ಶೂಟರ್ ಬಿಂದ್ರಾ ಇನ್ನು ಮುಂದೆ ಆಟೋ ಕಂಪನಿಯ ನಿರ್ದೇಶಕ

ಅಭಿನವ್ ಬಿಂದ್ರಾ, ಒಲಿಂಪಿಕ್ಸ್‌ನ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಏಕೈಕ ಭಾರತೀಯ. ಬಜಾಜ್ ಆಟೋ ಕಂಪನಿಯು ಅಭಿನವ್ ಬಿಂದ್ರಾ ಅವರನ್ನು ಕಂಪನಿಯ ಹೆಚ್ಚುವರಿ ಸ್ವತಂತ್ರ ನಿರ್ದೇಶಕರನ್ನಾಗಿ ನೇಮಿಸಿದೆ.

ಶೂಟರ್ ಬಿಂದ್ರಾ ಇನ್ನು ಮುಂದೆ ಆಟೋ ಕಂಪನಿಯ ನಿರ್ದೇಶಕ

ಬಜಾಜ್ ಕಂಪನಿಯಲ್ಲಿ ಅವರ ಅಧಿಕಾರವಧಿ 5 ವರ್ಷಗಳವರೆಗೆ ಇರಲಿದೆ. ಕಂಪನಿಯ ನಿಯಮಗಳ ಪ್ರಕಾರ, ಈ ಅಧಿಕಾರವಧಿಯು 2020ರ ಮೇ 20ರಿಂದ ಜಾರಿಗೆ ಬರಲಿದೆ. ಈ ನಿರ್ಧಾರವನ್ನು ಜುಲೈ 22ರಂದು ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಷೇರುದಾರರ ಅನುಮೋದನೆ ಪಡೆಯಲಾಗುವುದು.

ಶೂಟರ್ ಬಿಂದ್ರಾ ಇನ್ನು ಮುಂದೆ ಆಟೋ ಕಂಪನಿಯ ನಿರ್ದೇಶಕ

ನಾನು ಪಮ್ನಾನಿರವರ ನಿಧನದ ನಂತರ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಅಭಿನವ್ ಬಿಂದ್ರಾ ಅವರನ್ನು ನೇಮಿಸಲಾಗಿದೆ ಎಂದು ಬಜಾಜ್ ಆಟೋ ಕಂಪನಿ ಹೇಳಿದೆ. ಬಿಂದ್ರಾರವರು ಕಂಪನಿಯ ಯಾವುದೇ ನಿರ್ದೇಶಕರ ಜೊತೆಗೆ ಸಂಬಂಧವನ್ನು ಹೊಂದಿಲ್ಲ. ಈ ಕಾರಣಕ್ಕೆ ಅವರನ್ನು ನೇಮಿಸಲಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಶೂಟರ್ ಬಿಂದ್ರಾ ಇನ್ನು ಮುಂದೆ ಆಟೋ ಕಂಪನಿಯ ನಿರ್ದೇಶಕ

37 ವರ್ಷದ ಬಿಂದ್ರಾರವರು 2008ರ ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅವರು ತಮ್ಮ ವೃತ್ತಿಜೀವನದಲ್ಲಿ ಹಲವಾರು ಪದಕಗಳನ್ನು ಗೆದ್ದಿದ್ದಾರೆ. ಇವುಗಳಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಗೆದ್ದಿರುವ ಒಂಬತ್ತು ಪದಕಗಳು ಹಾಗೂ ಏಷ್ಯನ್ ಕ್ರೀಡಾಕೂಟದಲ್ಲಿ ಗೆದ್ದಿರುವ ಮೂರು ಚಿನ್ನದ ಪದಕಗಳು ಸೇರಿವೆ.

ಶೂಟರ್ ಬಿಂದ್ರಾ ಇನ್ನು ಮುಂದೆ ಆಟೋ ಕಂಪನಿಯ ನಿರ್ದೇಶಕ

2016ರಲ್ಲಿ ಬಿಂದ್ರಾರವರು ಸ್ಪರ್ಧಾತ್ಮಕ ಶೂಟಿಂಗ್‌ನಿಂದ ನಿವೃತ್ತರಾದರು. ನಂತರ ಅವರು ತಮ್ಮದೇ ಆದ ವ್ಯವಹಾರವನ್ನೂ ಆರಂಭಿಸಿದರು. ಬಿಂದ್ರಾರವರು ಪಿಜ್ಜಾ ರೆಸ್ಟೋರೆಂಟ್‌ನ ಭಾಗವಾದ ಪಿಜ್ಜಾ ವೆಟೊ ಸೇರಿದಂತೆ ಹಲವಾರು ಕಂಪನಿಗಳಲ್ಲಿ ನಿರ್ದೇಶಕರಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಬಿಂದ್ರಾ ಈ ಕಂಪನಿಯ ಸಹ ಸಂಸ್ಥಾಪಕರೂ ಹೌದು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಶೂಟರ್ ಬಿಂದ್ರಾ ಇನ್ನು ಮುಂದೆ ಆಟೋ ಕಂಪನಿಯ ನಿರ್ದೇಶಕ

