ಮತ್ತಷ್ಟು ಹೊಸ ಪ್ರೀಮಿಯಂ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ ಎಪ್ರಿಲಿಯಾ

ದೇಶಿಯ ಮಾರುಕಟ್ಟೆಯಲ್ಲಿ ಕಳೆದ 5 ವರ್ಷಗಳಲ್ಲಿ ಪ್ರೀಮಿಯಂ ಬೈಕ್ ಮಾದರಿಗಳ ಮಾರಾಟವು ಸಾಕಷ್ಟು ಬೆಳವಣಿಗೆ ಕಂಡಿದ್ದು, ಹಲವು ಹೊಸ ಬೈಕ್ ಉತ್ಪಾದನಾ ಕಂಪನಿಗಳು ವಿವಿಧ ಮಾದರಿಯ ಪ್ರೀಮಿಯಂ ಸೌಲಭ್ಯವುಳ್ಳ ಸ್ಟ್ರಿಟ್ ಪೈಟರ್ ಬೈಕ್‌ಗಳನ್ನು ಬಿಡುಗಡೆಗೊಳಿಸಿ ಯಶಸ್ವಿಯಾಗಿವೆ.

ಹೊಸ ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಎಪ್ರಿಲಿಯಾ

ಇಟಾಲಿಯನ್ ಪ್ರೀಮಿಯಂ ಬೈಕ್ ಉತ್ಪಾದನಾ ಕಂಪನಿಯಾಗಿರುವ ಎಪ್ರಿಲಿಯಾ ಕೂಡಾ ಇದೇ ನಿಟ್ಟಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಹಲವು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿದ್ದು, 300ಸಿಸಿ ಯಿಂದ 400ಸಿಸಿ ಎಂಜಿನ್ ಪ್ರೇರಿತ ವಿವಿಧ ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆ ಹೊಂದಿದೆ. ಹೊಸ ಬೈಕ್‌ಗಳ ಬಿಡುಗಡೆ ಕುರಿತಂತೆ ಮಾತಾನಾಡಿರುವ ಎಪ್ರಿಲಿಯಾ ಮಾತೃಸಂಸ್ಥೆಯಾದ ಪಿಯಾಜಿಯೊ ಇಂಡಿಯಾ ಎಂಡಿ ಡಿಯಾಗೋ ಗ್ರಾಫಿ ಅವರು ಶೀಘ್ರದಲ್ಲೇ ವಿವಿಧ ಮಾದರಿಯ ಹಲವು ಪ್ರೀಮಿಯಂ ಬೈಕ್ ಬೈಕ್ ಬಿಡುಗಡೆಯಾಗಲಿವೆ ಎಂದಿದ್ದಾರೆ.

ಹೊಸ ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಎಪ್ರಿಲಿಯಾ

2018ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾಗಿದ್ದ ಆರ್‌ಎಸ್ 150 ಮತ್ತು ಟುವನೊ 150 ಬೈಕ್ ಮಾದರಿಗಳ ಬಿಡುಗಡೆ ಯೋಜನೆಯನ್ನು ಕೈಬಿಟ್ಟಿರುವ ಎಪ್ರಿಲಿಯಾ ಕಂಪನಿಯು 300ಸಿಸಿಯಿಂದ 400ಸಿಸಿ ಬೈಕ್ ಮಾದರಿಗಳ ಮೇಲೆ ಗಮನಹರಿಸಿದೆ.

ಹೊಸ ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಎಪ್ರಿಲಿಯಾ

ಆರ್‌ಎಸ್ 150 ಮತ್ತು ಟುವನೊ 150 ಬೈಕ್ ಮಾದರಿಗಳು 150ಸಿಸಿ ಬೈಕ್ ಮಾದರಿಗಳಾಗಿದ್ದು, ಎಪ್ರಿಲಿಯಾ ಕಂಪನಿಯು ಬ್ರಾಂಡ್ ಮೌಲ್ಯ ಹೆಚ್ಚಿಸುವ ನಿಟ್ಟಿನಲ್ಲಿ 150ಸಿಸಿ ಬೈಕ್ ಬಿಡುಗಡೆ ಮಾಡದಿರಲು ನಿರ್ಧರಿಸಿದೆ. ಬದಲಾಗಿ 300ಸಿಸಿಯಿಂದ 400ಸಿಸಿ ಎಂಜಿನ್ ಪ್ರೇರಿತ ಬೈಕ್ ಮಾದರಿಗಳನ್ನು ಅಭಿವೃದ್ದಿಗೊಳಿಸುವುದಾಗಿ ಹೇಳಿಕೊಂಡಿದ್ದು, ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಹೊಸ ಬೈಕ್‌ಗಳು ಮಾರುಕಟ್ಟೆ ಪ್ರವೇಶಿಸಲಿವೆ.

ಹೊಸ ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಎಪ್ರಿಲಿಯಾ

ಮತ್ತೊಂದು ವಿಶೇಷವೆಂದರೆ ಹೊಸ ಬೈಕ್‌ಗಳು ಸಂಪೂರ್ಣವಾಗಿ ಭಾರತದಲ್ಲಿ ನಿರ್ಮಾಣವಾಗುವುದರ ಜೊತೆಗೆ ಏಷ್ಯಾದ ಪ್ರಮುಖ ರಾಷ್ಟ್ರಗಳಿಗೆ ಇಲ್ಲಿಂದಲೇ ರಫ್ತುಗೊಳ್ಳಲಿದ್ದು, ಇದಕ್ಕಾಗಿ ಉತ್ಪದನಾ ಘಟಕ ವಿಸ್ತರಣೆಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.

