ಕರೋನಾ ಭೀತಿಯಿಂದ ಜನಪ್ರಿಯ ಬಜಾಜ್ ಬೈಕುಗಳ ಮಾರಾಟದಲ್ಲಿ ಕುಸಿತ

ಜನಪ್ರಿಯ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯಾದ ಬಜಾಜ್ ಆಟೋ ಕಳೆದ ಮೇ ತಿಂಗಳ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಇದರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನದ ಮಾರಾಟ ಮತ್ತು ರಫ್ತು ಕೂಡ ಒಳಗೊಂಡಿದೆ.

ಕರೋನಾ ಭೀತಿಯಿಂದ ಜನಪ್ರಿಯ ಬಜಾಜ್ ಬೈಕುಗಳ ಮಾರಾಟದಲ್ಲಿ ಕುಸಿತ

ಕಳೆದ ಮೇ ತಿಂಗಳಲ್ಲಿ ಬಜಾಜ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಒಟ್ಟು 39,286 ಯು‍‍ನಿ‍‍ಟ್‍ಗಳನ್ನು ಮಾರಾಟ ಮಾಡಿದರೆ, 73,512 ಯು‍‍ನಿ‍‍ಟ್‍ಗಳನ್ನು ರಫ್ತು ಮಾಡಲಾಗಿದೆ. ಒಟ್ಟಾರೆ ಮಾರಾಟವನ್ನು ನೋಡುವುದಾರೆ ಬಜಾಜ್ ಕಂಪನಿಯು ಮಾರಾಟದಲ್ಲಿ ಶೇ.69 ರಷ್ಟು ಕುಸಿತವಾಗಿದೆ. ಕಳೆದ ವರ್ಷದ ಮೇ ತಿಂಗಳಲ್ಲಿ ಕಂಪನಿಯು 3.65 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದೆ.

ಕರೋನಾ ಭೀತಿಯಿಂದ ಜನಪ್ರಿಯ ಬಜಾಜ್ ಬೈಕುಗಳ ಮಾರಾಟದಲ್ಲಿ ಕುಸಿತ

ಕಳೆದ ವರ್ಷದ ಮೇ ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಮಾತ್ರ 2,05,721 ಯು‍‍ನಿ‍‍ಟ್‍ಗಳನ್ನು ಮಾರಾಟ ಮಾಡಿದ್ದರು. ಇದನ್ನು ಈ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಶೇ.81 ರಷ್ಟು ಮಾರಾಟದಲ್ಲಿ ಕುಸಿತವನ್ನು ದಾಖಲಿಸಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಕರೋನಾ ಭೀತಿಯಿಂದ ಜನಪ್ರಿಯ ಬಜಾಜ್ ಬೈಕುಗಳ ಮಾರಾಟದಲ್ಲಿ ಕುಸಿತ

ಬಜಾಜ್ ಆಟೋ ಕಮರ್ಷಿಯಲ್ ವಾಹನ ವಿಭಾಗದಲ್ಲಿಯು ಹಿಂದಿನ ತಿಂಗಳಲ್ಲಿ ಮಾರಾಟ ಕುಸಿತವನ್ನು ಕಂಡಿದೆ. ಕಳೆದ ವರ್ಷದ ಮೇ ತಿಂಗಳ ಕಮರ್ಷಿಯಲ್ ವಾಹನದ ಮಾರಾಟವನ್ನು ಈ ವರ್ಷದ ಮಾರಾಟಕ್ಕೆ ಹೋಲಿಸಿದರೆ ಶೇ.99 ರಷ್ಟು ದೊಡ್ಡ ಕುಸಿತವಾಗಿದೆ.

