ದುಬಾರಿಯಾಯ್ತು ಬಜಾಜ್ ಡೊಮಿನಾರ್ 400, ಅವೆಂಜರ್ ಕ್ರೂಸ್ 220 ಬೈಕುಗಳು

ಬಜಾಜ್ ಆಟೋ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಎರಡು ಜನಪ್ರಿಯ ಮಾದರಿಗಳ ಬೆಲೆಗಳನ್ನು ಹೆಚ್ಚಿಸಿದೆ. ಬೈಕುಗಳ ಮಾರಾಟವು ಕುಸಿತ ಕಂಡಿರುವ ಈ ವೇಳೆಯಲ್ಲಿ ಬಜಾಜ್ ಕಂಪನಿಯು ತನ್ನ ಡೊಮಿನಾರ್ ಮತ್ತು ಅವೆಂಜರ್ 220 ಕ್ರೂಸ್ ಬೈಕುಗಳ ಬೆಲೆಗಳನ್ನು ಹೆಚ್ಚಿಸಿದೆ.

ದುಬಾರಿಯಾಯ್ತು ಬಜಾಜ್ ಡೊಮಿನಾರ್ 400, ಅವೆಂಜರ್ ಕ್ರೂಸ್ 220 ಬೈಕುಗಳು

ಬಜಾಜ್ ಆಟೋ ಕಂಪನಿಯು ತನ್ನ ಡೋಮಿನಾರ್ 400 ಬೈಕ್ ಅನ್ನು ಇತ್ತಿಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಹೊಸ ಡೋಮಿನಾರ್ ಬೈಕ್ ಆಕಷರ್ಕಕ ಲುಕ್ ಅನ್ನು ಹೊಂದಿರಲಿದೆ. ಡೋಮಿನಾರ್ 400, ಬೈಕಿನಲ್ಲಿ 373.3 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಡಿಒ‍ಹೆಚ್‍‍ಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8800 ಆರ್‍‍ಪಿಎಂನಲ್ಲಿ 39.4 ಬಿ‍‍ಹೆಚ್‍‍ಪಿ ಪವರ್ ಮತ್ತು 7000 ಆರ್‍‍ಪಿ‍ಎಂನಲ್ಲಿ 35 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ದುಬಾರಿಯಾಯ್ತು ಬಜಾಜ್ ಡೊಮಿನಾರ್ 400, ಅವೆಂಜರ್ ಕ್ರೂಸ್ 220 ಬೈಕುಗಳು

ಬಿಎಸ್-6 ಬಜಾಜ್ ಡೋಮಿನಾರ್ 400 ಬೈಕಿನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಮತ್ತು ಡ್ಯುಯಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅಳವಡಿಸಲಾಗಿದೆ. ಹೊಸ ಬಜಾಜ್ ಡೋಮಿನಾರ್ 400 ಬೈಕ್ ಬ್ಲ್ಯಾಕ್ ಮತ್ತು ಗ್ರೀನ್ ಬಣ್ಣಗಳಲ್ಲಿ ಲಭ್ಯವಿರಲಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ದುಬಾರಿಯಾಯ್ತು ಬಜಾಜ್ ಡೊಮಿನಾರ್ 400, ಅವೆಂಜರ್ ಕ್ರೂಸ್ 220 ಬೈಕುಗಳು

ಬಿಎಸ್-6 ಡೋಮಿನಾರ್ 400 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಜಾವಾ, ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಮತ್ತು ಮೊಜೊ 300 ಬೈಕ್‍‍ಗಳಿಗೆ ಪೈಪೋಟಿಯನ್ನು ನೀಡುತ್ತದೆ. ಬಜಾಜ್ ಡೋಮಿನಾರ್ ಬೈಕಿಗೆ ರೂ.3000 ಗಳವರೆಗೆ ಬೆಲೆಯನ್ನು ಹೆಚ್ಚಿಸಿದೆ.

ದುಬಾರಿಯಾಯ್ತು ಬಜಾಜ್ ಡೊಮಿನಾರ್ 400, ಅವೆಂಜರ್ ಕ್ರೂಸ್ 220 ಬೈಕುಗಳು

ಇನ್ನು ಹೊಸ ಅವೆಂಜರ್ ಕ್ರೂಸ್ 220 ಬೈಕನ್ನು ಹಿಂದಿನ ಮಾದರಿಗೆ ಹೋಲಿಸಿದರೆ ಎಂಜಿನ್ ಅಪ್ ಗ್ರೇಡ್ ಹೊರತಾಗಿ, ಬೇರೆ ಯಾವುದೇ ಬದಲಾವಣೆಗಳಾಗಿಲ್ಲ. ವಿನ್ಯಾಸವನ್ನು ಮೊದಲಿನಂತೆ ಉಳಿಸಿಕೊಳ್ಳಲಾಗಿದೆ. ಈ ಬೈಕ್ ಬಹುತೇಕ ಭಾಗಗಳಲ್ಲಿ ಒಂದೇ ಉದ್ದದ ವಿಂಡ್‌ಸ್ಕ್ರೀನ್ ಹಾಗೂ ಕ್ರೋಮ್ ಗಳನ್ನು ಹೊಂದಿದೆ.