ಹೊಸ ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಎಪ್ರಿಲಿಯಾ

ಹೊಸ ಬೈಕ್‌ಗಳ ವಿನ್ಯಾಸ ಮತ್ತು ಬೆಲೆ ಕುರಿತಂತೆ ಗ್ರಾಹಕರ ಅಭಿರುಚಿಗಳ ಬಗೆಗೆ ಈಗಾಗಲೇ ಮಾರುಕಟ್ಟೆ ಅಧ್ಯಯನ ನಡೆಸಿರುವ ಎಪ್ರಿಲಿಯಾ ಕಂಪನಿಯು ತನ್ನ ಜನಪ್ರಿಯ ಸೂಪರ್ ಬೈಕ್ ಮಾದರಿಗಳ ಪ್ರೇರಣೆಯೊಂದಿಗೆ ಹೊಸ ಬೈಕ್‌ಗಳನ್ನು ಅಭಿವೃದ್ದಿಪಡಿಸಲಿದೆ.

MOST READ: 300 ಕಿ.ಮೀ ಸ್ಪೀಡ್‌ನಲ್ಲಿ ಬೈಕ್ ರೈಡ್ ಮಾಡಿದವನನ್ನು ಕೊನೆಗೂ ಲಾಕ್ ಮಾಡಿದ ಬೆಂಗಳೂರು ಪೊಲೀಸರು

ಹೊಸ ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಎಪ್ರಿಲಿಯಾ

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಸ್ಕೂಟರ್ ಮಾರಾಟದೊಂದಿಗೆ ಆರ್‌ಎಸ್‌ವಿ4 1100 ಫ್ಯಾಕ್ಟರಿ, ಟುವನೊ ವಿ4 1100 ಫ್ಯಾಕ್ಟರಿ ಮತ್ತು ಟುವನೊ ವಿ4 1100 ಆರ್‌ಆರ್ ಸೂಪರ್ ಬೈಕ್‌ಗಳ ಮಾರಾಟ ಹೊಂದಿದ್ದು, ಹೊಸ ಬೈಕ್‌ಗಳು ಅಗ್ರಶ್ರೇಣಿಯ ಬೈಕಿನಿಂದ ಪ್ರಮುಖ ವಿನ್ಯಾಸಗಳನ್ನು ಎರವಲು ಪಡೆದುಕೊಳ್ಳಲಿವೆ.

ಹೊಸ ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಎಪ್ರಿಲಿಯಾ

300ಸಿಸಿಯಿಂದ 400ಸಿಸಿ ಎಂಜಿನ್ ಬೈಕ್ ಮಾದರಿಗಳಲ್ಲಿ ಸದ್ಯ ಕೆಟಿಎಂ 390, ರಾಯಲ್ ಎನ್‌ಫೀಲ್ಡ್ ವಿವಿಧ ಬೈಕ್‌ ಮಾದರಿಗಳು, ಟಿವಿಎಸ್ ಅಪಾಚೆ ಆರ್‌ಆರ್ 310 ಸೇರಿದ್ದು, ಇದರ ಜೊತೆಗೆ ಪ್ರೀಮಿಂ ಬೈಕ್ ಮಾದರಿಗಳಾದ ಬಿಎಂಡಬ್ಲ್ಯು ಜಿ 310 ಟ್ವಿನ್ಸ್, ಕವಾಸಕಿ 400 ಮತ್ತು ಹೋಂಡಾ ಸಿಬಿ 300 ಆರ್ ಕೂಡಾ ಇದೇ ಶ್ರೇಣಿಯಲ್ಲಿ ಮಾರಾಟವಾಗುತ್ತಿವೆ.

MOST READ: ಅಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾದ ಟಾಪ್ 5 ಬೈಕ್ ಮಾದರಿಗಳಿವು..!

ಹೊಸ ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆ ಎಪ್ರಿಲಿಯಾ

ಈ ಹಿನ್ನಲೆಯಲ್ಲಿ ಪ್ರತಿಸ್ಪರ್ಧಿ ಬೈಕ್ ಮಾದರಿಗಳಿಗೆ ಪೈಪೋಟಿಯಾಗಿ ವಿವಿಧ ಬೈಕ್ ಮಾದರಿಗಳನ್ನು ಅಭಿವೃದ್ದಿಗೊಳಿಸುತ್ತಿರುವ ಎಪ್ರಿಲಿಯಾ ಕಂಪನಿಯು ಎಂಜಿನ್, ಪರ್ಫಾಮೆನ್ಸ್ ಮತ್ತು ಬೆಲೆ ಗಮನದಲ್ಲಿಟ್ಟುಕೊಂಡು ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತಿದೆ.

Most Read Articles

Kannada
English summary
Aprilia Evaluating New Motorcycles For India. Read in Kannada.
Story first published: Wednesday, September 2, 2020, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X