ಮತ್ತಷ್ಟು ಸುಲಭವಾಗಲಿದೆ ಬಜಾಜ್ ದ್ವಿಚಕ್ರ ವಾಹನ ಸಾಲ

ಬಜಾಜ್ ಆಟೋ ತನ್ನ ದ್ವಿಚಕ್ರ ವಾಹನ ಗ್ರಾಹಕರಿಗಾಗಿ ವಿಶೇಷ ಹಣಕಾಸು ಸೌಲಭ್ಯಗಳನ್ನು ನೀಡಲು ಹೆಚ್‌ಡಿಎಫ್‌ಸಿ ಬ್ಯಾಂಕಿನೊಂದಿಗೆ ಕೈಜೋಡಿಸಿದೆ. ಬಜಾಜ್ ಬೈಕುಗಳನ್ನು ಖರೀದಿಸುವ ಗ್ರಾಹಕರು ಹೆಚ್‌ಡಿಎಫ್‌ಸಿ ಬ್ಯಾಂಕಿನಿಂದ ಸುಲಭವಾಗಿ ಸಾಲ ಸೌಲಭ್ಯಗಳನ್ನು ಪಡೆಯಬಹುದು.

ಮತ್ತಷ್ಟು ಸುಲಭವಾಗಲಿದೆ ಬಜಾಜ್ ದ್ವಿಚಕ್ರ ವಾಹನ ಸಾಲ

ಕರೋನಾ ವೈರಸ್‌ ಕಾರಣಕ್ಕೆ ಬ್ಯಾಂಕಿಗೆ ಬರಲು ಸಾಧ್ಯವಾಗದ ಗ್ರಾಹಕರಿಗೆ ಈ ಸೌಲಭ್ಯದಿಂದ ಪ್ರಯೋಜನವಾಗಲಿದೆ. ಗ್ರಾಹಕರಿಗೆ ಸುಲಭವಾದ ಹಣಕಾಸು ಒದಗಿಸಲು ಬಜಾಜ್ ಆಟೋ ಕಂಪನಿಯು ಹೆಚ್‌ಡಿಎಫ್‌ಸಿ ಬ್ಯಾಂಕಿನೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ಈ ಕಾರಣಕ್ಕೆ ನಾವು ಹೆಚ್‌ಡಿಎಫ್‌ಸಿ ಬ್ಯಾಂಕಿಗೆ ಧನ್ಯವಾದ ಸಲ್ಲಿಸುತ್ತೇವೆ ಎಂದು ಬಜಾಜ್ ಮೋಟಾರ್‌ಸೈಕಲ್ ಅಧ್ಯಕ್ಷರಾದ ಸಾರಂಗ್ ಕಾನಡೆ ಹೇಳಿದರು.

ಮತ್ತಷ್ಟು ಸುಲಭವಾಗಲಿದೆ ಬಜಾಜ್ ದ್ವಿಚಕ್ರ ವಾಹನ ಸಾಲ

ಬ್ಯಾಂಕ್ ಗ್ರಾಹಕರಿಗೆ ಡಿಜಿಟಲ್ ಪ್ರಕ್ರಿಯೆಯ ಮೂಲಕ ಸಾಲವನ್ನು ನೀಡಲಿದ್ದು, ಗ್ರಾಹಕರು ಸಾಲ ಪಡೆಯಲು ಬ್ಯಾಂಕಿಗೆ ಬರುವ ಅಗತ್ಯವಿಲ್ಲ. ಕೇಂದ್ರ ಸರ್ಕಾರವು ಲಾಕ್‌ಡೌನ್‌ನಲ್ಲಿ ವಿನಾಯಿತಿ ನೀಡಿದ ನಂತರ ಬಜಾಜ್ ಕಂಪನಿಯು ಮೇ ತಿಂಗಳಿನಲ್ಲಿ ತನ್ನ ಶೋ ರೂಂಗಳನ್ನು ಪುನರಾರಂಭಿಸಿತು.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಮತ್ತಷ್ಟು ಸುಲಭವಾಗಲಿದೆ ಬಜಾಜ್ ದ್ವಿಚಕ್ರ ವಾಹನ ಸಾಲ

