450 ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವನ್ನು ಸ್ಥಗಿತಗೊಳಿಸಿದ ಎಥರ್ ಎನರ್ಜಿ

ಎಥರ್ ಎನರ್ಜಿ ಕಂಪನಿಯು ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಪರಿಚಯಿಸುತ್ತಿದ್ದು, ಮೊದಲ ಬಾರಿಗೆ ಪರಿಚಯಿಸಲಾಗಿದ್ದ 340 ಮತ್ತು 450 ಇವಿ ಸ್ಕೂಟರ್ ಮಾದರಿಯನ್ನು ಸ್ಥಗಿತಗೊಳಿಸಿದೆ.

450 ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವನ್ನು ಸ್ಥಗಿತಗೊಳಿಸಿದ ಎಥರ್ ಎನರ್ಜಿ

ಸದ್ಯ 450 ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದ ಮೇಲೆ ಹೆಚ್ಚಿನ ಒತ್ತು ನೀಡುತ್ತಿರುವ ಎಥರ್ ಕಂಪನಿಯು ಇತ್ತೀಚೆಗೆ 450 ಎಕ್ಸ್ ಕಲೆಕ್ಟರ್ಸ್ ಸ್ಪೆಷಲ್ ಎಡಿಷನ್ ಮಾದರಿಯನ್ನು ಸಹ ಅನಾವರಣಗೊಳಿಸಿ ಬಿಡುಗಡೆ ಮಾಡಲು ಸಿದ್ದವಾಗಿದ್ದು, ಈ ಹಿನ್ನಲೆಯಲ್ಲಿ 450 ಸಾಮಾನ್ಯ ಇವಿ ಸ್ಕೂಟರ್ ಮಾರಾಟವನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದೆ. ಈ ಹಿಂದೆ 450 ಇವಿ ಸ್ಕೂಟರ್ ಜೊತೆಗೆ ಪರಿಚಯಿಸಲಾಗಿದ್ದ 340 ಇವಿ ಸ್ಕೂಟರ್ ಮಾದರಿಯನ್ನು ಸಹ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸ್ಥಗಿತಗೊಳಿಸಲಾಗಿತ್ತು.

450 ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವನ್ನು ಸ್ಥಗಿತಗೊಳಿಸಿದ ಎಥರ್ ಎನರ್ಜಿ

ಇನ್ನು ಎಥರ್ ಎನರ್ಜಿ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಸೌಲಭ್ಯವನ್ನು ದೇಶದ ಪ್ರಮುಖ ನಗರಗಳಿಗೆ ವಿಸ್ತರಣೆ ಮಾಡುವ ಬೃಹತ್ ಯೋಜನೆಗೆ ಚಾಲನೆ ನೀಡಿದ್ದು, 2021ರ ಅಂತ್ಯಕ್ಕೆ ಒಟ್ಟು 11 ನಗರಗಳಲ್ಲಿ ಮಾರಾಟ ಸೌಲಭ್ಯವನ್ನು ಹೊಂದುವುದಾಗಿ ವಿಶ್ವಾಸ ವ್ಯಕ್ತಪಡಿಸಿದೆ.

450 ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವನ್ನು ಸ್ಥಗಿತಗೊಳಿಸಿದ ಎಥರ್ ಎನರ್ಜಿ

ಸದ್ಯಕ್ಕೆ ಬೆಂಗಳೂರು ಮತ್ತು ಚೆನ್ನೈ ಮಾಹಾನಗರಗಳಲ್ಲಿ ಮಾತ್ರವೇ ಮಾರಾಟ ಸೌಲಭ್ಯವನ್ನು ಹೊಂದಿದ್ದು, ನವೆಂಬರ್ ಆರಂಭದಲ್ಲಿ ಮುಂಬೈ ಮತ್ತು ಹೈದ್ರಾಬಾದ್ ನಗರಗಳಲ್ಲಿ ಹೊಸ ಮಾರಾಟ ಮಳಿಗೆಗಳನ್ನು ತೆರೆಯಲು ಸಿದ್ದವಾಗಿದೆ.

450 ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವನ್ನು ಸ್ಥಗಿತಗೊಳಿಸಿದ ಎಥರ್ ಎನರ್ಜಿ

ತದನಂತರ ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ದೆಹಲಿ ಎನ್‌ಸಿಆರ್, ಪುಣೆ, ಅಹಮದಾಬಾದ್, ಕೊಯಂಬತ್ತೂರು, ಕೊಚ್ಚಿನ್, ಕೋಲ್ಕತ್ತಾ ಮತ್ತು ಕೊಳಿಕೋಡ್‌ನಲ್ಲಿ ಮಾರಾಟ ಸೌಲಭ್ಯವನ್ನು ತೆರೆಯಲು ಯೋಜನೆ ರೂಪಿಸಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಿಸಲು ಪೂರಕವಾದ ವಾತಾವರಣವಿದ್ದರೂ ಸಹ ಸಾರ್ವಜನಿಕ ಬಳಕೆಯ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಕೊರತೆಯು ಹೊಸ ಎಲೆಕ್ಟ್ರಿಕ್ ವಾಹನಗಳ ಮಾರಾಟವು ತೀವ್ರಗೊಳ್ಳಲು ಹಿನ್ನಡೆ ಉಂಟಾಗುತ್ತಿದೆ.

