ಹೊಸ ಮೈಕ್ರೋ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಿದ ಎಪ್ರಿಲಿಯಾ

ಎಪ್ರಿಲಿಯಾ ಕಂಪನಿಯು ಸ್ಕೂಟರ್ ಆಕಾರದಲ್ಲಿರುವ ಹೊಸ ಎಲೆಕ್ಟ್ರಿಕ್ ವಾಹನವನ್ನು ಪರಿಚಯಿಸಿದೆ. ಈ ಮೈಕ್ರೋ ಎಲೆಕ್ಟ್ರಿಕ್ ಸ್ಕೂಟರಿಗೆ ಇಎಸ್ಆರ್ 1 ಎಂಬ ಹೆಸರಿಡಲಾಗಿದೆ. ಎಪ್ರಿಲಿಯಾ ಕಂಪನಿಯು ಈ ಮೈಕ್ರೋ ಸ್ಕೂಟರ್ ಅನ್ನು ಫೋಟೋ ಮೂಲಕ ಪರಿಚಯಿಸಿದೆ.

ಹೊಸ ಮೈಕ್ರೋ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಿದ ಎಪ್ರಿಲಿಯಾ

ಈ ಸ್ಕೂಟರಿನ ಅಧಿಕೃತ ಫೋಟೋಗಳನ್ನು ಬಿಡುಗಡೆಗೊಳಿಸಲಾಗಿದೆ. ಎಪ್ರಿಲಿಯಾ ಕಂಪನಿಯು ಈ ಸ್ಕೂಟರ್ ಅನ್ನು ನಗರ ಪ್ರದೇಶಗಳಲ್ಲಿ ಕಡಿಮೆ ವೇಗದಲ್ಲಿ ಬಳಸುವ ಸಲುವಾಗಿ ವಿನ್ಯಾಸಗೊಳಿಸಿದೆ. ಈ ಮೈಕ್ರೋ ಸ್ಕೂಟರಿನಲ್ಲಿ 350 ವ್ಯಾಟ್'ನ ಬ್ರಷ್ ಲೆಸ್ ಮೋಟರ್ ಅನ್ನು ಅಳವಡಿಸಲಾಗಿದೆ.

ಹೊಸ ಮೈಕ್ರೋ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಿದ ಎಪ್ರಿಲಿಯಾ

ಈ ಸ್ಕೂಟರ್ 20 ಕಿ.ಮೀಗಿಂತ ಕಡಿಮೆ ವೇಗದಲ್ಲಿ ಸಾಗುತ್ತದೆ. ಇದರ ಜೊತೆಗೆ ಈ ಸ್ಕೂಟರಿನಲ್ಲಿ 280 ವ್ಯಾ ಸಾಮರ್ಥ್ಯ ಹೊಂದಿರುವ ಬ್ಯಾಟರಿ ಪ್ಯಾಕ್ ಅನ್ನು ನೀಡಲಾಗಿದೆ. ಈ ಬ್ಯಾಟರಿಯನ್ನು ಸುಲಭವಾಗಿ ಚಾರ್ಜ್ ಮಾಡಬಹುದು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹೊಸ ಮೈಕ್ರೋ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಿದ ಎಪ್ರಿಲಿಯಾ

ಚಾರ್ಜ್ ಖಾಲಿಯಾದಾಗ ಬ್ಯಾಟರಿಯನ್ನು ಡಿಸ್ಚಾರ್ಜ್ ಮಾಡಬಹುದು. ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ ಬ್ಯಾಟರಿಯನ್ನು ಬಳಸಿ ಮತ್ತೆ ಸ್ಕೂಟರ್ ಅನ್ನು ನಿರ್ವಹಿಸಬಹುದು.

ಹೊಸ ಮೈಕ್ರೋ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಿದ ಎಪ್ರಿಲಿಯಾ

ಈ ಬ್ಯಾಟರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ 29 ಕಿ.ಮೀಗಳವರೆಗೆ ಚಲಿಸಬಹುದು. ಹೊಸ ಎಪ್ರಿಲಿಯಾ ಇಎಸ್ಆರ್ 1 ಮೈಕ್ರೋ ಎಲೆಕ್ಟ್ರಿಕ್ ಸ್ಕೂಟರ್‌ ಚಿಕ್ಕದಾಗಿರುವ ಕಾರಣಕ್ಕೆ ನಗರದ ಕಿಕ್ಕಿರಿದ ರಸ್ತೆಗಳಲ್ಲಿ ಇದನ್ನು ಸುಲಭವಾಗಿ ಬಳಸಬಹುದು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹೊಸ ಮೈಕ್ರೋ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಿದ ಎಪ್ರಿಲಿಯಾ

ಬ್ರೇಕಿಂಗ್'ಗಾಗಿ ಈ ಸ್ಕೂಟರಿನ ಹಿಂದಿನ ವ್ಹೀಲ್'ನಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ನೀಡಲಾಗಿದೆ. ಇದು ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂ ಆಗಿದೆ. ಎಪ್ರಿಲಿಯಾ ಕಂಪನಿಯು ವಿಶೇಷ ಫೀಚರ್ ಹೊಂದಿರುವ ಈ ಮೈಕ್ರೋ ಸ್ಕೂಟರ್ ಅನ್ನು ವಿಶ್ವದ ಹಲವು ದೇಶಗಳಲ್ಲಿ ಬಿಡುಗಡೆಗೊಳಿಸುವ ಯೋಜನೆಯನ್ನು ಹೊಂದಿದೆ.

ಹೊಸ ಮೈಕ್ರೋ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಿದ ಎಪ್ರಿಲಿಯಾ

ಇಎಸ್ಆರ್ 1 ಮೈಕ್ರೋ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮೊದಲು ಯುರೋಪಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಯುರೋಪಿಯನ್ ಮಾರುಕಟ್ಟೆಯಲ್ಲಿ ಈ ಸ್ಕೂಟರಿನ ಬೆಲೆ 659 ಯುರೋಗಳು ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ 60 ಸಾವಿರ ರೂಪಾಯಿಗಳಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹೊಸ ಮೈಕ್ರೋ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಿದ ಎಪ್ರಿಲಿಯಾ

ಎಪ್ರಿಲಿಯಾ ಕಂಪನಿಯು ಭಾರತದಲ್ಲಿ ಈ ಮೈಕ್ರೋ ಸ್ಕೂಟರ್ ಅನ್ನು ಬಿಡುಗಡೆಗೊಳಿಸುವುದು ಅನುಮಾನ. ಈ ಸ್ಕೂಟರಿನ ಬಿಡುಗಡೆಯು ಜಾಗತಿಕ ಎಲೆಕ್ಟ್ರಿಕ್ ವಾಹನ ಉತ್ಸಾಹಿಗಳಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿದೆ.

Most Read Articles

Kannada
English summary
Aprilia releases official photos of ESR1 micro electric scooter. Read in Kannada.
Story first published: Thursday, December 24, 2020, 18:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X