ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಬೈಕುಗಳಿವು

ಕರೋನಾ ವೈರಸ್ ಸೋಂಕಿನಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಪರಿಣಾಮ ಬೀರಿದೆ. ಆಟೋಮೊಬೈಲ್ ಕ್ಷೇತ್ರಕ್ಕೆ ಸಾವಿರಾರು ಕೋಟಿ ನಷ್ಟಗಳಾಗಿದೆ. ಇನ್ನು ಲಾಕ್ ಡೌನ್ ಸಡಿಲಿಕೆ ಮಾಡಿರುವುದರಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ಕೊಂಚ ರಿಲೀಫ್ ಸಿಕ್ಕಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಬೈಕುಗಳಿವು

ಹಲವಾರು ವಾಹನ ಉತ್ಪಾದನಾ ಕಂಪನಿಗಳು ಉತ್ಪಾದನೆ ಮತ್ತು ಮಾರಾಟವನ್ನು ಪುನಾರಂಭಿಸಿದೆ. ಹಲವಾರು ಜನಪ್ರಿಯ ಕಂಪನಿಗಳು ತಮ್ಮ ಸರಣಿಯಲ್ಲಿರುವ ವಾಹನಗಳ ಬಿಡುಗಡೆಯನ್ನು ಮುಂದೂಡಲಾಗಿತ್ತು. ಇನ್ನು ಕೆಲವು ಕಂಪನಿಗಳು ವಾಹನಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಬಹುನಿರೀಕ್ಷಿತ ಬೈಕುಗಳು ಬಿಡುಗಡೆಯಾಗಲಿದೆ. ಮುಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಬೈಕುಗಳ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಬೈಕುಗಳಿವು

ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಫೈರ್‌ಬಾಲ್

ಚೆನ್ನೈ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‍ಫೀಲ್ಡ್ ಕಂಪನಿಯು ತನ್ನ ಹೊಸ ಮೆಟಿಯೋರ್ 350 ಫೈರ್‌ಬಾಲ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ರಾಯಲ್ ಎನ್‍ಫೀಲ್ಡ್ ಮೆಟಿಯೋರ್ 350 ಫೈರ್‌ಬಾಲ್ ಬಹುನಿರೀಕ್ಷಿತ ಬೈಕುಗಳಲ್ಲಿ ಒಂದಾಗಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಬೈಕುಗಳಿವು

ಹೊಸ ಫೀಚರ್ಸ್‍ಗಳನ್ನು ಹೊರತುಪಡಿಸಿ ಈ ರಾಯಲ್ ಎನ್‌ಫೀಲ್ಡ್ ಮೆಟಿಯೋರ್ 350 ಫೈರ್‌ಬಾಲ್ ಬೈಕನ್ನು ಕೂಡ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ. ಈ ಬೈಕಿನಲ್ಲಿ 346 ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಫ್ರಿ ಕ್ಯಾಟಲಿಕ್ ಕರ್ನವಾಟರ್ ಅನ್ನು ಎಕ್ಸಾಸ್ಟ್ ಸಿಸ್ಟಂನೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಬೈಕುಗಳಿವು

ಟಿವಿಎಸ್ ಝೆಪ್ಲಿನ್

2018ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಝೆಪ್ಲಿನ್ ಹೆಸರಿನೊಂದಿಗೆ ಅನಾವರಣಗೊಂಡಿದ್ದ ಕ್ರೂಸರ್ ಬೈಕ್‌ನ್ನು ಇದೀಗ ಬಿಡುಗಡೆ ಮಾಡುತ್ತಿರುವ ಟಿವಿಎಸ್ ಕಂಪನಿಯು ರೊನಿನ್ ಹೆಸರಿನೊಂದಿಗೆ ಬಿಡುಗಡೆಗೊಳಿಸಬಹುದು. ಬಜಾಜ್ ಅವೆಂಜರ್‌ಗಿಂತಲೂ ಉತ್ತಮವಾದ ಹೈ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು ಥಂಡರ್‌ಬರ್ಡ್ 350 ಆವೃತ್ತಿಗಿಂತಲೂ ಕಡಿಮೆ ಬೆಲೆಯಲ್ಲಿ ಝೆಪ್ಲಿನ್ ಕ್ರೂಸರ್ ಕಾನ್ಸೆಪ್ಟ್ ಬೈಕ್ ಅನ್ನು ನಿರ್ಮಾಣ ಮಾಡಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಬೈಕುಗಳಿವು

