ಬಿಡುಗಡೆಯಾದವು ಅತಿ ಕಡಿಮೆ ಬೆಲೆಯ ಬಿಎಸ್-6 ಬೈಕ್‍‍ಗಳು

ಬಜಾಜ್ ಆಟೋ ಕಂಪನಿಯು ಬಿಎಸ್-6 ಎಂಜಿನ್ ಹೊಂದಿರುವ ಸಿಟಿ ಮತ್ತು ಪ್ಲಾಟಿನಾ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಜನಪ್ರಿಯ ಸಿಟಿ ಮತ್ತು ಪ್ಲಾಟಿನಾ ಬೈಕ್‍ಗಳು ಅತಿ ಅಗ್ಗದ ಬೆಲೆಯನ್ನು ಹೊಂದಿವೆ.

ಬಿಡುಗಡೆಯಾದವು ಅತಿ ಕಡಿಮೆ ಬೆಲೆಯ ಬಿಎಸ್-6 ಬೈಕ್‍‍ಗಳು

ಬಜಾಜ್ ಕಂಪನಿಯು ತನ್ನ ಸರಣಿಯಲ್ಲಿರುವ ಜನಪ್ರಿಯ ಬೈಕ್‍‍ಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುತ್ತಿದೆ. ಬಜಾಜ್ ಆಟೋ ಅಧ್ಯಕ್ಷರಾದ ಸಾರಂಗ್ ಕಾನೆಡ ಅವರು ಮಾತನಾಡಿ, ಕಂಪನಿಯು ಹೊಸ ಬಿಎಸ್-6 ಬೈಕ್‍‍ಗಳನ್ನು ಬಿಡುಗಡೆಗೊಳಿಸುವುದರೊಂದಿಗೆ, ತನ್ನ ಸರಣಿಯಲ್ಲಿರುವ ಇತರ ಮಾದರಿಗಳನ್ನು ಬಿಎಸ್-6 ನಿಯಮಕ್ಕೆ ಅನುಗುಣವಾಗಿ ನವೀಕರಿಸಲು ಪ್ರಾರಂಭಿಸಿದ್ದೇವೆ.

ಬಿಡುಗಡೆಯಾದವು ಅತಿ ಕಡಿಮೆ ಬೆಲೆಯ ಬಿಎಸ್-6 ಬೈಕ್‍‍ಗಳು

ಬಜಾಜ್ ಆಟೋ ಮುಂದಿನ ವಾರಗಳಲ್ಲಿ ತಮ್ಮ ಸರಣಿಯಲ್ಲಿ ಇತರ ಮಾದರಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಬಿಡುಗಡೆಗೊಳಿಸಲಿದೆ. ಸಿಟಿ ಮತ್ತು ಪ್ಲಾಟಿನಾ ಬೈಕ್‍‍ಗಳೊಂದಿಗೆ ನಮ್ಮ ವಿಶ್ವ ದರ್ಜೆಯ ಆರ್ ಆಂಡ್ ಡಿ ತಂಡವು ನಮ್ಮ ಕೊಡುಗೆಗಳ ಸಾಮರ್ಥ್ಯಗಳನ್ನು ಹೆಚ್ಚಿಸಿದೆ.

ಬಿಡುಗಡೆಯಾದವು ಅತಿ ಕಡಿಮೆ ಬೆಲೆಯ ಬಿಎಸ್-6 ಬೈಕ್‍‍ಗಳು

ಆದರೆ ನಾವು ಕಟ್ಟು ನಿಟ್ಟಾದ ಬಿಎಸ್-6 ಮಾದನದಂಡಗಳನ್ನು ಅನುಸರಿ ಬೈಕ್‍ಗಳನ್ನು ಅಭಿವೃಧಿಪಡಿಸುತ್ತೇವೆ. ಇದರಿಂದಾಗಿ ಗ್ರಾಹಕರು ತಮ್ಮ ಹಣಕ್ಕೆ ಉತ್ತಮ ಮೌಲ್ಯವನ್ನು ಪಡೆಯುತ್ತಾರೆ ಎಂದು ಹೇಳಿದರು.

ಬಿಡುಗಡೆಯಾದವು ಅತಿ ಕಡಿಮೆ ಬೆಲೆಯ ಬಿಎಸ್-6 ಬೈಕ್‍‍ಗಳು

ಇನ್ನೂ ಸಿಟಿ ಮತ್ತು ಪ್ಲಾಟಿನಾ ಬೈಕ್‍ಗಳಲ್ಲಿ ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಕಂಪನಿಯು ಅತ್ಯಾಧುನಿಕ ಸಂಶೋಧನೆ ನಡೆಸುವ ಮೂಲಕ ಈ ಸಿಸ್ಟಂ ಅನ್ನು ಮತ್ತು ವಿನ್ಯಾಸವನ್ನು ಅಭಿವೃದ್ದಿಪಡಿಸಿದೆ.

