕ್ ಬ್ರೇಕ್‍ಗಳನ್ನು ಅಳವಡಿಸಲಾಗಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಬೆನೆಲ್ಲಿ 302ಎಸ್ ಬೈಕ್

ಬೆನೆಲ್ಲಿ 302ಎಸ್ ಬೈಕ್ 300 ಸಿಸಿ ಪ್ಯಾರೆಲಲ್ ಟ್ವಿನ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ನಾಲ್ಕು ಡಿಒಹೆಚ್‍ಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 37.5 ಬಿ‍‍ಹೆಚ್‍‍ಪಿ ಪವರ್ ಮತ್ತು 25.62 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ ಆರು ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸ್ಲಿಪರ್ ಅಸಿಸ್ಟ್ ಕ್ಲಚ್ ಮತ್ತು ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಬೆನೆಲ್ಲಿ 302ಎಸ್ ಬೈಕ್

ಇದರೊಂದಿಗೆ ಇನ್ನು ಕಂಪನಿಯು ಟಿಆರ್‌ಕೆ 502, ಟಿಆರ್‌ಕೆ 502ಎಕ್ಸ್ ಮತ್ತು ಲಿಯೊನ್ಸಿನೊ 500 ಬೈಕುಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಹೊಸ ಬೆನೆಲ್ಲಿ ಟಿಆರ್‌ಕೆ 502, ಟಿಆರ್‌ಕೆ 502ಎಕ್ಸ್ ಮತ್ತು ಲಿಯೊನ್ಸಿನೊ 500 ಬೈಕುಗಳು ಈ ವರ್ಷದ ನವೆಂಬರ್‌ ತಿಂಗಳಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸುತ್ತೇವೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಬೆನೆಲ್ಲಿ 302ಎಸ್ ಬೈಕ್

ಬೆನೆಲ್ಲಿ 300ಎಸ್ ಬೈಕ್ ಅನ್ನು ಕಾಸ್ಮೆಟಿಕ್ ನವೀಕರಣ ಮತ್ತು ಇತರ ನವೀಕರಣಗಳನ್ನು ನಡೆಸಿ ಭಾರತದಲ್ಲಿ ಬೆನೆಲ್ಲಿ 300ಎಸ್ ಬೈಕ್ ಆಗಿ ಬಿಡುಗಡೆಗೊಳಿಸಲಿದೆ. ಈ ಹೊಸ ಬೆನೆಲ್ಲಿ 300ಎಸ್ ಬೈಕನ್ನು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
2021 Benelli 302S To Launch In India Next Year, Replace TNT 300. Read In Kannada.
Story first published: Monday, August 24, 2020, 20:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X