Just In
- 5 hrs ago
17 ನಗರಗಳಲ್ಲಿ 22 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆದ ಎಂಜಿ ಮೋಟಾರ್
- 8 hrs ago
ಸಿಟ್ರನ್ 2ನೇ ಕಾರು ಮಾದರಿಯಾಗಿ ಬಿಡುಗಡೆಯಾಗಲಿದೆ ವಿನೂತನ ಮಾದರಿಯ ಕಂಪ್ಯಾಕ್ಟ್ ಎಸ್ಯುವಿ
- 8 hrs ago
ಭಾರತಕ್ಕೆ ಲಗ್ಗೆ ಇಡಲಿದೆ ಐಷಾರಾಮಿ ಫೋಕ್ಸ್ವ್ಯಾಗನ್ ಆರ್ಟಿಯೊನ್ ಕಾರು
- 9 hrs ago
ಎಲೆಕ್ಟ್ರಿಕ್ ವಾಹನಗಳ ಬಗ್ಗೆ ವಿಶೇಷ ಅಭಿಯಾನ ನಡೆಸಲಿದೆ ಆಂಪಿಯರ್ ಎಲೆಕ್ಟ್ರಿಕ್
Don't Miss!
- Lifestyle
ಶನಿವಾರದ ಭವಿಷ್ಯ ಹೇಗಿದೆ ನೋಡಿ
- News
ಭಾರತದಲ್ಲಿ ಫೆ.27 ಹಾಗೂ 28 ರಂದು ಕೊರೊನಾ ಲಸಿಕೆ ಪ್ರಕ್ರಿಯೆ ಇಲ್ಲ
- Movies
ಇವರೇ ನೋಡಿ ಭಟ್ಟರ ಎರಡನೇ ಗಾಳಿಪಟದ ನಾಯಕಿಯರು
- Sports
ಐಎಸ್ಎಲ್: ಕೇರಳಕ್ಕೆ ಸೋಲುಣಿಸಿದ ನಾರ್ಥ್ಈಸ್ಟ್ ಯುನೈಟೆಡ್ ಪ್ಲೇ ಆಫ್ ಗೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಫೆ. 26ರ ಮಾರುಕಟ್ಟೆ ದರ ಇಲ್ಲಿದೆ
- Education
RBI Grade B Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್ಎಕ್ಸ್ ಬೈಕ್
ಕವಾಸಕಿ ಕಂಪನಿಯು ತನ್ನ 2021ರ ನಿಂಜಾ 1000 ಎಸ್ಎಕ್ಸ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಮೇ ತಿಂಗಳಲ್ಲಿ ಬಿಡುಗಡೆಗೊಳಿಸಿತ್ತು. 2021ರ ಕವಾಸಕಿ ನಿಂಜಾ 1000 ಎಸ್ಎಕ್ಸ್ ಬೈಕ್ ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದೆ.

ಇದೀಗ 2021ರ ಕವಾಸಕಿ ನಿಂಜಾ 1000 ಎಸ್ಎಕ್ಸ್ ಸ್ಪೋರ್ಟ್ಸ್ ಟೂರಿಂಗ್ ಬೈಕ್ ಎಮರಾಲ್ಡ್ ಬ್ಲೇಜ್ಡ್ ಗ್ರೀನ್ ಬಣ್ಣದಲ್ಲಿ ಗ್ರೇ/ಬ್ಲ್ಯಾಕ್ ಮತ್ತು ಟ್ರೈ-ಟೋನ್ ಗ್ರೀನ್/ ಗ್ರೇ /ಬ್ಲ್ಯಾಕ್ ಎಂಬ ಬಣ್ಣಗಳ ಸಂಯೋಜನೆಯಲ್ಲಿ ಲಭ್ಯವಿದೆ. ನಾಲ್ಕನೇ ತಲೆಮಾರಿನ ಕವಾಸಕಿ ನಿಂಜಾ 1000 ಎಸ್ಎಕ್ಸ್ ಬೈಕನ್ನು ಆರಂಭಿಕ ಬೆಲೆಯು ರೂ.10.79 ಲಕ್ಷ ಬಿಡುಗಡೆಗೊಳಿಸಿದ್ದರು. ಇನ್ನು ಹೊಸ ಬಣ್ಣದ ಆಯ್ಕೆಯ ಹೊರತಾಗಿ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ.