450 ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವನ್ನು ಸ್ಥಗಿತಗೊಳಿಸಿದ ಎಥರ್ ಎನರ್ಜಿ

ಈ ನಿಟ್ಟಿನಲ್ಲಿ ಈಗಾಗಲೇ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣ ಕಾರ್ಯವನ್ನು ಆರಂಭಿಸಿದ್ದು, ಎಥರ್ ಎನರ್ಜಿ ಕಂಪನಿಯು ಸಹ ಇದೇ ವರ್ಷಾಂತ್ಯಕ್ಕೆ ದೇಶದ ಪ್ರಮುಖ ನಗರಗಳಲ್ಲಿ 100 ಹೊಸ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಸಿದ್ದವಾಗಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

450 ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವನ್ನು ಸ್ಥಗಿತಗೊಳಿಸಿದ ಎಥರ್ ಎನರ್ಜಿ

ಎಲೆಕ್ಟ್ರಿಕ್ ವಾಹನಗಳ ಜೊತೆ ನೀಡಲಾಗುವ ಹೋಂ ಚಾರ್ಜಿಂಗ್‌ ಪಾಯಿಂಟ್‌ಗಳನ್ನು ಹೊರತುಪಡಿಸಿ ಸಾರ್ವಜನಿಕವಾಗಿ ಪೆಟ್ರೋಲ್ ಬಂಕ್ ಮಾದರಿಯಲ್ಲಿ ಚಾರ್ಜಿಂಗ್ ನಿಲ್ದಾಣಗಳ ತೆರೆಯಲಾಗುತ್ತಿದ್ದು, ಎಥರ್ ಕಂಪನಿಯು ಕೂಡಾ ದೇಶದ ಪ್ರಮುಖ ನಗರಗಳಲ್ಲಿ ತನ್ನ ಇವಿ ಸ್ಕೂಟರ್‌ಗಳ ಮಾರಾಟಕ್ಕೆ ಪೂರಕವಾಗಿ ಒಟ್ಟು 100 ಹೊಸ ಪಬ್ಲಿಕ್ ಚಾರ್ಜಿಂಗ್ ಸ್ಟೆಷನ್‌ಗಳನ್ನು ತೆರೆಯಲು ಸಿದ್ದತೆ ನಡೆಸಿದೆ.

450 ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವನ್ನು ಸ್ಥಗಿತಗೊಳಿಸಿದ ಎಥರ್ ಎನರ್ಜಿ

ಬೆಂಗಳೂರು ಮತ್ತು ಚೆನ್ನೈ ನಗರದ ಪ್ರಮುಖ ಕಡೆಗಳಲ್ಲಿ ಈಗಾಗಲೇ 150 ಕಡೆಗಳಲ್ಲಿ ಸಿಂಗಲ್ ಚಾರ್ಜಿಂಗ್ ಪಾಯಿಂಟ್ ಹೊಂದಿರುವ ಪಬ್ಲಿಕ್ ಚಾರ್ಜಿಂಗ್ ಸ್ಟೆಷನ್‌ಗಳನ್ನು ಸ್ಥಾಪನೆ ಮಾಡಲಾಗಿದ್ದು, ಇದೀಗ ಸ್ಥಳ ಲಭ್ಯತೆ ಆಧಾರದ ಮೇಲೆ ಹೆಚ್ಚುವರಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಜೋಡಣೆ ಮಾಡಲಾಗುತ್ತಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

450 ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವನ್ನು ಸ್ಥಗಿತಗೊಳಿಸಿದ ಎಥರ್ ಎನರ್ಜಿ

ಎಥರ್ ಕಂಪನಿಯು 450ಎಕ್ಸ್ ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದ್ದು, 450ಎಕ್ಸ್ ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್‌ನೊಂದಿಗೆ ಗ್ರಾಹಕರ ಆಕರ್ಷಣೆಯಾಗಿದೆ. 450 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಹೈ ಪರ್ಫಾಮೆನ್ಸ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಪ್ಲಸ್ ಮತ್ತು ಪ್ರೊ ಎನ್ನುವ ಎರಡು ಪ್ರಮುಖ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

Most Read Articles

Kannada
English summary
Ather 450 Electric Scooter Discontinued. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X