ಹೊಸ ಫೀಚರ್ ಹೊಂದಲಿದೆ 2021ರ ಕವಾಸಕಿ ವರ್ಸಿಸ್ 1000 ಎಸ್‌ಇ ಬೈಕ್

ಕವಾಸಕಿ ಕಂಪನಿಯು ತನ್ನ 2021ರ ವರ್ಸಿಸ್ 1000 ಎಸ್‌ಇ ಬೈಕನ್ನು ನವೀಕರಿಸಲಾಗುತ್ತಿದೆ. ಈ ಹೊಸ ಕವಾಸಕಿ ವರ್ಸಿಸ್ 1000 ಎಸ್‌ಇ ಅಡ್ವೆಂಚರ್ ಟೂರರ್ ಬೈಕ್ ಶೋವಾ ಸ್ಕೈಹೂಕ್ ಸಸ್ಪೆಂಕ್ಷನ್ ಅನ್ನು ಪಡೆಯಲಿದೆ.

ಹೊಸ ಫೀಚರ್ ಹೊಂದಲಿದೆ 2021ರ ಕವಾಸಕಿ ವರ್ಸಿಸ್ 1000 ಎಸ್‌ಇ ಬೈಕ್

ಕವಾಸಕಿ ವರ್ಸಿಸ್ 1000 ಎಸ್‌ಇ ಬೈಕ್ ಎಲೆಕ್ಟ್ರಾನಿಕ್ ಕಂಟ್ರೋಲ್ ಸಸ್ಪೆಂಕ್ಷನ್(ಕೆಇಸಿಎಸ್) ಅನ್ನು ಹೊಂದಿದೆ. ಇದು ರಸ್ತೆಗೆ ಸರಿಹೊಂದಿಸಲು ಮತ್ತು ಲಗೇಜ್ ಅಥವಾ ಪ್ರಯಾಣಿಕರಿಗೆ ಅನುಗುಣವಾಗಿ ಹಿಂಭಾಗದ ಪ್ರೀ ಲೋಡ್ ಅನ್ನು ಅತ್ಯುತ್ತಮವಾಗಿಸಲು ಸವಾರರಿಗೆ ಅನುವು ಮಾಡಿಕೊಡುತ್ತದೆ. ಶೋವಾ ಅವರ ಸ್ಕೈಹೂಕ್ ಎಲೆಕ್ಟ್ರಾನಿಕ್ ಸುಸಜ್ಜಿತ ಸವಾರಿ ಹೊಂದಾಣಿಕೆ ಹೊಂದಿಸುವ ಡೇಟಾವನ್ನು ವಿಶ್ಲೇಷಿಸುತ್ತದೆ.

ಹೊಸ ಫೀಚರ್ ಹೊಂದಲಿದೆ 2021ರ ಕವಾಸಕಿ ವರ್ಸಿಸ್ 1000 ಎಸ್‌ಇ ಬೈಕ್

ಕವಾಸಕಿ ಕಂಪನಿಯ ಪ್ರಕಾರ, ಸ್ಕೈಹೂಕ್ ಸಸ್ಪೆಂಕ್ಢನ್ ಡ್ಯಾಂಪಿಂಗ್ ಫೋರ್ಸ್ ಅನ್ನು ಮಾರ್ಪಡಾಗಿ ರಸ್ತೆ ಗುಂಡಿಗಳನ್ನು ಮತ್ತು ಹಂಪ್ ಗಳಲ್ಲಿ ಸರಾಗವಾಗಿ ಸಾಗಲು ಅನುವು ಮಾಡಿಕೊಡುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಫೀಚರ್ ಹೊಂದಲಿದೆ 2021ರ ಕವಾಸಕಿ ವರ್ಸಿಸ್ 1000 ಎಸ್‌ಇ ಬೈಕ್

ಕವಾಸಕಿ ವರ್ಸಿಸ್ 1000 ಎಸ್‌ಇ ಬೈಕ್ ಪರಿಸ್ಥಿತಿಗಳನ್ನು ಲೆಕ್ಕಿಸದೆ ಬೈಕ್‌ ಅನ್ನು ಸಂಪೂರ್ಣವಾಗಿ ಸಮತೋಲನ ಮಟ್ಟದಲ್ಲಿಡಲು ಸ್ಕೈಹೂಕ್ ಸಸ್ಪೆಂಕ್ಷನ್ ಸೆಟಪ್ ಸಹಾಯ ಮಾಡುತ್ತದೆ.

