ಸೀಮಿತ ಸಂಖ್ಯೆಯ 450 ಎಕ್ಸ್ ಕಲೆಕ್ಟರ್ಸ್ ಎಡಿಷನ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಎಥರ್ ಎನರ್ಜಿ

ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸ್ಟಾರ್ಟ್ ಅಪ್ ಕಂಪನಿಯಾದ ಎಥರ್ ಎನರ್ಜಿ ತನ್ನ 450 ಎಕ್ಸ್ ಕಲೆಕ್ಟರ್ಸ್ ಆವೃತ್ತಿಯ ಸೀರೀಸ್ 1 ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಎಥರ್ 450 ಎಕ್ಸ್ ಕಲೆಕ್ಟರ್ಸ್ ಎಡಿಷನ್ ಸ್ಕೂಟರ್ ಅನ್ನು ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುವುದು.

ಸೀಮಿತ ಸಂಖ್ಯೆಯ 450 ಎಕ್ಸ್ ಕಲೆಕ್ಟರ್ಸ್ ಎಡಿಷನ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಎಥರ್ ಎನರ್ಜಿ

ಸೀರೀಸ್ 1 ಎಥರ್ 450 ಎಕ್ಸ್ ಕಲೆಕ್ಟರ್ಸ್ ಎಡಿಷನ್ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಹಲವಾರು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಗಳ ನಂತರ ಈ ಸ್ಕೂಟರ್ ವಿಶಿಷ್ಟವಾಗಿದ್ದು, ಉಳಿದ ಸ್ಕೂಟರ್ ಗಳಿಗಿಂತ ವಿಭಿನ್ನವಾಗಿ ಕಾಣಲಿದೆ. ಎಥರ್ 450 ಎಕ್ಸ್‌ ವಿಶೇಷ ಆವೃತ್ತಿಯ ಸ್ಕೂಟರಿನಲ್ಲಿ ಭಾರತದಲ್ಲಿಯೇ ಮೊದಲ ಬಾರಿಗೆ ಟೀಂಟೆಡ್ ಟ್ರಾನ್ಸ್ ಕ್ಯೂಲೆಂಟ್ ಬಾಡಿ ಪ್ಯಾನೆಲ್‌ಗಳನ್ನು ನೀಡಲಾಗುವುದು.

ಸೀಮಿತ ಸಂಖ್ಯೆಯ 450 ಎಕ್ಸ್ ಕಲೆಕ್ಟರ್ಸ್ ಎಡಿಷನ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಎಥರ್ ಎನರ್ಜಿ

ಕಲೆಕ್ಟರ್ಸ್ ಆವೃತ್ತಿಯು ಟ್ರಾನ್ಸ್ ಕ್ಯೂಲೆಂಟ್ ಸೈಡ್ ಪ್ಯಾನೆಲ್ ಗಳನ್ನು ಹೊಂದಿದೆ. ಈ ಪ್ಯಾನೆಲ್ ಗಳು ಈ ಎಲೆಕ್ಟ್ರಿಕ್ ಸ್ಕೂಟರಿಗೆ ಸ್ನೀಕ್ ಪೀಕ್ ನೀಡುತ್ತವೆ. ಟೀಂಟೆಡ್ ಪ್ಯಾನೆಲ್ ಗಳು ಎಥರ್‌ ಸ್ಕೂಟರಿಗೆ ವಿಭಿನ್ನವಾದ ಲುಕ್ ನೀಡುತ್ತವೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಸೀಮಿತ ಸಂಖ್ಯೆಯ 450 ಎಕ್ಸ್ ಕಲೆಕ್ಟರ್ಸ್ ಎಡಿಷನ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಎಥರ್ ಎನರ್ಜಿ

ಟೀಂಟೆಡ್ ಟ್ರಾನ್ಸ್ ಕ್ಯೂಲೆಂಟ್ ಬಾಡಿ ಪ್ಯಾನೆಲ್‌ಗಳಿಗೆ ಹೊಂದಿಕೊಳ್ಳಲು ಎಥರ್ 450 ಎಕ್ಸ್ ಸೀರೀಸ್ 1 ಕಲೆಕ್ಟರ್ಸ್ ಆವೃತ್ತಿಯನ್ನು ಸುತ್ತಲೂ ರೆಡ್ ಅಸೆಂಟ್ ಗಳನ್ನು ಹೊಂದಿರುವ ಹೊಸ ಹೈ-ಗ್ಲೋಸ್ ಮೆಟಾಲಿಕ್ ಬ್ಲ್ಯಾಕ್ ಬಣ್ಣದಲ್ಲಿ ನೀಡಲಾಗುವುದು.

