ಅನಾವರಣವಾಯ್ತು 2021ರ ಹೋಂಡಾ ಸಿಬಿ125ಎಫ್ ಬೈಕ್

ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಕಂಪನಿಯು ತನ್ನ 2021ರ ಸಿಬಿ125ಎಫ್ ಬೈಕನ್ನು ಯುರೋಪಿನ ಮಾರುಕಟ್ಟೆಗಾಗಿ ಅನಾವರಣಗೊಳಿಸಿದೆ. ಹೋಂಡಾ ಸಿಬಿ125ಎಫ್ ಯುರೋಪ್ ಮಾರುಕಟ್ಟೆಯಲ್ಲಿ ಅತ್ಯಂತ ಯಶಸ್ವಿ ಎಂಟ್ರಿ ಲೆವೆಲ್ ಬೈಕುಗಳಲ್ಲಿ ಒಂದಾಗಿದೆ.

ಅನಾವರಣವಾಯ್ತು 2021ರ ಹೋಂಡಾ ಸಿಬಿ125ಎಫ್ ಬೈಕ್

2021ರ ಹೋಂಡಾ ಸಿಬಿ125ಎಫ್ ಬೈಕ್ ಒಂದೇ ಸಿಲೂಯೆಟ್ ಮತ್ತು ಒಟ್ಟಾರೆ ವಿನ್ಯಾಸವನ್ನು ಉಳಿಸಿಕೊಂಡಿದೆ. ಆದರೆ ಬೈಕಿನ ತೂಕ ಸೇರಿದಂತೆ ಕೆಲವು ವಿಭಾಗದಲ್ಲಿ ಗಮನಾರ್ಹ ಬದಲಾವಣೆಗಳಿವೆ. ಹಿಂದಿನ ಮಾದರಿಗಿಂತ ಹೊಸ ಹೋಂಡಾ ಸಿಬಿ125ಎಫ್ ಬೈಕಿನ 11 ಕೆಜಿ ತೂಕವನ್ನು ಕಡಿಮೆಯಾಗಿದೆ. ಸದ್ಯ ಹೊಸ ಹೋಂಡಾ ಸಿಬಿ125ಎಫ್ ಬೈಕ್ 117 ಕೆಜಿ ತೂಕವನ್ನು ಹೊಂದಿದೆ. ಫ್ರೇಮ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ,

ಅನಾವರಣವಾಯ್ತು 2021ರ ಹೋಂಡಾ ಸಿಬಿ125ಎಫ್ ಬೈಕ್

2021ರ ಹೋಂಡಾ ಸಿಬಿ125ಎಫ್‌ನ ಸ್ಮಾರ್ಟ್ ಪವರ್(ಇಎಸ್‌ಪಿ) ಎಂಜಿನ್ ಶೇ.27 ರಷ್ಟು ಉತ್ತಮ ಇಂಧನ ದಕ್ಷತೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ನವೀಕರಿಸಿದ ಬೈಕ್‌ನ ಎಂಜಿನ್ 7 ಕೆಜಿ ಹಗುರವಾಗಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಅನಾವರಣವಾಯ್ತು 2021ರ ಹೋಂಡಾ ಸಿಬಿ125ಎಫ್ ಬೈಕ್

ಈ ಎಂಜಿನ್ 7,750 ಆರ್‌ಪಿಎಂನಲ್ಲಿ 10.7 ಬಿಹೆಚ್‌ಪಿ ಮತ್ತು 6,000 ಆರ್‌ಪಿಎಂನಲ್ಲಿ 10 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಆಂತರಿಕ ಘರ್ಷಣೆಯನ್ನು ಕಡಿಮೆ ಮಾಡಲು ಹೊಸ ಎಂಜಿನ್ ಆಫ್-ಸೆಟ್ ಸಿಲಿಂಡರ್ ಅನ್ನು ಪಡೆಯುತ್ತದೆ,

ಅನಾವರಣವಾಯ್ತು 2021ರ ಹೋಂಡಾ ಸಿಬಿ125ಎಫ್ ಬೈಕ್

ಇದು ಹೋಂಡಾದ ಕಮ್ಯೂಟರ್ ಮಾದರಿಗಳಲ್ಲಿ ನಾವು ಭಾರತದಲ್ಲಿ ನೋಡಿದ್ದೇವೆ. ಇದು ಸೈಲೆಂಟ್ ಸ್ಟಾರ್ಟ್ ಎಸಿಜಿ ಸ್ಟಾರ್ಟರ್ ಮೋಟರ್ ಅನ್ನು ಸಹ ಒಳಗೊಂಡಿದೆ.ಬಾಡಿವರ್ಕ್ ಅನ್ನು ಸಹ ಮರುಹೊಂದಿಸಲಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಅನಾವರಣವಾಯ್ತು 2021ರ ಹೋಂಡಾ ಸಿಬಿ125ಎಫ್ ಬೈಕ್

ಸಿವಿ ಸರಣಿಯಲ್ಲಿ ಹೋಂಡಾದ ದೊಡ್ಡ ಬೈಕುಗಳಿಗೆ ಅನುಗುಣವಾಗಿ ಹೆಚ್ಚು ಅಗ್ರೇಸಿವ್ ಲೈನ್ ಗಳನ್ನು ಹೊಂದಿದೆ. 2021ರ ಹೋಂಡಾ ಸಿಬಿ125ಎಫ್ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಡಿಜಿಟಲ್ ಡ್ಯಾಶ್ ಜೊತೆಗೆ ಡಿಜಿಟಲ್ ಕನ್ಸೋಲ್ ಗೇರ್ ಪೊಸಿಷನ್ ಇಂಡಿಕೇಟರ್ ಅನ್ನು ಹೊಂದಿದೆ.

