ಬಜಾಜ್-ಕೆಟಿಎಂ ಸಹಭಾಗಿತ್ವದಲ್ಲಿ ಬರಲಿವೆ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆ ಮಾಡುವುದಾಗಿ ಬಜಾಜ್ ಆಟೋ ಹಾಗೂ ಕೆಟಿಎಂ ಕಂಪನಿಗಳು ಘೋಷಿಸಿವೆ. ಇವುಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್, ಮೊಪೆಡ್ ಹಾಗೂ ಬೈಸಿಕಲ್ ಸೇರಿವೆ. ವರದಿಗಳ ಪ್ರಕಾರ, ಈ ವಾಹನಗಳನ್ನು ಭಾರತದಲ್ಲಿಯೇ ತಯಾರಿಸಲಾಗುವುದು.

ಬಜಾಜ್-ಕೆಟಿಎಂ ಸಹಭಾಗಿತ್ವದಲ್ಲಿ ಬರಲಿವೆ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಬಜಾಜ್-ಕೆಟಿಎಂ ಜಂಟಿಯಾಗಿ ತಮ್ಮ ಎಲೆಕ್ಟ್ರಿಕ್ ವಾಹನದ ಉತ್ಪಾದನೆಯನ್ನು 2022ರಲ್ಲಿ ಪುಣೆಯಲ್ಲಿರುವ ಬಜಾಜ್ ಕಂಪನಿಯ ಸಗಾನ್ ಉತ್ಪಾದನಾ ಘಟಕದಲ್ಲಿ ಆರಂಭಿಸಲಿವೆ. ಈ ಎಲೆಕ್ಟ್ರಿಕ್ ವಾಹನಗಳನ್ನು ಭಾರತದಲ್ಲಿ ಮಾರಾಟ ಮಾಡುವುದರ ಜೊತೆಗೆ, ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಮಾಡಲಾಗುವುದು. ಬಜಾಜ್-ಕೆಟಿಎಂ ವಾಹನಗಳನ್ನು ಒಂದೇ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುವುದು.

ಬಜಾಜ್-ಕೆಟಿಎಂ ಸಹಭಾಗಿತ್ವದಲ್ಲಿ ಬರಲಿವೆ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಈ ಎಲೆಕ್ಟ್ರಿಕ್ ವಾಹನಗಳು 3 ಕಿ.ವ್ಯಾಟ್‌ನಿಂದ 10 ಕಿ.ವ್ಯಾಟ್ ಸಾಮರ್ಥ್ಯವನ್ನು ಹೊಂದಿರಲಿವೆ ಎಂದು ಹೇಳಲಾಗಿದೆ. ಬಜಾಜ್ ಆಟೋ ಹಾಗೂ ಕೆಟಿಎಂ 2007ರಿಂದ ಸಹಭಾಗಿತ್ವವನ್ನು ಹೊಂದಿವೆ. ಅಂದಿನಿಂದ, ಈ ಎರಡು ಕಂಪನಿಗಳು ಅನೇಕ ವಾಹನಗಳನ್ನು ಬಿಡುಗಡೆಗೊಳಿಸಿವೆ. ಬಜಾಜ್ ಪಲ್ಸರ್ ಎನ್ಎಸ್ 200 ಈ ಜಂಟಿ ಸಹಭಾಗಿತ್ವದಲ್ಲಿ ಬಿಡುಗಡೆಯಾದ ಮೊದಲ ಬೈಕ್.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಬಜಾಜ್-ಕೆಟಿಎಂ ಸಹಭಾಗಿತ್ವದಲ್ಲಿ ಬರಲಿವೆ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಈ ಬೈಕಿನಲ್ಲಿ ಕೆಟಿಎಂ ಡ್ಯೂಕ್‌ನಲ್ಲಿರುವ ಎಂಜಿನ್ ಅಳವಡಿಸಲಾಗಿದೆ. ಕೆಟಿಎಂ ತನ್ನ ಹೆಚ್ಚಿನ ಬೈಕುಗಳನ್ನು ಆಸ್ಟ್ರಿಯಾದ ಹಸ್ಕ್‌ವರ್ನಾದಿಂದ ಪುಣೆಯ ಬಜಾಜ್ ಉತ್ಪಾದನಾ ಘಟಕಕ್ಕೆ ಸ್ಥಳಾಂತರಿಸಿದೆ. ಈ ಸಹಭಾಗಿತ್ವದಿಂದಾಗಿ ಬಜಾಜ್ ಕಂಪನಿಯ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಯುರೋಪ್ ಮಾರುಕಟ್ಟೆಯಲ್ಲೂ ಬಿಡುಗಡೆಗೊಳಿಸಲಾಗಿದೆ.

