ಬುಕ್ಕಿಂಗ್ ಪಾವತಿ ವಿಧಾನವನ್ನು ಬದಲಿಸಿದ ಎಥರ್ ಎನರ್ಜಿ

ಇನ್ನು ಮುಂದೆ ಎಥರ್ 450 ಎಕ್ಸ್ ಹಾಗೂ ಎಥರ್ 450 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಒಂದೇ ಬಾರಿ ಪೂರ್ತಿಯಾಗಿ ಹಣ ಪಾವತಿಸುವ ಮೂಲಕ ಬುಕ್ಕಿಂಗ್ ಮಾಡಬಹುದು. ಅಕ್ಟೋಬರ್ 31ರಿಂದ ಬೆಂಗಳೂರು ಹಾಗೂ ಚೆನ್ನೈನಲ್ಲಿ ಈ ಯೋಜನೆಯು ಜಾರಿಗೆ ಬರಲಿದೆ.

ಬುಕ್ಕಿಂಗ್ ಪಾವತಿ ವಿಧಾನವನ್ನು ಬದಲಿಸಿದ ಎಥರ್ ಎನರ್ಜಿ

ಎಥರ್ ಸ್ಕೂಟರ್‌ಗೆ ಪೂರ್ತಿಯಾಗಿ ಹಣ ಪಾವತಿ ಮಾಡಿದ ನಂತರ 3 ವಾರಗಳಲ್ಲಿ ಸ್ಕೂಟರ್ ಅನ್ನು ವಿತರಿಸಲಾಗುತ್ತದೆ. ಕಂಪನಿಯು ಬೆಂಗಳೂರು ಹಾಗೂ ಚೆನ್ನೈ ನಗರಗಳಲ್ಲಿ ಫಾಸ್ಟ್ ಚಾರ್ಜಿಂಗ್ ಗ್ರಿಡ್‌ಗಳನ್ನು ನಿರ್ಮಿಸುತ್ತಿದೆ. ಎಥರ್ ಎನರ್ಜಿ ಕಂಪನಿಯು ಬೆಂಗಳೂರಿನಲ್ಲಿ 37 ಹಾಗೂ ಚೆನ್ನೈನಲ್ಲಿ 13 ವೇಗದ ಚಾರ್ಜಿಂಗ್ ಸ್ಟೇಷನ್ ಗಳನ್ನು ಆರಂಭಿಸಿದೆ.

ಬುಕ್ಕಿಂಗ್ ಪಾವತಿ ವಿಧಾನವನ್ನು ಬದಲಿಸಿದ ಎಥರ್ ಎನರ್ಜಿ

ಈ ಚಾರ್ಜಿಂಗ್ ಸ್ಟೇಷನ್ ಗಳನ್ನು ಶಾಪಿಂಗ್ ಮಾಲ್‌, ಸಿನೆಮಾ ಹಾಲ್‌, ಪಾರ್ಕ್ ಹಾಗೂ ಶಾಪಿಂಗ್ ಕಾಂಪ್ಲೆಕ್ಸ್ ಗಳ ಸುತ್ತ ಮುತ್ತಲಿರುವ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ಇದರಿಂದಾಗಿ ಎಲೆಕ್ಟ್ರಿಕ್ ಸ್ಕೂಟರ್ ಹೊಂದಿರುವವರು ತಮ್ಮ ವಾಹನಗಳನ್ನು ಚಾರ್ಜ್ ಮಾಡಿಕೊಳ್ಳಬಹುದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಬುಕ್ಕಿಂಗ್ ಪಾವತಿ ವಿಧಾನವನ್ನು ಬದಲಿಸಿದ ಎಥರ್ ಎನರ್ಜಿ

ಇತ್ತೀಚೆಗೆ ಎಥರ್ ಎನರ್ಜಿ ಕಂಪನಿಯು ಎಥರ್ 450 ಎಕ್ಸ್ ಸ್ಕೂಟರಿಗಾಗಿ ಬೈ-ಬ್ಯಾಕ್ ಬಿಡುಗಡೆಗೊಳಿಸಿದೆ. ಈ ಯೋಜನೆಯಡಿಯಲ್ಲಿ ಎಥರ್ 450 ಎಕ್ಸ್ ಸ್ಕೂಟರ್ ಅನ್ನು 3 ವರ್ಷ ಬಳಸಿದ ನಂತರ ಕಂಪನಿಯು ಗ್ರಾಹಕರಿಂದ ನಿಗದಿತ ಮೊತ್ತವನ್ನು ನೀಡಿ ಸ್ಕೂಟರ್ ಅನ್ನು ಖರೀದಿಸುತ್ತದೆ.

