ತನ್ನ ಪ್ರಮುಖ ಇವಿ ಸ್ಕೂಟರ್‌ಗಳಲ್ಲಿ ಹೊಸ ವೆರಿಯೆಂಟ್‌ಗಳನ್ನು ಪರಿಚಯಿಸಿದ ಆಂಪಿಯರ್

ದೇಶಿಯ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಆಂಪಿಯರ್ ಕಂಪನಿಯು ತನ್ನ ಪ್ರಮುಖ ಸ್ಕೂಟರ್ ಮಾದರಿಗಳಲ್ಲಿ ಹೊಸ ವೆರಿಯೆಂಟ್‌ಗಳನ್ನು ಸೇರ್ಪಡೆಗೊಳಿಸಿದ್ದು, ಹೊಸ ವೆರಿಯೆಂಟ್‌ಗಳು ಅಧಿಕ ಮೈಲೇಜ್, ಅಧಿಕ ಮಟ್ಟದ ಲೋಡಿಂಗ್ ಸಾಮರ್ಥ್ಯ ಹೊಂದಿವೆ.

ತನ್ನ ಪ್ರಮುಖ ಇವಿ ಸ್ಕೂಟರ್‌ಗಳಲ್ಲಿ ಹೊಸ ವೆರಿಯೆಂಟ್‌ಗಳನ್ನು ಪರಿಚಯಿಸಿದ ಆಂಪಿಯರ್

ಆಂಪಿಯರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಇವಿ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಬಿಡುಗಡೆ ಮಾಡಿರುವ ಹೊಸ ವೆರಿಯೆಂಟ್‌ಗಳು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸ್ಕೂಟರ್‌ಗಳಿಂತೂ ಹೈ ಎಂಡ್ ಮಾದರಿಯಾಗಿರಲಿವೆ. ಗ್ರಾಹಕರ ಬೇಡಿಕೆಯೆಂತೆ ಹೊಸ ಸ್ಕೂಟರ್‌ಗಳಲ್ಲಿ ಹೆಚ್ಚಿನ ಮಟ್ಟದ ಮೈಲೇಜ್ ಪ್ರೇರಿತ ಬ್ಯಾಟರಿ ಸೌಲಭ್ಯ, ಹೆಚ್ಚಿನ ಮಟ್ಟದ ಲೋಡಿಂಗ್ ಸಾಮಾರ್ಥ್ಯವನ್ನು ನೀಡಲಾಗಿದೆ.

ತನ್ನ ಪ್ರಮುಖ ಇವಿ ಸ್ಕೂಟರ್‌ಗಳಲ್ಲಿ ಹೊಸ ವೆರಿಯೆಂಟ್‌ಗಳನ್ನು ಪರಿಚಯಿಸಿದ ಆಂಪಿಯರ್

ಹೊಸ ವೆರಿಯೆಂಟ್‌ಗಳನ್ನು ರಿಯೋ, ವಿ48, ಮ್ಯಾಗ್ನಸ್ 60 ಮತ್ತು ಜೀಲ್ ಮಾದರಿಗಳಲ್ಲಿ ಪರಿಚಯಿಸಲಾಗಿದ್ದು, ರಿಯೋ ಪ್ಲಸ್, ರಿಯೋ ಎಲೈಟ್, ವಿ48 ಪ್ಲಸ್, ಮ್ಯಾಗ್ನಸ್ 60 ಸ್ಲೋ ಸ್ಪೀಡ್ ಮತ್ತು ಜೀಲ್ ಇಎಕ್ಸ್ ಮಾದರಿಗಳನ್ನು ಬಿಡುಗಡೆ ಮಾಡಲಾಗಿದೆ.

ತನ್ನ ಪ್ರಮುಖ ಇವಿ ಸ್ಕೂಟರ್‌ಗಳಲ್ಲಿ ಹೊಸ ವೆರಿಯೆಂಟ್‌ಗಳನ್ನು ಪರಿಚಯಿಸಿದ ಆಂಪಿಯರ್

ದೆಹಲಿ ಎಕ್ಸ್‌ಶೋರೂಂ ಪ್ರಕಾರ ರಿಯೋ ಪ್ಲಸ್ ಮಾದರಿಯು ರೂ.42,490, ರಿಯೋ ಎಲೈಟ್ ರೂ.42,999, ವಿ48 ಪ್ಲಸ್ ರೂ.36,190, ಮ್ಯಾಗ್ನಸ್ 60 ಸ್ಲೋ ಸ್ಪೀಡ್ ರೂ.49,999 ಮತ್ತು ಜೀಲ್ ಇಎಕ್ಸ್ ಮಾದರಿಯು ರೂ.66,949 ಬೆಲೆ ಹೊಂದಿದೆ.

