YouTube

'ಸಿಟಿ 100 ಖಡಕ್' ವರ್ಷನ್ ಬಿಡುಗಡೆ ಮಾಡಿದ ಬಜಾಜ್ ಆಟೋ

ಬಜಾಜ್ ಆಟೋ ಕಂಪನಿಯು ತನ್ನ ಜನಪ್ರಿಯ ಕಮ್ಯುಟರ್ ಬೈಕ್ ಮಾದರಿಯಾದ ಸಿಟಿ 100 ಮಾದರಿಯಲ್ಲಿ ಖಡಕ್ ವರ್ಷನ್ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಸ್ಟ್ಯಾಂಡರ್ಡ್ ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

'ಸಿಟಿ 100 ಖಡಕ್' ವರ್ಷನ್ ಬಿಡುಗಡೆ ಮಾಡಿದ ಬಜಾಜ್ ಆಟೋ

ಸಿಟಿ 100 ಖಡಕ್ ವರ್ಷನ್‌ನಲ್ಲಿ ಬಜಾಜ್ ಕಂಪನಿಯು ಹಲವಾರು ಸೆಗ್ಮೆಂಟ್ ಫಸ್ಟ್ ಫೀಚರ್ಸ್‌‌ಗಳನ್ನು ಸೇರ್ಪಡೆಗೊಳಿಸಿದ್ದು, ಸ್ಟ್ಯಾಂಡರ್ಡ್ ಮಾದರಿಗಿಂತಲೂ 8ಕ್ಕೂ ಹೆಚ್ಚು ಹೊಸ ಫೀಚರ್ಸ್ ಪಡೆದುಕೊಂಡಿದೆ. ಹೊಸ ಫೀಚರ್ಸ್ ನಂತರ ಸಿಟಿ 100 ಖಡಕ್ ಮಾದರಿಯ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.46,432ಕ್ಕೆ ಬೆಲೆ ನಿಗದಿಪಡಿಸಲಾಗಿದ್ದು, ಹೊಸ ಬೈಕ್ ಮಾದರಿಯು ಇಎಸ್ ವೆರಿಯೆಂಟ್ ಆಧರಿಸಿದೆ.

'ಸಿಟಿ 100 ಖಡಕ್' ವರ್ಷನ್ ಬಿಡುಗಡೆ ಮಾಡಿದ ಬಜಾಜ್ ಆಟೋ

ಹೊಸ ಬೈಕ್ ಮಾದರಿಯಲ್ಲಿ ಹೊಸದಾಗಿ ಕ್ರಾಸ್ ಟ್ಯೂಬ್ ಹ್ಯಾಂಡಲ್ ಬಾರ್, ಫ್ಯೂಲ್ ಬದಿಯಲ್ಲಿ ರಬ್ಬರ್ ಪ್ಯಾಡ್, ಹಿಂಬದಿಯ ಸವಾರರಿಗಾಗಿ ವಿಸ್ತರಿತ ಗ್ರ್ಯಾಬ್ ರೈಲ್, ಕ್ಲಿಯರ್ ಲೆನ್ಸ್ ಹೊಂದಿರುವ ಇಂಡಿಕೇಟರ್, ವಿಸ್ತರಿತ ಮಿರರ್ ಬೂಟ್ ಹೊಂದಿದೆ.

'ಸಿಟಿ 100 ಖಡಕ್' ವರ್ಷನ್ ಬಿಡುಗಡೆ ಮಾಡಿದ ಬಜಾಜ್ ಆಟೋ

ಜೊತೆಗೆ ಹೊಸ ಬೈಕಿನಲ್ಲಿ ಫ್ರಂಟ್ ಸಸ್ಪೆಷನ್, ಫ್ಲ್ಯಾಟರ್ ಸೀಟ್, ಫ್ಯೂಲ್ ಲೆವಲ್ ಇಂಡಿಕೇಟರ್ ಫೀಚರ್ಸ್ ಸೇರ್ಪಡೆಗೊಡಿಸಲಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಬೈಕಿನಲ್ಲಿ ಮೂರು ಹೊಸ ಬಣ್ಣಗಳ ಆಯ್ಕೆಯನ್ನು ಸಹ ನೀಡಲಾಗಿದೆ.