ಅನಾವರಣವಾಯ್ತು 2021ರ ಹೋಂಡಾ ಸಿಬಿ125ಎಫ್ ಬೈಕ್

ಇನ್ನು ಹೋಂಡಾ ಸಿಬಿ125ಎಫ್ ಬೈಕ್ ಸಾಮಾನ್ಯ ಸ್ಪೀಡೋಮೀಟರ್, ಓಡೋಮೀಟರ್ ರೀಡಿಂಗ್ ಫೀಚರ್ ಅನ್ನು ಹೊಂದಿದೆ. ನವೀಕರಿಸಿದ ಸಿಬಿ125ಎಫ್ ಸ್ಟ್ಯಾಂಡರ್ಡ್ ಸ್ಟಾರ್ಟ್-ಸ್ಟಾಪ್ ಸಿಸ್ಟಂ ಅನ್ನು ಸಹ ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅನಾವರಣವಾಯ್ತು 2021ರ ಹೋಂಡಾ ಸಿಬಿ125ಎಫ್ ಬೈಕ್

ಈ ಫೀಚರ್ ಹಿಂದಿನ ಮಾದರಿಗಳಲ್ಲಿ ಇರಲಿಲ್ಲ, ಹೊಸದಾಗಿ ನೀಡಲಾಗಿದೆ. 2021ರ ಹೋಂಡಾ ಸಿಬಿ125ಎಫ್ ಬೈಕ್ ಯುರೋಪಿನ ಮಾರುಕಟ್ಟೆಯಲ್ಲಿ ಜನಪ್ರಿಯ ಮಾದರಿಯಾಗಿದ್ದರೆ, ಸಿಬಿ ಶೈನ್ ಭಾರತದಲ್ಲಿ ಹೋಂಡಾ ಸರಣಿಯಲ್ಲಿ ಜನಪ್ರಿಯ ಮಾದರಿಯಾಗಿದೆ.

ಅನಾವರಣವಾಯ್ತು 2021ರ ಹೋಂಡಾ ಸಿಬಿ125ಎಫ್ ಬೈಕ್

ಇನ್ನು ಹೋಂಡಾ ಮೋಟಾರ್‌ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನ ವಿಭಾಗದಲ್ಲಿ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ. ಹೋಂಡಾ ಕಂಪನಿಯು ಹೊಚ್ಚ ಹೊಸ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಿದ್ದವಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಅನಾವರಣವಾಯ್ತು 2021ರ ಹೋಂಡಾ ಸಿಬಿ125ಎಫ್ ಬೈಕ್

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಇದೇ ತಿಂಗಳ 30ರಂದು ಹೊಸ ಬೈಕನ್ನು ಬಿಡುಗಡೆಗೊಳಿಸಲಿದೆ. ಹೊಸ ಬೈಕ್ ಪ್ರೀಮಿಯಂ ಮಾದರಿಯಾಗಲಿದ್ದು, 300ಸಿಸಿಯ ಸರಣಿ ಮೇಲಿನ ಸ್ಥಾನವನ್ನು ಪಡೆಯಬಹುದು. ಹೊಸ ಬೈಕ್ ಬಿಡುಗಡೆಯಾದ ಬಳಿಕ ಹೋಂಡಾ ಕಂಪನಿಯ ಪ್ರೀಮಿಯಂ ಬಿಗ್‌ವಿಂಗ್ ಡೀಲರುಗಳ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ.

ಅನಾವರಣವಾಯ್ತು 2021ರ ಹೋಂಡಾ ಸಿಬಿ125ಎಫ್ ಬೈಕ್

ಭಾರತದಲ್ಲಿ ನಿರ್ಮಿಸಲಾದ 125 ಸಿಸಿ ಹೋಂಡಾ ಸಿಬಿ ಶೈನ್ ಕಂಪನಿಯ ಸರಣಿಯಲ್ಲಿ ವಿಶ್ವದಾದ್ಯಂತ ಹೆಚ್ಚು ಮಾರಾಟವಾದ ಬೈಕ್ ಆಗಿದೆ. ಇನ್ನು ಹೊಸ ಹೋಂಡಾ ಸಿಬಿ125ಎಫ್ ಬೈಕ್ ಶೀಘ್ರದಲ್ಲೇ ಯುರೋಪಿನ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
English summary
2021 Honda CB125F Unveiled For Europe. Read In Kannada.
Story first published: Wednesday, September 23, 2020, 13:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X