ಸೀಮಿತ ಸಂಖ್ಯೆಯ 450 ಎಕ್ಸ್ ಕಲೆಕ್ಟರ್ಸ್ ಎಡಿಷನ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಎಥರ್ ಎನರ್ಜಿ

ಈ ರೆಡ್ ಅಸೆಂಟ್ ಗಳನ್ನು ಮುಂಭಾಗದ ಏಪ್ರನ್, ಸೈಡ್ ಪ್ಯಾನೆಲ್‌ ಹಾಗೂ ಸೀಟಿನ ಕೆಳಗಿರುವ ಟ್ರೆಲ್ಲಿಸ್ ಫ್ರೇಮ್ ಗಳ ಮೇಲೆ ಕಾಣಬಹುದು. ಕಲೆಕ್ಟರ್ಸ್ ಎಡಿಷನ್ ವಿನ್ಯಾಸಕ್ಕೆ ಹೊಂದಿಕೊಳ್ಳುವಂತೆ ಟಚ್‌ಸ್ಕ್ರೀನ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನಲ್ಲಿರುವ ಯುಐಯನ್ನು ಸಹ ಕೆಂಪು ಬಣ್ಣದಿಂದ ಅಪ್ ಡೇಟ್ ಮಾಡಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಸೀಮಿತ ಸಂಖ್ಯೆಯ 450 ಎಕ್ಸ್ ಕಲೆಕ್ಟರ್ಸ್ ಎಡಿಷನ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಎಥರ್ ಎನರ್ಜಿ

ಎಥರ್ 450 ಎಕ್ಸ್‌ ಸ್ಕೂಟರಿನ ವಿತರಣೆಯನ್ನು ನವೆಂಬರ್ ತಿಂಗಳಿನಿಂದ ಆರಂಭಿಸಲಾಗುವುದು. ಜನವರಿ 28ಕ್ಕೂ ಮುನ್ನ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ಮಾತ್ರ ಸೀರೀಸ್ 1 ಸ್ಕೂಟರ್ ಗಳನ್ನು ವಿತರಿಸಲಾಗುವುದು. ಕಲೆಕ್ಟರ್ಸ್ ಎಡಿಷನ್ ಸ್ಕೂಟರ್ ಅನ್ನು ಕಪ್ಪು ಬಣ್ಣದ ಪ್ಯಾನೆಲ್ ಗಳೊಂದಿಗೆ ವಿತರಿಸಲಾಗುವುದು.

ಸೀಮಿತ ಸಂಖ್ಯೆಯ 450 ಎಕ್ಸ್ ಕಲೆಕ್ಟರ್ಸ್ ಎಡಿಷನ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಎಥರ್ ಎನರ್ಜಿ

ಈ ಸ್ಕೂಟರ್ ಅನ್ನು ಟ್ರಾನ್ಸ್ ಕ್ಯೂಲೆಂಟ್ ಸೈಡ್ ಪ್ಯಾನೆಲ್ ಗಳೊಂದಿಗೆ 2021ರ ಮೇ ತಿಂಗಳಿನಿಂದ ಅಪ್ ಡೇಟ್ ಮಾಡಲಾಗುವುದು. ಎಥರ್ 450 ಎಕ್ಸ್ ಸ್ಕೂಟರ್ ಅನ್ನು ಮೊದಲ ಹಂತದಲ್ಲಿ ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಚ್ಚಿ, ಕೊಯಮತ್ತೂರು, ಮುಂಬೈ, ದೆಹಲಿ-ಎನ್‌ಸಿಆರ್, ಪುಣೆ, ಅಹಮದಾಬಾದ್, ಕೋಝಿಕೋಡ್, ಕೋಲ್ಕತಾ ಸೇರಿದಂತೆ 11 ನಗರಗಳಲ್ಲಿ ವಿತರಿಸಲಾಗುವುದು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಸೀಮಿತ ಸಂಖ್ಯೆಯ 450 ಎಕ್ಸ್ ಕಲೆಕ್ಟರ್ಸ್ ಎಡಿಷನ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಎಥರ್ ಎನರ್ಜಿ

ಈ ಸ್ಕೂಟರಿನ ಹೊರಭಾಗದಲ್ಲಿ ಕಾಸ್ಮೆಟಿಕ್ ಅಪ್ ಡೇಟ್ ಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಎಥರ್ 450 ಎಕ್ಸ್ ಕಲೆಕ್ಟರ್ಸ್ ಆವೃತ್ತಿಯು ಸ್ಟ್ಯಾಂಡರ್ಡ್ ಆವೃತ್ತಿಯಂತೆಯೇ ಅದೇ ಮಟ್ಟದ ಪರ್ಫಾಮೆನ್ಸ್ ನೀಡಲಿದೆ.

