ವರ್ಷಾಂತ್ಯಕ್ಕೆ ಮುಂಬೈ ಮತ್ತು ಪುಣೆಯಲ್ಲಿ ಇವಿ ಸ್ಕೂಟರ್ ಮಾರಾಟ ಆರಂಭಿಸಲಿದೆ ಎಥರ್

ಬಜೆಟ್ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮಹತ್ವದ ಬೆಳವಣಿಗೆ ಸಾಧಿಸುತ್ತಿರುವ ಬೆಂಗಳೂರು ಮೂಲದ ಎಥರ್ ಎನರ್ಜಿ ಕಂಪನಿಯು ಯಶಸ್ವಿಯಾಗಿ 2 ವರ್ಷ ಪೂರೈಸಿ 3ನೇ ವರ್ಷಕ್ಕೆ ಕಾಲಿಟ್ಟಿದ್ದು, ಗ್ರಾಹಕರ ಬೇಡಿಕೆಯೆಂತೆ ಮಾರಾಟ ಮಳಿಗೆಗಳನ್ನು ದೇಶದ ಪ್ರಮುಖ ನಗರಗಳಿಗೆ ವಿಸ್ತರಣೆ ಮಾಡುತ್ತಿದೆ.

ವರ್ಷಾಂತ್ಯಕ್ಕೆ ಮುಂಬೈ ಮತ್ತು ಪುಣೆಯಲ್ಲಿ ಇವಿ ಸ್ಕೂಟರ್ ಮಾರಾಟ ಆರಂಭ

ಬೆಂಗಳೂರು ಮತ್ತು ಚೆನ್ನೈ ನಂತರ ದೇಶದ ಪ್ರಮುಖ ಎಂಟು ನಗರಗಳಲ್ಲಿ ಹೊಸ ಇವಿ ಸ್ಕೂಟರ್ ಮಾರಾಟ ಮಳಿಗೆಗಳನ್ನು ತೆರೆಯುವ ಯೋಜನೆ ಹೊಂದಿದ್ದು, ನವೆಂಬರ್ ಆರಂಭದಲ್ಲಿ ಪುಣೆ ಮತ್ತು ಡಿಸೆಂಬರ್‌ನಲ್ಲಿ ಮುಂಬೈ ಮಾಹಾನಗರಗಳಲ್ಲಿ ಎಥರ್ ಇವಿ ಸ್ಕೂಟರ್ ಮಾರಾಟ ಆರಂಭವಾಗಲಿದೆ. ತದನಂತರ ಹಂತ-ಹಂತವಾಗಿ ಮಾರಾಟ ಮಳಿಗೆಗಳನ್ನು ಎರಡನೇ ದರ್ಜೆ ಮಾಹಾನಗರಗಳಿಗೂ ವಿಸ್ತರಣೆ ಮಾಡಲಿದ್ದು, ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳ ಆಧಾರದ ಮೇಲೆ ಇವಿ ವಾಹನ ಮಾರಾಟವನ್ನು ಹೆಚ್ಚಿಸಲಾಗುತ್ತಿದೆ.

ವರ್ಷಾಂತ್ಯಕ್ಕೆ ಮುಂಬೈ ಮತ್ತು ಪುಣೆಯಲ್ಲಿ ಇವಿ ಸ್ಕೂಟರ್ ಮಾರಾಟ ಆರಂಭ

ಸದ್ಯ ಮಾರುಕಟ್ಟೆಯಲ್ಲಿರುವ ಎಥರ್ ಕಂಪನಿಯು ಸಾಮಾನ್ಯ ಮಾದರಿಯಾದ 450 ಮತ್ತು ಹೈ ಎಂಡ್ ಮಾದರಿಯಾಗಿ 450ಎಕ್ಸ್ ಮಾದರಿಯನ್ನು ಮಾರಾಟ ಮಾಡುತ್ತಿದ್ದು, 450ಎಕ್ಸ್ ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್‌ನೊಂದಿಗೆ ಗ್ರಾಹಕರ ಆಕರ್ಷಣೆಯಾಗಿದೆ.

ವರ್ಷಾಂತ್ಯಕ್ಕೆ ಮುಂಬೈ ಮತ್ತು ಪುಣೆಯಲ್ಲಿ ಇವಿ ಸ್ಕೂಟರ್ ಮಾರಾಟ ಆರಂಭ

ಸ್ಟ್ಯಾಂಡರ್ಡ್ ಮಾದರಿಯಾದ 450 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಹೈ ಪರ್ಫಾಮೆನ್ಸ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಪ್ಲಸ್ ಮತ್ತು ಪ್ರೊ ಎನ್ನುವ ಎರಡು ಪ್ರಮುಖ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ವರ್ಷಾಂತ್ಯಕ್ಕೆ ಮುಂಬೈ ಮತ್ತು ಪುಣೆಯಲ್ಲಿ ಇವಿ ಸ್ಕೂಟರ್ ಮಾರಾಟ ಆರಂಭ

ಪ್ಯಾನ್ ಇಂಡಿಯಾ ಪ್ರಕಾರ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.99 ಸಾವಿರ ಬೆಲೆ ಹೊಂದಿದ್ದು, ಜೊತೆಗೆ ಹೊಸ ಸ್ಕೂಟರ್ ಖರೀದಿಸುವ ಗ್ರಾಹಕರು ಮಾಸಿಕ ಚಂದಾದಾರಿಕೆ ಯೋಜನೆಯಡಿ ಮೂರು ವರ್ಷಗಳ ತನಕ ಬ್ಯಾಟರಿ ಸೌಲಭ್ಯಕ್ಕಾಗಿ 450ಎಕ್ಸ್ ಪ್ಲಸ್ ಮಾದರಿಗೆ ಪ್ರತಿ ತಿಂಗಳು(ರೂ. 1,699) ಮತ್ತು 450ಎಕ್ಸ್ ಪ್ರೊ ಮಾದರಿಗೆ ಪ್ರತಿ ತಿಂಗಳು(ರೂ.1,999) ಪಾವತಿಸಬೇಕು.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ವರ್ಷಾಂತ್ಯಕ್ಕೆ ಮುಂಬೈ ಮತ್ತು ಪುಣೆಯಲ್ಲಿ ಇವಿ ಸ್ಕೂಟರ್ ಮಾರಾಟ ಆರಂಭ

ಇನ್ನು 2016ರಿಂದಲೇ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣ ಮತ್ತು ಮಾರಾಟದಲ್ಲಿ ಸ್ವತಂತ್ರ ಸಂಸ್ಥೆಯಾಗಿ ಬೆಳೆದು ಜನಪ್ರಿಯವಾಗುತ್ತಿರುವ ಎಥರ್ ಎನರ್ಜಿ ಕಂಪನಿಯು ಇದೀಗ ದೇಶದ ಅತಿದೊಡ್ಡ ಬೈಕ್ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೊಟೋಕಾರ್ಪ್ ಜೊತೆಗೆ ಕೈಜೋಡಿಸಿದ್ದು, ಎಥರ್ ಎನರ್ಜಿ ಕಂಪನಿಯ ಹೊಸ ಯೋಜನೆಗಳಿಗಾಗಿ ಹೀರೋ ಕಂಪನಿಯೇ ಬಂಡವಾಳ ಹೂಡಿಕೆ ಮಾಡಲು ಒಪ್ಪಿಗೆ ಸೂಚಿಸಿದೆ.

ವರ್ಷಾಂತ್ಯಕ್ಕೆ ಮುಂಬೈ ಮತ್ತು ಪುಣೆಯಲ್ಲಿ ಇವಿ ಸ್ಕೂಟರ್ ಮಾರಾಟ ಆರಂಭ

ಮಾರಾಟ ಜಾಲ ವಿಸ್ತರಿಸಿದ ನಂತರ ಉತ್ಪಾದನಾ ಪ್ರಮಾಣವನ್ನು ಸಹ ಹೆಚ್ಚಿಸಬೇಕಿದ್ದು, ಇದಕ್ಕಾಗಿ ಹೊಸೂರು ಬಳಿ ಇರುವ ಉತ್ಪಾದನಾ ಘಟಕವನ್ನು ಸಹ ವಿಸ್ತರಣೆ ಮಾಡುವ ಮೂಲಕ ವಾರ್ಷಿಕವಾಗಿ 1 ಲಕ್ಷ ಯುನಿಟ್ ಉತ್ಪಾದನೆಗೆ ಸಿದ್ದವಾಗಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ವರ್ಷಾಂತ್ಯಕ್ಕೆ ಮುಂಬೈ ಮತ್ತು ಪುಣೆಯಲ್ಲಿ ಇವಿ ಸ್ಕೂಟರ್ ಮಾರಾಟ ಆರಂಭ

ಹೀಗಾಗಿ ಹೊಸ ಯೋಜನೆಗೆ ಅವಶ್ಯವಿದ್ದ ರೂ. 84 ಕೋಟಿ ಬಂಡವಾಳವನ್ನು ಹೀರೋ ಮೊಟೋಕಾರ್ಪ್ ಕಂಪನಿಯು ಹೂಡಿಕೆ ಮಾಡಿದ್ದು, ಇನ್ಮುಂದೆ ಎಥರ್ ಕಂಪನಿಯಲ್ಲಿ ಹೀರೋ ಕಂಪನಿಯ ಪಾಲು ಕೂಡಾ ಪ್ರಮುಖವಾಗಲಿದೆ.

Most Read Articles

Kannada
English summary
Ather Electric Scooters Mumbai & Pune Launch Timelines Revealed. Read in Kannada.
Story first published: Thursday, August 20, 2020, 21:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X