ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

ಬಜಾಜ್ ಆಟೋ ಕಂಪನಿಯು ಡಿಸ್ಕವರ್ ಸರಣಿಯ ಕೆಲವು ಮಾದರಿಗಳನ್ನು ಸ್ಥಗಿತಗೊಳಿಸಲಾಗಿದೆ. ಬಿಎಸ್-6 ಮಾಲಿನ್ಯ ನಿಯಮದ ಅನುಗುಣವಾಗಿ ಬಜಾಜ್ ಡಿಸ್ಕವರ್ 125 ಮತ್ತು ಡಿಸ್ಕವರ್ 110 ಬೈಕುಗಳನ್ನು ನವೀಕರಿಸಲಾಗುವುದಿಲ್ಲ.

ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

ಬಜಾಜ್ ಕಂಪನಿಯ ಬೈಕುಗಳ ಸರಣಿಯಲ್ಲಿ ಡಿಸ್ಕವರ್ ಹಳೆಯ ಮಾದರಿಗಳಾಗಿದೆ. ಡಿಸ್ಕವರಿ ಬೈಕುಗಳು 16 ವರ್ಷಗಳಿಂದ ಉತ್ಪಾದನೆಯಲ್ಲಿದೆ, ಈ ಬೈಕುಗಳನ್ನು ಕಂಪನಿಯು ಹಲವು ಬಾರಿ ನವೀಕರಣವನ್ನು ನಡೆಸಲಾಗಿದೆ. ಡಿಸ್ಕವರ್ ಬೈಕುಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವುದರಿಂದ ಮಾಧ್ಯಮ ವರ್ಗದ ಜನರ ಗಮನಸೆಳೆಯುವಲ್ಲಿ ಯಶ್ವಸಿಯಾಗಿದೆ. ಡಿಸ್ಕವರ್ ಬೈಕುಗಳ ಸರಣಿಯಲ್ಲಿ ಡಿಸ್ಕವರ್ 100, ಡಿಸ್ಕವರ್ 135, ಮತ್ತು ಡಿಸ್ಕವರ್ 150 ಸೇರಿದಂತೆ ಹಲವು ವಿವಿಧ ರೀತಿಯ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

ಡಿಸ್ಕವರ್ ಮಾದರಿಗಳು ಬ್ರ್ಯಾಂಡ್‍ನ ಡಿಟಿಎಸ್ಸಿ ಟ್ವಿನ್-ಸ್ಪಾರ್ಕ್ ತಂತ್ರಜ್ಞಾನ ಮತ್ತು ಇತ್ತೀಚಿನ ಹಾರ್ಡ್‌ವೇರ್ ಹೊಂದಿರುವ ಎಂಜಿನ್‌ಗಳನ್ನು ಒಳಗೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಡಿಸ್ಕವರ್ ಮಾದರಿಗಳ 30 ಕ್ಕೂ ಹೆಚ್ಚು ರೂಪಾಂತರಗಳನ್ನು ತಯಾರಿಸಿ ಮಾರಾಟ ಮಾಡಿದೆ.

ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

ಬಜಾಜ್ ಆಟೋ ಕಂಪನಿಯ ಸರಣಿಯಲ್ಲಿ ಡಿಸ್ಕವರ್ ಮಾದರಿಗಳು ಸರಳ ವಿನ್ಯಾಸದೊಂದಿಗೆ ಅಕರ್ಷಕವಾಗಿದೆ. ಡಿಸ್ಜವರಿ ಬೈಕುಗಳು ಸಾಟಿಯಿಲ್ಲದ ಇಂಧನ ದಕ್ಷತೆಗೆ ಹೆಸರುವಾಸಿಯಾಗಿದೆ. ಡಿಸ್ಕವರ್ 100 ಬೈಕ್ ಪ್ರತಿ ಲೀಟರಿಗೆ 100 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಇದನ್ನು ಈ ಬೈಕಿನ ಜಾಹೀರಾತಿನಲ್ಲಿ ಪ್ರದರ್ಶಿಸಲಾಗಿದೆ. ಇದರಲ್ಲಿ ಈ ಬೈಕ್ ಲಾಡಖ್‍ನಲ್ಲಿ ಮತ್ತು ಮ್ಯಾಗ್ನೆಟಿಕ್ ಹಿಲ್ ನಡುವೆ ಸುಮಾರು 100 ಕಿಲೋಮೀಟರ್ ದೂರವನ್ನು ಚಲಿಸಿ ಮೈಲೇಜ್ ಬಗ್ಗೆ ಹೇಳಿದ್ದಾರೆ.

ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

ಡಿಸ್ಕವರ್ 110 ಮಾದರಿಯು 115.4 ಸಿಸಿ ಸಿಸಿ ಏರ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 8.4 ಬಿಹೆಚ್‌ಪಿ ಪವರ್ ಮತ್ತು 9.81 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ನಾಲ್ಕು-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

ಡಿಸ್ಕವರ್ 125 ಮಾದರಿಯು 124.5 ಸಿಸಿ ಏರ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 10.7 ಬಿಹೆಚ್‌ಪಿ ಪವರ್ ಮತ್ತು 11 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

ಭಾರತೀಯ ಮಾರುಕಟ್ಟೆಯಲ್ಲಿ ಡಿಸ್ಕವರ್ ಮಾದರಿಗಳನ್ನು ಬಜಾಜ್ ಆಟೋ ಕಂಪನಿಯು ಸ್ಥಗಿತಗೊಳಿಸಲಾಗಿದೆ. ಆದರೆ ಈ ಮಾದರಿಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತದೆ.

ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

ಬಜಾಜ್ ಆಟೋ ಕಂಪನಿಯು ಉಚಿತ ಸರ್ವಿಸ್ ಮತ್ತು ವಾರಂಟಿ ಅವಧಿಯನ್ನು ವಿಸ್ತರಿಸಿದೆ. ಪ್ರಸ್ತುತ ಕರೋನಾ ವೈರಸ್ ಭೀತಿಯಿಂದ ಗ್ರಾಹಕರಿಗೆ ಸಹಕಾರಿಯಾಗಲು ಈ ನಿರ್ಧಾರವನ್ನು ಕೈಗೊಂಡಿದೆ. ಮಾರ್ಚ್ 20 ಮತ್ತು ಏಪ್ರಿಲ್ 30ರ ನಡುವೆ ಮುಕ್ತಾಯಗೊಳ್ಳುವ ಬಜಾಜ್ ಕಂಪನಿಯ ಸರ್ವಿಸ್ ಮತ್ತು ವಾರಂಟಿ ಅವಧಿಯನ್ನು ಮೇ31 ರವರೆಗೆ ವಿಸ್ತರಿಸಲಾಗಿದೆ.

ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

ಡಿಸ್ಕವರ್ ಸರಣಿಯ ಬೈಕುಗಳು ಹೆಚ್ಚು ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದೆ. ಈ ಬೈಕುಗಳು ವರ್ಷಗಳಲ್ಲಿ ಹಲವಾರು ನವೀಕರಣಗಳು ನಡಿಸಿದೆ. ಡಿಸ್ಕವರ್ ಸರಣಿಯ ಬೈಕುಗಳು ಸರಳವಾದ ವಿನ್ಯಾಸ ಮತ್ತು ಇಂಧನ ದಕ್ಷತೆಯಿಂದ ಹೆಚ್ಚಿನ ಗ್ರಾಹಕಾರ ಗಮನಸೆಳೆದಿದೆ.

Most Read Articles

Kannada
English summary
Bajaj Discover 110 & 125 Commuter Motorcycles Discontinued In India. Read in Kannada.
Story first published: Tuesday, April 7, 2020, 13:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X