ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೆಚ್ಚಳಕ್ಕಾಗಿ ಹೊಸ ಯೋಜನೆಗೆ ಚಾಲನೆ ನೀಡಿದ ಎಥರ್

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಬೆಂಗಳೂರಿನ ಎಥರ್ ಎನರ್ಜಿ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೆಚ್ಚಳಕ್ಕಾಗಿ ಹೊಸ ಯೋಜನೆಯೊಂದಕ್ಕೆ ಚಾಲನೆ ನೀಡಿದ್ದು, ಕ್ರೆಡರ್ ಕಂಪನಿ ಜೊತೆಗೂಡಿ ಎಕ್ಸ್‌ಚೆಂಜ್ ಆಫರ್ ನೀಡುತ್ತಿದೆ.

ಇವಿ ಸ್ಕೂಟರ್ ಮಾರಾಟ ಹೆಚ್ಚಳಕ್ಕಾಗಿ ಹೊಸ ಯೋಜನೆಗೆ ಚಾಲನೆ ನೀಡಿದ ಎಥರ್

ಕ್ರೆಡರ್ ಕಂಪನಿಯು ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ವಿವಿಧ ರಾಜ್ಯಗಳಲ್ಲಿ ಮಾರಾಟ ಮಳಿಗೆಗಳನ್ನು ಹೊಂದಿದೆ. ಇದೀಗ ಎಥರ್ ಜೊತೆಗೂಡಿ ಹೊಸ ಯೋಜನೆಗೆ ಚಾಲನೆ ನೀಡಿರುವ ಕ್ರೆಡರ್ ಕಂಪನಿಯು ಸಾಮಾನ್ಯ ಬೈಕ್ ಮಾದರಿಗಳೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳ ಎಕ್ಸ್‌ಚೆಂಜ್ ಆಫರ್ ನೀಡುತ್ತಿದ್ದು, ಆಸಕ್ತ ಗ್ರಾಹಕರು ತಮ್ಮ ಸಾಮಾನ್ಯ ಬೈಕ್‌ಗಳನ್ನು ಎಥರ್ ಎಲೆಕ್ಟ್ರಿಕ್ ಸ್ಕೂಟರ್‌ನೊಂದಿಗೆ ಬದಲಾಯಿಸಿಕೊಳ್ಳಲು ಸುವರ್ಣಾವಕಾಶವಾಗಿದೆ.

ಇವಿ ಸ್ಕೂಟರ್ ಮಾರಾಟ ಹೆಚ್ಚಳಕ್ಕಾಗಿ ಹೊಸ ಯೋಜನೆಗೆ ಚಾಲನೆ ನೀಡಿದ ಎಥರ್

ಕ್ರೆಡರ್ ಕಂಪನಿಯು ಸಾಮಾನ್ಯ ಬೈಕ್‌ಗಳನ್ನು ಆಕರ್ಷಕ ಬೆಲೆಗಳೊಂದಿಗೆ ಖರೀದಿ ಮಾಡಲಿದ್ದು, ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಸುಲಭ ಎಕ್ಸ್‌ಚೆಂಜ್ ಆಫರ್ ನೀಡಲಿದೆ. ಜೊತೆಗೆ ಕರೋನಾ ವೈರಸ್ ಹಿನ್ನಲೆಯಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಹೊಸ ಸೇವೆಗಳನ್ನು ಒದಗಿಸಲಿದೆ.

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೆಚ್ಚಳಕ್ಕಾಗಿ ಹೊಸ ಯೋಜನೆಗೆ ಚಾಲನೆ ನೀಡಿದ ಎಥರ್

