ಕೆಟಿಎಂ ಡ್ಯೂಕ್ 125 ಬೈಕಿಗೆ ಪೈಪೋಟಿಯಾಗಿ ಬರಲಿದೆ ಎಪ್ರಿಲಿಯಾ ಟುವನೊ 125

ದೇಶಿಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಬೈಕ್ ಮಾರಾಟವು ಜೋರಾಗಿದ್ದು, ಹಲವು ಬೈಕ್ ಉತ್ಪಾದನಾ ಸಂಸ್ಥೆಗಳು ವಿವಿಧ ಮಾದರಿಯ ಎಂಟ್ರಿ ಲೆವಲ್ ಸ್ಟ್ರಿಟ್ ಪೈಟ್ ಬೈಕ್‌ಗಳನ್ನು ಬಿಡುಗಡೆಗೊಳಿಸುತ್ತಿವೆ. ಇದೀಗ ಎಪ್ರಿಲಿಯಾ ಕೂಡಾ ಇದೇ ನಿಟ್ಟಿನಲ್ಲಿ ಹೊಸ ಯೋಜನೆಯಡಿ ಟುವನೊ 125 ಬೈಕ್ ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಕೆಟಿಎಂ ಡ್ಯೂಕ್ 125 ಬೈಕಿಗೆ ಪೈಪೋಟಿಯಾಗಿ ಬರಲಿದೆ ಎಪ್ರಿಲಿಯಾ ಟುವನೊ 125

ಸದ್ಯ ಕೆಟಿಎಂ ಡ್ಯೂಕ್ 125 ಬೈಕ್ ಮಾದರಿಯು ಎಂಟ್ರಿ ಲೆವಲ್ ಪರ್ಫಾಮೆನ್ಸ್ ಪ್ರಿಯರ ಆಯ್ಕೆಯಲ್ಲಿ ಮುಂಚೂಣಿಯಲ್ಲಿದ್ದು, ಹೊಸ ಬೈಕಿಗೆ ಪೈಪೋಟಿಯಾಗಿ ಎಪ್ರಿಲಿಯಾ ಕೂಡಾ ತನ್ನ ಜನಪ್ರಿಯ ಟುವನೊ 125 ಬೈಕ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿದೆ. ಈ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲವಾದರೂ ಎಪ್ರಿಲಿಯಾ ಇಂಡಿಯಾ ವೆಬ್‌ಸೈಟ್‌ನಲ್ಲಿ ಹೊಸ ಬೈಕ್ ವಿವರಗಳನ್ನು ಅಪ್‌ಡೆಟ್ ಮಾಡಲಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಬೈಕ್ ಮಾರುಕಟ್ಟೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

ಕೆಟಿಎಂ ಡ್ಯೂಕ್ 125 ಬೈಕಿಗೆ ಪೈಪೋಟಿಯಾಗಿ ಬರಲಿದೆ ಎಪ್ರಿಲಿಯಾ ಟುವನೊ 125

ಪ್ರೀಮಿಯಂ ಸ್ಕೂಟರ್ ಮತ್ತು ಸೂಪರ್ ಬೈಕ್ ಮಾತ್ರವೇ ಭಾರತದಲ್ಲಿ ಮಾರಾಟ ಹೊಂದಿರುವ ಎಪ್ರಿಲಿಯಾ ಸಂಸ್ಥೆಯು ಈಗಾಗಲೇ ಸಣ್ಣ ಗಾತ್ರದ ಎಂಟ್ರಿ ಲೆವಲ್ ಪರ್ಫಾಮೆನ್ಸ್ ಬೈಕ್ ಮಾದರಿಗಳನ್ನು ಬಿಡುಗಡಗೊಳಿಸುವ ಯೋಜನೆ ಇದೆ ಎಂದು ಮಾಹಿತಿ ನೀಡಿತ್ತು.