ಇದೀಗ 2021ರ ಕವಾಸಕಿ ನಿಂಜಾ 1000 ಎಸ್ಎಕ್ಸ್ ಬೈಕಿನ ಬೆಲೆಯನ್ನು ರೂ.10,000 ಗಳವರೆಗೆ ಹೆಚ್ಚಿಸಲಾಗಿದೆ. ಬೆಲೆ ಏರಿಲೆಯ ಬಳಿಕ ಈ ಕವಾಸಕಿ ನಿಂಜಾ 1000 ಎಸ್ಎಕ್ಸ್ ಬೈಕಿನ ಬೆಲೆಯು ರೂ.10.89 ಲಕ್ಷ ಗಳಾಗಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಕವಾಸಕಿ ನಿಂಜಾ 1000 ಎಸ್ಎಕ್ಸ್ ಭಾರತದ ಮೊದಲ ಸ್ಥಳೀಯವಾಗಿ ತಯಾರಿಸಿದ ಪ್ರೀಮಿಯಂ ಸ್ಪೋರ್ಟ್-ಟೂರರ್ ಬೈಕ್ ಆಗಿದೆ. ನವೀಕರಿಸಿದ 2021ರ ನಿಂಜಾ 1000 ಎಸ್ಎಕ್ಸ್ ಬೈಕ್ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಅಲ್ಲದೇ ಈ ಬೈಕಿನಲ್ಲಿ ಹಲವಾರು ಹೊಸ ಫೀಚರ್ ಗಳನ್ನು ಒಳಗೊಂಡಿದೆ. ಕವಾಸಕಿ ಬೈಕುಗಳ ಸರಣಿಯಲ್ಲಿ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ. 2021ರ ಕವಾಸಕಿ ನಿಂಜಾ 1000 ಎಸ್ಎಕ್ಸ್ ಬೈಕ್ ಎಕ್ಸಾಸ್ಟ್ ಸಿಸ್ಟಂ ಅನ್ನು ಹೊಂದಿದೆ.
MOST READ: ರಾಯಲ್ ಎನ್ಫೀಲ್ಡ್ ಬೈಕ್ಗಳಿಗೆ ಟಕ್ಕರ್ ನೀಡಲು ಸಜ್ಜಾದ ಹೊಸ ಹೋಂಡಾ ಬೈಕ್

2021ರ ಕವಾಸಕಿ ನಿಂಜಾ 1000 ಎಸ್ಎಕ್ಸ್ ಬೈಕಿನ ಸೈಡ್ ಪ್ಯಾನೆಲ್ಗಳು ಮತ್ತು ಸ್ವಲ್ಪ ನವೀಕರಿಸಿದ ಬೆಲ್ಲಿ ಪ್ಯಾನ್ ಸಹ ಸೇರಿವೆ. ಹೊಸ ನಿಂಜಾ 1000 ಎಸ್ಎಕ್ಸ್ನಲ್ಲಿ ನವೀಕರಿಸಿದ ಪ್ಯಾನೆಲ್ ಅನ್ನು ಹೊಂದಿದೆ.

ಇನ್ನು ಈ ಹೊಸ ಬೈಕಿನಲ್ಲಿ ಆ್ಯಪ್ ಮೂಲಕ ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಮಾಡುವ ಹೊಸ 4.3-ಇಂಚಿನ ಟಿಎಫ್ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಎಲ್ಇಡಿ ಲೈಟಿಂಗ್ ಅನ್ನು ಹೊಂದಿದೆ. ಇನ್ನು ಹೊಸ ನಿಂಜಾ 1000 ಎಸ್ಎಕ್ಸ್ ಬೈಕ್ 4-ಹಂತದ ಹೊಂದಾಣಿಕೆಯೊಂದಿಗೆ ವಿಂಡ್ಸ್ಕ್ರೀನ್ ಅನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

