ದುಬಾರಿಯಾಯ್ತು ಬಿಎಸ್-6 ಬಜಾಜ್ ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೈಕ್

ಬಜಾಜ್ ಆಟೋ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹಲವು ಜನಪ್ರಿಯ ಮಾದರಿಗಳ ಬೆಲೆಯನ್ನು ಏರಿಸಿದೆ. ಈ ಪಟ್ಟಿಯಲ್ಲಿ ಬಿಎಸ್-6 ಬಜಾಜ್ ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಮಾದರಿಯು ಕೂಡ ಸೇರ್ಪಡೆಯಾಗಿದೆ. ಈ ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಮಾದರಿಯನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಗೊಳಿಸಿತ್ತು.

ದುಬಾರಿಯಾಯ್ತು ಬಿಎಸ್-6 ಬಜಾಜ್ ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೈಕ್

ಬಿಎಸ್-6 ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ರೂ.93,677 ಬೆಲೆಯಲ್ಲಿ ಬಿಡುಗಡೆಗೊಳಿಸಿದ್ದರು. ಇದೀಗ ಈ ಮಾದರಿಯ ಬೆಲೆಯನ್ನು ರೂ.1,216 ರವರೆಗೆ ಹೆಚ್ಚಿಸಲಾಗಿದೆ. ಬೆಲೆಯನ್ನು ಹೆಚ್ಚಿಸಿದ ಬಳಿಕ ಬಿಎಸ್-6 ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.94,893 ಗಳಾಗಿದೆ. ಬಜಾಜ್ ಅವೆಂಜರ್ ಬೈಕುಗಳು ತನ್ನ ವಿಶಿಷ್ಟವಾದ ವಿನ್ಯಾಸಗಳಿಂದ ಜನಪ್ರಿಯತೆಯನ್ನು ಹೊಂದಿವೆ

ದುಬಾರಿಯಾಯ್ತು ಬಿಎಸ್-6 ಬಜಾಜ್ ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೈಕ್

ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಬಿಎಸ್-6 ಅಪ್‌ಡೇಟ್‌ನ ನಂತರ ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಮಾದರಿಯು ಪಡೆದ ಮೊದಲ ಬೆಲೆ ಏರಿಕೆ ಇದಾಗಿದೆ. ಬೆಲೆಯನ್ನು ಹೊರತುಪಡಿಸಿ ಇತರ ಬದಲಾವಣೆಗಳು ಯಾವುದು ಇಲ್ಲ.

MOST READ: ಜನಪ್ರಿಯ ಬಿಎಸ್-6 ಸ್ಪೋರ್ಟ್ ಬೈಕಿನ ಬೆಲೆ ಹೆಚ್ಚಿಸಿದ ಟಿವಿಎಸ್

ದುಬಾರಿಯಾಯ್ತು ಬಿಎಸ್-6 ಬಜಾಜ್ ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೈಕ್

ಅವೆಂಜರ್ ಸ್ಟ್ರೀಟ್ 160 ಬೈಕಿನಲ್ಲಿ 160 ಸಿಸಿ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ನಲ್ಲಿ ಸಹ ಫ್ಯೂಯಲ್ ಇಂಜೆಕ್ಷನ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ.

ದುಬಾರಿಯಾಯ್ತು ಬಿಎಸ್-6 ಬಜಾಜ್ ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೈಕ್

ಹೊಸ ಅವೆಂಜರ್ ಸ್ಟ್ರೀಟ್ 160 ಬೈಕಿನಲ್ಲಿರುವ ಎಂಜಿನ್ 14.8 ಬಿಹೆಚ್‌ಪಿ ಪವರ್ ಹಾಗೂ 13.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನಲ್ಲಿ 5-ಸ್ಪೀಡಿನ ಗೇರ್‌ಬಾಕ್ಸ್ ಜೋಡಿಸಲಾಗಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ದುಬಾರಿಯಾಯ್ತು ಬಿಎಸ್-6 ಬಜಾಜ್ ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೈಕ್

ಈ ಬೈಕಿನಲ್ಲಿ ಎಂಜಿನ್ ಅಪ್ ಗ್ರೇಡ್ ಹೊರತಾಗಿ, ಅವೆಂಜರ್ ಕ್ರೂಸ್ 220 ಬೈಕಿನಲ್ಲಿ ಬೇರೆ ಯಾವುದೇ ಬದಲಾವಣೆಗಳಾಗಿಲ್ಲ. ವಿನ್ಯಾಸವನ್ನು ಮೊದಲಿನಂತೆ ಉಳಿಸಿಕೊಳ್ಳಲಾಗಿದೆ. ಈ ಬೈಕ್ ಬಹುತೇಕ ಭಾಗಗಳಲ್ಲಿ ಒಂದೇ ಉದ್ದದ ವಿಂಡ್‌ಸ್ಕ್ರೀನ್ ಹಾಗೂ ಕ್ರೋಮ್ ಗಳನ್ನು ಹೊಂದಿದೆ.

ದುಬಾರಿಯಾಯ್ತು ಬಿಎಸ್-6 ಬಜಾಜ್ ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೈಕ್

ಇದರೊಂದಿಗೆ ಬಜಾಜ್ ಕಂಪನಿಯು ಬಿಎಸ್-6 ಅವೆಂಜರ್ 220 ಕ್ರೂಸ್ ಬೈಕಿನ ಬೆಲೆಯನ್ನು ಹೆಚ್ಚಿಸಲಾಗಿದೆ. ಈ ಬೈಕಿನ ಬೆಲೆಯನ್ನು ರೂ.2,502ಗಳವರೆಗೆ ಬೆಲೆಯನ್ನು ಹೆಚ್ಚಿಸಲಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ದುಬಾರಿಯಾಯ್ತು ಬಿಎಸ್-6 ಬಜಾಜ್ ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೈಕ್

ಬಜಾಜ್ ಅವೆಂಜರ್ ಕ್ರೂಸ್ 220 ಬೈಕಿನಲ್ಲಿ 220 ಸಿಸಿಯ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಈ ಎಂಜಿನ್ 8,500 ಆರ್‌ಪಿಎಂನಲ್ಲಿ 18.7 ಬಿಹೆಚ್‌ಪಿ ಪವರ್ ಹಾಗೂ 7,000 ಆರ್‌ಪಿಎಂನಲ್ಲಿ 17.5 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನಲ್ಲಿ 5-ಸ್ಪೀಡಿನ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ದುಬಾರಿಯಾಯ್ತು ಬಿಎಸ್-6 ಬಜಾಜ್ ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೈಕ್

ಬಜಾಜ್ ಆಟೋ ಕಂಪನಿಯು ಬಿಎಸ್-6 ಬಜಾಜ್ ಅವೆಂಜರ್ ಸ್ಟ್ರೀಟ್ 160 ಕ್ರೂಸರ್ ಬೆಲೆಯನ್ನು ಹೆಚ್ಚಿಸಲಾಗಿದೆ. ಈ ಬೈಕಿನ ಬೆಲೆಯನ್ನು ಹೆಚ್ಚಿಸಿರುವುದು ಮಾರಾಟದ ಮೇಲೆ ಪರಿಣಾಮವನ್ನು ಬೀರುತ್ತಾ ಎಂಬುದು ಕಾದು ನೋಡಬೇಕು

Most Read Articles

Kannada
English summary
Benefits up to Rs 48,000 on Maruti Suzuki S-Presso in June 2020. Read In Kannada.
Story first published: Tuesday, June 9, 2020, 9:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X