ಕೆಟಿಎಂ ಡ್ಯೂಕ್ 125 ಬೈಕಿಗೆ ಪೈಪೋಟಿಯಾಗಿ ಬರಲಿದೆ ಎಪ್ರಿಲಿಯಾ ಟುವನೊ 125

ಇದಕ್ಕೆ ಪೂರಕ ಎಂಬಂತೆ ಕಳೆದ 2018 ಮತ್ತು 2020ರ ದೆಹಲಿ ಆಟೋ ಎಕ್ಸ್‌ಫೋದಲ್ಲಿ ಆರ್‍ಎಸ್150 ಮತ್ತು ಟುವನೊ 150 ಸ್ಟ್ರೀಟ್ ಬೈಕ್‍‌ಗಳನ್ನು ಪ್ರದರ್ಶನಗೊಳಿಸುವ ಮೂಲಕ ಪರ್ಫಾಮೆನ್ಸ್ ಬೈಕ್ ಪ್ರಿಯರಲ್ಲಿ ಕುತೂಹಲ ಮೂಡಿಸಿತ್ತು.

ಕೆಟಿಎಂ ಡ್ಯೂಕ್ 125 ಬೈಕಿಗೆ ಪೈಪೋಟಿಯಾಗಿ ಬರಲಿದೆ ಎಪ್ರಿಲಿಯಾ ಟುವನೊ 125

ಆದರೆ ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ಆಧರಿಸಿ ಹೊಸ ಆರ್‍ಎಸ್150 ಮತ್ತು ಟುವನೊ 150 ಸ್ಟ್ರೀಟ್ ಬೈಕ್‍‌ಗಳ ಬದಲಾಗಿ ಟುವನೊ 125 ಬೈಕ್ ಬಿಡುಗಡೆಗೊಳಿಸುವ ನಿರ್ಧಾರಕ್ಕೆ ಬಂದಿರುವ ಎಪ್ರಿಲಿಯಾ ಸಂಸ್ಥೆಯು ಟುವನೊ 125 ಬಿಡ‌ುಗಡೆಯ ನಂತರವಷ್ಟೇ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಲಾದ 150 ಸಿಸಿ ಬೈಕ್‌ಗಳನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕೆಟಿಎಂ ಡ್ಯೂಕ್ 125 ಬೈಕಿಗೆ ಪೈಪೋಟಿಯಾಗಿ ಬರಲಿದೆ ಎಪ್ರಿಲಿಯಾ ಟುವನೊ 125

ಇನ್ನು ಟುವನೊ 125 ಬೈಕ್ ಮಾದರಿಯ ಎಪ್ರಿಲಿಯಾ ನಿರ್ಮಾಣದ ಮತ್ತೊಂದು ಜನಪ್ರಿಯ ಸೂಪರ್ ಬೈಕ್ ಆವೃತ್ತಿ ಟುವನೊ ವಿ4 1110 ಆರ್‌ಆರ್ ಬೈಕ್ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಎಂಟ್ರಿ ಲೆವಲ್ ಪರ್ಫಾಮೆನ್ಸ್ ಬೈಕ್‌ಗಳಲ್ಲೇ ಅಧಿಕ ಮಟ್ಟದ ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಕೆಟಿಎಂ ಡ್ಯೂಕ್ 125 ಬೈಕಿಗೆ ಪೈಪೋಟಿಯಾಗಿ ಬರಲಿದೆ ಎಪ್ರಿಲಿಯಾ ಟುವನೊ 125

124ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿರುವ ಟುವನೊ 125 ಬೈಕ್ ಮಾದರಿಯು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 14-ಬಿಎಚ್‌ಪಿ ಮತ್ತು 11-ಎನ್ಎಂ ಟಾರ್ಕ್ ಉತ್ಪಾದನಾ ಗುಣಪಡೆದುಕೊಂಡಿದೆ.

ಕೆಟಿಎಂ ಡ್ಯೂಕ್ 125 ಬೈಕಿಗೆ ಪೈಪೋಟಿಯಾಗಿ ಬರಲಿದೆ ಎಪ್ರಿಲಿಯಾ ಟುವನೊ 125

ಹೊಸ ಬೈಕಿನ ಮುಂಭಾಗದಲ್ಲಿ 40-ಎಂಎಂ ಅಪ್‌ಸೈಡ್ ಡೌನ್ ಫೋರ್ಕ್ಸ್ ಮತ್ತು ಹಿಂಬದಿಯಲ್ಲಿ ಮೊನೋ-ಶಾರ್ಕ್ ಸಸ್ಪೆಷನ್ ಜೋಡಿಸಲಾಗಿದ್ದು, 4-ಪಿಸ್ಟನ್ 300-ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಹಾಗೂ ರಿಯರ್ 218-ಎಂಎಂ ಡಿಸ್ಕ್ ಬ್ರೇಕ್ ಪಡೆದುಕೊಂಡಿದೆ.