ಹೀಗಾಗಿ ನಿಮ್ಮ ಬಳಿಯಿರುವ ಸಾಮಾನ್ಯ ಬೈಕ್ ಮಾದರಿಗಳನ್ನು ಉತ್ತಮ ಬೆಲೆ ಮಾರಾಟ ಮಾಡುವ ಮೂಲಕ ಎಲೆಕ್ಟ್ರಿಕ್ ಸ್ಕೂಟರ್‌ಗೆ ಬದಲಾಯಿಸಿಕೊಳ್ಳಬಹುದಾಗಿದ್ದು, ಜೊತೆಗೆ ಕ್ರೆಡರ್ ಮೂಲಕ ಬರುವ ಗ್ರಾಹಕರಿಗೆ ಎಥರ್ ಕಂಪನಿಯು ವಿಶೇಷ ಆಫರ್‌ಗಳನ್ನು ಸಹ ನೀಡುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೆಚ್ಚಳಕ್ಕಾಗಿ ಹೊಸ ಯೋಜನೆಗೆ ಚಾಲನೆ ನೀಡಿದ ಎಥರ್

ಇನ್ನು ಎಥರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಸಾಮಾನ್ಯ ಮಾದರಿಯಾಗಿ 450 ಮತ್ತು ಹೈ ಎಂಡ್ ಮಾದರಿಯಾಗಿ 450ಎಕ್ಸ್ ಮಾದರಿಯನ್ನು ಮಾರಾಟ ಮಾಡುತ್ತಿದ್ದು, 450ಎಕ್ಸ್ ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್‌ನೊಂದಿಗೆ ಗ್ರಾಹಕರ ಆಕರ್ಷಣೆಯಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೆಚ್ಚಳಕ್ಕಾಗಿ ಹೊಸ ಯೋಜನೆಗೆ ಚಾಲನೆ ನೀಡಿದ ಎಥರ್

ಸ್ಟ್ಯಾಂಡರ್ಡ್ ಮಾದರಿಯಾದ 450 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಹೈ ಪರ್ಫಾಮೆನ್ಸ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಪ್ಲಸ್ ಮತ್ತು ಪ್ರೊ ಎನ್ನುವ ಎರಡು ಪ್ರಮುಖ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೆಚ್ಚಳಕ್ಕಾಗಿ ಹೊಸ ಯೋಜನೆಗೆ ಚಾಲನೆ ನೀಡಿದ ಎಥರ್

ಪ್ಯಾನ್ ಇಂಡಿಯಾ ಪ್ರಕಾರ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.99 ಸಾವಿರ ಬೆಲೆ ಹೊಂದಿದ್ದು, ಜೊತೆಗೆ ಹೊಸ ಸ್ಕೂಟರ್ ಖರೀದಿಸುವ ಗ್ರಾಹಕರು ಮಾಸಿಕ ಚಂದಾದಾರಿಕೆ ಯೋಜನೆಯಡಿ ಮೂರು ವರ್ಷಗಳ ತನಕ 450ಎಕ್ಸ್ ಪ್ಲಸ್ ಮಾದರಿಗೆ ಪ್ರತಿ ತಿಂಗಳು(ರೂ. 1,699) ಮತ್ತು 450ಎಕ್ಸ್ ಪ್ರೊ ಮಾದರಿಗೆ ಪ್ರತಿ ತಿಂಗಳು(ರೂ.1,999) ಪಾವತಿಸಬೇಕು.

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೆಚ್ಚಳಕ್ಕಾಗಿ ಹೊಸ ಯೋಜನೆಗೆ ಚಾಲನೆ ನೀಡಿದ ಎಥರ್

ಎಕ್ಸ್‌ಶೋರೂಂ ದರದಲ್ಲಿ ಪಾವತಿ ಮಾಡಿದ್ದಲ್ಲಿ ಒಂದೇ ಬಾರಿಗೆ ಹಣಪಾವತಿಸಲು ಬಹುತೇಕ ಗ್ರಾಹಕರಿಗೆ ಬ್ಯಾಂಕ್ ಸಾಲ ಅವಶ್ಯಕತೆಯಿದ್ದು, ಬ್ಯಾಂಕ್ ಇಎಂಐ ಬದಲಿಗೆ ಮಾಸಿಕ ಚಂದಾದಾರಿಕೆ ಯೋಜನೆಯನ್ನು ಆಯ್ಕೆ ಮಾಡಬಹುದಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೆಚ್ಚಳಕ್ಕಾಗಿ ಹೊಸ ಯೋಜನೆಗೆ ಚಾಲನೆ ನೀಡಿದ ಎಥರ್

