ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಪ್ರಿಲಿಯಾ ಆರ್‍ಎಸ್660 ಬೈಕ್

ಎಪ್ರಿಲಿಯಾ ಕಂಪನಿಯು ತನ್ನ ಆರ್‍ಎಸ್660 ಬೈಕನ್ನು ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಲಿದೆ. ಎಪ್ರಿಲಿಯಾ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬೈಕಿನ ಹೆಸರನ್ನು ಈಗಗಾಲೇ ಸೇರಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಪ್ರಿಲಿಯಾ ಆರ್‍ಎಸ್660 ಬೈಕ್

ವೆಬ್‌ಸೈಟ್‌ನಲ್ಲಿ ಎಪ್ರಿಲಿಯಾ ಕಂಪನಿಯು ಆರ್‍ಎಸ್660 ಬೈಕಿನ ಹೆಸರನ್ನು ಸೇರಿಸಿರುವುದರಿಂದ ಶೀಘ್ರದಲ್ಲೇ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಎಪ್ರಿಲಿಯಾ ಕಂಪನಿಯು ಬಹುನಿರೀಕ್ಷಿತ ಆರ್‍ಎಸ್660 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ. ಪ್ರಸ್ತುತ ವಿಶ್ವಾದ್ಯಂತ ಕರೋನಾ ಸೋಂಕಿನ ಭೀತಿ ಇರುವುದರಿಂದ ಈ ಬೈಕಿನ ಬಿಡುಗಡೆಯು ವಿಳಂಭವಾಗಲಿದೆ. ಈ ಹೊಸ ಎಪ್ರಿಲಿಯಾ ಆರ್‍ಎಸ್ 660 ಬೈಕಿನ ಬುಕ್ಕಿಂಗ್ ಅನ್ನು ಕೆಲವು ಯುರೋಪಿಯನ್ ದೇಶಗಳಲ್ಲಿ 2020ರ ಅಕ್ಟೋಬರ್‌ ತಿಂಗಳಲ್ಲಿ ಪ್ರಾರಂಭಿಸಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಪ್ರಿಲಿಯಾ ಆರ್‍ಎಸ್660 ಬೈಕ್

ಎಪ್ರಿಲಿಯಾ ಆರ್‍ಎಸ್660 ಬೈಕ್ ತನ್ನದೆ ಸರಣಿಯಲ್ಲಿರುವ ಆರ್‌ಎಸ್‌ಟಿ 4 ಮಾದರಿಯ ವಿನ್ಯಾಸದಿಂದ ಸ್ಪೂರ್ತಿಯನ್ನು ಪಡೆದುಕೊಂಡಿದೆ. ಈ ಬೈಕಿನಲ್ಲಿ ಆರ್‌ಎಸ್‌ಟಿ 4 ಮಾದರಿಯಲ್ಲಿರುವ ಆಗ್ರೇಸಿವ್ ಆಗಿ ಕಾಣುವ ಫೇರಿಂಗ್ ಮತ್ತು ಏರೋ ವಿಂಗ್ಲೆಟ್ಗಳನ್ನು ಒಳಗೊಂಡಿದೆ. ರೇಸ್-ಸ್ಪೆಕ್ ಶೈಲಿಯ ವಿಂಗ್ಲೆಟ್‌ಗಳು ಹೆಚ್ಚಿನ ವೇಗದಲ್ಲಿ ಉತ್ತಮ ಕಂಟ್ರೋಲ್ ಅನ್ನು ನೀಡುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಪ್ರಿಲಿಯಾ ಆರ್‍ಎಸ್660 ಬೈಕ್

ಆರ್‍ಎಸ್660 ಬ್ರಾಂಡ್ ಸಿಗ್ನೇಚರ್ ಎಲ್ಇಡಿ ಹೆಡ್ ಲೈಟ್ ಅನ್ನು ಹೊಂದಿದೆ. ಮುಂಭಾಗದ ಎರಡೂ ಬದಿಯಲ್ಲಿ ಕಾರ್ನರಿಂಗ್ ಲ್ಯಾಂಪ್ ಅನ್ನು ಹೊಂದಿರುತ್ತದೆ. ಸ್ಪೋರ್ಟಿ ಲುಕ್ ಹೊಂದಿರುವ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಆರ್‍ಎಸ್660 ಬೈಕಿನ ಹಿಂಭಾಗವು ಕೂಡ ಆರ್‌ಎಸ್‌ಟಿ 4 ಮಾದರಿಯಂತೆ ಕಾಣುತ್ತದೆ. ಒಟ್ಟಾರೆಯಾಗಿ ಹೊಸ ಎಪ್ರಿಲಿಯಾ ಆರ್‍ಎಸ್660 ಬೈಕ್ ಆಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಪ್ರಿಲಿಯಾ ಆರ್‍ಎಸ್660 ಬೈಕ್