ತನ್ನ ಪ್ರಮುಖ ಇವಿ ಸ್ಕೂಟರ್‌ಗಳಲ್ಲಿ ಹೊಸ ವೆರಿಯೆಂಟ್‌ಗಳನ್ನು ಪರಿಚಯಿಸಿದ ಆಂಪಿಯರ್

ಹೊಸ ಇವಿ ಸ್ಕೂಟರ್ ವೆರಿಯೆಂಟ್‌ಗಳಲ್ಲಿ ಮೈಲೇಜ್ ಹೆಚ್ಚಳಕ್ಕಾಗಿ ಲೀಥಿಯಂ ಮತ್ತು ಲೀಡ್ ಆ್ಯಸಿಡ್ ಬ್ಯಾಟರಿ ಮಾದರಿಗಳನ್ನು ಅಳವಡಿಸಲಾಗಿದ್ದು, ಪ್ರತಿ ಚಾರ್ಜ್‌ಗೆ ಗರಿಷ್ಠ 65 ಕಿ.ಮೀ ಮೈಲೇಜ್ ರೇಂಜ್ ಪಡೆದುಕೊಂಡಿದೆ.

ತನ್ನ ಪ್ರಮುಖ ಇವಿ ಸ್ಕೂಟರ್‌ಗಳಲ್ಲಿ ಹೊಸ ವೆರಿಯೆಂಟ್‌ಗಳನ್ನು ಪರಿಚಯಿಸಿದ ಆಂಪಿಯರ್

ಅಪ್‌ಗ್ರೇಡ್ ಮಾದರಿಗಳಲ್ಲಿ ಶೇ.10 ಮೈಲೇಜ್ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, ಗ್ರಾಹಕರ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಸ ಮಾದರಿಗಳಲ್ಲಿ ಜೋಡಣೆ ಮಾಡಲಾಗಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ತನ್ನ ಪ್ರಮುಖ ಇವಿ ಸ್ಕೂಟರ್‌ಗಳಲ್ಲಿ ಹೊಸ ವೆರಿಯೆಂಟ್‌ಗಳನ್ನು ಪರಿಚಯಿಸಿದ ಆಂಪಿಯರ್

ಇನ್ನು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಬೆಂಗಳೂರಿನ ಆಂಪಿಯರ್ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೆಚ್ಚಳಕ್ಕಾಗಿ ಹೊಸ ಯೋಜನೆಯೊಂದಕ್ಕೆ ಚಾಲನೆ ನೀಡಿದ್ದು, ಕ್ರೆಡರ್ ಕಂಪನಿ ಜೊತೆಗೂಡಿ ಎಕ್ಸ್‌ಚೆಂಜ್ ಆಫರ್ ನೀಡುತ್ತಿದೆ.

ತನ್ನ ಪ್ರಮುಖ ಇವಿ ಸ್ಕೂಟರ್‌ಗಳಲ್ಲಿ ಹೊಸ ವೆರಿಯೆಂಟ್‌ಗಳನ್ನು ಪರಿಚಯಿಸಿದ ಆಂಪಿಯರ್

ಕ್ರೆಡರ್ ಕಂಪನಿಯು ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ವಿವಿಧ ರಾಜ್ಯಗಳಲ್ಲಿ ಮಾರಾಟ ಮಳಿಗೆಗಳನ್ನು ಹೊಂದಿದೆ. ಇದೀಗ ಆಂಪಿಯರ್ ಜೊತೆಗೂಡಿ ಹೊಸ ಯೋಜನೆಗೆ ಚಾಲನೆ ನೀಡಿರುವ ಕ್ರೆಡರ್ ಕಂಪನಿಯು ಸಾಮಾನ್ಯ ಪೆಟ್ರೋಲ್ ಬೈಕ್ ಮತ್ತು ಸ್ಕೂಟರ್ ಮಾದರಿಗಳೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳ ಎಕ್ಸ್‌ಚೆಂಜ್ ಆಫರ್ ನೀಡುತ್ತಿದ್ದು, ಆಸಕ್ತ ಗ್ರಾಹಕರು ತಮ್ಮ ಸಾಮಾನ್ಯ ದ್ವಿಚಕ್ರ ವಾಹನಗಳನ್ನು ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‌ನೊಂದಿಗೆ ಬದಲಾಯಿಸಿಕೊಳ್ಳಲು ಸುವರ್ಣಾವಕಾಶ ಎನ್ನಬಹುದು.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ತನ್ನ ಪ್ರಮುಖ ಇವಿ ಸ್ಕೂಟರ್‌ಗಳಲ್ಲಿ ಹೊಸ ವೆರಿಯೆಂಟ್‌ಗಳನ್ನು ಪರಿಚಯಿಸಿದ ಆಂಪಿಯರ್

ಕ್ರೆಡರ್ ಕಂಪನಿಯು ಸಾಮಾನ್ಯ ಬೈಕ್‌ಗಳನ್ನು ಆಕರ್ಷಕ ಬೆಲೆಗಳೊಂದಿಗೆ ಖರೀದಿ ಮಾಡಲಿದ್ದು, ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಸುಲಭವಾಗಿ ಎಕ್ಸ್‌ಚೆಂಜ್ ಆಫರ್ ನೀಡಲಿದೆ. ಜೊತೆಗೆ ಕರೋನಾ ವೈರಸ್ ಹಿನ್ನಲೆಯಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಹೊಸ ಸೇವೆಗಳನ್ನು ಒದಗಿಸಲಿದೆ.

Most Read Articles

Kannada
English summary
Ampere Launches New Electric Scooter Variants. Read in Kannada.
Story first published: Wednesday, September 30, 2020, 21:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X