ಬುಕ್ಕಿಂಗ್ ಪಾವತಿ ವಿಧಾನವನ್ನು ಬದಲಿಸಿದ ಎಥರ್ ಎನರ್ಜಿ

ಬೈ-ಬ್ಯಾಕ್ ಯೋಜನೆಯಡಿ ಗ್ರಾಹಕರಿಗೆ ಎಥರ್ 450 ಎಕ್ಸ್ ಸ್ಕೂಟರಿಗೆ ರೂ.85,000 ನೀಡಲಾಗುವುದು ಎಂದು ಎಥರ್ ಎನರ್ಜಿ ಕಂಪನಿ ತಿಳಿಸಿದೆ. ಗ್ರಾಹಕರು 3 ವರ್ಷಗಳ ನಂತರ ಸ್ಕೂಟರ್ ಬದಲಿಸಲು ಅಥವಾ ಎಥರ್ ಕಂಪನಿಯಿಂದ ಹೊಸ ಸ್ಕೂಟರ್ ಖರೀದಿಸಲು ಬಯಸಿದರೆ ಈ ಯೋಜನೆಯ ಮೂಲಕ ಹಳೆಯ ಸ್ಕೂಟರ್ ಅನ್ನು ಮಾರಾಟ ಮಾಡಿ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂದು ಕಂಪನಿ ಹೇಳಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಬುಕ್ಕಿಂಗ್ ಪಾವತಿ ವಿಧಾನವನ್ನು ಬದಲಿಸಿದ ಎಥರ್ ಎನರ್ಜಿ

ಎಥರ್ 450 ಎಕ್ಸ್ ಸ್ಕೂಟರ್ ಮಾರಾಟವಾಗುವ ಎಲ್ಲಾ ನಗರಗಳಲ್ಲಿ ಬೈ-ಬ್ಯಾಕ್ ಯೋಜನೆಯನ್ನು ನೀಡಲಾಗುವುದು. ಕಂಪನಿಯು ಎಥರ್ 450 ಪ್ಲಸ್ ಸ್ಕೂಟರ್ ಬೆಲೆಯನ್ನು ರೂ.10,000ಗಳಷ್ಟು ಕಡಿಮೆ ಮಾಡಿದೆ.

ಬುಕ್ಕಿಂಗ್ ಪಾವತಿ ವಿಧಾನವನ್ನು ಬದಲಿಸಿದ ಎಥರ್ ಎನರ್ಜಿ

ಬೆಲೆ ಕಡಿತದ ನಂತರ ಎಥರ್ 450 ಪ್ಲಸ್ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.39 ಲಕ್ಷಗಳಾಗಿದೆ. ಎಥರ್ ಎನರ್ಜಿ ಕಂಪನಿಯು ಎಥರ್ 450 ಎಕ್ಸ್ ಸ್ಕೂಟರ್ ಅನ್ನು ಸೆಪ್ಟೆಂಬರ್ 25ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಬುಕ್ಕಿಂಗ್ ಪಾವತಿ ವಿಧಾನವನ್ನು ಬದಲಿಸಿದ ಎಥರ್ ಎನರ್ಜಿ

ಕಂಪನಿಯು ಈ ಸ್ಕೂಟರಿನ ವಿತರಣೆಯನ್ನು ನವೆಂಬರ್‌ನಲ್ಲಿ ಆರಂಭಿಸಲಿದೆ. ಎಥರ್ ಎನರ್ಜಿ ಭಾರತದ ವಿವಿಧೆಡೆ ಚಾರ್ಜಿಂಗ್ ಗ್ರಿಡ್ ಗಳನ್ನು ನಿರ್ಮಿಸುತ್ತಿದೆ. 2020ರ ವೇಳೆಗೆ ದೇಶದಲ್ಲಿ 135 ಹೊಸ ಚಾರ್ಜಿಂಗ್ ಸ್ಟೇಷನ್‌ಗಳನ್ನು ಆರಂಭಿಸುವುದಾಗಿ ಎಥರ್ ಕಂಪನಿ ಹೇಳಿದೆ.

ಬುಕ್ಕಿಂಗ್ ಪಾವತಿ ವಿಧಾನವನ್ನು ಬದಲಿಸಿದ ಎಥರ್ ಎನರ್ಜಿ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿರುವ ದೇಶದ ಕೆಲವೇ ಕೆಲವು ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳಲ್ಲಿ ಎಥರ್ ಎನರ್ಜಿ ಕೂಡ ಒಂದು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಬುಕ್ಕಿಂಗ್ ಪಾವತಿ ವಿಧಾನವನ್ನು ಬದಲಿಸಿದ ಎಥರ್ ಎನರ್ಜಿ

ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತಯಾರಿಸುವುದರ ಜೊತೆಗೆ ಚಾರ್ಜಿಂಗ್ ಸ್ಟೇಷನ್‌ಗಳು ಹಾಗೂ ಸರ್ವೀಸ್ ಸೆಂಟರ್ ಗಳಂತಹ ಮೂಲಭೂತ ಸೌಕರ್ಯಗಳನ್ನೂ ಸಹ ಎಥರ್ ಎನರ್ಜಿ ಕಂಪನಿಯು ನೀಡುತ್ತಿದೆ.

Most Read Articles

Kannada
English summary
Ather energy offers full payment option on scooters booking in Bengaluru and Chennai. Read in Kannada.
Story first published: Saturday, October 31, 2020, 17:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X