ಸ್ಕೂಟರ್ ಮಾಲೀಕರೇ ಗಮನಿಸಿ, ಸ್ಕೂಟರ್ ಬಾಡಿಗೆಗೆ ನೀಡಿ ಹಣ ಸಂಪಾದಿಸಿ

ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯಾದ ಎಥರ್ ಎನರ್ಜಿ ಸ್ಕೂಟರ್‌ಗಳನ್ನು ಬಾಡಿಗೆಗೆ ನೀಡುವ ಬೌನ್ಸ್ ಕಂಪನಿಯ ಸಹಯೋಗದಲ್ಲಿ ಹೊಸ ಬಾಡಿಗೆ ಯೋಜನೆಯನ್ನು ಆರಂಭಿಸುತ್ತಿದೆ. ಈ ಯೋಜನೆಯಡಿಯಲ್ಲಿ ಎಥರ್ 450 ಸ್ಕೂಟರ್‌ ಹೊಂದಿರುವ ಗ್ರಾಹಕರು ಅವುಗಳನ್ನು ಬಳಸದೇ ಇದ್ದಾಗ ಬೌನ್ಸ್‌ನಲ್ಲಿ ಬಾಡಿಗೆಗೆ ನೀಡಬಹುದು.

ಸ್ಕೂಟರ್ ಮಾಲೀಕರೇ ಗಮನಿಸಿ, ಸ್ಕೂಟರ್ ಬಾಡಿಗೆಗೆ ನೀಡಿ ಹಣ ಸಂಪಾದಿಸಿ

ಎಥರ್ 450 ಎಲೆಕ್ಟ್ರಿಕ್ ಸ್ಕೂಟರ್‌ನ ಮಾಲೀಕರು ತಮ್ಮ ಸ್ಕೂಟರ್ ಬಗ್ಗೆ ಬೌನ್ಸ್ ಅಪ್ಲಿಕೇಶನ್‌ನಲ್ಲಿ ಮಾಹಿತಿ ನೀಡಬಹುದು. ಸ್ಕೂಟರ್ ಬಳಸದಿದ್ದಾಗ ಅದನ್ನು ಬಾಡಿಗೆಗೆ ನೀಡಿ ಹಣ ಸಂಪಾದಿಸಬಹುದು. ಸ್ಕೂಟರ್ ಅನ್ನು ಯಾವಾಗ, ಹೇಗೆ ಹಾಗೂ ಎಷ್ಟು ಕಾಲ ಬಾಡಿಗೆಗೆ ನೀಡುವುದು ಎಂಬುದು ಸ್ಕೂಟರ್ ಮಾಲೀಕರ ಮೇಲೆ ಅವಲಂಬಿತವಾಗಿರುತ್ತದೆ.

ಸ್ಕೂಟರ್ ಮಾಲೀಕರೇ ಗಮನಿಸಿ, ಸ್ಕೂಟರ್ ಬಾಡಿಗೆಗೆ ನೀಡಿ ಹಣ ಸಂಪಾದಿಸಿ

ಈ ಹೊಸ ಯೋಜನೆಯಡಿಯಲ್ಲಿ ತಮ್ಮ ಸ್ಕೂಟರ್‌ಗಳನ್ನು ಬೌನ್ಸ್ ಅಪ್ಲಿಕೇಶನ್‌ನಲ್ಲಿ ಬುಕ್ಕಿಂಗ್ ಮಾಡಬಹುದು. ಬುಕ್ಕಿಂಗ್ ಮಾಡಲು ರೂ.499 ಪಾವತಿಸಬೇಕಾಗುತ್ತದೆ. ಈ ಮೊತ್ತವು ಸ್ಕೂಟರ್‌ಗಳ ವಿಮೆ, ಕಮರ್ಷಿಯಲ್ ರಿಜಿಸ್ಟ್ರೇಷನ್ ಹಾಗೂ ಫೇಮ್ ಯೋಜನೆಯಡಿ 5 ವರ್ಷಗಳ ಉಚಿತ ಟ್ಯಾಕ್ಸ್‌ಗಳನ್ನು ಒಳಗೊಂಡಿರುತ್ತದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಸ್ಕೂಟರ್ ಮಾಲೀಕರೇ ಗಮನಿಸಿ, ಸ್ಕೂಟರ್ ಬಾಡಿಗೆಗೆ ನೀಡಿ ಹಣ ಸಂಪಾದಿಸಿ

ಎಥರ್ ಸ್ಕೂಟರ್‌ನ ಮಾಲೀಕರು ತಮ್ಮ ಸ್ಕೂಟರ್ ಅನ್ನು ಬೌನ್ಸ್ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಂಡ ನಂತರ ಸ್ಕೂಟರ್ ಬಾಡಿಗೆಗೆ ನೀಡುವ ಸಮಯ ಹಾಗೂ ದಿನವನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಯೋಜನೆಯ ಮುಖ್ಯ ಸಂಗತಿಯೆಂದರೆ ಸ್ಕೂಟರ್‌ಗಳನ್ನು ಬಾಡಿಗೆಗೆ ಪಡೆಯುವವರು ಸ್ಕೂಟರ್ ಮಾಲೀಕರ ಮನೆಯಿಂದ ಸ್ಕೂಟರ್‌ಗಳನ್ನು ತೆಗೆದುಕೊಂಡು ನಂತರ ಅಲ್ಲಿಯೇ ಬಿಡಬೇಕಾಗುತ್ತದೆ.