ಕೆಟಿಎಂ 250

ಅಡ್ವೆಂಚರ್ ಕೆಟಿಎಂ ಕಂಪನಿಯು ಭಾರತದಲ್ಲಿ 250 ಅಡ್ವೆಂಚರ್ ಬೈಕ್ ಅನ್ನು ಬಿಡುಗಡೆಗೊಳಿಸಲಿದೆ. 250 ಅಡ್ವೆಂಚರ್ ಬೈಕ್ ಅನ್ನು ಕೆಟಿಎಂ ಕಂಪನಿಯು ಅಡ್ವೆಂಚರ್ ಬೈಕ್ ಸೆಗ್‍‍ಮೆಂಟಿನ ಎಂಟ್ರಿ ಲೆವೆಲ್‍‍ನಲ್ಲಿ ಬಿಡುಗಡೆಗೊಳಿಸಲಿದೆ. ಕೆಟಿಎಂ 250 ಅಡ್ವೆಂಚರ್ ಬೈಕ್, 390 ಅಡ್ವೆಂಚರ್ ಬೈಕಿನಲ್ಲಿರುವಂತಹ ವಿನ್ಯಾಸ, ಚಾಸೀಸ್ ಹಾಗೂ ಫ್ರೇಂಗಳನ್ನು ಹೊಂದಿರಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಬೈಕುಗಳಿವು

250 ಬೈಕ್, 390 ಅಡ್ವೆಂಚರ್ ಬೈಕಿಗಿಂತ ವಿಭಿನ್ನವಾದ ಬಾಡಿ ಗ್ರಾಫಿಕ್ಸ್ ನೊಂದಿಗೆ ಬರಲಿದೆ. ಕೆಟಿಎಂ 250 ಬೈಕ್ ಹಾಲೊಜೆನ್ ಹೆಡ್‍‍ಲ್ಯಾಂಪ್ ಯುನಿಟ್ ಹೊಂದಿದ್ದರೆ, 390 ಅಡ್ವೆಂಚರ್ ಬೈಕ್ ಪೂರ್ಣ ಪ್ರಮಾಣದ ಎಲ್‍ಇ‍‍ಡಿ ಯುನಿಟ್ ಹೊಂದಿದೆ. ಕೆಟಿಎಂ 250 ಬೈಕಿನಲ್ಲಿ 390 ಅಡ್ವೆಂಚರ್ ಬೈಕಿನಲ್ಲಿರುವಂತಹ ಬಾಡಿ ಪ್ಯಾನೆಲ್, ಬೆಲ್ಲಿ ಪ್ಯಾನ್, ಫ್ಯೂಯಲ್ ಟ್ಯಾಂಕ್ ಎಕ್ಸ್ ಟೆಂಷನ್, ರೇಡಿಯೇಟರ್ ಶ್ರೌಡ್ ಹಾಗೂ ಟೇಲ್ ಸೆಕ್ಷನ್‍‍ಗಳಿವೆ. ಆದರೆ ಈ ಎರಡೂ ಬೈಕ್‍‍ಗಳಲ್ಲಿ ಸಣ್ಣ ಪುಟ್ಟ ಬದಲಾವಣೆಗಳಿರಲಿವೆ.

MOST READ: ಬಿಡುಗಡೆಯಾಯ್ತು ಬಹುನೀರಿಕ್ಷಿತ ಹೊಸ ಯಮಹಾ ಬೈಕುಗಳ ಟೀಸರ್

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಬೈಕುಗಳಿವು

ಹೀರೋ ಎಕ್ಸ್‌ಪಲ್ಸ್ 300

ಹೀರೋ ಎಕ್ಸ್‌ಪಲ್ಸ್ 200 ಅಡ್ವೆಂಚರ್ ಬೈಕ್ ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ. ಇದರಿಂದಾಗಿ ಕಂಪನಿಯು ಅಡ್ವೆಂಚರ್ ಬೈಕು ಪ್ರಿಯರಿಗಾಗಿ ಹೊಸ ಹೀರೋ ಎಕ್ಸ್‌ಪಲ್ಸ್ 300 ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಬೈಕುಗಳಿವು

ಸುಜುಕಿ ವಿ-ಸ್ಟ್ರೋಮ್ 250

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಲಿಮಿಟೆಡ್ ತನ್ನ ವಿ-ಸ್ಟ್ರೋಮ್ 250 ಅಡ್ವೆಂಚರ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ವಿ-ಸ್ಟ್ರೋಮ್ ಸರಣಿಯ ಅಡ್ವೆಂಚರ್ ಬೈಕ್‍‍ಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಗಳಿಸಿವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಬೈಕುಗಳಿವು

ಹೊಸ ವಿ-ಸ್ಟ್ರೋಮ್ 250 ಬೈಕಿನಲ್ಲಿ 248 ಸಿಸಿ ಲಿಕ್ವಿಡ್ ಕೂಲ್ಡ್ ಫೋರ್-ಸ್ಟ್ರೋಕ್ ಪ್ಯಾರೆಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 8,000 ಆರ್‍‍ಪಿಎಂನಲ್ಲಿ 25 ಬಿ‍‍ಹೆಚ್‍‍ಪಿ ಪವರ್ ಮತ್ತು 6,500 ಆರ್‍‍ಪಿಎಂನಲ್ಲಿ 23.4 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಗೇರ್‍‍‍ಬಾಕ್ಸ್ ಅನ್ನು ಅಳವಡಿಸಲಿದೆ.

Most Read Articles

Kannada
English summary
5 Most Anticipated Bike Launches Of This Year. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X