ಡೀಲರ್‍ ಬಳಿ ತಲುಪಿದ ಬಜಾಜ್ ಡೋಮಿನಾರ್ 250 ಬೈಕ್

ಬಜಾಜ್ ಆಟೋ ಕಂಪನಿಯು ತನ್ನ ಡೋಮಿನಾರ್ 250 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಇದೀಗ ಬಜಾಜ್ ಡೋಮಿನಾರ್ 250 ಬೈಕ್ ಡೀಲರ್‍‍ಗಳ ಬಳಿ ತಲುಪಲು ಪ್ರಾರಂಭವಾಗಿದೆ.

ಡೀಲರ್‍ ಬಳಿ ತಲುಪಿದ ಬಜಾಜ್ ಡೋಮಿನಾರ್ 250 ಬೈಕ್

ಡೋಮಿನಾರ್ 250 ಬೈಕ್ ಇತ್ತೀಚೆಗೆ ಭಾರತದ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಹೊಸ ಬಜಾಜ್ ಡೋಮಿನಾರ್ 250 ಬೈಕ್ ತನ್ನದೆ ಸರಣಿಯ ಡೋಮಿನಾರ್ 400 ಬೈಕಿನ ಮಾದರಿಯಲ್ಲಿದೆ. ಹೊಸ ಡೋಮಿನಾರ್ 250 ಬೈಕ್ 'ಡಿ250' ಬ್ಯಾಡ್ಜ್ ನೊಂದಿಗೆ ಕೆಂಪು ಬಣ್ಣವನ್ನು ಹೊಂದಿದೆ. ಬಜಾಜ್ ಡೋಮಿನಾರ್ 250 ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಡೀಲರ್‍ ಬಳಿ ತಲುಪಿದ ಬಜಾಜ್ ಡೋಮಿನಾರ್ 250 ಬೈಕ್

ಹೊಸ ಬಜಾಜ್ ಡೋಮಿನಾರ್ 250 ಬೈಕಿನಲ್ಲಿ ಕೆಟಿಎಂ 250 ಡ್ಯೂಕ್‍‍ನಲ್ಲಿರುವಂತಹ 249 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಆದರೆ ಈ ಎಂಜಿನ್ ಕೆಟಿಎಂ ಡ್ಯೂಕ್ 250 ಬೈಕಿನ ಎಂಜಿನ್‍‍ಗಿಂತ ಸ್ವಲ್ಪ ಕಡಿಮೆ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳನ್ನು ಉತ್ಪಾದಿಸುವ ನಿರೀಕ್ಷಿಯಿದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಬಹುದು.

ಡೀಲರ್‍ ಬಳಿ ತಲುಪಿದ ಬಜಾಜ್ ಡೋಮಿನಾರ್ 250 ಬೈಕ್

ಡೋಮಿನಾರ್ 400 ಮತ್ತು ಹೊಸ ಡೋಮಿನಾರ್ 250 ನಡುವಿನ ಕೆಲವು ವ್ಯತ್ಯಾಸಗಳು ಬಹಿರಂಗವಾಗಿದೆ. ಇದು ಕಡಿಮೆ ವೆಚ್ಚದ ಸ್ವಿಂಗಾರ್ಮ್ ಮತ್ತು ವಿಭಿನ್ನ ಅಲಾಯ್ ವ್ಹೀಲ್ ವಿನ್ಯಾಸವನ್ನು ಹೊಂದಿದೆ.

ಡೀಲರ್‍ ಬಳಿ ತಲುಪಿದ ಬಜಾಜ್ ಡೋಮಿನಾರ್ 250 ಬೈಕ್

ಡೋಮಿನಾರ್ 400 ಬೈಕಿಗೆ ಹೋಲಿಸಿದರೆ ಹೊಸ ಬಜಾಜ್ ಡೋಮಿನಾರ್ 250 ಬೈಕಿನ ಟಯರ್ ಪ್ರೊಫೈಲ್‍‍ಗಳು ಸಹ ಭಿನ್ನವಾಗಿರುತ್ತದೆ ಎಂದು ನಿರೀಕ್ಷಿಸುತ್ತೇವೆ.

ಡೀಲರ್‍ ಬಳಿ ತಲುಪಿದ ಬಜಾಜ್ ಡೋಮಿನಾರ್ 250 ಬೈಕ್

ಬಜಾಜ್ 250 ಸಿಸಿ ಗಿಂತ ಹೆಚ್ಚಿನ ಎಲ್ಲಾ ಬೈಕ್‍‍ಗಳಿಗೆ ಡೋಮಿನಾರ್ ಎಂಬ ನೇಮ್‍‍ಪ್ಲೇಟ್ ಅನ್ನು ಬಳಸುತ್ತಾರೆ. ಇದಗಿಂತ ಕೆಳಗಿನ ಸಿಸಿಯ ಮಾದರಿಗಳಿಗೆ ಪಲ್ಸರ್ ಸರಣಿಗೆ ಸೇರುತ್ತದೆ.

ಡೀಲರ್‍ ಬಳಿ ತಲುಪಿದ ಬಜಾಜ್ ಡೋಮಿನಾರ್ 250 ಬೈಕ್

ಹೊಸ ಬಜಾಜ್ ಡೋಮಿನಾರ್ 250 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.50 ಲಕ್ಷದಿಂದ ರೂ.1.60 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸಲಾಗಿದೆ. ಬಜಾಜ್ ಕಂಪನಿಯು ಡೋಮಿನಾರ್ 250 ಬೈಕ್‍‍ಗಾಗಿ ಬುಕ್ಕಿಂಗ್ ಅನ್ನು ಸ್ವೀಕರಿಸಲು ಪಾರಂಭಿಸಿದೆ.

ಡೀಲರ್‍ ಬಳಿ ತಲುಪಿದ ಬಜಾಜ್ ಡೋಮಿನಾರ್ 250 ಬೈಕ್

ಹೊಸ ಡೋಮಿನಾರ್ 400 ಬೈಕ್ 373.3 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಡಿಒ‍ಹೆಚ್‍‍ಸಿ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 8650 ಆರ್‍‍ಪಿಎಂನಲ್ಲಿ 40 ಬಿ‍‍ಹೆಚ್‍‍ಪಿ ಪವರ್ ಮತ್ತು 7000 ಆರ್‍‍ಪಿ‍ಎಂನಲ್ಲಿ 35 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಡೀಲರ್‍ ಬಳಿ ತಲುಪಿದ ಬಜಾಜ್ ಡೋಮಿನಾರ್ 250 ಬೈಕ್

ಬಜಾಜ್ ಡೊಮಿನಾರ್ 400 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ನಿರೀಕ್ಷಿಸಿದ ಪರಿಣಾಮವನ್ನು ಸೃಷ್ಟಿಸುವಲ್ಲಿ ವಿಫಲವಾಗಿದೆ. ಆದರೆ ಡೋಮಿನಾರ್ 250 ಬೈಕ್ ಭಾರತೀಯ ಗ್ರಾಹಕರನ್ನು ಸೆಳೆಯಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Bajaj Dominar 250 Models Arrive At Dealerships. Read in Kannada.
Story first published: Monday, March 9, 2020, 19:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X