Just In
- 14 min ago
ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ
- 50 min ago
ಕೈಗೆಟುಕುವ ದರದಲ್ಲಿ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಬಿಡುಗಡೆ
- 1 hr ago
ಭಾರತದಲ್ಲಿ ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್
- 13 hrs ago
ಮಧ್ಯಮ ಗಾತ್ರದ ಕಾರುಗಳಿಗೆ ಹೊಸ ಡೀಸೆಲ್ ಎಂಜಿನ್ ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
Don't Miss!
- News
ಬೆಂಗಳೂರಿನಲ್ಲಿ 24 ತಾಸಿನಲ್ಲಿ ಮೂರು ಶೂಟೌಟ್!
- Finance
"ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೇಲಿನ ನಗದು ಸಾಲಕ್ಕೆ ಬಡ್ಡಿ ಇಲ್ಲ"
- Sports
ಭಾರತ vs ಆಸ್ಟ್ರೇಲಿಯಾ: 91 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಶುಬ್ಮನ್ ಗಿಲ್
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬುಕ್ಕಿಂಗ್ ಪಾವತಿ ವಿಧಾನವನ್ನು ಬದಲಿಸಿದ ಎಥರ್ ಎನರ್ಜಿ
ಇನ್ನು ಮುಂದೆ ಎಥರ್ 450 ಎಕ್ಸ್ ಹಾಗೂ ಎಥರ್ 450 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಒಂದೇ ಬಾರಿ ಪೂರ್ತಿಯಾಗಿ ಹಣ ಪಾವತಿಸುವ ಮೂಲಕ ಬುಕ್ಕಿಂಗ್ ಮಾಡಬಹುದು. ಅಕ್ಟೋಬರ್ 31ರಿಂದ ಬೆಂಗಳೂರು ಹಾಗೂ ಚೆನ್ನೈನಲ್ಲಿ ಈ ಯೋಜನೆಯು ಜಾರಿಗೆ ಬರಲಿದೆ.

ಎಥರ್ ಸ್ಕೂಟರ್ಗೆ ಪೂರ್ತಿಯಾಗಿ ಹಣ ಪಾವತಿ ಮಾಡಿದ ನಂತರ 3 ವಾರಗಳಲ್ಲಿ ಸ್ಕೂಟರ್ ಅನ್ನು ವಿತರಿಸಲಾಗುತ್ತದೆ. ಕಂಪನಿಯು ಬೆಂಗಳೂರು ಹಾಗೂ ಚೆನ್ನೈ ನಗರಗಳಲ್ಲಿ ಫಾಸ್ಟ್ ಚಾರ್ಜಿಂಗ್ ಗ್ರಿಡ್ಗಳನ್ನು ನಿರ್ಮಿಸುತ್ತಿದೆ. ಎಥರ್ ಎನರ್ಜಿ ಕಂಪನಿಯು ಬೆಂಗಳೂರಿನಲ್ಲಿ 37 ಹಾಗೂ ಚೆನ್ನೈನಲ್ಲಿ 13 ವೇಗದ ಚಾರ್ಜಿಂಗ್ ಸ್ಟೇಷನ್ ಗಳನ್ನು ಆರಂಭಿಸಿದೆ.

ಈ ಚಾರ್ಜಿಂಗ್ ಸ್ಟೇಷನ್ ಗಳನ್ನು ಶಾಪಿಂಗ್ ಮಾಲ್, ಸಿನೆಮಾ ಹಾಲ್, ಪಾರ್ಕ್ ಹಾಗೂ ಶಾಪಿಂಗ್ ಕಾಂಪ್ಲೆಕ್ಸ್ ಗಳ ಸುತ್ತ ಮುತ್ತಲಿರುವ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ಇದರಿಂದಾಗಿ ಎಲೆಕ್ಟ್ರಿಕ್ ಸ್ಕೂಟರ್ ಹೊಂದಿರುವವರು ತಮ್ಮ ವಾಹನಗಳನ್ನು ಚಾರ್ಜ್ ಮಾಡಿಕೊಳ್ಳಬಹುದು.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಇತ್ತೀಚೆಗೆ ಎಥರ್ ಎನರ್ಜಿ ಕಂಪನಿಯು ಎಥರ್ 450 ಎಕ್ಸ್ ಸ್ಕೂಟರಿಗಾಗಿ ಬೈ-ಬ್ಯಾಕ್ ಬಿಡುಗಡೆಗೊಳಿಸಿದೆ. ಈ ಯೋಜನೆಯಡಿಯಲ್ಲಿ ಎಥರ್ 450 ಎಕ್ಸ್ ಸ್ಕೂಟರ್ ಅನ್ನು 3 ವರ್ಷ ಬಳಸಿದ ನಂತರ ಕಂಪನಿಯು ಗ್ರಾಹಕರಿಂದ ನಿಗದಿತ ಮೊತ್ತವನ್ನು ನೀಡಿ ಸ್ಕೂಟರ್ ಅನ್ನು ಖರೀದಿಸುತ್ತದೆ.

