Just In
- 3 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 3 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 5 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 6 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನವೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಬಜಾಜ್ ಆಟೋ
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬಜಾಜ್ ಆಟೋ 2020ರ ನವೆಂಬರ್ ತಿಂಗಳಿನ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಈ ವರದಿಯ ಪ್ರಕಾರ ಬಜಾಜ್ ಆಟೋ ಕಂಪನಿಯು ಕಳೆದ ತಿಂಗಳು 3.85 ಲಕ್ಷ ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟಗೊಳಿಸಿವೆ.
2020ರ ನವೆಂಬರ್ ತಿಂಗಳಿನ ಮಾರಾಟವನ್ನು 2019ರ ನವೆಂಬರ್ ತಿಂಗಳಿನ ಮಾರಾಟಕ್ಕೆ ಹೋಲಿಸಿದರೆ ಶೇ.12 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಇನ್ನು 2020ರ ನವೆಂಬರ್ ತಿಂಗಳಿನಲ್ಲಿ ಬಜಾಜ್ ಆಟೋ ಕಂಪನಿಯು ಒಟ್ಟು 3,84,993 ಯುನಿಟ್ಗಳನ್ನು ಮಾರಾಟಗೊಳಿಸಿವೆ. ಇದರಲ್ಲಿ 1,88,196 ಯುನಿಟ್ಗಳು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದರೆ, ಉಳಿದ 1,96,797 ಯುನಿಟ್ಗಳನ್ನು ರಫ್ತು ಮಾಡಲಾಗಿದೆ.
ಬಜಾಜ್ ಆಟೋ ಕಂಪನಿಯು 2020ರ ನವೆಂಬರ್ ತಿಂಗಳಿನ ದೇಶಿಯ ಮಾರುಕಟ್ಟೆಯಲ್ಲಿನ ಮಾರಟದಲ್ಲಿ ಶೇ.7 ರಷ್ಟು ಬೆಳವಣಿಗೆಯನ್ನು ದಾಖಲಿಸಿದರೆ, ರಫ್ತು ಮಾಡುವುದರಲ್ಲಿ ಶೇ.18 ರಷ್ಟು ಬೆಳವಣಿಗೆಯನ್ನು ಸಾಧಿಸಿದ್ದಾರೆ.
MOST READ: ಅಕ್ಟೋಬರ್ ತಿಂಗಳಿನಲ್ಲಿ 8 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್
ಇದೇ ಅವಧಿಯಲ್ಲಿ, ಬಜಾಜ್ ಆಟೋ ಕಂಪನಿಯು ಕಮರ್ಷಿಯಲ್ ವಾಹನಗಳ ಮಾರಾಟದಲ್ಲಿ ಶೇ.38 ರಷ್ಟು ಕುಸಿತವನ್ನು ಕಂಡಿದೆ. 2020ರ ನವೆಂಬರ್ ತಿಂಗಳಿನಲ್ಲಿ ಕಮರ್ಷಿಯಲ್ ವಾಹನಗಳ 37,247 ಯುನಿಟ್ಗಳನ್ನು ಮಾರಾಟಗೊಳಿಸಿವೆ.
MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್ಟಾರ್ಕ್ 125 ಸ್ಕೂಟರ್
ಇನ್ನು 2019ರ ನವೆಂಬರ್ ತಿಂಗಳಿನಲ್ಲಿ ಕಮರ್ಷಿಯಲ್ ವಾಹನಗಳ 59,777 ಯುನಿಟ್ಗಳನ್ನು ಮಾರಾಟಗೊಳಿಸಿವೆ. ಕಮರ್ಷಿಯಲ್ ವಾಹನಗಳ ಮಾರಾಟವನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.66 ರಷ್ಟು ಭಾರಿ ಕುಸಿತ ಕಂಡಿದೆ.
2020ರ ನವೆಂಬರ್ (ಟಿಡಬ್ಲ್ಯೂ + ಸಿವಿ) ಬಜಾಜ್ ನೋಂದಾಯಿಸಿದ ಒಟ್ಟು ಮಾರಾಟದ ಬಗ್ಗೆ ಮಾತನಾಡುತ್ತಾ, ಕಂಪನಿಯು ಕಳೆದ ತಿಂಗಳು 422,240 ಯುನಿಟ್ ಮಾರಾಟವನ್ನು ದಾಖಲಿಸಿದೆ. 2019 ರ ನವೆಂಬರ್ನಲ್ಲಿ 403,224 ಯುನಿಟ್ ಮಾರಾಟವನ್ನು ದಾಖಲಿಸಿದಾಗ ಕಂಪನಿಯ ಮಾರಾಟಕ್ಕೆ ಹೋಲಿಸಿದರೆ ಇದು 5% ರಷ್ಟು ಹೆಚ್ಚಾಗಿದೆ.
2020ರ ಏಪ್ರಿಲ್ ತಿಂಗಳಿನಿಂದ ನವೆಂಬರ್ ತಿಂಗಳಿನ ಮಾರಾಟ ಅಂಕಿಅಂಶಗಳನ್ನು ನೋಡಿದರೆ, ಬಜಾಜ್ ಆಟೋ ಕಂಪನಿಯು ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.21 ರಷ್ಟು ಮತ್ತು ಕಮರ್ಷಿಯಲ್ ವಾಹನಗಳ ಮಾರಾಟದಲ್ಲಿ ಶೇ.56 ರಷ್ಟು ಕುಸಿತವನ್ನು ದಾಖಲಿಸಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್
2020ರ ಏಪ್ರಿಲ್ - ನವೆಂಬರ್ ತಿಂಗಳುಗಳ ನಡುವೆ ಬಜಾಜ್ ಆಟೋ ಕಂಪನಿಯು 2,212,617 ಯುನಿಟ್ಗಳನ್ನು ಮಾರಾಟಗೊಳಿಸಿವೆ. ಇದರಲ್ಲಿ 1,193,002 ಯುನಿಟ್ಗಳು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದರೆ, ಉಳಿದ 1,026,675 ಯುನಿಟ್ಗಳನ್ನು ರಫ್ತು ಮಾಡಲಾಗಿದೆ.
2020ರ ನವೆಂಬರ್ ತಿಂಗಳಿನ ಮಾರಾಟದಲ್ಲಿ ಬಜಾಜ್ ಆಟೋ ಕಂಪನಿಯು ಉತ್ತಮ ಬೆಳವಣಿಗೆಯನ್ನು ಸಾಧಿಸಿದೆ. ಹಬ್ಬದ ಸೀಸನ್ ಮತ್ತು ಪಲ್ಸರ್ ಬೈಕುಗಳನ್ನು ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಳಿಸಿರುವುದು ಮಾರಾಟವನ್ನು ಹೆಚ್ಚಿಸಲು ಬಜಾಜ್ ಆಟೋ ಕಂಪನಿಗೆ ಸಹಾಯವಾಗಿದೆ.