ಹೊಸ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯ ಸ್ಟ್ಯಾಂಡರ್ಡ್ ಮಾದರಿಯಾದ 450 ಸ್ಕೂಟರ್‌ಗಿಂತಲೂ ಹೆಚ್ಚು ಪ್ರೀಮಿಯಂ ಫೀಚರ್ಸ್‌ಗಳ ಜೊತೆಗೆ ಹೆಚ್ಚುವರಿ ಪರ್ಫಾಮೆನ್ಸ್ ಮತ್ತು ಫಾಸ್ಟ್ ಚಾರ್ಜಿಂಗ್ ಸೌಲಭ್ಯಗಳನ್ನು ಪಡೆದುಕೊಂಡಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೆಚ್ಚಳಕ್ಕಾಗಿ ಹೊಸ ಯೋಜನೆಗೆ ಚಾಲನೆ ನೀಡಿದ ಎಥರ್

ಮೈಲೇಜ್ ಮತ್ತು ಪರ್ಫಾಮೆನ್ಸ್

2.9kWh ಬ್ಯಾಟರಿ ಪ್ಯಾಕ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗರಿಷ್ಠ 6kW ಮತ್ತು 26 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಚಾರ್ಜ್‌ಗೆ 85 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೆಚ್ಚಳಕ್ಕಾಗಿ ಹೊಸ ಯೋಜನೆಗೆ ಚಾಲನೆ ನೀಡಿದ ಎಥರ್

ಇದು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಪ್ರತಿ ಚಾರ್ಜ್ 10 ಕಿ.ಮೀ ಹೆಚ್ಚುವರಿ ಮೈಲೇಜ್ ಹಿಂದಿರುಗಿಸುವುದಲ್ಲದೇ ಸ್ಕೂಟರ್ ಟಾಪ್ ಸ್ಪೀಡ್ ಕೂಡಾ ಪೆಟ್ರೋಲ್ ಸ್ಕೂಟರ್‌ಗಿಂತಲೂ ಹೆಚ್ಚಿದೆ. ಕೇವಲ 3.3 ಸೇಕೆಂಡುಗಳಲ್ಲಿ ಸೊನ್ನೆಯಿಂದ 40ಕಿ.ಮೀ ವೇಗ ಪಡೆದುಕೊಳ್ಳುವ 450ಎಕ್ಸ್ ಮಾದರಿಯು ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯಲಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೆಚ್ಚಳಕ್ಕಾಗಿ ಹೊಸ ಯೋಜನೆಗೆ ಚಾಲನೆ ನೀಡಿದ ಎಥರ್

ಜೊತೆಗೆ ಹೊಸ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೌಲಭ್ಯವು 4ಜಿ ಇ-ಸಿಮ್ ಹೊಂದಿದ್ದು, ಹೊಸ ಸಾಧನದ ಮೂಲಕ ಸ್ಮಾರ್ಟ್‌ಫೋನ್ ಕನೆಕ್ವಿವಿಟಿ, ಬ್ಲೂಟೂಥ್ ಮತ್ತು ಎಥರ್ ಆ್ಯಪ್ ನಿರ್ವಹಣೆ ಮಾಡಬಹುದಾಗಿದೆ. ಇದರೊಂದಿಗೆ ಹೊಸ ಸ್ಕೂಟರ್‌ನಲ್ಲಿ ಇನ್ ಬಿಲ್ಟ್ ನೆವಿಗೆಷನ್, ಲೈವ್ ಲೋಕೆಷನ್, ಲೆಹಿಕಲ್ ಸ್ಟೆಟಸ್, ಥೆಪ್ಟ್ ಡಿಟೆಕ್ಷನ್, ಮ್ಯೂಸಿಕ್ ಮತ್ತು ಕಾಲ್ ಕಂಟ್ರೋಲ್ಸ್ ಸೌಲಭ್ಯಗಳಿದ್ದು, ಹೊಸ ಸ್ಕೂಟರ್ ಅನ್ನು ಗ್ರೇ, ವೈಟ್ ಮತ್ತು ಗ್ರಿನ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

Most Read Articles

Kannada
English summary
Ather Energy Collaborates With CredR For 2W Exchange Program. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X