ಬೈ-ಬ್ಯಾಕ್ ಯೋಜನೆಯಡಿ ಗ್ರಾಹಕರಿಗೆ ಎಥರ್ 450 ಎಕ್ಸ್ ಸ್ಕೂಟರಿಗೆ ರೂ.85,000 ನೀಡಲಾಗುವುದು ಎಂದು ಎಥರ್ ಎನರ್ಜಿ ಕಂಪನಿ ತಿಳಿಸಿದೆ. ಗ್ರಾಹಕರು 3 ವರ್ಷಗಳ ನಂತರ ಸ್ಕೂಟರ್ ಬದಲಿಸಲು ಅಥವಾ ಎಥರ್ ಕಂಪನಿಯಿಂದ ಹೊಸ ಸ್ಕೂಟರ್ ಖರೀದಿಸಲು ಬಯಸಿದರೆ ಈ ಯೋಜನೆಯ ಮೂಲಕ ಹಳೆಯ ಸ್ಕೂಟರ್ ಅನ್ನು ಮಾರಾಟ ಮಾಡಿ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂದು ಕಂಪನಿ ಹೇಳಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಎಥರ್ 450 ಎಕ್ಸ್ ಸ್ಕೂಟರ್ ಮಾರಾಟವಾಗುವ ಎಲ್ಲಾ ನಗರಗಳಲ್ಲಿ ಬೈ-ಬ್ಯಾಕ್ ಯೋಜನೆಯನ್ನು ನೀಡಲಾಗುವುದು. ಕಂಪನಿಯು ಎಥರ್ 450 ಪ್ಲಸ್ ಸ್ಕೂಟರ್ ಬೆಲೆಯನ್ನು ರೂ.10,000ಗಳಷ್ಟು ಕಡಿಮೆ ಮಾಡಿದೆ.

ಬೆಲೆ ಕಡಿತದ ನಂತರ ಎಥರ್ 450 ಪ್ಲಸ್ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.39 ಲಕ್ಷಗಳಾಗಿದೆ. ಎಥರ್ ಎನರ್ಜಿ ಕಂಪನಿಯು ಎಥರ್ 450 ಎಕ್ಸ್ ಸ್ಕೂಟರ್ ಅನ್ನು ಸೆಪ್ಟೆಂಬರ್ 25ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಕಂಪನಿಯು ಈ ಸ್ಕೂಟರಿನ ವಿತರಣೆಯನ್ನು ನವೆಂಬರ್ನಲ್ಲಿ ಆರಂಭಿಸಲಿದೆ. ಎಥರ್ ಎನರ್ಜಿ ಭಾರತದ ವಿವಿಧೆಡೆ ಚಾರ್ಜಿಂಗ್ ಗ್ರಿಡ್ ಗಳನ್ನು ನಿರ್ಮಿಸುತ್ತಿದೆ. 2020ರ ವೇಳೆಗೆ ದೇಶದಲ್ಲಿ 135 ಹೊಸ ಚಾರ್ಜಿಂಗ್ ಸ್ಟೇಷನ್ಗಳನ್ನು ಆರಂಭಿಸುವುದಾಗಿ ಎಥರ್ ಕಂಪನಿ ಹೇಳಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿರುವ ದೇಶದ ಕೆಲವೇ ಕೆಲವು ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳಲ್ಲಿ ಎಥರ್ ಎನರ್ಜಿ ಕೂಡ ಒಂದು.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ತಯಾರಿಸುವುದರ ಜೊತೆಗೆ ಚಾರ್ಜಿಂಗ್ ಸ್ಟೇಷನ್ಗಳು ಹಾಗೂ ಸರ್ವೀಸ್ ಸೆಂಟರ್ ಗಳಂತಹ ಮೂಲಭೂತ ಸೌಕರ್ಯಗಳನ್ನೂ ಸಹ ಎಥರ್ ಎನರ್ಜಿ ಕಂಪನಿಯು ನೀಡುತ್ತಿದೆ.