MOST READ: ದುಬಾರಿಯಾಯ್ತು ಬಿಎಸ್-6 ಹೀರೋ ಡೆಸ್ಟಿನಿ 125 ಸ್ಕೂಟರ್

ದುಬಾರಿಯಾಯ್ತು ಬಜಾಜ್ ಡೊಮಿನಾರ್ 400, ಅವೆಂಜರ್ ಕ್ರೂಸ್ 220 ಬೈಕುಗಳು

ಬಜಾಜ್ ಅವೆಂಜರ್ ಕ್ರೂಸ್ 220 ಬೈಕಿನಲ್ಲಿ 220 ಸಿಸಿಯ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್‌ನಲ್ಲಿ ಫ್ಯೂಯಲ್ ಇಂಜೆಕ್ಷನ್ ಟೆಕ್ನಾಲಜಿಯನ್ನು ಬಳಸಲಾಗಿದೆ.

ದುಬಾರಿಯಾಯ್ತು ಬಜಾಜ್ ಡೊಮಿನಾರ್ 400, ಅವೆಂಜರ್ ಕ್ರೂಸ್ 220 ಬೈಕುಗಳು

ಈ ಎಂಜಿನ್ 8,500 ಆರ್‌ಪಿಎಂನಲ್ಲಿ 18.7 ಬಿಹೆಚ್‌ಪಿ ಪವರ್ ಹಾಗೂ 7,000 ಆರ್‌ಪಿಎಂನಲ್ಲಿ 17.5 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನಲ್ಲಿ 5-ಸ್ಪೀಡಿನ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಹೊಸ ಅವೆಂಜರ್ ಕ್ರೂಸ್ 220 ಬೈಕಿಗೆ ರೂ.2,502 ಗಳವರೆಗೆ ಬೆಲೆಯನ್ನು ಹೆಚ್ಚಿಸಿದೆ.

MOST READ: ಕರೋನಾ ವೈರಸ್ ಎಫೆಕ್ಟ್: ಬೈಕ್ ಬಿಡುಗಡೆ ಮುಂದೂಡಿದ ಹಾರ್ಲೇ ಡೇವಿಡ್ಸನ್

ದುಬಾರಿಯಾಯ್ತು ಬಜಾಜ್ ಡೊಮಿನಾರ್ 400, ಅವೆಂಜರ್ ಕ್ರೂಸ್ 220 ಬೈಕುಗಳು

ಬಜಾಜ್ ಆಟೋ ಕಂಪನಿಯು ಇತ್ತೀಚೆಗೆ ದೇಶದ ವಿವಿಧಡೆ ಇರುವ ಸಾವಿರಾರು ವಾಹನ ಮಾರಾಟ ಕೇಂದ್ರಗಳನ್ನು ಪುನಾರಂಭಿಸಿದ್ದು, ವೈರಸ್ ಭೀತಿ ಹಿನ್ನಲೆಯಲ್ಲಿ ಗರಿಷ್ಟ ಪ್ರಮಾಣದ ಪ್ರೊಟೋಕಾಲ್ ನಿಯಮಗಳನ್ನು ಜಾರಿಗೊಳಿಸಿದೆ.

ದುಬಾರಿಯಾಯ್ತು ಬಜಾಜ್ ಡೊಮಿನಾರ್ 400, ಅವೆಂಜರ್ ಕ್ರೂಸ್ 220 ಬೈಕುಗಳು

ಬಜಾಜ್ ಡೊಮಿನಾರ್ 400 ಮತ್ತು ಅವೆಂಜರ್ ಕ್ರೂಸ್ 220 ಬೈಕುಗಳ ಜೊತೆ ಬಜಾಜ್ ತನ್ನ ಸರಣಿಯಲ್ಲಿರುವ ಪಲ್ಸರ್ ಮಾದರಿಗಳ ಬೆಲೆಯನ್ನು ಹೆಚ್ಚಿಸಿದೆ. ಮಾರಾಟದಲ್ಲಿ ಕುಸಿತ ಕಂಡಿರುವ ವೇಳೆಯಲ್ಲಿ ತಮ್ಮ ದುಬಾರಿ ಮಾದರಿಗಳ ಬೆಲೆಯನ್ನು ಹೆಚ್ಚಿಸಿರುವುದು ಆಶ್ಚರ್ಯಕರವಾಗಿದೆ.

Most Read Articles

Kannada
English summary
Bajaj Auto Hikes Prices Of Avenger Cruise 220 & Dominar 400 In India. Read in Kananda.
Story first published: Thursday, May 14, 2020, 19:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X