ಕಂಪನಿಯು ತನ್ನ ಚಕನ್ ಉತ್ಪಾದನಾ ಘಟಕದಲ್ಲಿ ಹಂತಹಂತವಾಗಿ ಉತ್ಪಾದನೆಯನ್ನು ಆರಂಭಿಸಿದೆ. ಸೀಮಿತ ಸಂಖ್ಯೆಯ ಸಿಬ್ಬಂದಿಗಳೊಂದಿಗೆ ಕಂಪನಿಯು ಕೇವಲ ಒಂದು ಶಿಫ್ಟ್‌ನಲ್ಲಿ ಉತ್ಪಾದನೆಯನ್ನು ಆರಂಭಿಸಿದೆ. ಕಂಪನಿಯು ಮಹಾರಾಷ್ಟ್ರದ ಚಕನ್‌ನಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಕೆಟಿಎಂ, ಹಸ್ಕವರ್ನಾ ಹಾಗೂ ಡೊಮಿನಾರ್‌ ಬೈಕ್‌ಗಳನ್ನು ಉತ್ಪಾದಿಸುತ್ತದೆ.

ಮತ್ತಷ್ಟು ಸುಲಭವಾಗಲಿದೆ ಬಜಾಜ್ ದ್ವಿಚಕ್ರ ವಾಹನ ಸಾಲ

ಬಜಾಜ್ ಕಂಪನಿಯು 2020ರ ಮೇ ತಿಂಗಳ ಮಾರಾಟ ವರದಿಯನ್ನು ಬಿಡುಗಡೆಗೊಳಿಸಿದೆ. ಈ ವರದಿಯ ಪ್ರಕಾರ ಬಜಾಜ್ ಕಂಪನಿಯು ಮೇ ತಿಂಗಳಿನಲ್ಲಿ 81%ನಷ್ಟು ನಷ್ಟವನ್ನು ಅನುಭವಿಸಿದೆ. 2020ರ ಮೇ ತಿಂಗಳಿನಲ್ಲಿ ಬಜಾಜ್ ಕಂಪನಿಯು 39,286 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದರೆ, 2019ರ ಮೇ ತಿಂಗಳಿನಲ್ಲಿ 2,05,721 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿತ್ತು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಮತ್ತಷ್ಟು ಸುಲಭವಾಗಲಿದೆ ಬಜಾಜ್ ದ್ವಿಚಕ್ರ ವಾಹನ ಸಾಲ

ಬಜಾಜ್ ಆಟೋ ತನ್ನ ವಾಹನಗಳ ಫ್ರೀ ಸರ್ವೀಸ್ ಹಾಗೂ ವಾರಂಟಿ ಅವಧಿಯನ್ನು ವಿಸ್ತರಿಸಿದೆ. ಈ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಿದೆ. ಮಾರ್ಚ್ 20ರಿಂದ ಮೇ 31ರ ನಡುವೆ ಫ್ರೀ ಸರ್ವೀಸ್ ಹಾಗೂ ವಾರಂಟಿ ಅವಧಿ ಹೊಂದಿದ್ದ ವಾಹನಗಳಿಗೆ ಈ ಯೋಜನೆ ಅನ್ವಯವಾಗಲಿದೆ.

ಮತ್ತಷ್ಟು ಸುಲಭವಾಗಲಿದೆ ಬಜಾಜ್ ದ್ವಿಚಕ್ರ ವಾಹನ ಸಾಲ

ಬಜಾಜ್ ಆಟೋ ಇತ್ತೀಚೆಗಷ್ಟೇ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಏಕೈಕ ಭಾರತೀಯರಾದ ಅಭಿನವ್ ಬಿಂದ್ರಾ ಅವರನ್ನು ಕಂಪನಿಯ ಹೆಚ್ಚುವರಿ ಸ್ವತಂತ್ರ ನಿರ್ದೇಶಕರಾಗಿ ನೇಮಕ ಮಾಡಿದೆ. ಬಜಾಜ್ ಆಟೋ ಕಂಪನಿಯಲ್ಲಿ ಬಿಂದ್ರಾರವರು 5 ವರ್ಷಗಳ ಅಧಿಕಾರಾವಧಿ ಹೊಂದಿರಲಿದ್ದಾರೆ.

Most Read Articles

Kannada
English summary
Bajaj introduces finance options for customers in partnership with HDFC Bank. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X