2021ರ ಕವಾಸಕಿ ನಿಂಜಾ 1000 ಎಸ್ಎಕ್ಸ್ ಬೈಕಿನ ರೈಡರ್ ಮತ್ತು ಪಿಲಿಯನ್ ಎರಡಕ್ಕೂ ನವೀಕರಿಸಿದ ಎರ್ಗಾನೊಮಿಕ್ಸ್ ಒಳಗೊಂಡಿದೆ. ರೈಡರ್ ಮತ್ತು ಪಿಲಿಯನ್ ಸೀಟುಗಳು ದಪ್ಪವಿದೆ. ರೈಡರ್ ಸೀಟನ್ನು ಮೊದಲಗಿಂತಲೂ ಅಗಲವಾಗಿದೆ.

ಹೊಸ ಕವಾಸಕಿ ನಿಂಜಾ 1000 ಎಸ್ಎಕ್ಸ್ ಬೈಕಿನಲ್ಲಿ 1,043 ಸಿಸಿ ಲಿಕ್ವಿಡ್-ಕೂಲ್ಡ್ ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 10,000 ಆರ್ಪಿಎಂನಲ್ಲಿ 140 ಬಿಹೆಚ್ಪಿ ಪವರ್ ಮತ್ತು 8,000 ಆರ್ಪಿಎಂನಲ್ಲಿ 111 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ಬಾಕ್ಸ್ಗೆ ಜೋಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್ಮಾಸ್ಟರ್ ಬೈಕ್

ಮೇಲಿನ ಬದಲಾವಣೆಗಳು ಮತ್ತು ನವೀಕರಣಗಳ ಹೊರತಾಗಿ, ಹೊಸ ಕವಾಸಕಿ ನಿಂಜಾ 1000 ಎಸ್ಎಕ್ಸ್ ಸಹ ಹೊಸ ಎಲೆಕ್ಟ್ರಾನಿಕ್ಸ್ ಆಯ್ಜೆಯನ್ನು ಹೊಂದಿದೆ. ಇದರಲ್ಲಿ ಎಲೆಕ್ಟ್ರಾನಿಕ್ ಥ್ರೊಟಲ್, ಎಲೆಕ್ಟ್ರಾನಿಕ್ ಕ್ರೂಸ್ ಕಂಟ್ರೋಲ್, ಕ್ವಿಕ್-ಶಿಫ್ಟರ್, ಕಾರ್ನರಿಂಗ್ ಮ್ಯಾನೇಜ್ಮೆಂಟ್ ಫಂಕ್ಷನ್, ಇಂಟೆಲಿಜೆಂಟ್ ಆಂಟಿ-ಲಾಕ್ ಬ್ರೇಕ್ ಸಿಸ್ಟಂ, ಮಲ್ಟಿಪಲ್ ರೈಡಿಂಗ್ ಮೋಡ್ ಮತ್ತು 3-ಹಂತದ ಟ್ರಾಕ್ಷನ್ ಸಿಸ್ಟಂ ಒಳಗೊಂಡಿದೆ.

ಕವಾಸಕಿ ನಿಂಜಾ 1000 ಎಸ್ಎಕ್ಸ್ ಭಾರತದ ಮೊದಲ ಸ್ಥಳೀಯವಾಗಿ ತಯಾರಿಸಿದ ಪ್ರೀಮಿಯಂ ಸ್ಪೋರ್ಟ್-ಟೂರರ್ ಮಾದರಿಯಾಗಿದೆ. ಹೊಸ ಕವಾಸಕಿ ನಿಂಜಾ 1000 ಎಸ್ಎಕ್ಸ್ ಬೈಕ್ ಹೊಸ ಬಣ್ಣದದೊಂದಿಗೆ ಬೆಲೆಯನ್ನು ಕೂಡ ಹೆಚ್ಚಿಸಲಾಗಿದೆ.