Just In
- 21 min ago
ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ
- 57 min ago
ಕೈಗೆಟುಕುವ ದರದಲ್ಲಿ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಬಿಡುಗಡೆ
- 1 hr ago
ಭಾರತದಲ್ಲಿ ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್
- 13 hrs ago
ಮಧ್ಯಮ ಗಾತ್ರದ ಕಾರುಗಳಿಗೆ ಹೊಸ ಡೀಸೆಲ್ ಎಂಜಿನ್ ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
Don't Miss!
- Finance
ಕಾರು ಖರೀದಿಗೆ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವ ಬ್ಯಾಂಕ್ ಗಳಿವು
- News
ಬೆಂಗಳೂರಿನಲ್ಲಿ 24 ತಾಸಿನಲ್ಲಿ ಮೂರು ಶೂಟೌಟ್!
- Sports
ಥಾಯ್ಲೆಂಡ್ ಓಪನ್ 2021: ಎರಡನೇ ಸುತ್ತಿಗೆ ಪ್ರವೇಶಿಸಿದ ಪಿವಿ ಸಿಂಧು
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನಾವರಣವಾಯ್ತು ಐಷಾರಾಮಿ ಹೊಸ ಹೋಂಡಾ ರೆಬೆಲ್ 1100 ಬೈಕ್
ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್ಸೈಕಲ್ ತನ್ನ ಹೊಸ ರೆಬೆಲ್ 1100 ಬೈಕನ್ನು ಅನಾವರನಗೊಳಿಸಿದೆ. ಈ ಹೊಸ ಹೋಂಡಾ ರೆಬೆಲ್ 1100 "ರಿಲ್ಯಾಕ್ಸ್ ಮತ್ತು ಎಕ್ಸೈಟ್" ವಿನ್ಯಾಸದ ಥೀಮ್ನೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

ಹೊಸ ಹೋಂಡಾ ರೆಬೆಲ್ 1100 ಬೈಕಿನ ಎಂಜಿನ್ ಅನ್ನು ಹೋಂಡಾ ಆಫ್ರಿಕಾ ಟ್ವಿನ್ನಿಂದ ಎರವಲು ಪಡೆದಿದೆ. ಹೊಸ ಹೋಂಡಾ ರೆಬೆಲ್ 1100 ಬೈಕ್ ಹೆಸರಿಗೆ ತಕ್ಕಂತೆ 270-ಡಿಗ್ರಿ ಫೈರಿಂಗ್ ಆರ್ಡರ್ ಮತ್ತು 8 ವಾಲ್ವ್ಸ್ ಹೊಂದಿರುವ 1084 ಸಿಸಿ ಪ್ಯಾರೆಲಲ್-ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7,000 ಆರ್ಪಿಎಂನಲ್ಲಿ 85.8 ಬಿಹೆಚ್ಪಿ ಪವರ್ ಮತ್ತು 4,750 ಆರ್ಪಿಎಂನಲ್ಲಿ 98 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಹೊಸ ಹೋಂಡಾ ರೆಬೆಲ್ 1100 ಬೈಕ್ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ.

ಅಲ್ಲದೇ ಡಿಸಿಟಿ ಆಟೋಮ್ಯಾಟಿಕ್ ಅನ್ನು ಹೊಂದಿದೆ. ಇನ್ನು ಗ್ರಾಹಕರು ಮ್ಯಾನುಯಲ್ ಮೋಡ್ ಅನ್ನು ಆಯ್ಕೆ ಮಾಡಬಹುದು ಮತ್ತು ಹ್ಯಾಂಡಲ್ಬಾರ್-ಮೌಂಟಡ್ ಬಟನ್ ಮೂಲಕ ಗೇರ್ಗಳನ್ನು ಬದಲಾಯಿಸಬಹುದು.
MOST READ: ಅಕ್ಟೋಬರ್ ತಿಂಗಳಿನಲ್ಲಿ 8 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

2021ರ ಹೋಂಡಾ ರೆಬೆಲ್ 1100 ಬೈಕಿನಲ್ಲಿ ರೈಡ್-ಬೈ-ವೈರ್ ಸಿಸ್ಟಂ ಮತ್ತು ಸ್ಟ್ಯಾಂಡರ್ಡ್, ಸ್ಪೋರ್ಟ್ ಮತ್ತು ರೈನ್ ಎಂಬ ಮೂರು ವಿಭಿನ್ನ ರೈಡಿಂಗ್ ಮೋಡ್ಗಳನ್ನು ಹೊಂದಿದೆ. ಇದರೊಂದಿಗೆ ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ ಹೊಂದಿದೆ.