ಹೊಸ ಫೀಚರ್ ಹೊಂದಲಿದೆ 2021ರ ಕವಾಸಕಿ ವರ್ಸಿಸ್ 1000 ಎಸ್‌ಇ ಬೈಕ್

ಸಸ್ಪೆಂಕ್ಷನ್ ಅದರ ವೇಗ ಮತ್ತು ದೂರವನ್ನು ಅಳೆಯಲು ಸಿಸ್ಟಂ ಸೆನ್ಸಾರ್ ಗಳನ್ನು ಬಳಸುತ್ತದೆ. ಸೆನ್ಸರ್ ಗಳ ನಡುವಿನ ಅಂತರವು ಬದಲಾದಂತೆ, ಎಲೆಕ್ಟ್ರಾನಿಕ್ ಸ್ಕೈಹೂಕ್ ಸಸ್ಪೆಂಕ್ಷನ್ ಅಗತ್ಯವಿರುವ ಡ್ಯಾಂಪಿಂಗ್ ಹೊಂದಾಣಿಕೆಯ ಪ್ರಮಾಣವನ್ನು ಲೆಕ್ಕಾಚಾರ ಮಾಡುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಫೀಚರ್ ಹೊಂದಲಿದೆ 2021ರ ಕವಾಸಕಿ ವರ್ಸಿಸ್ 1000 ಎಸ್‌ಇ ಬೈಕ್

ಇನ್ನು ಹೊಸ ಕವಾಸಕಿ ವರ್ಸಿಸ್ 1000 ಎಸ್‌ಇ ಬೈಕಿನಲ್ಲಿ ಎಂಜಿನ್, ಇನ್ಸ್ಟ್ರುಮೆಂಟ್ ಕನ್ಸೋಲ್ ಮತ್ತು ಸ್ಟೈಲಿಂಗ್ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲ.ಹೊಸ ಕವಾಸಕಿ ವರ್ಸಿಸ್ 1000 ಎಸ್‌ಇ ಬೈಕ್ ಎರಡು ಬಣ್ಣಗಳಲ್ಲಿ ಲಭ್ಯವಿದೆ.

ಹೊಸ ಫೀಚರ್ ಹೊಂದಲಿದೆ 2021ರ ಕವಾಸಕಿ ವರ್ಸಿಸ್ 1000 ಎಸ್‌ಇ ಬೈಕ್

ಇನ್ನು ಕವಾಸಕಿ ಇಂಡಿಯಾ ಮೋಟಾರ್‌ಸೈಕಲ್ ತನ್ನ ಹೊಸ ವರ್ಸಿಸ್ 650 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. 2020ರ ಕವಾಸಕಿ ವರ್ಸಿಸ್ 650 ಜಪಾನಿನ ಬ್ರಾಂಡ್‌ನ ಪೋರ್ಟ್ಫೋಲಿಯೊದಲ್ಲಿ ಅತ್ಯಂತ ಉತ್ತಮ ಅಡ್ವೆಂಚರ್ ಮಾದರಿಯಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಹೊಸ ಫೀಚರ್ ಹೊಂದಲಿದೆ 2021ರ ಕವಾಸಕಿ ವರ್ಸಿಸ್ 1000 ಎಸ್‌ಇ ಬೈಕ್

ಈ ಹೊಸ 2020ರ ಕವಾಸಕಿ ವರ್ಸಿಸ್ 650 ಬೈಕಿನಲ್ಲಿ 649 ಸಿಸಿ, ಲಿಕ್ವಿಡ್-ಕೂಲ್ಡ್ ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8500 ಆರ್‌ಪಿಎಂನಲ್ಲಿ 65 ಬಿಹೆಚ್‌ಪಿ ಪವರ್ ಮತ್ತು 7000 ಆರ್‌ಪಿಎಂನಲ್ಲಿ 61 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

ಹೊಸ ಫೀಚರ್ ಹೊಂದಲಿದೆ 2021ರ ಕವಾಸಕಿ ವರ್ಸಿಸ್ 1000 ಎಸ್‌ಇ ಬೈಕ್

ಇನ್ನು ಹೊಸ ವರ್ಸಿಸ್ 650 ಬೈಕಿನಲ್ಲಿ ನಿಂಜಾ 650 ಮಾದರಿಯಲ್ಲಿರುವಂತಹ ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಕಲರ್ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಂತಹ ಫೀಚರ್ ಗಳನ್ನು ನೀಡಲಾಗಿಲ್ಲ.

Most Read Articles

Kannada
English summary
2021 Kawasaki Versys 1000 SE Gets Skyhook Suspension. Read In Kannada.
Story first published: Saturday, October 3, 2020, 19:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X