ಕೆಟಿಎಂ ಡ್ಯೂಕ್ 125 ಬೈಕಿಗೆ ಪೈಪೋಟಿಯಾಗಿ ಬರಲಿದೆ ಎಪ್ರಿಲಿಯಾ ಟುವನೊ 125

ಹಾಗೆಯೇ ಟುವನೊ 125 ಬೈಕಿನಲ್ಲಿ 17-ಇಂಚಿನ ಅಲಾಯ್ ವೀಲ್ಹ್‌ಗಳನ್ನು ನೀಡಲಾಗಿದ್ದು, ಪರ್ಫಾಮೆನ್ಸ್ ಜೊತೆಗೆ ಇಂಧನ ಕಾರ್ಯಕ್ಷಮತೆ ಪೂರಕವಾಗಿ ಮುಂಭಾಗದಲ್ಲಿ 100/80 ಮತ್ತು ಹಿಂಬದಿಯಲ್ಲಿ 130/70 ಟೈರ್‌ಗಳನ್ನು ಜೋಡಿಸಲಾಗಿದೆ.

ಕೆಟಿಎಂ ಡ್ಯೂಕ್ 125 ಬೈಕಿಗೆ ಪೈಪೋಟಿಯಾಗಿ ಬರಲಿದೆ ಎಪ್ರಿಲಿಯಾ ಟುವನೊ 125

ಇದರೊಂದಿಗೆ ಹೊಸ ಬೈಕಿನಲ್ಲಿ ಫ್ಯೂಲ್ ಇಂಜೆಕ್ಷನ್ ಸಿಸ್ಟಂ ಸಹ ನೀಡುವ ಸಾಧ್ಯತೆಗಳಿದ್ದು, ಕ್ವಿಡ್ ಶಿಫ್ಟರ್, ರೇಸಿಂಗ್ ವಿನ್ಯಾಸದ ಎಕ್ಸಾಸ್ಟ್, ಅಗಲ ಮತ್ತು ಎತ್ತರವಾದ ಹ್ಯಾಂಡಲ್‌ಬಾರ್ ವಿನ್ಯಾಸ, ಎಲ್ಇಡಿ ಹೆಡ್‌ಲ್ಯಾಂಪ್ಸ್ ಮತ್ತು ಎಲ್ಇಡಿ ಡಿಆರ್‌ಎಸ್ ಸೌಲಭ್ಯಗಳಿವೆ.

ಕೆಟಿಎಂ ಡ್ಯೂಕ್ 125 ಬೈಕಿಗೆ ಪೈಪೋಟಿಯಾಗಿ ಬರಲಿದೆ ಎಪ್ರಿಲಿಯಾ ಟುವನೊ 125

ಈ ಮೂಲಕ ಕೆಟಿಎಂ ಡ್ಯೂಕ್ 125 ಬೈಕ್ ಮಾದರಿಗೆ ನೇರ ಪೈಪೋಟಿ ನೀಡಲಿರುವ ಹೊಸ ಟುವನೊ 125 ಬೈಕ್ ಮಾದರಿಯು ಮುಂಬರುವ ಮೇ ಅಥವಾ ಜೂನ್ ಹೊತ್ತಿಗೆ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.15 ಲಕ್ಷದಿಂದ ರೂ. 1.25 ಲಕ್ಷ ಬೆಲೆ ಅಂತರದಲ್ಲಿ ಖರೀದಿಗೆ ಲಭ್ಯವಾಗಬಹುದು ಎಂದು ನೀರಿಕ್ಷಿಸಲಾಗಿದೆ.

Most Read Articles

Kannada
English summary
Aprilia Tuono 125 Listed On Company’s Official Website. Read in Kannada.
Story first published: Thursday, March 5, 2020, 18:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X