2021ರ ಹೋಂಡಾ ರೆಬೆಲ್ 1100 ಬೈಕ್ ಎಬಿಎಸ್ ಸ್ಟ್ಯಾಂಡರ್ಡ್ ಆಗಿ ಬರುತ್ತದೆ. ಈ ಹೊಸ ಬೈಕಿನಲ್ಲಿ ಫುಲ್ ಡಿಜಿಟಲ್ ಮೊನೊಕ್ರೋಮ್ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಿದೆ. ಇದು ಹಲವಾರು ಮಾಹಿತಿಗಳು ಪ್ರದರ್ಶಿಸುತ್ತದೆ. ಈ ಬೈಕಿನ ಸೀಟಿನ ಕೆಳಭಾಗದಲ್ಲಿ ಯುಎಸ್ಬಿ ಪೋರ್ಟ್ ಅನ್ನು ಸಹ ಒದಗಿಸಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್ಎಕ್ಸ್ ಬೈಕ್

ಇನ್ನು 2021ರ ಹೋಂಡಾ ರೆಬೆಲ್ 1100 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಕಾರ್ಟ್ರಿಡ್ಜ್-ಮಾದರಿಯ ಡ್ಯಾಂಪರ್ಗಳೊಂದಿಗೆ 43 ಎಂಎಂ ಫೋರ್ಕ್ ಮತ್ತು ಹಿಂಭಾಗದಲ್ಲಿ ಪಿಗ್ಗಿಬ್ಯಾಕ್ ಮೊನೊ ಶಾಕ್ ಸೆಟಪ್ ಅನ್ನು ಹೊಂದಿದೆ.

ಹೊಸ ಹೋಂಡಾ ರೆಬೆಲ್ 1100 ಬೈಕ್ ಮುಂಭಾಗದ ಅಲಾಯ್ ವ್ಹೀಲ್ ಒಂದೇ 330 ಎಂಎಂ ರೋಟರ್ ಹೊಂದಿದ್ದರೆ, 16 ಇಂಚಿನ ಹಿಂಭಾಗದ ವ್ಹೀಲ್ 256 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ.
MOST READ: ಎಪ್ರಿಲಿಯಾ ಎಸ್ಎಕ್ಸ್ಆರ್ 160 ಸ್ಕೂಟರ್ ಟೀಸರ್ ಚಿತ್ರ ಬಿಡುಗಡೆ

ಈ ಹೊಸ ಹೋಂಡಾ ರೆಬೆಲ್ 1100 ಬೈಕ್ ಮೆಟಾಲಿಕ್ ಬ್ಲ್ಯಾಕ್ ಮತ್ತು ಬೋರ್ಡೆಕ್ಸ್ ರೆಡ್ ಮೆಟಾಲಿಕ್ ಬಣ್ಣಗಳಲ್ಲಿ ಲಭ್ಯವಿರಲಿದೆ. 2021ರ ಹೋಂಡಾ ರೆಬೆಲ್ 1100 ಬೈಕ್ ಮುಂದಿನ ವರ್ಷ ಆರಂಭದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ,

ಇನ್ನು ಭಾರತೀಯ ಮಾರುಕಟ್ಟೆಗೆ ಸಂಬಂಧಿಸದಂತೆ ಹೋಂಡಾ ಕಂಪನಿಯು ಸಿಬಿ 350 ಬೈಕನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇನ್ನು ಹೋಂಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ 500 ಸಿಸಿ ಬೈಕುಗಳನ್ನು ಬಿಡುಗಡೆಗೊಳಿಸಲು ಚಿಂತಿಸುತ್ತಿದೆ.