ಬಿಡುಗಡೆಯಾದವು ಅತಿ ಕಡಿಮೆ ಬೆಲೆಯ ಬಿಎಸ್-6 ಬೈಕ್‍‍ಗಳು

ಈ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಹೊಸ ಸಿಟಿ ಮತ್ತು ಪ್ಲಾಟಿನಾ ಬೈಕ್‍‍ಗಳ ಇಂಧನ ದಕ್ಷತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಅಲ್ಲದೇ ಈ ಬೈಕ್‍‍ಗಳ ಎಂಜಿನ್ ಸುಗಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

ಬಿಡುಗಡೆಯಾದವು ಅತಿ ಕಡಿಮೆ ಬೆಲೆಯ ಬಿಎಸ್-6 ಬೈಕ್‍‍ಗಳು

ಸ್ಥಳೀಯವಾಗಿ ಅಭಿವೃದ್ದಿಪಡಿಸಿದ ಹೊಸ ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ನಿರ್ವಹಿಸಲು ಸುಲಭವಾಗಿದೆ. ಹೊಸ ಸಿಟಿ ಬೈಕ್ ಎರಡೂ ಎಂಜಿನ್‍ ಆಯ್ಕಗಳಲ್ಲಿ ಲಭ್ಯವಿದೆ. ಇದರಲ್ಲಿ ಎಂಜಿನ್ 100 ಸಿಸಿ ಮತ್ತು 110 ಸಿಸಿ ಎಂಜಿನ್ ಆಗಿದೆ.

ಬಿಡುಗಡೆಯಾದವು ಅತಿ ಕಡಿಮೆ ಬೆಲೆಯ ಬಿಎಸ್-6 ಬೈಕ್‍‍ಗಳು

ಹೊಸ ಸಿಟಿ 110 ಬೈಕ್ ಎಲ್‍ಇಡಿ ಡಿಆರ್‍ಎಲ್‍ಗಳನ್ನು ಸಹ ಹೊಂದಿದೆ. ಹೊಸ ಫೀಚರ್ ಅನ್ನು ಬಜಾಜ್ ಬ್ಲ್ಯಾಷ್ ಪ್ಲೇಟ್ ಎಂದು ಕರೆಯುತ್ತಾರೆ. ಬಿ‍ಎಸ್‍-6 ಸಿಟಿ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.40,794 ಗಳಾಗಿದೆ.

ಬಿಡುಗಡೆಯಾದವು ಅತಿ ಕಡಿಮೆ ಬೆಲೆಯ ಬಿಎಸ್-6 ಬೈಕ್‍‍ಗಳು

ಈ ಬೈಕ್ ಭಾರತದ ಅತಿ ಕಡಿಮೆ ಬೆಲೆಯ ಕಮ್ಯೂಟರ್ ಬೈಕ್ ಅಗಿದೆ. ಇನ್ನೂ ಬಜಾಜ್ ಪ್ಲಾಟಿನಾ ಬೈಕ್ ಎರಡೂ ಎಂಜಿನ್‍ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಇದರಲ್ಲಿ ಪ್ಲಾಟಿನಾ 100 ಮತ್ತು ಪ್ಲಾಟಿನಾ 110 ಹೆಚ್-ಗೇರ್ ಆಗಿದೆ. ಬಜಾಜ್ ಪ್ಲಾಟಿನಾ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.47,264 ಮತ್ತು ರೂ.54,797 ಗಳಾಗಿದೆ.

ಬಿಡುಗಡೆಯಾದವು ಅತಿ ಕಡಿಮೆ ಬೆಲೆಯ ಬಿಎಸ್-6 ಬೈಕ್‍‍ಗಳು

ಬಜಾಜ್ ಆಟೋ ಕಂಪನಿಯು ಬಿಎಸ್-6 ಸಿಟಿ ಮತ್ತು ಪ್ಲಾಟಿನಾ ಬೈಕ್‍‍ಗಳನ್ನು ಬಿಡುಗಡೆಗೊಳಿಸಿದೆ. ಈ ಬೈಕ್ ಕನಿಷ್ಠ ಪ್ರೀಮಿಯಂ ಬೆಲೆಯನ್ನು ಹೊಂದಿದೆ. ಈ ಬೈಕ್‍ಗಳು ಅತಿ ಅಗ್ಗದ ಬಿಎಸ್-6 ಮಾದರಿಗಳಾಗಿವೆ. ಅಗ್ಗದ ಬೆಲೆಯನ್ನು ಹೊಂದಿರುವುದರಿಂದ ಮಧ್ಯಮ ಗ್ರಾಹಕರನ್ನು ಹೆಚ್ಚಾಗಿ ಸೆಳೆಯಲಿವೆ.

Most Read Articles

Kannada
English summary
Bajaj CT100 And Platina BS6 Models Launched In India At Rs 40,794: Specs & Features. Read in Kannada.
Story first published: Tuesday, January 28, 2020, 18:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X