ಸ್ಥಗಿತಗೊಳ್ಳಲಿದೆ ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್

ಎಪ್ರಿಲಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್ ಅನ್ನು ಸ್ಥಗಿತಗೊಳಿಸಲು ಮುಂದಾಗಿದೆ. 125 ಸಿಸಿ ಸೆಗ್ ಮೆಂಟಿನಲ್ಲಿ ಕಂಪನಿಯು ಎಸ್‌ಆರ್ 125 ಹಾಗೂ ಸ್ಟಾರ್ಮ್ 125 ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ.

ಸ್ಥಗಿತಗೊಳ್ಳಲಿದೆ ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್

ಎಪ್ರಿಲಿಯಾ ಕಂಪನಿಯು ಎಸ್ಆರ್ 125 ಸ್ಕೂಟರ್ ಅನ್ನು ಸ್ಥಗಿತಗೊಳಿಸುವ ಬಗ್ಗೆ ಮೂಲಗಳು ತಿಳಿಸಿವೆ. ಎಸ್ಆರ್ ಸರಣಿಯು ಪ್ರೀಮಿಯಂ ಆಗಿದ್ದು, ಕಂಪನಿಯು ಈ ಸರಣಿಯಲ್ಲಿ ಎಸ್ಆರ್ 150 ಸ್ಕೂಟರ್ ಅನ್ನು ಮಾರಾಟ ಮಾಡಲಿದೆ.125 ಸಿಸಿ ಸೆಗ್ ಮೆಂಟಿನಲ್ಲಿ ಸ್ಟಾರ್ಮ್ 125 ಸ್ಕೂಟರ್ ಮಾತ್ರ ಮಾರಾಟವಾಗಲಿದೆ.

ಸ್ಥಗಿತಗೊಳ್ಳಲಿದೆ ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್

ಎಪ್ರಿಲಿಯಾ ಎಸ್ಆರ್ 125 ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿರುವ ಎರಡನೇ ಸ್ಕೂಟರ್ ಆಗಿದೆ. ಎಪ್ರಿಲಿಯಾ ಎಸ್ಆರ್ 150 ಪ್ರೀಮಿಯಂ ಸ್ಕೂಟರಿನ ಪರ್ಫಾಮೆನ್ಸ್ ಉತ್ತಮವಾಗಿರುವ ಕಾರಣಕ್ಕೆ ಕಂಪನಿಯು ಎಸ್ಆರ್ ಸರಣಿಯನ್ನು ಪ್ರೀಮಿಯಂ ಸ್ಕೂಟರ್ ಸರಣಿಯಲ್ಲಿರಿಸಿಕೊಳ್ಳಲು ಬಯಸಿದೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಸ್ಥಗಿತಗೊಳ್ಳಲಿದೆ ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್

ಸ್ಟಾರ್ಮ್ 125 ಸ್ಕೂಟರ್ ಅನ್ನು ಎಸ್ಆರ್ 150 ಸ್ಕೂಟರಿಗೆ ಪರ್ಯಾಯವಾಗಿ ಮಾರಾಟ ಮಾಡಲಾಗುವುದು. ಎಪ್ರಿಲಿಯಾ ಎಸ್ಆರ್ 125 ಸ್ಕೂಟರಿನಲ್ಲಿ ಏರ್-ಕೂಲ್ಡ್, ಸಿಂಗಲ್ ಸಿಲಿಂಡರ್ 125 ಸಿಸಿ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 9.5 ಬಿಹೆಚ್‌ಪಿ ಪವರ್ ಹಾಗೂ 10.6 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಸ್ಥಗಿತಗೊಳ್ಳಲಿದೆ ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್

ಎಪ್ರಿಲಿಯಾ ಎಸ್ಆರ್ 125 ಸ್ಕೂಟರಿನಲ್ಲಿರುವ ಈ ಎಂಜಿನ್ ಸಿವಿಟಿ ಗೇರ್ ಬಾಕ್ಸ್ ಹೊಂದಿದೆ. ಎಪ್ರಿಲಿಯಾ ಎಸ್ಆರ್ 125 ಸ್ಕೂಟರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 115 ಕಿ.ಮೀಗಳಾಗಿದೆ. ಈ ಸ್ಕೂಟರ್ ಅನ್ನು ಹೆಚ್ಚು ಪರ್ಫಾಮೆನ್ಸ್ ನೀಡುತ್ತದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಸ್ಥಗಿತಗೊಳ್ಳಲಿದೆ ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್

ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್ 0 - 60 ಕಿ.ಮೀ ವೇಗವನ್ನು ಕೇವಲ 5.8 ಸೆಕೆಂಡುಗಳಲ್ಲಿ ಆಕ್ಸಲರೇಟ್ ಮಾಡುತ್ತದೆ. ಎಪ್ರಿಲಿಯಾ ಎಸ್ಆರ್ 125 ಅನ್ನು ಸ್ಪೋರ್ಟ್ ಸ್ಕೂಟರ್ ಆಗಿ ಬಿಡುಗಡೆಗೊಳಿಸಲಾಗಿತ್ತು.

ಸ್ಥಗಿತಗೊಳ್ಳಲಿದೆ ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್

ಸ್ಪೋರ್ಟಿ ಸ್ಕೂಟರ್ ಆಗಿರುವುದರಿಂದ ಈ ಸ್ಕೂಟರ್ ಹೆಚ್ಚು ಮೈಲೇಜ್ ನೀಡುವುದಿಲ್ಲ. ಈ ಸ್ಕೂಟರ್ ಪ್ರತಿ ಲೀಟರ್‌ ಪೆಟ್ರೋಲಿಗೆ 37 ಕಿ.ಮೀ ಮೈಲೇಜ್ ನೀಡುತ್ತದೆ. ಎಪ್ರಿಲಿಯಾ ಎಸ್ಆರ್ 125 ಸ್ಕೂಟರಿನಲ್ಲಿ 6.5 ಲೀಟರಿನ ಫ್ಯೂಯಲ್ ಟ್ಯಾಂಕ್ ಅಳವಡಿಸಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಸ್ಥಗಿತಗೊಳ್ಳಲಿದೆ ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್

122 ಕೆ.ಜಿ ತೂಕವನ್ನು ಹೊಂದಿರುವ ಎಪ್ರಿಲಿಯಾ ಎಸ್‌ಆರ್‌125 ಸ್ಕೂಟರ್ ಅನ್ನು ಆರಾಮದಾಯಕವಾಗಿ ಚಾಲನೆ ಮಾಡಬಹುದು. ಈ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.65,315 ಗಳಾಗಿದೆ.

Most Read Articles

Kannada
English summary
Aprilia company to stop SR 125 scooters. Read in Kannada.
Story first published: Friday, September 4, 2020, 12:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X