'ಸಿಟಿ 100 ಖಡಕ್' ವರ್ಷನ್ ಬಿಡುಗಡೆ ಮಾಡಿದ ಬಜಾಜ್ ಆಟೋ

ಸಿಟಿ 100 ಖಡಕ್ ಬೈಕ್ ಮಾದರಿಯನ್ನು ಗ್ಲೊಸಿ ಎಬೊನಿ ಬ್ಲ್ಯಾಕ್, ಬ್ಲ್ಯೂ ಡಿಕಾಲ್ಸ್, ಮ್ಯಾಟೆ ಆಲಿವ್ ಗ್ರಿನ್, ಯಲ್ಲೊ ಡಿಕಾಲ್ಸ್, ಗ್ಲಾಸ್ ಫೇಮ್ ರೆಡ್, ಬ್ರೈಟ್ ರೆಡ್ ಡಿಕಾಲ್ಸ್ ಬಣ್ಣಗಳಲ್ಲಿ ಖರೀದಿಸಬಹುದಾಗಿದ್ದು, ಹೊಸ ಬೈಕಿನ ಹೊರಭಾಗದ ವಿನ್ಯಾಸಕ್ಕೆ ಮತ್ತಷ್ಟು ಮೆರಗು ನೀಡಲು ಸ್ಟೈಲಿಷ್ ಬಾಡಿ ಗ್ರಾಫಿಕ್ಸ್ ಬಳಕೆ ಮಾಡಿರುವುದು ಹೊಸ ಬೈಕ್ ಆಯ್ಕೆಗೆ ಸಹಕಾರಿಯಾಗಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

'ಸಿಟಿ 100 ಖಡಕ್' ವರ್ಷನ್ ಬಿಡುಗಡೆ ಮಾಡಿದ ಬಜಾಜ್ ಆಟೋ

ಹೊಸ ಸಿಟಿ 100 ಖಡಕ್ ಮಾದರಿಯಲ್ಲಿ ಸ್ಟೈಲಿಷ್ ಫೀಚರ್ಸ್ ಹೊರತುಪಡಿಸಿ ಸ್ಟ್ಯಾಂಡರ್ಡ್ ಮಾದರಿಯ ಮಾರಾಟದಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಹಬ್ಬದ ಋುತುವಿನಲ್ಲಿ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಹೊಸ ಮಾದರಿಯನ್ನು ಅಭಿವೃದ್ದಿಗೊಳಿಸಲಾಗಿದ್ದು, ಹೊಸ ಬೈಕ್ ಮಾದರಿಯು ಸೀಮಿತ ಅವಧಿಗೆ ಮಾತ್ರ ಲಭ್ಯವಿರಲಿದೆ.

'ಸಿಟಿ 100 ಖಡಕ್' ವರ್ಷನ್ ಬಿಡುಗಡೆ ಮಾಡಿದ ಬಜಾಜ್ ಆಟೋ

ಸಿಟಿ 100 ಖಡಕ್ ಬೈಕ್ ಮಾದರಿಯಲ್ಲಿ 102-ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದ್ದು, 4-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 7.5-ಬಿಎಚ್‌ಪಿ ಮತ್ತು 8.34-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

'ಸಿಟಿ 100 ಖಡಕ್' ವರ್ಷನ್ ಬಿಡುಗಡೆ ಮಾಡಿದ ಬಜಾಜ್ ಆಟೋ

ಹೊಸ ಬೈಕ್ ಮಾದರಿಯು ಇಂಧನ ದಕ್ಷತೆಯಲ್ಲೂ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದ್ದು, ಸ್ಟ್ಯಾಂಡರ್ಡ್ ಸಿಟಿ 100 ಬೈಕ್ ಮಾದರಿಯು ಕೆಎಸ್ ಅಲಾಯ್ ಮತ್ತು ಇಎಸ್ ಅಲಾಯ್ ಎನ್ನುವ ಪ್ರಮುಖ ಎರಡು ಮಾದರಿಗಳಲ್ಲಿ ಮಾರಾಟಗೊಳ್ಳಲಿದೆ.

Most Read Articles

Kannada
English summary
New Bajaj CT100 ‘Kadak’ Motorcycle Launched In India. Read in Kannada.
Story first published: Monday, October 26, 2020, 19:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X