ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ 2021ರ ಹೋಂಡಾ ಸಿಬಿಆರ್600ಆರ್‌ಆರ್ ಬೈಕ್

ಜನಪ್ರಿಯ ದ್ವಿಚಕ ವಾಹನ ತಯಾರಕ ಕಂಪನಿಯಾದ ಹೋಂಡಾ ತನ್ನ ಹೊಸ ಸಿಬಿಆರ್600ಆರ್‌ಆರ್ ಬೈಕಿನ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಹೋಂಡಾ ಸಿಬಿಆರ್600ಆರ್‌ಆರ್ ಬೈಕ್ ಇದೇ ತಿಂಗಳ 21 ರಂದು ಜಾಗತಿಕವಾಗಿ ಅನಾವರಣವಾಗಲಿದೆ.

ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ 2021ರ ಹೋಂಡಾ ಸಿಬಿಆರ್600ಆರ್‌ಆರ್ ಬೈಕ್

ಈ ಹೊಸ ಹೋಂಡಾ ಸಿಬಿಆರ್600ಆರ್‌ಆರ್ ಬೈಕನ್ನು ಮೊದಲು ಜಪಾನ್‌ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಆದರೆ ಕೆಲವು ವರದಿಗಳ ಪ್ರಕಾರ ಹೊಸ ಸೂಪರ್‌ಸ್ಪೋರ್ಟ್ಸ್ ಮಿಡಲ್ ವೇಟ್ ಹೋಂಡಾ ಸಿಬಿಆರ್600ಆರ್‌ಆರ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದಿಲ್ಲ. ಈ ಹೊಸ ಹೋಂಡಾ ಸಿಬಿಆರ್600ಆರ್‌ಆರ್ ಬೈಕನ್ನು ಯುರೋ 5 ಅಥವಾ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುವುದಿಲ್ಲ.

ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ 2021ರ ಹೋಂಡಾ ಸಿಬಿಆರ್600ಆರ್‌ಆರ್ ಬೈಕ್

ಇದರಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ. ಜಪಾನ್ ಮಾರುಕಟ್ಟೆಯಲ್ಲಿ ಯುರೋ 4 ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಲಾಗುತ್ತದೆ. ಅಮೇರಿಕಾದಲ್ಲಿಯು ಕೂಡ ಇದೇ ಮಾದರಿಯನ್ನು ಬಿಡುಗಡೆಗೊಳಿಸಲಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ 2021ರ ಹೋಂಡಾ ಸಿಬಿಆರ್600ಆರ್‌ಆರ್ ಬೈಕ್

ಈ ಹೊಸ ಹೋಂಡಾ ಸಿಬಿಆರ್600ಆರ್‌ಆರ್ ಬೈಕಿನಲ್ಲಿ 599 ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಡಿಒಹೆಚ್‌ಸಿ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿರುತ್ತದೆ, ಈ ಎಂಜಿನ್ 120 ಇಂದ್ 130 ವರೆಗೆ ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ 2021ರ ಹೋಂಡಾ ಸಿಬಿಆರ್600ಆರ್‌ಆರ್ ಬೈಕ್

ಇದರ ಹಿಂದಿನ ಮಾದರಿಯು 114.5 ಬಿಹೆಚ್‍ಪಿ ಪವರ್ ಮತ್ತು 66 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪರ್ಫಾಮೆನ್ಸ್ ಮಾದರಿಯಾಗಿರುವುದರಿಂದ ಈ ಬೈಕಿನಲ್ಲಿ ಹಲವು ರೈಡಿಂಗ್ ಮೋಡ್‌ಗಳನ್ನು ಹೊಂದಿರಬಹುದು.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ 2021ರ ಹೋಂಡಾ ಸಿಬಿಆರ್600ಆರ್‌ಆರ್ ಬೈಕ್

ಈ ಬೈಕಿನಲ್ಲಿ ಬೈ-ಡೈರಕ್ಷನಲ್ ಕ್ವಿಕ್‌ಶಿಫ್ಟರ್ ಮತ್ತು ಎಬಿಎಸ್ ಅನ್ನು ಹೊಂದಿರಬಹುದು, ಈ ಹೋಂಡಾ ಸಿಬಿಆರ್600ಆರ್‌ಆರ್ ಬೈಕಿನಲ್ಲಿ ಸಸ್ಪೆಕ್ಷನ್ ಗಾಗಿ ಮುಂಭಾಗದಲ್ಲಿ ಶೋವಾ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಹೊಂದಿರುತ್ತದೆ,

ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ 2021ರ ಹೋಂಡಾ ಸಿಬಿಆರ್600ಆರ್‌ಆರ್ ಬೈಕ್

ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ ಟೋಕಿಕೊ ರೇಡಿಯಲ್ ಕ್ಯಾಲಿಪರ್‌ಗಳೊಂದಿಗೆ ಡ್ಯುಯಲ್ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಸಿಂಗಲ್-ಪಿಸ್ಟನ್ ಕ್ಯಾಲಿಪರ್ ಹೊಂದಿರುವ ಡಿಸ್ಕ್ ಬ್ರೇಕ್ ಅನ್ನು ಹೊಂದಿರಲಿದೆ.

MOST READ: ಬಿಡುಗಡೆಯಾಯ್ತು ಹೊಸ ಟಿವಿಎಸ್ ಜೆಸ್ಟ್ 110 ಸ್ಕೂಟರ್

ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ 2021ರ ಹೋಂಡಾ ಸಿಬಿಆರ್600ಆರ್‌ಆರ್ ಬೈಕ್

ಈ ಹೊಸ ಸಿಬಿಆರ್600ಆರ್‌ಆರ್ ಬೈಕ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕವಾಸಕಿ ಝಡ್ಎಕ್ಸ್ -6ಆರ್ ಮತ್ತು ಯಮಹಾ ವೈಜೆಡ್ಎಫ್-ಆರ್6 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ. ಈ 2021ರ ಹೋಂಡಾ ಸಿಬಿಆರ್600ಆರ್‌ಆರ್ ಬೈಕ್ ಶೀಘ್ರದಲ್ಲೇ ಜಪಾನ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ 2021ರ ಹೋಂಡಾ ಸಿಬಿಆರ್600ಆರ್‌ಆರ್ ಬೈಕ್

ಇನ್ನು ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಹೊಸ ಸೂಪರ್ ಬೈಕ್ ಮಾದರಿಗಳಾದ ಸಿಬಿಆರ್1000ಆರ್‌ಆರ್-ಆರ್ ಫೈರ್‌ಬ್ಲೇಡ್ ಮತ್ತು ಫೈರ್‌ಬ್ಲೇಡ್ ಎಸ್‌ಪಿ ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

Most Read Articles

Kannada
English summary
The 2021 Honda CBR600RR Is Not Coming To India. Read In Kannada.
Story first published: Friday, August 14, 2020, 9:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X