ವೈರಸ್ ಭೀತಿ ತಪ್ಪಿಸಲು ಲೀಸ್ ಇವಿ ಸ್ಕೂಟರ್ ಯೋಜನೆ ಆರಂಭಿಸಿದ ಆಂಪಿಯರ್

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಕಂಪನಿಯು ದೇಶಾದ್ಯಂತ ಮಾರಾಟ ಕೇಂದ್ರಗಳನ್ನು ತೆರೆಯುತ್ತಿದ್ದು, ಹೊಸ ಸ್ಕೂಟರ್ ಮಾರಾಟ ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ಹೊಸ ಯೋಜನೆಗಳಿಗೆ ಚಾಲನೆ ನೀಡಿದೆ.

ವೈರಸ್ ಭೀತಿ ತಪ್ಪಿಸಲು ಲೀಸ್ ಇವಿ ಸ್ಕೂಟರ್ ಯೋಜನೆ ಆರಂಭಿಸಿದ ಆಂಪಿಯರ್

ಕರೋನಾ ವೈರಸ್‌ನಿಂದಾಗಿ ಸ್ವಂತ ಬಳಕೆಯ ವಾಹನಗಳ ಸಂಖ್ಯೆಯು ಹೆಚ್ಚುತ್ತಿದ್ದು, ಬಹುತೇಕ ಆಟೋ ಕಂಪನಿಗಳು ಹೊಸ ಆಫರ್‌ಗಳ ಮೂಲಕ ವಾಹನ ಮಾರಾಟವನ್ನು ಹೆಚ್ಚಿಸುವತ್ತ ಯೋಜನೆ ರೂಪಿಸಿವೆ. ಜೊತೆಗೆ ವಾಹನ ಖರೀದಿ ಯೋಜನೆಯಿದ್ದರೂ ಸದ್ಯ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲದ ಗ್ರಾಹಕರಿಗಾಗಿ ಲೀಸ್ ಆಯ್ಕೆಗಳನ್ನು ಹೆಚ್ಚಿಸಲಾಗುತ್ತಿದ್ದು, ಆಂಪಿಯರ್ ಕಂಪನಿಯು ಕೂಡಾ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳ ಮೇಲೆ ಗ್ರಾಹಕರ ಬೇಡಿಕೆ ಅನುಸಾರವಾಗಿ ಲೀಸ್ ಆಯ್ಕೆಯನ್ನು ಶುರು ಮಾಡಿದೆ.

ವೈರಸ್ ಭೀತಿ ತಪ್ಪಿಸಲು ಲೀಸ್ ಇವಿ ಸ್ಕೂಟರ್ ಯೋಜನೆ ಆರಂಭಿಸಿದ ಆಂಪಿಯರ್

ವೆಹಿಕಲ್ ಲೀಸ್ ಸ್ಟಾರ್ಟ್ಅಪ್ ಕಂಪನಿಯಾದ ಒಟ್ಟೊ ಕ್ಯಾಪಿಟಲ್ ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಿರುವ ಆಂಪಿಯರ್ ಕಂಪನಿಯು ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಲೀಸ್ ಆಯ್ಕೆ ನೀಡುತ್ತಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ತಿಂಗಳು, ವರ್ಷದ ಆಧಾರದ ಮೇಲೆ ಮಾಲೀಕತ್ವವನ್ನು ಹೊಂದಬಹುದು.

ವೈರಸ್ ಭೀತಿ ತಪ್ಪಿಸಲು ಲೀಸ್ ಇವಿ ಸ್ಕೂಟರ್ ಯೋಜನೆ ಆರಂಭಿಸಿದ ಆಂಪಿಯರ್

ಆಂಪಿಯರ್ ಕಂಪನಿಯು ಹೊಸ ಲೀಸ್ ಕಾರ್ಯಕ್ರಮವನ್ನು ನಮ್ಮ ಬೆಂಗಳೂರಿನಲ್ಲಿ ಅಗಸ್ಟ್ 1ರಿಂದ ಆರಂಭಿಸುವುದಾಗಿ ಹೇಳಿಕೊಂಡಿದ್ದು, ಬೆಂಗಳೂರು ನಂತರ ಗ್ರಾಹಕರ ಪ್ರಕ್ರಿಯೆ ಆಧಾರದ ಮೇಲೆ ಚೆನ್ನೈ, ಪುಣೆ, ದೆಹಲಿ, ಹೈದ್ರಾಬಾದ್ ನಗರಗಳಲ್ಲಿ ವಿಸ್ತರಣೆ ಮಾಡಲಿದೆ.

ವೈರಸ್ ಭೀತಿ ತಪ್ಪಿಸಲು ಲೀಸ್ ಇವಿ ಸ್ಕೂಟರ್ ಯೋಜನೆ ಆರಂಭಿಸಿದ ಆಂಪಿಯರ್

ಗ್ರಾಹಕರು ಆಂಪಿಯರ್ ಗುತ್ತಿಗೆ ಇವಿ ಸ್ಕೂಟರ್‌ಗಳನ್ನು ಒಟ್ಟೊ ಕ್ಯಾಪಿಟಲ್ ವೆಬ್‌ತಾಣ ಮೂಲಕ ಬುಕ್ ಮಾಡಬಹುದು ಇಲ್ಲವೇ ಆಂಪಿಯರ್ ಮಾರಾಟ ಮಳಿಗೆ ನೇರವಾಗಿ ಭೇಟಿ ನೀಡಿ ಬುಕ್ ಕೂಡಾ ಮಾಡಬಹುದಾಗಿದೆ.