ಹೊಸ ಎಪ್ರಿಲಿಯಾ ಆರ್‍ಎಸ್ 660 ಬೈಕ್ ಪ್ಯಾರೆಲೆಲ್-ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 100 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಮುಂಬರುವ ಎಪ್ರಿಲಿಯಾ ಸ್ಪೋರ್ಟ್ಸ್ ಬೈಕಿನಲ್ಲಿಯು ಇದೇ ಎಂಜಿನ್ ಅನ್ನು ಅಳವಡಿಸಲಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಪ್ರಿಲಿಯಾ ಆರ್‍ಎಸ್660 ಬೈಕ್

ಎಪ್ರಿಲಿಯಾ ಆರ್‍ಎಸ್660 ಬೈಕಿನಲ್ಲಿ ವ್ಹೀಲ್ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್, ಕ್ರೂಸ್ ಕಂಟ್ರೋಲ್, ಐದು ವಿಭಿನ್ನ ರೈಡ್ ಮೋಡ್‌ಗಳು ಮತ್ತು ಎರಡು-ಹಂತದ ಕ್ವಿಕ್-ಶಿಫ್ಟರ್ ಒಳಗೊಂಡಿವೆ. ಈ ಬೈಕಿನಲ್ಲಿ 5 ಇಂಚಿನ ಟಿಎಫ್‌ಟಿ ಸ್ಪ್ಲಿಟ್-ಸ್ಕ್ರೀನ್ ಅನ್ನು ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಪ್ರಿಲಿಯಾ ಆರ್‍ಎಸ್660 ಬೈಕ್

ಹೊಸ ಎಪ್ರಿಲಿಯಾ ಆರ್‍ಎಸ್660 ಬೈಕಿನಲ್ಲಿ 41 ಎಂಎಂ ಸಸ್ಪೆಂಷನ್ ಗಾಗಿ ಮುಂಭಾಗದಲ್ಲಿ ಯುಎಸ್ಡಿ ಫೋರ್ಕ್ಸ್ ಕಯಾಬಾ ಯುನಿಟ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುದಾದರೆ ಮುಂಭಾಗದಲ್ಲಿ ಡ್ಯುಯಲ್-ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡಿಸ್ಕ್-ಬ್ರೇಕ್ ಅನ್ನು ನೀಡಲಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಪ್ರಿಲಿಯಾ ಆರ್‍ಎಸ್660 ಬೈಕ್

ಎಪ್ರಿಯಾ ಆರ್‍ಎಸ್660 ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದಾದರೆ ಸಿಬಿಯು ಮಾರ್ಗದ ಮೂಲಕ ಆಮದು ಮಾಡಿಕೊಳ್ಳಬಹುದು. ಎಪ್ರಿಲಿಯಾ ಆರ್‍ಎಸ್660 ಬೈಕ್ ಎರಡು ರೀತಿಯ ಬಣ್ಣಗಳ ಆಯ್ಕೆಯನ್ನು ಹೊಂದಿರಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಪ್ರಿಲಿಯಾ ಆರ್‍ಎಸ್660 ಬೈಕ್

ಎಪ್ರಿಯಾ ಆರ್‍ಎಸ್660 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಈ ಎಪ್ರಿಯಾ ಆರ್‍ಎಸ್660 ಬೈಕ್ ಭಾರತದಲ್ಲಿ ಬಿಡುಗಡೆಯಾದ ಬಳಿಕ ಹೋಂಡಾ ಸಿಬಿಆರ್ 650 ಆರ್, ಕವಾಸಕಿ ನಿಂಜಾ 650 ಮತ್ತು ಝಡ್‍ಡ್ಎಕ್ಸ್-6 ಆರ್ ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
Aprilia RS660 Pre-Bookings To Begin From October. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X