ಕರೋನಾ ಭೀತಿಯಿಂದ ಜನಪ್ರಿಯ ಬಜಾಜ್ ಬೈಕುಗಳ ಮಾರಾಟದಲ್ಲಿ ಕುಸಿತ

ಇನ್ನು ಕಳೆದ ವರ್ಷದ ಮೇ ತಿಂಗಳ ಕಮರ್ಷಿಯಲ್ ವಾಹನಗಳ ರಫ್ತನ್ನು ನೋಡಿದರೆ ಶೇ.65 ರಷ್ಟು ಕುಸಿತವಾಗಿದೆ. ಒಟ್ಟಾರೆ ಬಜಾಜ್ ಕಂಪನಿಯ ಕಮರ್ಷಿಯಲ್ ವಾಹನಗಳ ಮಾರಾಟ ಮತ್ತು ರಫ್ತು ಸೇರಿ ಒಟ್ಟಾರೆ ಶೇ.82 ರಷ್ತು ಕುಸಿತವನ್ನು ಕಂಡಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಕರೋನಾ ಭೀತಿಯಿಂದ ಜನಪ್ರಿಯ ಬಜಾಜ್ ಬೈಕುಗಳ ಮಾರಾಟದಲ್ಲಿ ಕುಸಿತ

ಬಜಾಜ್ ಆಟೋ ಕಂಪನಿಯು ಇತ್ತೀಚೆಗೆ ದೇಶದ ವಿವಿಧಡೆ ಇರುವ ಸಾವಿರಾರು ವಾಹನ ಮಾರಾಟ ಕೇಂದ್ರಗಳನ್ನು ಪುನಾರಂಭಿಸಿದ್ದು, ವೈರಸ್ ಭೀತಿ ಹಿನ್ನಲೆಯಲ್ಲಿ ಗರಿಷ್ಟ ಪ್ರಮಾಣದ ಪ್ರೊಟೋಕಾಲ್ ನಿಯಮಗಳನ್ನು ಜಾರಿಗೊಳಿಸಿದೆ.

ಕರೋನಾ ಭೀತಿಯಿಂದ ಜನಪ್ರಿಯ ಬಜಾಜ್ ಬೈಕುಗಳ ಮಾರಾಟದಲ್ಲಿ ಕುಸಿತ

ಬಜಾಜ್ ಆಟೋ ಕಂಪನಿಯು ತನ್ನ ಜನಪ್ರಿಯ ಪ್ಲಾಟಿನಾ 100 ಬೈಕನ್ನು ಬಿಎಸ್-6 ಆವೃತ್ತಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಈ ಪ್ಲಾಟಿನಾ 100 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಬೈಕುಗಳಲ್ಲಿ ಒಂದಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಕರೋನಾ ಭೀತಿಯಿಂದ ಜನಪ್ರಿಯ ಬಜಾಜ್ ಬೈಕುಗಳ ಮಾರಾಟದಲ್ಲಿ ಕುಸಿತ

ಬಜಾಜ್ ಪ್ಲಾಟಿನಾ 100 ಬೈಕಿನಲ್ಲಿ 102 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 7.7 ಬಿಹೆಚ್‍ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 8.34 ಎನ್ಎಂ ಟಾರ್ಕ್ ಅನ್ನು ಉತ್ಪಾಸುತ್ತದೆ.

ಕರೋನಾ ಭೀತಿಯಿಂದ ಜನಪ್ರಿಯ ಬಜಾಜ್ ಬೈಕುಗಳ ಮಾರಾಟದಲ್ಲಿ ಕುಸಿತ

ಜನಪ್ರಿಯ ಬಜಾಜ್ ಆಟೋ ಕಂಪನಿಯು ತನ್ನ ಮಾರಾಟವನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಕರೋನಾ ಭೀತಿಯಿಂದ ಮಾರಾಟದಲ್ಲಿ ದೊಡ್ಡ ಕುಸಿತ ಉಂಟಾಗಿದರೂ ನಿಧಾನವಾಗಿ ಚೇತರಿಕೆ ಕಾಣಬಹುದು ಎಂದು ನಿರೀಕ್ಷಿಸಬಹುದು.

Most Read Articles

Kannada
English summary
Bike Sales Report For May 2020: Bajaj Auto Registers 69% Decline With 1.12 Lakh Sales Last Month. Read In Kannada.
Story first published: Tuesday, June 2, 2020, 17:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X