ವೈರಸ್ ಭೀತಿ ತಪ್ಪಿಸಲು ಲೀಸ್ ಇವಿ ಸ್ಕೂಟರ್ ಯೋಜನೆ ಆರಂಭಿಸಿದ ಆಂಪಿಯರ್

ಆಂಪಿಯರ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಲೀಸ್ ಯೋಜನೆ ಅಡಿ ಸಾಮಾನ್ಯ ಖರೀದಿಯ ಸಂದರ್ಭದಲ್ಲಿ ಪಾವತಿ ಮಾಡಬಹುದಾದ ಇಎಂಐ ದರಕ್ಕಿಂತ ಅರ್ಧದಷ್ಟು ಮಾತ್ರ ಪಾವತಿ ಮಾಡಬೇಕಿದ್ದು, ವಿವಿಧ ಮಾದರಿಯ ಸ್ಕೂಟರ್ ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾಸಿಕವಾಗಿ ರೂ. 1,110, ರೂ.1,610 ಮತ್ತು ರೂ.2,200 ದರ ನಿಗದಿ ಮಾಡಲಾಗಿದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ವೈರಸ್ ಭೀತಿ ತಪ್ಪಿಸಲು ಲೀಸ್ ಇವಿ ಸ್ಕೂಟರ್ ಯೋಜನೆ ಆರಂಭಿಸಿದ ಆಂಪಿಯರ್

ಕರೋನಾ ವೈರಸ್‌ನಿಂದಾಗಿ ಸಾರ್ವಜನಿಕರು ಸ್ವಂತ ಬಳಕೆಯ ವಾಹನಗಳಿಗೆ ಹೆಚ್ಚು ಆದ್ಯತೆ ನೀಡುತ್ತಿರುವುದೇ ಲೀಸ್ ವಾಹನಗಳ ಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದ್ದು, ಗ್ರಾಹಕರಿಗೂ ಲಾಕ್‌ಡೌನ್ ಆರ್ಥಿಕ ಸಂಕಷ್ಟದ ಸಮಯದಲ್ಲಿ ಸ್ವಂತ ವಾಹನ ಖರೀದಿಯಿಂದಾಗುವ ಆರ್ಥಿಕ ಹೊರೆ ತಪ್ಪಿಸಬಹುದಾಗಿದೆ.

ವೈರಸ್ ಭೀತಿ ತಪ್ಪಿಸಲು ಲೀಸ್ ಇವಿ ಸ್ಕೂಟರ್ ಯೋಜನೆ ಆರಂಭಿಸಿದ ಆಂಪಿಯರ್

ಗ್ರಾಹಕರಿಗೆ ತಮಗೆ ಅವಶ್ಯಕತೆಯಿದ್ದಾಗ ಲೀಸ್ ವಾಹನಗಳನ್ನು ಪಡೆದುಕೊಂಡು ನಂತರ ಬೇಡವಾದಾಗ ಹಿಂದಿರುಗಿಸುವ ಅವಕಾಶವಿದ್ದು, ಇಲ್ಲಿ ಹೊಸ ವಾಹನ ಖರೀದಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳು ಕಡಿಮೆ ಇರುತ್ತದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ವೈರಸ್ ಭೀತಿ ತಪ್ಪಿಸಲು ಲೀಸ್ ಇವಿ ಸ್ಕೂಟರ್ ಯೋಜನೆ ಆರಂಭಿಸಿದ ಆಂಪಿಯರ್

ಇನ್ನು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಯಶಸ್ವಿಯಾಗಿ 12 ವರ್ಷಗಳನ್ನು ಪೂರೈಸಿರುವ ಆಂಪಿಯರ್ ಕಂಪನಿಯು ಇದುವರೆಗೆ 60 ಸಾವಿರ ಇವಿ ಸ್ಕೂಟರ್ ಮಾರಾಟ ಮಾಡಿದ್ದು, 200ಕ್ಕೂ ಹೆಚ್ಚು ಪ್ರಮುಖ ನಗರಗಳಲ್ಲಿ ಮಾರಾಟ ಜಾಲವನ್ನು ಹೊಂದಿದೆ.

ವೈರಸ್ ಭೀತಿ ತಪ್ಪಿಸಲು ಲೀಸ್ ಇವಿ ಸ್ಕೂಟರ್ ಯೋಜನೆ ಆರಂಭಿಸಿದ ಆಂಪಿಯರ್

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಅಧಿಕೃತ ಮಾರಾಟ ಮಳಿಗೆಗಳಿಗಾಗಿ ಸುಮಾರು 900 ಹೊಸ ಅರ್ಜಿಗಳು ಸಲ್ಲಿಕೆಯಾಗಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಳಿಗೆಗಳಿಗೆ ಚಾಲನೆ ನೀಡಲು ಯೋಜನೆ ರೂಪಿಸಲಾಗಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬರಲಿರುವ ಹೊಸ ವಿಮಾ ನೀತಿ..

ವೈರಸ್ ಭೀತಿ ತಪ್ಪಿಸಲು ಲೀಸ್ ಇವಿ ಸ್ಕೂಟರ್ ಯೋಜನೆ ಆರಂಭಿಸಿದ ಆಂಪಿಯರ್

ಆಂಪಿಯರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ರಿಯೋ, ವಿ48, ಜೀಲ್, ರಿಯೋ ಎಲೈಟ್, ಮಾಗ್ನಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ಕಳೆದ ವಾರವಷ್ಟೇ ಹೊಸದಾಗಿ ಮಾಗ್ನಸ್ ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡಿದೆ.

Most Read Articles

Kannada
English summary
Ampere Scooter Starts Lease Program With OTO Capital Details. Read in Kannada.
Story first published: Friday, July 31, 2020, 19:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X