Just In
Don't Miss!
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Movies
'ಓ ಮೈ ಗಾಡ್-2' ಚಿತ್ರಕ್ಕಾಗಿ ಮತ್ತೆ ಒಂದಾದ ಅಕ್ಷಯ್ ಕುಮಾರ್-ಪರೇಶ್ ರಾವಲ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿನೂತನ ಮಾದರಿಯ ಫೋಟೋಟೈಪ್ ಎಲೆಕ್ಟ್ರಿಕ್ ವಾಹನಗಳನ್ನು ಅನಾವರಣಗೊಳಿಸಿದ ವಿದ್ಯಾರ್ಥಿಗಳು
ದೇಶಾದ್ಯಂತ ಹಲವು ಆಟೋ ಉತ್ಪಾದನಾ ಸಂಸ್ಥೆಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಗೊಳಿಸಿ ಮಾರಾಟ ಮಾಡುತ್ತಿದ್ದು, ಮೆಕ್ಯಾನಿಕಲ್ ಎಂಜನಿಯರ್ ವಿದ್ಯಾರ್ಥಿಗಳು ಸಹ ವಿನೂತನ ಮಾದರಿ ಎಲೆಕ್ಟ್ರಿಕ್ ಬೈಕ್ ಮಾದರಿಗಳನ್ನು ಸಿದ್ದಪಡಿಸಿ ಪ್ರದರ್ಶನಗೊಳಿಸಿದ್ದಾರೆ.

ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಈಗಾಗಲೇ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ವಾಹನ ಮಾದರಿದಗಳ ಎಲೆಕ್ಟ್ರಿಕ್ ವರ್ಷನ್ ಬಿಡುಗಡೆ ಮಾಡುತ್ತಿದ್ದು, ಶಾರದಾ ವಿಶ್ವವಿದ್ಯಾಲಯ ಮತ್ತು ವರ್ಲ್ಡ್ ಡಿಸೈನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಹ ಮೊದಲ ಪ್ರಯತ್ನದಲ್ಲೇ ವಿನೂತನ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಸಿದ್ದಪಡಿಸಿ 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸುವ ಮೂಲಕ ಸಾರ್ವಜನಿಕರ ಗಮನಸೆಳೆದಿದ್ದಾರೆ.

ವಿಶ್ವಾದ್ಯಂತ ಪರಿಣಾಮಕಾರಿಯಾಗಿ ಮಾಲಿನ್ಯ ತಡೆಯುವುದಕ್ಕಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇದರೊಂದಿಗೆ ಆಟೋನಮಸ್ ವಾಹನಗಳ ಬಳಕೆಯು ಕೂಡಾ ಸಾಕಷ್ಟು ಆಕರ್ಷಣೆ ಪಡೆದುಕೊಳ್ಳುತ್ತಿದೆ.

ಈ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿರುವ ಶಾರದಾ ವಿಶ್ವವಿದ್ಯಾಲಯ ಮತ್ತು ವರ್ಲ್ಡ್ ಡಿಸೈನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅತಿ ಮೈಲೇಜ್ ನೀಡಬಲ್ಲದ ಕ್ಲಾಸಿಕ್ ಎಲೆಕ್ಟ್ರಿಕ್ ಬೈಕ್ ಜೊತೆ ಆಟೋನಮಸ್ ವಾಹನ ಮಾದರಿಯನ್ನು ಸಹ ಪ್ರದರ್ಶನಗೊಳಿಸಿದ್ದಾರೆ.

ಶಾರದಾ ವಿಶ್ವವಿದ್ಯಾರ್ಥಿಗಳು ಪ್ರದರ್ಶನಗೊಳಿಸಿದ ಎಲೆಕ್ಟ್ರಿಕ್ ಬೈಕ್ ಮಾದರಿಯು ಹಲವು ವಿಶೇಷತೆಗಳಿಂದ ಕೂಡಿದ್ದು, ಕಮ್ಯೂಟರ್ ಬೈಕ್ ಮಾದರಿಗಳಂತೆ ಡಿಸೈನ್ ಹೊಂದಿದ್ದರು ಅತಿ ಹೆಚ್ಚು ಮೈಲೇಜ್‌ನೊಂದಿಗೆ ಪರಿಸರ ಸ್ನೇಹಿ ವಾಹನಗಳಾಗಿವೆ. ಹೊಸ ಎಲೆಕ್ಟ್ರಿಕ್ ಬೈಕ್‌ಗಳ ನಿರ್ಮಾಣಕ್ಕಾಗಿ ಹೊಸ ಬಿಡಿಭಾಗಗಳನ್ನು ಖರೀದಿ ಮಾಡದೇ ಬಳಕೆ ಮಾಡಿ ಗುಜುರಿಗೆ ಹಾಕಲಾದ ವಾಹನಗಳ ಬಿಡಿಭಾಗಗಳನ್ನೇ ಬಳಕೆ ಮಾಡಿಕೊಂಡ ಹೊಸ ಎಲೆಕ್ಟ್ರಿಕ್ ಬೈಕ್‌ಗಳನ್ನು ಸಿದ್ದಪಡಿಸಲಾಗಿದೆ.

ಇದರಿಂದ ಹೊಸ ಎಲೆಕ್ಟ್ರಿಕ್ ವಾಹನ ಉತ್ಪಾದನಾ ವೆಚ್ಚವನ್ನು ಸಹ ತಗ್ಗಿಸಬಹುದು ಎನ್ನುವುದನ್ನು ತೊರಿಸಿಕೊಟ್ಟಿರುವ ವಿದ್ಯಾರ್ಥಿಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿಷನ್ ಮತ್ತು ವಾನ್ ಎನ್ನುವ ಎರಡು ಬೈಕ್ ಮಾದರಿಗಳನ್ನು ಅನಾವರಣಗೊಳಿಸಿದೆ.

ಇದರೊಂದಿಗೆ ಹರಿಯಾಣದ ವರ್ಲ್ಡ್ ಡಿಸೈನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಹ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದು, ಕ್ಯೂ ಎನ್ನುವ ಆಟೋನಮಸ್ ಕಾರು ಮಾದರಿಯನ್ನು ಅಭಿವೃದ್ದಿಗೊಳಿಸಿ ಪ್ರದರ್ಶಿಸಿದ್ದಾರೆ.

ವಿಶ್ವಾದ್ಯಾಂತ ಈಗಾಗಲೇ ಆಟೋನಮಸ್ ವಾಹನ ಓಡಾಟಕ್ಕೆ ಅಂತಿಮ ಹಂತದ ಸಿದ್ದತೆ ನಡೆಯುತ್ತಿದ್ದು, ಮುಂದುವರಿದ ಪ್ರಮುಖ ರಾಷ್ಟ್ರಗಳಲ್ಲಿ ಆಟೋನಮಸ್ ಕಾರುಗಳಿಗಾಗಿಯೇ ಪ್ಯತ್ಯೇಕ ಹೆದ್ದಾರಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಆದರೆ ಸದ್ಯಕ್ಕೆ ಆಟೋನಮಸ್ ಕಾರುಗಳ ಓಡಾಟಕ್ಕೆ ಅವಕಾಶವಿಲ್ಲದ್ದಿದ್ದರೂ ಭವಿಷ್ಯದಲ್ಲಿ ಹೊಸ ಕಾರುಗಳ ಓಡಾಟ ಸಾಧ್ಯವಾಗಲಿದ್ದು, ಈ ನಿಟ್ಟಿನಲ್ಲಿ ಕ್ಯೂ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಲಾಗಿದೆ.