ದೀಪಾವಳಿ ಸಂಭ್ರಮಕ್ಕಾಗಿ ಬಜಾಜ್ ಬೈಕುಗಳ ಮೇಲೆ ಭರ್ಜರಿ ರಿಯಾಯಿತಿ

ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಹಬ್ಬದ ಸೀಸನ್‌ನಲ್ಲಿ ತನ್ನ ಸರಣಿಯಲ್ಲಿರುವ ವಾಹನಗಳ ಮಾರಾಟವನ್ನು ಹೆಚ್ಚಿಸಲು ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. ಇದೀಗ ಜನಪ್ರಿಯ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯಾದ ಬಜಾಜ್ ಆಟೋ ತನ್ನ ಆಯ್ದ ಬೈಕುಗಳಿಗೆ ಭರ್ಜರಿ ಆಫರ್ ಅನ್ನು ಘೋಷಿಸಿದೆ.

ದೀಪಾವಳಿ ಸಂಭ್ರಮಕ್ಕಾಗಿ ಬಜಾಜ್ ಬೈಕುಗಳ ಮೇಲೆ ಭರ್ಜರಿ ರಿಯಾಯಿತಿ

ಬಜಾಜ್ ಆಟೋ ಕಂಪನಿಯ ತನ್ನ ಪಲ್ಸರ್ ಸರಣಿಯ ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಪಲ್ಸರ್ ಸರಣಿಯಲ್ಲಿ ಒಟ್ಟು ಒಂಬತ್ತು ಬೈಕುಗಳಿದೆ. ಇತ್ತೀಚೆಗೆ ಬಜಾಜ್ ಕಂಪನಿಯ ಬೈಕುಗಳ ಮಾರಾಟದಲ್ಲಿ ಕುಸಿತವನ್ನು ಕಂಡಿದೆ. ಇದರಿಂದ ಮಾರಾಟವನ್ನು ಹೆಚ್ಚಿಸಲು ಬಜಾಜ್ ಕಂಪನಿಯು ತನ್ನ ಆಯ್ದ ಮಾದರಿಗಳಿಗೆ ಭರ್ಜರಿ ಆಫರ್ ಅನ್ನು ಘೋಷಿಸಿದೆ.

ದೀಪಾವಳಿ ಸಂಭ್ರಮಕ್ಕಾಗಿ ಬಜಾಜ್ ಬೈಕುಗಳ ಮೇಲೆ ಭರ್ಜರಿ ರಿಯಾಯಿತಿ

ಇದರಿಂದ ಬಜಾಜ್ ಕಂಪನಿಯು ಈ ತಿಂಗಳಿಂದ ಪಲ್ಸರ್ ಬೈಕುಗಳ ಮೇಲೆ ರಿಯಾಯಿತಿ ಮತ್ತು ಆಫರ್ ಗಳನ್ನು ನೀಡುತ್ತಿದೆ. ದೇಶಾದ್ಯಂತದ ಎಲ್ಲಾ ಬಜಾಜ್ ಬೈಕುಗಳಿಗೆ 5 ವರ್ಷಗಳ ಕಾಲದ ವಾರಂಟಿಯನ್ನು ನೀಡಲಾಗುತ್ತಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ದೀಪಾವಳಿ ಸಂಭ್ರಮಕ್ಕಾಗಿ ಬಜಾಜ್ ಬೈಕುಗಳ ಮೇಲೆ ಭರ್ಜರಿ ರಿಯಾಯಿತಿ

ಬಜಾಜ್ ಕಂಪನಿಯು ತನ್ನ ಪ್ಲಾಟಿನಾ 100 ಇಎಸ್ ಡ್ರಮ್‌ಗೆ ರೂ.1,600 ಗಳವರೆಗೆ ನಗದು ರಿಯಾಯಿತಿಯನ್ನು ನೀಡಲಾಗುತ್ತಿದೆ. ಇನ್ನು ಈ ಬೈಕಿನ ಡಿಸ್ಕ್ ರೂಪಾಂತರಕ್ಕೆ ರೂ.2,800 ಗಳವರೆಗೆ ರಿಯಾಯಿತಿಯನ್ನು ಘೋಷಿಸಲಾಗಿದೆ.

ದೀಪಾವಳಿ ಸಂಭ್ರಮಕ್ಕಾಗಿ ಬಜಾಜ್ ಬೈಕುಗಳ ಮೇಲೆ ಭರ್ಜರಿ ರಿಯಾಯಿತಿ

ಇದೀಗ ಬಜಾಜ್ ಪ್ಲಾಟಿನಾ 100 ಇಎಸ್ ಡ್ರಮ್‌ ವೆರಿಯೆಂಟ್ ಬೆಲೆಯು ರೂ.58,605 ಗಳಾಗಿದ್ದರೆ, ಡಿಸ್ಕ್ ವೆರಿಯೆಂಟ್ ಬೆಲೆಯು ರೂ.60,826 ಗಳಾಗಿದೆ. ಈ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ಪ್ರಕಾರವಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ದೀಪಾವಳಿ ಸಂಭ್ರಮಕ್ಕಾಗಿ ಬಜಾಜ್ ಬೈಕುಗಳ ಮೇಲೆ ಭರ್ಜರಿ ರಿಯಾಯಿತಿ

ಇನ್ನು ಪ್ಲಾಟಿನಾ 110 ಹೆಚ್ ಗೇರ್ ಡಿಸ್ಕ್ ಬೈಕಿಗೆ ರೂ.2,500 ಗಳವರೆಗೆ ನಗದು ರಿಯಾಯಿತಿಯನ್ನು ನೀಡಲಾಗುತ್ತಿದೆ. ಬಜಾಜ್ ಪ್ಲಾಟಿನಾ 110 ಹೆಚ್ ಗೇರ್ ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.63,027 ಗಳಾಗಿದೆ.

ದೀಪಾವಳಿ ಸಂಭ್ರಮಕ್ಕಾಗಿ ಬಜಾಜ್ ಬೈಕುಗಳ ಮೇಲೆ ಭರ್ಜರಿ ರಿಯಾಯಿತಿ

ಬಜಾಜ್ ತನ್ನ ಪಲ್ಸರ್ 125 ಬೈಕಿಗೂ ಕೂಡ ನಗದು ರಿಯಾಯಿತಿಯನ್ನು ಘೋಷಿಸಲಾಗಿದೆ. ಎಂಟ್ರಿ ಲೆವೆಲ್ ಪಲ್ಸರ್ 125 ಡ್ರಮ್ ವೆರಿಯೆಂಟ್ ಬೈಕಿಗೆ ರೂ.2,500 ರೂ ನಗದು ರಿಯಾಯಿತಿ ಘೋಷಿಸಲಾಗಿದೆ. ಇದೀಗ ಈ ಪಲ್ಸರ್ 125 ಡ್ರಮ್ ವೆರಿಯೆಂಟ್ ಬೆಲೆಯು ರೂ.72,122 ಗಳಾಗಿದೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ದೀಪಾವಳಿ ಸಂಭ್ರಮಕ್ಕಾಗಿ ಬಜಾಜ್ ಬೈಕುಗಳ ಮೇಲೆ ಭರ್ಜರಿ ರಿಯಾಯಿತಿ

ಇನ್ನು ಪಲ್ಸರ್ 125 ಡಿಸ್ಕ್ ವೆರಿಯೆಂಟ್ ಮೇಲೆ ರೂ.2,000 ಗಳವರೆಗೆ ನಗದು ರಿಯಾಯಿತಿಯನ್ನು ಘೋಷಿಸಲಾಗಿದೆ. ಈ ಪಲ್ಸರ್ 125 ಡಿಸ್ಕ್ ವೆರಿಯೆಂಟ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.76,922 ಗಳಾಗಿದೆ.

ದೀಪಾವಳಿ ಸಂಭ್ರಮಕ್ಕಾಗಿ ಬಜಾಜ್ ಬೈಕುಗಳ ಮೇಲೆ ಭರ್ಜರಿ ರಿಯಾಯಿತಿ

ಪಲ್ಸರ್ 125 ಡ್ರಮ್ ಸ್ಪ್ಲಿಟ್-ಸೀಟ್ ಆವೃತ್ತಿಗೆ ರೂ.3,000 ಗಳವರೆಗೆ ನಗದು ರಿಯಾಯಿತಿಯನ್ನು ಘೋಷಿಸಿದೆ. ಇನ್ನು ಪಲ್ಸರ್ 125 ಡಿಸ್ಕ್ ಸ್ಪ್ಲಿಟ್-ಸೀಟ್ ಆವೃತ್ತಿಗೆ ರೂ.2,000ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ.

Most Read Articles

Kannada
English summary
Bajaj Offering Cash Discounts With Platina & Pulsar 125 This Festive Season. Read In Kannada.
Story first published: Thursday, October 15, 2020, 12:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X