ಸೀಮಿತ ಸಂಖ್ಯೆಯ 450 ಎಕ್ಸ್ ಕಲೆಕ್ಟರ್ಸ್ ಎಡಿಷನ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಎಥರ್ ಎನರ್ಜಿ

ಈ ಬಗ್ಗೆ ಮಾತನಾಡಿರುವ ಎಥರ್ ಎನರ್ಜಿಯ ಸಿಇಒ ಹಾಗೂ ಸಹ-ಸಂಸ್ಥಾಪಕ ತರುಣ್ ಮೆಹ್ತಾ, ನಮ್ಮ ಎಲ್ಲಾ ಸ್ಕೂಟರ್‌ಗಳಂತೆ, ಸೀರೀಸ್ 1 ಅನ್ನು ಸಹ ಹೊಸದಾಗಿ ನಿರ್ಮಿಸಲಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಆಟೋಮೋಟಿವ್ ಗ್ರೇಡ್ ಟ್ರಾನ್ಸ್ ಕ್ಯೂಲೆಂಟ್ ಪ್ಯಾನೆಲ್ ಗಳನ್ನು ಈ ಸ್ಕೂಟರ್ ಮೂಲಕ ನೀಡಲಾಗುತ್ತಿದೆ. ಸೀರೀಸ್ 1 ಸ್ಕೂಟರ್ ಉತ್ಪಾದಿಸಲು ನಮ್ಮ ಕಂಪನಿಯ ತಂಡಗಳು ಹಲವಾರು ತಿಂಗಳುಗಳಿಂದ ಕಾರ್ಯನಿರ್ವಹಿಸಿವೆ. ಲಾಕ್‌ಡೌನ್ ನಡುವೆಯೂ ಅದ್ಭುತವಾದ ಸ್ಕೂಟರ್ ಉತ್ಪಾದಿಸಲು ಸಾಧ್ಯವಾಗಿದೆ ಎಂದು ಹೇಳಿದರು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಸೀಮಿತ ಸಂಖ್ಯೆಯ 450 ಎಕ್ಸ್ ಕಲೆಕ್ಟರ್ಸ್ ಎಡಿಷನ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಎಥರ್ ಎನರ್ಜಿ

ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ 6 ಕಿ.ವ್ಯಾನ ಎಲೆಕ್ಟ್ರಿಕ್ ಮೋಟರ್ ಹಾಗೂ 2.9 ಕಿ.ವ್ಯಾನ ಲಿಥಿಯಂ-ಐಯಾನ್ ಬ್ಯಾಟರಿ ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಪ್ರತಿ ಗಂಟೆಗೆ ಗರಿಷ್ಠ 85 ಕಿ.ಮೀ ವೇಗದಲ್ಲಿ ಚಲಿಸುತ್ತದೆ ಎಂದು ಹೇಳಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸ್ಟ್ಯಾಂಡರ್ಡ್ ಹಾಗೂ ಫಾಸ್ಟ್ ಚಾರ್ಜಿಂಗ್ ಗಳ ಮೂಲಕ ಚಾರ್ಜ್ ಮಾಡಬಹುದು.

ಸೀಮಿತ ಸಂಖ್ಯೆಯ 450 ಎಕ್ಸ್ ಕಲೆಕ್ಟರ್ಸ್ ಎಡಿಷನ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಎಥರ್ ಎನರ್ಜಿ

ಎಥರ್ 450 ಎಕ್ಸ್‌ ಕಲೆಕ್ಟರ್ಸ್ ಆವೃತ್ತಿಯನ್ನು ಇಕೋ, ರೈಡ್, ಸ್ಪೋರ್ಟ್ ಹಾಗೂ ವಾರ್ಪ್ ಎಂಬ ವಿಭಿನ್ನ ರೈಡಿಂಗ್ ಮೋಡ್ ಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 3.3 ಸೆಕೆಂಡುಗಳಲ್ಲಿ 0 - 40 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಮೂಲಕ ಈ ಸೆಗ್ ಮೆಂಟಿನಲ್ಲಿರುವ ವೇಗದ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಪಡೆದಿದೆ.

Most Read Articles

Kannada
English summary
Ather Energy unveils 450x collectors edition electric scooter. Read in Kannada.
Story first published: Saturday, September 26, 2020, 13:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X