ಸ್ಕೂಟರ್ ಮಾಲೀಕರೇ ಗಮನಿಸಿ, ಸ್ಕೂಟರ್ ಬಾಡಿಗೆಗೆ ನೀಡಿ ಹಣ ಸಂಪಾದಿಸಿ

ಹೊಸ ಹಾಗೂ ಹಳೆಯ ಎಥರ್ ಸ್ಕೂಟರ್‌ಗಳನ್ನು ಹೊಂದಿರುವವರು ಈ ಯೋಜನೆಗಾಗಿ ತಮ್ಮ ಸ್ಕೂಟರ್‌ಗಳನ್ನು ನೋಂದಾಯಿಸಿಕೊಳ್ಳಬಹುದು. ಸ್ಕೂಟರ್ ಮಾಲೀಕರು ತಮ್ಮ ಸ್ಕೂಟರ್‌ಗಳನ್ನು ಆರ್‌ಟಿಒ ಕಚೇರಿಗಳಲ್ಲಿ ಕಮರ್ಷಿಯಲ್ ಉದ್ದೇಶಕ್ಕಾಗಿ ಮರು ನೋಂದಾಯಿಸಿಕೊಳ್ಳಬೇಕಾಗುತ್ತದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಸ್ಕೂಟರ್ ಮಾಲೀಕರೇ ಗಮನಿಸಿ, ಸ್ಕೂಟರ್ ಬಾಡಿಗೆಗೆ ನೀಡಿ ಹಣ ಸಂಪಾದಿಸಿ

ಈ ಯೋಜನೆಯಡಿಯಲ್ಲಿ ಸ್ಕೂಟರ್ ಮಾಲೀಕರು ಪ್ರತಿ ತಿಂಗಳಿಗೆ ರೂ.2500-3000ಗಳವರೆಗೆ ಸಂಪಾದಿಸಬಹುದು. ಸ್ಕೂಟರ್ ಮಾಲೀಕರು ತಮ್ಮ ಎಥರ್ ಸ್ಕೂಟರ್‌ನಲ್ಲಿರುವ ಟ್ರ್ಯಾಕ್ ಫೀಚರ್‌ನಿಂದಾಗಿ ಸ್ಕೂಟರ್‌ನ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬಹುದು. ಸ್ಕೂಟರ್ ಮಾಲೀಕರು ಯಾವುದೇ ಜಾಗದಲ್ಲಿದ್ದರೂ ಸ್ಕೂಟರ್‌ನ ವೇಗ, ಬ್ಯಾಟರಿ ಚಾರ್ಜ್, ಮಾರ್ಗ, ಬಳಕೆಯ ಸಮಯ ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳಬಹುದು.

ಸ್ಕೂಟರ್ ಮಾಲೀಕರೇ ಗಮನಿಸಿ, ಸ್ಕೂಟರ್ ಬಾಡಿಗೆಗೆ ನೀಡಿ ಹಣ ಸಂಪಾದಿಸಿ

ಈ ಯೋಜನೆಯಡಿಯಲ್ಲಿ ಸ್ಕೂಟರ್ ಮೆಂಟೆನೆನ್ಸ್‌ಗಾಗಿ ಎಥರ್ ನಿರ್ದಿಷ್ಟ ಪ್ಯಾಕೇಜ್ ಅನ್ನು ಬಿಡುಗಡೆಗೊಳಿಸಿದೆ. ಈ ಪ್ಯಾಕೇಜ್‌ನಡಿಯಲ್ಲಿ ಬೆಂಗಳೂರು ನಗರದಲ್ಲಿ ಎಥರ್‌ನ ಫಾಸ್ಟ್ ಚಾರ್ಜ್ ನೆಟ್‌ವರ್ಕ್ ಅನ್ನು ಒಂದು ವರ್ಷ ಉಚಿತವಾಗಿ ಬಳಸಬಹುದು. ಸದ್ಯಕ್ಕೆ ಈ ಪ್ಯಾಕೇಜ್‌ ಅನ್ನು ಬೆಂಗಳೂರು ನಗರದಲ್ಲಿ ಮಾತ್ರ ಆರಂಭಿಸಲಾಗಿದೆ.

Most Read Articles

Kannada
English summary
Ather Energy partner with bounce for electric scooter rental. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X