ಕೆಲವು ತಿಂಗಳ ಹಿಂದೆ ಬಜಾಜ್ ಆಟೋ ಆಡಳಿತ ಮಂಡಳಿಯನ್ನು ಪುನರ್‌ರಚಿಸಲಾಗಿತ್ತು. ಇದಾದ ನಂತರ ಬಿಂದ್ರಾರವರನ್ನು ನೇಮಿಸಲಾಗಿದೆ. ರಾಜೀವ್ ಬಜಾಜ್‌ರವರು ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ಐದು ವರ್ಷಗಳ ಅವಧಿಗೆ ಬಜಾಜ್ ಆಟೋ ಕಂಪನಿಯ ಎಂಡಿ ಹಾಗೂ ಸಿಇಒ ಆಗಿ ಮತ್ತೆ ನೇಮಕಗೊಂಡಿದ್ದಾರೆ. ಗೀತಾ ಪಿರಮಾಲ್ ಅವರನ್ನು ಕಂಪನೀಯ ಸ್ವತಂತ್ರ ನಿರ್ದೇಶಕರಾಗಿ ಐದು ವರ್ಷಗಳ ಅವಧಿಗೆ ಮತ್ತೆ ನೇಮಿಸಲಾಗಿದೆ.

ಶೂಟರ್ ಬಿಂದ್ರಾ ಇನ್ನು ಮುಂದೆ ಆಟೋ ಕಂಪನಿಯ ನಿರ್ದೇಶಕ

ಲಾಕ್‌ಡೌನ್‌ನಿಂದ ವಿನಾಯಿತಿ ಸಿಕ್ಕ ಹಿನ್ನೆಲೆಯಲ್ಲಿ ಬಜಾಜ್ ಕಂಪನಿಯು ತನ್ನ ಶೋರೂಂ ಹಾಗೂ ಸರ್ವೀಸ್ ಸೆಂಟರ್‌ಗಳನ್ನು ಪುನರಾರಂಭಿಸಿದೆ. ಕಂಪನಿಯು ಮೇ 4ರಿಂದ ಗ್ರೀನ್ ಹಾಗೂ ಆರೇಂಜ್ ಝೋನ್‌ಗಳಲ್ಲಿರುವ ತನ್ನ ಶೋರೂಂಗಳನ್ನು ತೆರೆದಿದೆ. ಕಂಪನಿಯು ತನ್ನ ಸರ್ವೀಸ್ ಸೆಂಟರ್‌ಗಳಲ್ಲಿ ಕರೋನಾ ಸೋಂಕು ಹರಡುವುದನ್ನು ತಡೆಯಲು ಎಲ್ಲಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುತ್ತಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಶೂಟರ್ ಬಿಂದ್ರಾ ಇನ್ನು ಮುಂದೆ ಆಟೋ ಕಂಪನಿಯ ನಿರ್ದೇಶಕ

ಬಜಾಜ್ ಆಟೋ ತನ್ನ ವಾಹನಗಳ ಫ್ರೀ ಸರ್ವೀಸ್ ಹಾಗೂ ವಾರಂಟಿ ಅವಧಿಯನ್ನು ವಿಸ್ತರಿಸಿದೆ. ಕಂಪನಿಯುಫ್ರೀ ಸರ್ವೀಸ್ ಹಾಗೂ ವಾರಂಟಿ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಿದೆ. ಮಾರ್ಚ್ 20ರಿಂದ ಮೇ 31ರವರೆಗೆ ಫ್ರೀ ಸರ್ವೀಸ್ ಹಾಗೂ ವಾರಂಟಿ ಹೊಂದಿದ್ದ ವಾಹನಗಳಿಗೆ ಈ ಯೋಜನೆ ಅನ್ವಯವಾಗಲಿದೆ.

Most Read Articles

Kannada
Read more on ಬಜಾಜ್ bajaj
English summary
Bajaj Auto appoints Abhinav Bindra as additional independent director. Read in Kannada.
Story first published: Friday, May 22, 2020, 16:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X