ಬಜಾಜ್-ಕೆಟಿಎಂ ಸಹಭಾಗಿತ್ವದಲ್ಲಿ ಬರಲಿವೆ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಬಜಾಜ್ ಕಂಪನಿಯು ಕೆಟಿಎಂ ಸಹಭಾಗಿತ್ವದಲ್ಲಿ ಕಡಿಮೆ ಸಾಮರ್ಥ್ಯದ ಸ್ಕೂಟರ್‌ ಹಾಗೂ ಮೊಪೆಡ್‌ಗಳ ಜೊತೆಗೆ, ಹೆಚ್ಚಿನ ಸಾಮರ್ಥ್ಯದ ಎಲೆಕ್ಟ್ರಿಕ್ ಬೈಕ್‌ಗಳನ್ನು ಉತ್ಪಾದಿಸಲು ಬಯಸಿದೆ. ಕೆಟಿಎಂ ಕಂಪನಿಯು ಕೆಟಿಎಂ ಎಸ್‌ಎಕ್ಸ್-ಇ5 ಹಾಗೂ ಹಸ್ಕ್‌ವರ್ನಾ ಇ5 ಸರಣಿಯ ಬೈಕ್‌ಗಳನ್ನು ಯುರೋಪಿನಲ್ಲಿ ಬಿಡುಗಡೆಗೊಳಿಸಿ ಮಾರಾಟ ಮಾಡುತ್ತಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಬಜಾಜ್-ಕೆಟಿಎಂ ಸಹಭಾಗಿತ್ವದಲ್ಲಿ ಬರಲಿವೆ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಬಜಾಜ್ ಕಂಪನಿಯು ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾತ್ರ ಮಾರಾಟ ಮಾಡುತ್ತಿದೆ. ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬಜಾಜ್ 4 ಕಿ.ವ್ಯಾ ಎಲೆಕ್ಟ್ರಿಕ್ ಮೋಟರ್ ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಮೋಟರ್ 3 ಕಿ.ವ್ಯಾ ಲಿಥಿಯಂ-ಐರನ್ ಬ್ಯಾಟರಿಯನ್ನು ಹೊಂದಿದೆ.

ಬಜಾಜ್-ಕೆಟಿಎಂ ಸಹಭಾಗಿತ್ವದಲ್ಲಿ ಬರಲಿವೆ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ 95 ಕಿ.ಮೀಗಳವರೆಗೆ ಚಲಿಸಬಹುದು. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಗರಿಷ್ಠ ವೇಗ ಪ್ರತಿ ಗಂಟೆಗೆ 65 ಕಿ.ಮೀಗಳಾಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಬಜಾಜ್-ಕೆಟಿಎಂ ಸಹಭಾಗಿತ್ವದಲ್ಲಿ ಬರಲಿವೆ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಲಾಕ್‌ಡೌನ್‌ನಿಂದಾಗಿ ಬಜಾಜ್-ಕೆಟಿಎಂನ ಉತ್ಪಾದನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಹೊಸ ವಿದ್ಯುತ್ ವಾಹನಗಳ ಉತ್ಪಾದನೆಯನ್ನು 2022ರಿಂದ ಆರಂಭಿಸಲಾಗುವುದು. ಕೆಟಿಎಂ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ತರಲು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದೆ. ಆದರೆ ಇದುವರೆಗೂ ಇದರ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

Most Read Articles

Kannada
English summary
Bajaj KTM Electric Scooter in India coming soon. Read in Kannada.
Story first published: Tuesday, April 14, 2020, 13:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X